ಚವನ ಋಷಿ ಸ್ಮಾರಕವಾದ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಚಾಂತಾರು
ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 66ರಲ್ಲಿ ಭದ್ರಗಿರಿಯಲ್ಲಿ ಬಲಕ್ಕೆ ತಿರುಗಿ, ರುಡ್ ಸೆಟ್ ರಸ್ತೆಯಲ್ಲಿ ಸಾಗಿ ನಂತರ ಬ್ರಹ್ಮಾವರ ಹೆಬ್ರಿ ರಸ್ತೆಯಲ್ಲಿ ಎಡಕ್ಕೆ ಚಾಂತಾರು ಕೆರೆ ರಸ್ತೆಯಲ್ಲಿ 18ಮೀ. ಸಾಗಿದರೆ ಚಾಂತಾರು ಕೆರೆಯ ಪಕ್ಕದಲ್ಲಿದೆ ಈ ಗರೋಡಿ.
ಇದು ಶಿಲಾಮಯ ಗರೋಡಿ ಆಗಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಷಡಾಧಾರ ಪ್ರತಿಷ್ಟೆಯೂ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಚಾಂತಾರು ಗ್ರಾಮವು ಹಿಂದೆ ಚ್ಯವನ ಋಷಿಗಳು ತಪಸ್ಸು ಮಾಡಿದ್ದ ಪುಣ್ಯ ಕ್ಷೇತ್ರ. ಇಲ್ಲಿ ಸುಮಾರು 33 ಎಕ್ರೆ ವಿಸ್ತೀರ್ಣದ ಚಾಂತಾರು ಮದಗವೆಂಬ ಕೆರೆ ಇದೆ. ಪಕ್ಕದಲ್ಲಿಯೇ ಒಂದು ಸುರಂಗವಿದ್ದು ಆ ಸುರಂಗದಲ್ಲಿ ಚ್ಯವನ ಋಷಿಗಳು ತಪಸ್ಸು ಮಾಡುತ್ತಿದ್ದರಿಂದ ಈ ಸ್ಥಳಕ್ಕೆ ಚಾಂತಾರು ಎಂಬ ಹೆಸರು ಬಂದಿದೆಯಂತೆ.
ಪುರಾತನವಾದ ಈ ಗರೋಡಿಗೆ 1870ರಲ್ಲಿ ಬ್ರಿಟಿಷ್ ಸರ್ಕಾರದಿಂದ ಸಹಾಯಧನ (ತಸ್ತಿಕ್) ಮಂಜೂರಾಗಿತ್ತಂತೆ. ಆವಾಗ ವರ್ಷಕ್ಕೆ 4/- ರೂಪಾಯಿ ತಸ್ತಿಕ್, ಈಗ 60000/- ರೂಪಾಯಿಗಳಾಗಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಶಿಲಾಮಯ ಗುಂಡದಲ್ಲಿ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಇದಲ್ಲದೆ ಬೆಳ್ಳಿ ಹಾಗೂ ಬಂಗಾರದ ಮೂರ್ತಿಗಳೂ ಇವೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಪಾಪೆಗಳಿವೆ.
ಗುಂಡದ ಬಲಭಾಗದಲ್ಲಿ ಕುದುರೆಯೇರಿ ಕುಳಿತ ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರ ಮರದ ಪಾಪೆಯಿದೆ, ಮತ್ತು ದೇವು ಬಲ್ಲಾಳರ ಮರದ ಪಾಪೆಯಿದೆ. ಮೈಸಂದಾಯ ಪೊಟ್ಟು ಭೂತಗಳ ಮಣೆ ಮಂಚಗಳು ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆ ಮಂಚದಲ್ಲಿ ಪಂಜುರ್ಲಿ, ಜುಮಾದಿ, ಹಾಯ್ಗುಳಿ, ಇನ್ನೆರಡು ಪಂಜುರ್ಲಿಗಳ ಮಣೆ ಮಂಚವಿದೆ. ಮಾಯಂದಾಲ್ ಮತ್ತು ಮಗು
ಬ್ರಹ್ಮಗುಡಿಯ ಎದುರಿಗೆ ಪಿಲ್ಚಂಡಿ ದೈವದ ಕಲ್ಲಿನ ಮಂಟಪದ ಮೇಲೆ ಹುಲಿಯ ಮರದ ಪಾಪೆಯಿದೆ. ಪಕ್ಕದಲ್ಲಿ ಜೋಗಿ ಪುರುಷ, ಚಿಕ್ಕಮ್ಮ ದೈವಗಳ ಮರದ ಪಾಪೆ ಮತ್ತು ಗುರುಕಂಬಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬೊಬ್ಬರ್ಯ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ಶಿಲಾಮಯ ತುಳಸಿಕಟ್ಟೆ, ಬಂಟಕಲ್ಲುಗಳಿವೆ.
ಗರೋಡಿಯ ಎದುರಿಗೆ ಇರುವ ಗುಡಿಯಲ್ಲಿ ಶಿವರಾಯ ಹಾಗೂ ಚೌ೦ಡಿ ದೈವಗಳ ಮರದ ಪಾಪೆಗಳಿವೆ.
ಗರೋಡಿಯ ಪರಿಸರದಲ್ಲಿ ನಾಗಬನ ಹಾಗೂ ಗುಡಿಯೊಂದರಲ್ಲಿ ಮಲಸಾವಿರ ದೈವಗಳಾದ ಮೈಸಂದಾಯ, ಜುಮಾದಿ, ಪಂಜುಲಿ, ಕಲ್ಲುಕುಡುಕ, ಪಿಲಿಚಾಮುಂಡಿ, ಗುಳಿಗ ಹಾಗೂ ಕೊರಗಜ್ಜ ದೈವಗಳ ಸಾನಿಧ್ಯವಿದೆ.
ಶ್ಯಾಮ ಪೂಜಾರಿ
ಮಹಾಬಲ ಪೂಜಾರಿ
ರಾಮ ಪೂಜಾರಿ
ಧತ್ತ ಪೂಜಾರಿ
ಶ್ಯಾಮ ಪೂಜಾರಿ (ಪ್ರಾಯ 65ವರ್ಷ) ಮಹಾಬಲ ಪೂಜಾರಿ(ಪ್ರಾಯ 60ವರ್ಷ) ಇವರು ಇಲ್ಲಿಯ ಪ್ರಧಾನ ಅರ್ಚಕರಾಗಿದ್ದು, ರಾಮ ಪೂಜಾರಿ (75ವರ್ಷ ಪ್ರಾಯ) ಹಾಗೂ ಧತ್ತ ಪೂಜಾರಿ (77ವರ್ಷ) ಇವರುಗಳು ಸಹಾಯಕ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಐತ ಪೂಜಾರಿ, ಪದ್ದ ಪೂಜಾರಿ, ಪುಟ್ಟ ಪೂಜಾರಿ, ಕಜಂಬ ಪೂಜಾರಿ, ಸಂಕ ಪೂಜಾರಿ, ಬೀರ ಪೂಜಾರಿ, ಕಾಳ ಪೂಜರಿ, ದೊಡ್ಡ ಪೂಜಾರಿ, ಇವರು ಈ ಸೇವೆ ಮಾಡಿದ್ದರು.
ಕೊಚ್ಚಿಕಾರ್ ಮನೆತನದ ನರೇಂದ್ರ ಪೈ ಇವರು ಇಲ್ಲಿಯ ಮೊಕ್ತೇಸರರು ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ತುಮ್ಮೇರಿ ವೆಂಕಟ್ರಾಯ ನಾಯಕ್ ಇವರು ಕಾರ್ಯದರ್ಶಿಯಾಗಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಮಂಗಳವಾರ ಪೂಜೆ, ಪೆರ್ಡೂರು ಸಂಕ್ರಮಣ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಅಷಾಢ ತಿಂಗಳಲ್ಲಿ ಬಿಟ್ಟು ಉಳಿದೆಲ್ಲಾ ತಿಂಗಳಲ್ಲಿ ಪಸರಣೆ, ಹೂವಿನ ಪೂಜೆಗಳು, ನಡೆಯುತ್ತವೆ. ಗರೋಡಿಯಲ್ಲಿ ಕದಿರು ಕಟ್ಟುವ ಕ್ರಮವಿದೆ. ಡಿಸೆಂಬರ್ ತಿಂಗಳಲ್ಲಿ ದಿನವಿಟ್ಟು ಅಗೆಲು ಸೇವೆ, ತುಲಾಭಾರ ಸೇವೆ ನಡೆಯುತ್ತದೆ. ಇದಲ್ಲದೆ ಮಾರ್ಚ 14ರಂದು ಅಗೆಲು ಸೇವೆ, 15ರಂದು ನೇಮೋತ್ಸವ ನಡೆಯುತ್ತದೆ. ಮಾರ್ಚ 18 2025 ರಂದು ಮಲಸಾವಿರ ಮತ್ತು ಪರಿವಾರ ದೈವಗಳ ಕೋಲ ನಡೆಯುತ್ತದೆ. ಈ ಕೋಲ 12ವರ್ಷಗಳಿಗೊಮ್ಮೆ ನಡೆಯುವ ಸಂಪ್ರದಾಯವಿದೆ.
ಚಾಂತಾರು ಗ್ರಾಮದ ಮಟ್ಪಾಡಿ, ನೀಲಾವರ, ಬೈಕಾಡಿ, ಕುಂಜಾಲು,ಹೇರೂರು, ಹಂದಾಡಿ, ವಾರಂಬಳ್ಳಿ, ಹೆರಂಜೆ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ನೀರುಸ್ನಾನ, ಮದುವೆಯಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮುಂತಾದ ಹರಕೆಯ ಸೇವೆಗಳಲ್ಲಿ ಜನ ಭಾಗಿಯಾಗುತ್ತಾರೆ. ಗರೋಡಿಗೆ ಸುಮಾರು 1ಎಕ್ರೆ ಜಾಗವಿದೆ. ಊರ ಪರವೂರ ಭಕ್ತರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಯು 1920ರಲ್ಲಿ ಜೀಣೋದ್ದಾರಗೊಂಡಿದೆ. ನಂತರ 1950ರಲ್ಲಿ ಬೈಹುಲ್ಲು ತೆಗದು ಹಂಚು ಹಾಕಿ ನೇಮೋತ್ಸವಾಗಿದೆ.
ನರಸಿಂಹ ಪರವ ಚೇರ್ಕಾಡಿ, ಗುಂಡು ಪರವ, ಶೀನ ಪರವ, ಇವರು ಗರೋಡಿಯ ನೃತ್ಯ ವಿಶಾರದರಾಗಿ, ಸಂತೋಷ ಮಡಿವಾಳ ಕುಂಜಾಲು ಇವರು ಮಡಿವಾಳರಾಗಿ, ಜನಾರ್ದನ ದೇವಾಡಿಗ ಚಾಂತಾರು ವಾಧ್ಯದವರಾಗಿ, ಅಣ್ಣಯ್ಯ ಡೋಲಿನವರಾಗಿ, ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ಪರಿಸರದಲ್ಲಿ ಚ್ಯವನ ವ್ಯವಸಾಯ ಸಂಘ ಕೆಲಸ ಮಾಡುತ್ತಿದೆ.
ಈ ಗರೋಡಿಯಲ್ಲಿ ಮದುವೆ ಮುಂತಾದ ಶುಭಕಾರ್ಯಗಳೂ ನಡೆಯುತ್ತವೆ.
ಗರೋಡಿಯ ವಿಳಾಸ:
ಚ್ಯವನ ಋಷಿ ಆಶ್ರಯಸ್ಥಾನವಾದ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಚಾಂತಾರು,
ಬ್ರಹ್ಮಾವರ ಅಂಚೆ, ಚಾಂತಾರು ಗ್ರಾಮ,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ 576213.
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ 576213.
ಮೊಬೈಲ್ ಸಂಖ್ಯೆ:
ರಾಮ ಪೂಜಾರಿ – 9535442195
ಶ್ಯಾಮ ಪೂಜಾರಿ – 7022424439
ಮಹಾಬಲ ಪೂಜಾರಿ – 9632301934
ದತ್ತ ಪೂಜಾರಿ – 9845386421
ಶ್ಯಾಮ ಪೂಜಾರಿ – 7022424439
ಮಹಾಬಲ ಪೂಜಾರಿ – 9632301934
ದತ್ತ ಪೂಜಾರಿ – 9845386421
ಮಾಹಿತಿ ನೀಡಿದವರು
ದತ್ತ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
27.12.2024