Baidashree

ವಿಶ್ವಸ್ತ ಮಂಡಳಿ

ವಿಶ್ವಸ್ತ ಮಂಡಳಿ

ದಾಮೋದರ ಕಲ್ಮಾಡಿ

ಗೌರವಾಧ್ಯಕ್ಷರು, ಸ್ಥಾಪಕ ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 98805 46127

ಕಲ್ಮಾಡಿಯ ಶ್ರೀ. ಆಂಗರ ಪೂಜಾರಿ ಹಾಗು ಶ್ರೀಮತಿ ಗಂಗೆ ಪೂಜಾರ್ತಿಯವರ ಕಿರಿಯ ಪುತ್ರನಾಗಿ 01.08.1956 ರಲ್ಲಿ ಕಲ್ಮಾಡಿ ಗರೋಡಿ ಮನೆತನದಲ್ಲಿ ಜನಿಸಿದರು. ಎಳೆಯ ಪ್ರಾಯದಲ್ಲೇ ಜಾನಪದ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ಜಾನಪದದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು. 1982 ರಲ್ಲಿ ಗೋಕರ್ಣನಾಥ ಕೋ. ಒಪ್. ಬ್ಯಾಂಕ್ ಉದ್ಯೋಗಕ್ಕೆ ಸೇರಿದ ಇವರು ಮುಂದೆ 2009 ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು.

ನಮ್ಮ ಸಂಸ್ಥೆಯ ಸ್ಥಾಪಕ ವಿಶ್ವಸ್ಥರಾಗಿದ್ದು ಇವರು ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ ರಚನೆಗಾಗಿ ಕ್ಷೇತ್ರಕಾರ್ಯದಲ್ಲಿ ಭಾಗವಹಿಸಿರುವರು.
“ಕೋಟಿ – ಚೆನ್ನಯ ಮೌಖಿಕ ಸಾಹಿತ್ಯದ ಅಂತರಾತ್ಮ ದರ್ಶನ” ಇದು ಶ್ರೀ. ಮೋಹನ್ ಕೋಟ್ಯಾನ್ ರೊಂದಿಗೆ ಇವರು 1995 ರಲ್ಲಿ ಬರೆದ, ಸಂಸ್ಥೆಯಿಂದ ಪ್ರಕಟಿಸಲ್ಪಟ್ಟ ಕೃತಿ. ಮುಂದೆ 1998 ರಲ್ಲಿ ಶ್ರೀ. ಚೆಲುವರಾಜ್ ಪೆರಂಪಳ್ಳಿಯವರೊಂದಿಗೆ ಬರೆದ “ಜನಮಾನಸದಲ್ಲಿ ಕೋಟಿ-ಚೆನ್ನಯರು”, 2003 ರಲ್ಲಿ ಬರೆದ “ಬೈದ್ಯ ದರ್ಶನ ಸಚಿತ್ರ ಕಥಾ ಕೋಶ”, 2013 ರಲ್ಲಿ ತುಳುವಿನಲ್ಲಿ ಬರೆದ “ಕೋಟಿ-ಚೆನ್ನಯೆರ್ನ ಅಪ್ಪೆ ದೇಯಿ ಬೈದೆತಿ”, 2021 ರಲ್ಲಿ ಕನ್ನಡದಲ್ಲಿ “ದೇಯಿ ಬೈದೆತಿ” ಈ ಕೃತಿಗಳು ನಮ್ಮ ಸಂಸ್ಥಯಿಂದ ಪ್ರಕಟಿಸಲ್ಪಟ್ಟಿವೆ.

2002 ರಲ್ಲಿ ಇವರು ಸಂಪಾದಿಸಿದ “ಕೋಟಿ -ಚೆನ್ನಯ” ಪ್ರಧಾನ ಸಂಪುಟ”ವು ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಾಶಿಸಲ್ಪಟ್ಟಿದ್ದು ಇದಕ್ಕೆ ರಾಜ್ಯ ಸರಕಾರದಿಂದ ಮನ್ನಣೆ ಸಿಕ್ಕಿದೆ. ನಂತರ ಈ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಇಂಗ್ಲಿಷ್ ಭಾಷೆಗೂ (Epic of The Warriors) ತರ್ಜುಮೆ ಗೊಂಡಿದೆ.

ಸೂರ್ಯೋದಯ ನಾರಾಯಣ ಪೆರಂಪಳ್ಳಿ

ಅಧ್ಯಕ್ಷರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 92428 30302

ಶ್ರೀ ನಾರಾಯಣ ಪಿ. ಅಮೀನ್ ಹಾಗು ಶ್ರೀಮತಿ ಸಂಕ್ರಿ ಏನ್. ಅಮೀನ್ ದಂಪತಿಗಳ ಮಗನಾಗಿ 14.11.1972 ರಲ್ಲಿ ಜನಿಸಿದರು. 

ಕಳೆದ 25 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಕನ್ನಡ, ತುಳು, ತಮಿಳು ಚಿತ್ರರಂಗ ಹಾಗು ಟಿ.ವಿ ಮಾದ್ಯಮದಲ್ಲಿ ಕ್ರೀಯಾಶೀಲರಾಗಿರುವ ಇವರು ಮುಗಿಲ ಮಲ್ಲಿಗೆ, ನಾನು ಓದಬೇಕು, ಅಮ್ಮ, ಸಂಕೋಲೆ, ಅಗೋಚರ ಮುಂತಾದ ಸಾಮಾಜಿಕ ಸಂದೇಶಗಳನ್ನೊಳಗೊಂಡ ಹಲವಾರು ಧಾರಾವಾಹಿಗಳನ್ನು ತಯಾರಿಸಿರುವರು. ಅದಲ್ಲದೆ ಕಿಟ್ಟಿ, ಲಂಕೇಶ್ ಪತ್ರಿಕೆ ಮುಂತಾದ ಸುಮಾರು 25 ಮುಖ್ಯವಾಹಿನಿಯ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವರು ಕೂಡ. 

ಇತ್ತೀಚೆಗೆ ಅವರ ಸ್ವಂತ ಸಂಸ್ಥೆಯಾದ “ಸಂಕ್ರಿ ಮೋಶನ್ ಪಿಚ್ಚರ್ಸ್ “ನಿಂದ ತಯಾರಾದ, ಇವರೇ ನಿರ್ದೇಶಿಸಿರುವ ” ದೇಯಿ ಬೈದೆತಿ” ತುಳು ಸಿನೆಮಾವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ರಾಜ್ಯ ಪ್ರಶಸ್ತಿಯನ್ನೂ ಪಡೆದಿರುತ್ತದೆ. 

ಉತ್ತಮ ಲೇಖಕರೂ ಆಗಿರುವ ಇವರು ಬರೆದ “ವಿದ್ಯಾ ಕ್ರಾಂತಿ ವೀರರು  ಕೋಟಿ ಚೆನ್ನಯರು”, “ಬರವುದ ಜೀಟಿಗೆ”, “ಭಕ್ತಿ ಮಂತ್ರ ಜನ ಗಣ ಮನ” ಮುಂತಾದ ಪುಸ್ತಕಗಳು ಅಪಾರ ಜನಮನ್ನಣೆ ಗಳಿಸಿವೆ.

ಮಾಧವ ಎ.

ಉಪಾಧ್ಯಕ್ಷರು , ಸ್ಥಾಪಕ ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 94490 33467

ಅಂಬಲಪಾಡಿಯ ಶ್ರೀ ಚೀoಕ ಪೂಜಾರಿ ಹಾಗು ಶ್ರೀಮತಿ ಶೇಷಿ ಪೂಜಾರ್ತಿ ದಂಪತಿಗಳ ಮಗನಾಗಿ 04.09.1954 ರಲ್ಲಿ ಜನಿಸಿದ ಇವರು B.Com. ಪದವೀಧರರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಸರಕಾರೀ ನೌಕರರಾಗಿ ನಿವೃತ್ತರಾದ ಇವರು ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ನಮ್ಮ ಸಂಸ್ಥೆಯ ಸ್ಥಾಪಕ ವಿಶ್ವಸ್ತರಾದ ಇವರು ಸುಮಾರು 30 ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದವರು. ಬಿಲ್ಲವರ ಸೇವಾ ಸಂಘ ಬನ್ನಂಜೆಯ ಸದಸ್ಯರಾಗಿಯೂ ಇವರು ಸಕ್ರಿಯರಾಗಿದ್ದಾರೆ.

ಹರೀಶ್ ಎಮ್. ಕೆ. ಕಲ್ಮಾಡಿ

ಕಾರ್ಯದರ್ಶಿ, ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 99675 04972

ಕಲ್ಮಾಡಿಯ ಶ್ರೀ ಮಂಜಪ್ಪ ಪೂಜಾರಿ ಮತ್ತು ಶ್ರೀಮತಿ ಸುಶೀಲ ಪೂಜಾರ್ತಿ ದಂಪತಿಗಳ ಹಿರಿಯ ಮಗನಾಗಿ 04.09.1972 ರಲ್ಲಿ ಜನಿಸಿದ ಇವರು PUC ವರೆಗಿನ ವಿದ್ಯಾಭ್ಯಾಸದ ನಂತರ “ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್” ನಲ್ಲಿ ಡಿಪ್ಲೋಮ ಪದವಿ ಪಡೆದು, ಮುಂಬೈಯ ಪ್ರತಿಷ್ಠಿತ ವಿದ್ಯುದಾಗಾರಗಳ ನಿರ್ಮಾಣ ಸಂಸ್ಥೆಯೊಂದರಲ್ಲಿ ಇಂಟರ್ನ್ಯಾಷನಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಉಡುಪಿ ಹಾಗು ಹೊರದೇಶ ಒಮಾನ್ ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ .

ನಮ್ಮ ಸಂಸ್ಥೆಯ ವಿಶ್ವಸ್ತರಾದ ಇವರು ಕಲ್ಮಾಡಿಯ ಶ್ರೀ ಬ್ರಹ್ಮಬೈದೇರುಗಳ ಗರೋಡಿಯ ಆಡಳಿತಮಂಡಳಿಯ ಉಪಾಧ್ಯಕ್ಷರಾಗಿರುವರು.

ಮಹೇಶ್ ಎಸ್. ಸುವರ್ಣ

ಕೋಶಾಧಿಕಾರಿ, ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 98447 41782

ನಯಂಪಳ್ಳಿಯ ಶ್ರೀ. ಸೋಮಪ್ಪ ಪೂಜಾರಿ ಹಾಗು ಶ್ರೀಮತಿ ಸುಂದರಿ ಎಸ್. ಪೂಜಾರಿ ದಂಪತಿಗಳ ಮಗನಾಗಿ 18.07.1977 ರಲ್ಲಿ ಜನಿಸಿದ ಇವರು B.Com. ಪದವೀಧರರು. ನಮ್ಮ ಸಂಸ್ಥೆಯ ಕೋಶಾಧಿಕಾರಿಯಾದ ಇವರು, ತೆರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿರುತ್ತಿರುವರು.

ಕೆ. ಶೇಖರ ಪೂಜಾರಿ ಕಿದಿಯೂರು

ಜೊತೆ ಕಾರ್ಯದರ್ಶಿ, ಸ್ಥಾಪಕ ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ :

ಕಿದಿಯೂರು ಶ್ರೀ ಬೂದ ಪೂಜಾರಿ ಹಾಗು ಶ್ರೀಮತಿ ಕೊಲ್ಲು ಪೂಜಾರ್ತಿ ದಂಪತಿಗಳ ಮಗನಾಗಿ 06.04.1946 ರಲ್ಲಿ ಜನಿಸಿದ ಇವರು SSLC ವರೆಗಿನ ವಿದ್ಯಾಭ್ಯಾಸದ ನಂತರ 1967 ರಲ್ಲಿ ಭಾರತೀಯ ಅಂಚೆ ವಿಭಾಗದಲ್ಲಿ ನೌಕರಿಗೆ ಸೇರಿದರು. 2006 ರಲ್ಲಿ ನಿವೃತ್ತರಾದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವರು.

ನಮ್ಮ ಸಂಸ್ಥೆಯ ಸ್ಥಾಪಕ ವಿಶ್ವಸ್ತರಾಗಿರುವ ಇವರೊಬ್ಬ ಉತ್ತಮ ದೇಹದಾರ್ಢ್ಯ ಪಟುವೂ ಕೂಡ. 1979 ರಲ್ಲಿ ಮುಲ್ಕಿಯಲ್ಲಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಶಾರ್ಟ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರು ಬಜರಂಗಬಲಿ ವ್ಯಾಯಾಮ ಶಾಲೆ ಉಡುಪಿ ಹಾಗು ಶ್ರೀ ಬಲಮಾರುತಿ ವ್ಯಾಯಾಮ ಶಾಲೆಗಳಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿರುವರು.

ಬಿಲ್ಲವರ ಸೇವಾ ಸಂಘ, ಬನ್ನಂಜೆಯ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿರುವ ಇವರು, ಶ್ರೀ ನಾರಾಯಣ ಗುರು ಸೇವಾ ಸಮಿತಿ ಕಿದಿಯೂರು, ಉದಯ ಕಲಾ ಯುವಕ ಮಂಡಲ ಮುಂತಾದ ಸಂಘ ಸಂಸ್ಥೆಗಳಲ್ಲಿಯೂ ಸಕ್ರೀಯರಾಗಿರುವರು.

ಬಿ. ಸಂಜೀವ ಪೂಜಾರಿ

ಸ್ಥಾಪಕ ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 87622 23528

ಉಡುಪಿಯ ಬನ್ನಂಜೆಯ ಶ್ರೀ. ಶಂಕರ ಪೂಜಾರಿ ಶ್ರೀಮತಿ ಸಂಕಿ ಪೂಜಾರ್ತಿ ದಂಪತಿಗಳ ಹಿರಿಯ ಮಗನಾಗಿ 12.05.1946 ರಲ್ಲಿ ಜನಿಸಿದ ಇವರು SSLC ಶಿಕ್ಷಣದ ನಂತರ ಕರ್ನಾಟಕ ಸರಕಾರದ ಕೃಷಿ ಇಲಾಖೆಯಲ್ಲಿ ಗುಮಾಸ್ತನಾಗಿ ಸೇರಿರುವರು. ಮುಂದೆ ಕೃಷಿ ಇಲಾಖೆಯ ಅಧೀಕ್ಷಕರಾಗಿ 2004 ರಲ್ಲಿ ನಿವೃತ್ತಿ ಹೊಂದಿರುವರು.

ನಮ್ಮ ಸಂಸ್ಥೆಯ ಸ್ಥಾಪಕ ವಿಶ್ವಸ್ತರಾದ ಇವರು ಹಿರಿಯ ಕೃಷಿಕರೂ ಆಗಿರುವರು.

ಕೆ. ಗೋಪಾಲ ಪೂಜಾರಿ

ಸ್ಥಾಪಕ ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 99458 67422

ಕಾರ್ಕಳದ ಪುರ್ಕೇರಿಯಲ್ಲಿ ಶ್ರೀ. ರಾಮ ಪೂಜಾರಿ ಹಾಗು ಶ್ರೀಮತಿ ಅಕ್ಕಮ ಪೂಜಾರ್ತಿ ದಂಪತಿಗಳ ಎರಡನೇ ಮಗನಾಗಿ 16.06.1949 ರಲ್ಲಿ ಜನಿಸಿದ ಇವರ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸ ಮುಗಿಸುತ್ತಲೇ ಮೂಡುಬಿದರೆಯ ಚಿನ್ನದ ಲೇಪನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ಕೆಲಸಗಾರರಾಗಿ ಸೇರಿದರು. ಇಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿ ಮುಂದೆ ಅದೇ ಕ್ಷೇತ್ರದಲ್ಲಿ ಕಾರ್ಕಳದಲ್ಲಿ ಸ್ವಂತ ಉದ್ದಿಮೆದಾರರಾಗಿ ವ್ಯವಹಾರ ನಡೆಸುತ್ತಿದ್ದಾರೆ.

ನಮ್ಮ ಸಂಸ್ಥೆಯ ಸ್ಥಾಪಕ ವಿಶ್ವಸ್ತರಾದ ಇವರು ಪೆರ್ವಾಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವರು.

ಕಲ್ಮಾಡಿ ಶೇಖರ ಪೂಜಾರಿ

ಸ್ಥಾಪಕ ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 9901761717

ಕಲ್ಮಾಡಿ ದಿ. ಸೂರಪ್ಪ ಸುವರ್ಣ ಹಾಗು ಸುಂದರಿ ಪೂಜಾರ್ತಿಯವರ ಹಿರಿಯ ಪುತ್ರರಾಗಿ ಜನಿಸಿದ ಇವರು ಕಾಲೇಜು ಶಿಕ್ಷಣದೊಂದಿಗೆ Art Master and Government Diploma in Art ಪದವಿಯಯನ್ನು ಪಡೆದರು. ಅಲೆವೂರಿನ ನೆಹರು ಪ್ರೌಢ ಶಾಲೆಯಲ್ಲಿ ಕಲಾಶಿಕ್ಷಕರಾಗಿ ಸೇವೆಸಲ್ಲಿಸಿ ಮುಂದೆ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು.

ಭಾರತ್ ಸ್ಕೌಟ್ ಮತ್ತು ಗೈಡ್ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ 41 ವರ್ಷಗಳ ಕಾಲ ಮತ್ತು ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿಯಾಗಿ 9 ವರ್ಷಗಳ ಕಾಲ ಇವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಇದಕ್ಕಾಗಿ ಕರ್ನಾಟಕದ ರಾಜ್ಯಪಾಲ ಶ್ರೀ. ವಜುಭಾಯಿ ವಾಲರಿಂದ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಇವರ ಕಲಾಕುಂಚದಲ್ಲಿ ಮೂಡಿದ ತೈಲ ವರ್ಣ ಚಿತ್ರಗಳು ಅನೇಕ ಗರೋಡಿ, ಮಂದಿರ, ದೇವಸ್ಥಾನಗಳಲ್ಲಿ ಮತ್ತು ಮುಂಬೈಯ ಬಿಲ್ಲವ ಭವನದಲ್ಲಿ ರಾರಾಜಿಸುತ್ತಿವೆ. ಸುಮಾರು 12 ಸಾರ್ವಜನಿಕವಾಗಿ ಮತ್ತು 25 ಮನೆಗಳಲ್ಲಿ ಪೂಜಿಸಲ್ಪಡುವ ಆವೆ ಮಣ್ಣಿನ ಗಣೇಶ ವಿಗ್ರಹಗಳನ್ನು ಪ್ರತೀ ವರ್ಷವೂ ರಚಿಸುತ್ತಾರೆ. ಇವರು ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಮಡಿಕೇರಿ, ಮುಂಬೈನಲ್ಲಿರುವ 230ಕ್ಕೂ ಹೆಚ್ಚು ಗರೋಡಿಗಳನ್ನು ಸಂದರ್ಶಿಸಿ ಅಧ್ಯಯನ ಕಾರ್ಯದಲ್ಲಿ ಸಹಕರಿಸಿರುತ್ತಾರೆ.

ನಮ್ಮ ಸಂಸ್ಥೆಯ ಸ್ಥಾಪಕ ವಿಶ್ವಸ್ತರಾದ ಇವರು ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲೆವೂರಿನ ಸಾರ್ವಜನಿಕ ಗಣೇಶೋತ್ಸವದ ಸ್ಥಾಪಕರಲ್ಲೋರ್ವರಾದ ಇವರು ಅಲ್ಲಿಯ ಗೌರವಾಧ್ಯಕ್ಷರು; ಉಡುಪಿ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ; ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಲ್ಮಾಡಿಯ ಆಡಳಿತ ಮಂಡಳಿ(ರಿ)ಯ ಸದಸ್ಯರು: ಅಲೆವೂರಿನ ಎಜುಕೇಶನ್ ಸೊಸೈಟಿ (ರಿ)ನ ಆಡಳಿತ ಮಂಡಳಿಯ ಸದಸ್ಯರು; ಅಲೆವೂರಿನ ನೆಹರು ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ (ರಿ)ನ ಮುಖ್ಯ ಸಲಹೆಗಾರರು; ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಬೈಲೂರು ಇದರ ಕಟ್ಟಡ ಸಮಿತಿಯ ಗೌರವಾಧ್ಯಕ್ಷರು; ರೋಟರಿ ಉಡುಪಿಯ ಸದಸ್ಯರು; ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಘಟಕದ ಸಮಿತಿ ಸದಸ್ಯರು; ತುಳುಕೂಟ ಉಡುಪಿ ಇದರ ಕಾರ್ಯಕಾರಿ ಸಮಿತಿಯ ಸದಸ್ಯರು; ಬಿಲ್ಲವ ಸೇವಾ ಸಂಘ ಬನ್ನಂಜೆಯ ಸದಸ್ಯರು; ಬಿಲ್ಲವ ಸೇವಾ ಸಂಘ (ರಿ) ಮಲ್ಪೆಯ ಸದಸ್ಯರು; ಸಾರ್ವಜನಿಕ ಅಯ್ಯಪ್ಪ ಸೇವಾ ಸಮಿತಿ ಅಲೆವೂರು ಇದರ ಗುರುಸ್ವಾಮಿಯಾಗಿ 27 ವರ್ಷಗಳ ಸೇವೆ; ತುಳಸಿ ಜಾನಪದ ನೃತ್ಯ ಒಕ್ಕೂಟದ ಕೀರ್ತನೆಕಾರರು ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ.

ಸಾಮಾಜಿಕ, ಸಾಂಸ್ಕೃತಿಕ , ಶೈಕ್ಷಣಿಕ ಕ್ಷೇತ್ರಗಳಲ್ಲಿ ಇವರ ಸೇವೆಗಾಗಿ “ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ”, “ಗುರುಶ್ರೀ ಶಿಕ್ಷಕ ಪ್ರಶಸ್ತಿ”, ಶೀರೂರು ಮಠಾಧೀಶರಿಂದ “ಕೃಷ್ಣಾನುಗ್ರಹ ಪ್ರಶಸ್ತಿ” “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” “ಉಪಾದ್ಯಾಯ ಸನ್ಮಾನ್ ರಾಜ್ಯಪ್ರಶಸ್ತಿ” ಬಿಲ್ಲವ ಯುವ ವೇದಿಕೆ (ರಿ ) ಅಲೆವೂರು ಘಟಕದ ವತಿಯಿಂದ “ಬಿಲ್ಲವ ಶ್ರೀ” ಪ್ರಶಸ್ತಿ ಗಳನ್ನೂ ಪಡೆದ ಇವರು ಹಲವಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ.

ಗಂಗಾಧರ ಕಿದಿಯೂರು

ಸ್ಥಾಪಕ ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 98445 32629

ಶ್ರೀ. ಕೆ. ಅಣ್ಣಯ್ಯ ಹಾಗು ಶ್ರೀಮತಿ ಮೀನಾ ದಂಪತಿಗಳ ಮಗನಾಗಿ 26.01.1959 ರಲ್ಲಿ ಜನಿಸಿದ ಇವರು ವ್ಯಾಸಂಗದಲ್ಲಿ ವಾಣಿಜ್ಯ ಪದವೀಧರರು.

ಸೃಜನಶೀಲ ಸಾಹಿತ್ಯ ರಚನೆ, ಅಭಿನಯ, ನಿರ್ದೇಶನ, ಸಂಶೋಧನೆ, ಸಂಘಟನೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡ ಇವರು ಕನ್ನಡ – ತುಳು ಕತೆ, ಕವನ, ಲೇಖನ, ನಾಟಕಗಳನ್ನು ಬರೆಯಲಾರಂಬಿಸಿ ಇದುವರೆಗೆ ಒಟ್ಟು 21 ನಾಟಕಗಳನ್ನು ರಚಿಸಿದ್ದಾರೆ. ಆಕಾಶವಾಣಿ ದೂರದರ್ಶನಗಳ್ಲಲೂ ಇವರ ಕಾರ್ಯಕ್ರಮಗಳು ಪ್ರಸಾರಗೊಂಡಿವೆ.
1987 ರಲ್ಲಿ “ಮಧುಶ್ರೀ” ಪ್ರಕಾಶನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ಹಲವಾರು ಸಾಹಿತ್ಯ ಕೃತಿಗಳನ್ನು ಬೆಳಕಿಗೆ ತಂದರು.

ವಿಜಯಲಕ್ಷ್ಮಿ, ಬದುಕೊಂಜಿ ಸರಿಗಮ, ಇಲ್ ಒಕ್ಕೆಲ್, ವಿಧಿ ತೋಜಾಯಿ ನಿಧಿ, ಭಾಗ್ಯೋ, ಮುಡಿಯೇರಿದ ಹೂ, ಎಣ್ಣೆದಾಂತಿ ತುಡರ್, ಫೊಣ್ಣ್ಒಂಜಿ ಕಲ್ಪವೃಕ್ಷ, ಇಲ್ಲ್ ಗೊಂಜಿ ಯೋಧ, ಪಿಂಗಾರದ ಬಾಲೆ ಸಿರಿ, ಇವು ಇವರ ಪ್ರಮುಖ ಕೃತಿಗಳು.

ಹಲವಾರು ಸಂಘಟನೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಡಾ। ರಾಜ್ ಕುಮಾರ್ ಅಭಿಮಾನಿ ಸಂಘದ ವತಿಯಿಂದ “ಕಲ್ಪನಾ ಪ್ರಶಸ್ತಿ”, ಕುಡ್ಲ ತುಳುಕೂಟದ ವತಿಯಿಂದ “ರತ್ನವರ್ಮ ಹೆಗ್ಗಡೆ ಪ್ರಶಸ್ತಿ”, ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ “ತುಳುವ ರತ್ನ ಪ್ರಶಸ್ತಿ”, ಮಲಬಾರ್ ಗೋಲ್ಡ್ ಮತ್ತು ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ “ವಿಶ್ವ ರಂಗ ಸಾಧಕ ಪ್ರಶಸ್ತಿ’, ಅಧಮಾರು ಮಠದ ವತಿಯಿಂದ “ಶ್ರೀಕೃಷ್ಣಾನುಗ್ರಹ ಪ್ರಶಸ್ತಿ”ಗಳನ್ನು ಪಡೆದಿರುವರು.

ನಮ್ಮ ಸಂಸ್ಥೆಯ ವಿಶ್ವಸ್ಥರಾದ ಇವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಶ್ರೀಮತಿ ಸುಲೋಚನಾ ತಿಲಕ್

ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 99017 24012

ಕಾರ್ಕಳದ ಶ್ರೀ. ತನಿಯ ಪೂಜಾರಿ ಮತ್ತು ಶ್ರೀಮತಿ ಜಲಜಾಕ್ಷಿ ದಂಪತಿಗಳ ಹಿರಿಯ ಮಗಳಾಗಿ 07.07.1950 ರಲ್ಲಿ ಜನಿಸಿದ ಇವರು ಬಿ. ಎ. ಬಿ. ಎಡ್. ಪದವಿ ಪಡೆದರು. ನಂತರ ಶ್ರೀ ಲಕ್ಷ್ಮಣ ರಾವ್ ಗುರ್ಜರ್ ಪ್ರೌಢ ಶಾಲೆ, ಜಾವಾಳಿ, ಮುಡಿಗೆರೆಯಲ್ಲಿ 13 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವರು. ಆನಂತರ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ ಕಾರ್ಕಳದಲ್ಲಿ ೨೫ ವರ್ಷ ಸೇವೆ ಸಲ್ಲಿಸಿ 2010 ರಲ್ಲಿ ನಿವೃತ್ತರಾಗಿರುವರು. ಇವರು ಕಾರ್ಕಳದ “ಜಾಗೃತ ಮಹಿಳಾಸಕ್ತ ಸಾಹಿತ್ಯ ಸಂಘ”ದ ಅಧ್ಯಕ್ಷೆಯಾಗಿಯೂ, ಶ್ರೀ ಕೃಷ್ಣ ಕ್ಷೇತ್ರ, ಆನೆಕೆರೆ, ಕಾರ್ಕಳ ಇಲ್ಲಿಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ರೊ| ಎಂ. ಮಹೇಶ್ ಕುಮಾರ್

ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 9845139880

1972 ರ ಮೇ 13 ರಂದು ಮಲ್ಪೆಯ ಶ್ರೀ ಕಾಂತು ಪೂಜಾರಿ ಹಾಗು ಶ್ರೀಮತಿ ಕುಸುಮ ದಂಪತಿಗಳ ಹಿರಿಯ ಮಗನಾಗಿ ಕೂಡುಕುಟುಂಬದಲ್ಲಿ ಜನಿಸಿದ ಇವರು SSLC ಶಿಕ್ಷಣದ ಜೊತೆಗೆ ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದರು. ಸ್ವ-ಉದ್ಯೋಗದಲ್ಲಿ ಹಂತ ಹಂತವಾಗಿ ಬೆಳೆದು 1995 ರಲ್ಲಿ ಮಲ್ಪೆಯಲ್ಲಿ “ಶ್ರೀ ವಿಘ್ನೇಶ್ವರ ಪ್ರಿಂಟರ್ಸ್” ಎಂಬ ಸಂಸ್ಥೆಯನ್ನು ಸ್ಥಾಪಿಸಿ, “ಉಡುಪಿ ಪ್ರಿಂಟ್ ಪಾರ್ಕ್” ಇದರ ಪಾಲುದಾರರಾಗಿ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು.

ನಮ್ಮ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ರೋಟರಿ ಸಂಸ್ಥೆಯ ಕಾರ್ಯದರ್ಶಿ, ಅಧ್ಯಕ್ಷರು, ವಲಯ ಪ್ರತಿನಿಧಿ, ಸಹಾಯಕ ಗವರ್ನರ್, ವೈಸ್ ಚೇರ್ಮನ್; ರುಡ್ ಸೆಟ್ ಸಂಸ್ಥೆಯ ಆಸರೆ ಸಂಘಟನೆಯ ಅಧ್ಯಕ್ಷರು, ಗೌರವಾಧ್ಯಕ್ಷರು; ಉಡುಪಿ ತಾಲೂಕು ಪ್ರೆಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ; ಉಡುಪಿ ಮುದ್ರಕರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು; ಮಲ್ಪೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಲ್ಪೆಯ ಕಾರ್ಯದರ್ಶಿ, ಮಲ್ಪೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು (2010-12), ಕನ್ನಡ ಸಾಹಿತ್ಯ ಪರಿಷತ್ ಇದರ ತಾಲೂಕು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು (2009), ಸರಕಾರೀ ಪದವಿ ಪೂರ್ವ ಕಾಲೇಜು ಮಲ್ಪೆಯ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ; ಉಡುಪಿ ಜಿಲ್ಲಾ ಮುದ್ರಣಾಲಯಗಳ ಸಂಘದ ಅಧ್ಯಕ್ಷರು, ಆತ್ಮಾನಂದ ಸರಸ್ವತಿ ಐ ಟಿ ಐ ಕಾಲೇಜು ಬಿಲ್ಲಾಡಿ ಇದರ ಕಾರ್ಯದರ್ಶಿಯಾಗಿ ಹೀಗೆ ಹಲವಾರು ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ “ಯಶಸ್ವಿ ಉದ್ಯಮಿ ಪ್ರಶಸ್ತಿ”, ಪೂಜ್ಯ ಶ್ರೀ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ “ಸಾಧನಾ ಪ್ರಶಸ್ತಿ”, 2013 ರಲ್ಲಿ ರಾಷ್ಟ್ರಮಟ್ಟದ ಯಶಸ್ವಿ ಉದ್ಯಮಿ ಪ್ರಶಸ್ತಿಯನ್ನು Ministry of Rural Development, Govt. of India ದಿಂದ ಪಡೆದ ಇವರು ಸಮಾಜ ಸೇವೆಗಾಗಿ ಬೇರೆ ಬೇರೆ ಸಂಘ ಸಂಸ್ಥೆ ಗಳಿಂದ ಗೌರವಿಸಲ್ಪಟ್ಟಿದ್ದಾರೆ.

prakash-t-kotian

ಪ್ರಕಾಶ್ ಟಿ. ಕೋಟ್ಯಾನ್

ವಿಶ್ವಸ್ತರು, ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 98452 47191
ಬೊಳ್ಜೆ ಶ್ರೀ ತಮ್ಮಯ್ಯ ಪೂಜಾರಿ ಹಾಗು ಶ್ರೀಮತಿ ಸಿಂಧು ಪೂಜಾರ್ತಿ ದಂಪತಿಗಳ ಮಗನಾಗಿ 09.11.1967 ರಲ್ಲಿ ಜನಿಸಿದ ಇವರು ಕಾಲೇಜು ಶಿಕ್ಷಣ ಮುಗಿಸಿ ಉದ್ಯಮಿಯಾಗಿದ್ದಾರೆ.

ನಮ್ಮ ಸಂಸ್ಥೆಯ ವಿಶ್ವಸ್ತರಾದ ಇವರು ರೋಟರಿ, ಲಯನ್ಸ್ ಕ್ಲಬ್, ಯುವವಾಹಿನಿ ಮೊದಲಾದ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವರು. ಇವರು ಬೊಳ್ಜೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
Sandeep-j-sanil

ಡಾ ।। ಸಂದೀಪ್ ಜೆ. ಸನಿಲ್

ವಿಶ್ವಸ್ತರು, ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 98452 90170
ಶ್ರೀ ಜಗದೀಶ ಸನಿಲ್ ಹಾಗು ಶ್ರೀಮತಿ ಶ್ಯಾಮಲಾ ಸನಿಲ್ ದಂಪತಿಗಳ ಮಗನಾಗಿ 21.12.1976 ರಲ್ಲಿ ಜನಿಸಿದ ಇವರು ಶಿಕ್ಷಣದಲ್ಲಿ The Bachelor of Ayurvedic Medicine and Surgery (BAMS) ಪದವಿ ಪಡೆದು ವೈದ್ಯ ವೃತ್ತಿ ನಡೆಸುತ್ತಿದ್ದಾರೆ.

ನಮ್ಮ ಸಂಸ್ಥೆಯ ವಿಶ್ವಸ್ತರಾದ ಇವರು ಬಿಲ್ಲವರ ಸೇವಾ ಸಂಘ (ರಿ), ಬನ್ನಂಜೆ ಇದರ ಸದಸ್ಯರಾಗಿಯೂ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜು ಉಡುಪಿ ಇದರ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ, Ayush Federation of India Udupi District (Doctors association) ಇದರ ಕಾರ್ಯದರ್ಶಿಯಾಗಿ ಮೂಡನಿಡಂಬೂರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸುತಿದ್ದಾರೆ.

ಉಮೇಶ್ ಎಮ್. ಕೆ. ಕಲ್ಮಾಡಿ

ವಿಶ್ವಸ್ತರು, ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 9880770808
ಕಲ್ಮಾಡಿಯ ಶ್ರೀ ಮಂಜಪ್ಪ ಪೂಜಾರಿ ಮತ್ತು ಶ್ರೀಮತಿ ಸುಶೀಲ ಪೂಜಾರ್ತಿ ದಂಪತಿಗಳ ಮಗನಾಗಿ 26.05.1979 ರಲ್ಲಿ ಜನಿಸಿದ ಇವರು B.com , PGDCA ಪದವಿ ಪಡೆದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಿಯಾಗಿ ಉಡುಪಿಯಲ್ಲಿ Infouna Technologies ಎಂಬ ಹೆಸರಿನ ತನ್ನದೇ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ನಮ್ಮ ಸಂಸ್ಥೆಯ ವಿಶ್ವಸ್ತರಾದ ಇವರು ಶ್ರೀ ಬಾಲಮಾರುತಿ ವ್ಯಾಯಾಮ ಶಾಲೆ ಮತ್ತು ಪೂಜಾ ಮಂದಿರ ಇದರ ಸದಸ್ಯರಾಗಿ, ನಿಕಟಪೂರ್ವ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ಸಕ್ರೀಯರಾಗಿರುವರು.

ವಿಶ್ವನಾಥ್

ವಿಶ್ವಸ್ತರು, ವಿಶ್ವಸ್ತರು, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.)

ದೂರವಾಣಿ ಸಂಖ್ಯೆ : +91 98457 01868
ಶ್ರೀ ಮುದ್ದು ಪೂಜಾರಿ ಮತ್ತು ಶ್ರೀಮತಿ ಬೇಬಿ ಪೂಜಾರ್ತಿ ದಂಪತಿಗಳ ಮಗನಾಗಿ 08.09.1976 ರಲ್ಲಿ ಜನಿಸಿದ ಇವರು B.com ಪದವಿ ಪಡೆದು ಉದ್ಯಮಿಯಾಗಿದ್ದಾರೆ.

ನಮ್ಮ ಸಂಸ್ಥೆಯ ವಿಶ್ವಸ್ತರಾದ ಇವರು ಶ್ರೀ ಬಿಲ್ಲವರ ಸೇವಾ ಸಂಘ (ರಿ), ಬನ್ನಂಜೆ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಾಗೂ ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಸದಸ್ಯರಾಗಿಯೂ ಸಮಾಜ ಸೇವೆಯಲ್ಲಿ ಸಕ್ರೀಯರಾಗಿರುವರು.