Skip to main content

Baidashree

Mane Garodigalu

ಮನೆ ಗರೋಡಿಗಳು

ಕೆಲವೊಂದು ಗರೋಡಿಗಳ ಸ್ಥಳ ಪುರಾಣದಲ್ಲಿ ತಿಳಿದುಬಂದಂತೆ, ಅಲ್ಲಿ ಗರೋಡಿ ನಿರ್ಮಾಣವಾಗುವ ಮೊದಲು ಕೋಟಿ ಚೆನ್ನಯರು ಅಲ್ಲಿಯ ಪ್ರತಿಷ್ಠಿತ ಮನೆಯ ಯಜಮಾನರುಗಳಿಗೆ ಮಾಯಾರೂಪದಲ್ಲಿ ತೋರಿ ಅಥವಾ ಸ್ವಪ್ನದಲ್ಲಿ ಬಂದು ಗರೋಡಿ ಸ್ಥಾಪನೆಗೆ ಪ್ರೇರಣೆ ನೀಡಿದ ಉದಾಹರಣೆಗಳಿವೆ.

ಕೋಟಿ – ಚೆನ್ನಯರು ತಮ್ಮ ಕಾರಣೀಕ ತೋರಿಸಿದ ಕುರುಹಾಗಿ ಅಂತಹ ಮನೆಗಳ ಹತ್ತಿರ ಗುಡಿಗಳಲ್ಲಿ ಅಥವಾ ಕೆಲವೊಂದು ಮನೆಗಳ ಒಳಗೆ ಕಲಶ, ಬಾವಚಿತ್ರ ಇಟ್ಟು ಕುಟುಂಬದ ಜನರು ಭಕ್ತಿ ಭಾವದಿಂದ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಬಂದಿರುವ ಮನೆಗರೋಡಿಗಳ (ಜಿಲ್ಲಾವಾರು, ತಾಲೂಕುವಾರು ವಿಂಘಡನೆ ಮಾಡಿದ) ಮಾಹಿತಿ ಇಲ್ಲಿದೆ.

ಸದ್ಯ ಉಡುಪಿ ಜಿಲ್ಲೆಯ ಕಾಪು ಹಾಗು ಉಡುಪಿ ತಾಲೂಕುಗಳ ಮನೆಗರೋಡಿಗಳ ಮಾಹಿತಿ ಸಂಗ್ರಹಿಸಲಾಗಿದ್ದು ಉಳಿದ ಮನೆಗರೊಡಿಗಳ ಮಾಹಿತಿ ಸಂಗ್ರಹ ಚಾಲನೆಯಲ್ಲಿದೆ .