Baidashree

Shree Brahma Baidarkala Hale Garodi, Cherkadi

ಶ್ರೀ ಬ್ರಹ್ಮಬೈದರ್ಕಳ ಹಳೆಗರೋಡಿ ಚೇರ್ಕಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 66 ರಲ್ಲಿಬ್ರಹ್ಮಾವರದ ಮೊದಲು ಭದ್ರಗಿರಿಯಲ್ಲಿ ರುಡ್‌ಸೆಡ್ ರಸ್ತೆಯಲ್ಲಿ ಸಾಗಿ, ಮುಂದೆ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸುಮಾರು 6.5ಕಿ.ಮೀ. ಸಾಗಿ ಕುಂಜಾಲುವಿನಲ್ಲಿ ಎಡಕ್ಕೆ ತಿರುಗಿ ಸುಮಾರು 2.78ಕಿ.ಮೀ. ದೂರದಲ್ಲಿ ಚೇರ್ಕಾಡಿ ಹಳೆ ಗರೋಡಿಯಿದೆ.
ಅತ್ಯಂತ ಪುರಾತನ ಗರೋಡಿಗಳಲ್ಲೊಂದಾದ ಈ ಗರೋಡಿಯು 60ನೇ ಗರಡಿಯೆಂದು ಕರೆಯಲ್ಪಡುತ್ತದೆ. ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದ ಪಾಪೆಗಳಿವೆ. ಪಕ್ಕದಲ್ಲಿ ದೇಯಿಬೈದೆತಿಯ ಮರದ ಪಾಪೆಯಿದೆ.
ಗುಂಡದ ಬಲ ಭಾಗದಲ್ಲಿ ಕುದುರೆಯ ಮೇಲೆ ಕುಳಿತ ಒಕ್ಕು ಬಲ್ಲಾಳರ ಮರದ ಪಾಪೆ, ಕುಜುಂಬ ಕಾಂಜವ ಮತ್ತು ಇಬ್ಬರು ಮಕ್ಕಳ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಎಡ ಬದಿಯಲ್ಲಿ ಜುಮಾದಿ ಮತ್ತು ಬಂಟರ ಮರದ ಪಾಪೆ, ಮಾಯಂದಾಲ್ ಮತ್ತು ಮಗುವಿನ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ ಹಾಗೂ ಮಣೆ ಮಂಚದಲ್ಲಿ ಪರಿವಾರ ದೈವಗಳ ಸಾನಿಧ್ಯವಿದೆ. ಬ್ರಹ್ಮಗುಡಿಯ ಬಲ ಭಾಗದಲ್ಲಿ ಮರದ ಗುಡಿಯಲ್ಲಿ ಪಂಜುರ್ಲಿ ಹಾಗೂ ಮಣೆ ಮಂಚದಲ್ಲಿ ಪರಿವಾರ ದೈವಗಳ ಆರಾಧನೆಯಿದೆ.
ಬ್ರಹ್ಮಗುಡಿಯ ಎದುರಿಗೆ ಸಣ್ಣಚಿಕ್ಕು, ಚಿಕ್ಕಮ್ಮದೇವಿ ಮತ್ತು ಮಗು ಹಾಗೂ ಜೋಗಿ ಪುರುಷರ ಮರದ ಪಾಪೆಗಳಿವೆ. ಪಕ್ಕದಲ್ಲಿ ಗುರುಕಂಭ ಹಾಗೂ ಮಣೆ ಮಂಚದಲ್ಲಿ ಪರಿವಾರ ದೈಗಳಿಗೆ ಪೂಜೆ ನಡೆಯುತ್ತದೆ.
ಗರೋಡಿಯ ಹೊರ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಪಾಪೆ, ಉಮ್ಮಳ್ತಿ ದೇವಿಯ ಮರದ ಪಾಪೆ ಹಾಗೂ ಜೈನರ ಎರಡು ಮಣೆ ಮಂಚಗಳಿವೆ.
ಗರೋಡಿಯ ಎದರು ಹೆಬ್ಬಾಗಿಲಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಪಾಪೆಗಳಿವೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಳಿಕಲ್ಲು, ಹಾಗೂ ಕಲ್ಲಿನ ಶಾಸನವಿದೆ.
ಗರೋಡಿಯ ಹೊರಾಂಗಣದ ಗುಡಿಯಲ್ಲಿ ಮಲಸಾವಿರ ಹಾಗೂ ಪರಿವಾರ ದೈವಗಳ ಆರಾಧನೆಯಿದೆ.

ವಿಜಯ ಪೂಜಾರಿ

2020ರಿಂದ ಗರೋಡಿಮನೆ ವಿಜಯ ಪೂಜಾರಿ (47 ವರ್ಷ ಪ್ರಾಯ) ಇವರು ಗರೋಡಿಯ (ಅರ್ಚಕ) ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಮಾವ ಕರಿಯ ಪೂಜಾರಿ, ಕೊಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು. ಶ್ಯಾಮ ಪೂಜಾರಿಯವರು ಇಲ್ಲಿಯ ಸಹ ಅರ್ಚಕರು.

ದಿನೇಶ ಪೂಜಾರಿ

ದಿನೇಶ ಪೂಜಾರಿ ಯವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರಿಗೆ ಮೊದಲು ಅವರ ಅಜ್ಜ ಬಸವ ಪೂಜಾರಿ ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸುಧಾಕರ ಹೆಗ್ಡೆಯವರು ಗರೋಡಿಯ ಮೊಕ್ತೇಸರರು. ಹಿಂದೆ ದಾಸನಬೆಟ್ಟು ರವಿರಾಜ ಹೆಗ್ಡೆಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಶುಕ್ರವಾರ ಪೂಜೆ, ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಹಾಲಹಬ್ಬ, ಅಗೆಲ್ ಸೇವೆ, ಮಾರ್ಚ 19 ಮಣ್ಣ ಮುಹೂರ್ತ, 20ಕ್ಕೆ ಅಗೆಲು ಸೇವೆ, 21 – ಬೈದೇರುಗಳ ನೇಮೋತ್ಸವ, ಶಿವರಾಯ ಕೋಲ, ತುಲಾಭಾರ ಸೇವೆಗಳು ನಡೆಯುತ್ತವೆ.
ಚೇರ್ಕಾಡಿ, ಪೆಜಮಂಗೂರು, ನೀಲಾವರ, ಎಳ್ಳಂಪಳ್ಳಿ, ಬೆಣಗಲ್, ಕನ್ನಾರು, ಹುತ್ತಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಕೂಡುಕಟ್ಟಿನ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ.ಊರ ಪರವೂರ ಭಕ್ತರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ ಸುಮಾರು 60ಸೆಂಟ್ಸ ಜಾಗವು “ ಶ್ರೀ ಬ್ರಹ್ಮಬೈದರ್ಕಳ ದೇವರ ಆಡಳಿತದಾರರು ಮತ್ತು ಅರ್ಚಕ ಕೊಪ್ಪ ಪೂಜಾರಿ ‘’ ಎಂಬ ಹೆಸರಲ್ಲಿದೆ.
1988ರಲ್ಲಿ ಜೋಣೋದ್ದಾರಗೊಂಡ ಈ ಗರೋಡಿಯು ಈಗ 2024-25ರಲ್ಲಿ ಅಂದಾಜು ಸುಮಾರು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯವಾಗಿ ಜೀಣೋದ್ದಾರಗೊಳ್ಳುವ ಯೋಜನೆಯಲ್ಲಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಇವರು ಈ ಗರೋಡಿಯ ನೃತ್ಯ ವಿಶಾರದರು. ನಾರಾಯಣ ಮಡಿವಾಳ ಚೇರ್ಕಾಡಿ ಇವರು ಮಡಿವಾಳರಾಗಿ, ಸುರೇಶ್ ಶೇರ್ವೆಗಾರ ಚೇರ್ಕಾಡಿ ಇವರು ವಾದ್ಯದವರಾಗಿ, ಪೇತ್ರಿಯ ಜೋಗಿ ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಳೆ ಗರೋಡಿ ಚೇರ್ಕಾಡಿ,
ಚೇರ್ಕಾಡಿ ಗ್ರಾಮ,
ಪೇತ್ರಿ ಅಂಚೆ
ಬ್ರಹ್ಮಾವರ ತಾಲೂಕು – 576215.

ಅರ್ಚಕರ ವಿಳಾಸ:

ವಿಜಯ ಪೂಜಾರಿ, (7406976767) ಕೋಟಿಚೆನ್ನಯ ನಿಲಯ, ಹಳೆಗರೋಡಿ ಮನೆ, ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ – 576125

ಸಹ ಅರ್ಚಕರು:

ಶ್ಯಾಮ ಪೂಜಾರಿ – 9739371291

ಸ್ಥಳ ಪಾತ್ರಿ:

ದಿನೇಶ ಪೂಜಾರಿ – 9880239293

ಮೊಕ್ತೇಸರರು:

ಸುಧಾಕರ ಹೆಗ್ಡೆ – 9620923927

ಮಾಹಿತಿ ನೀಡಿದವರು

ವಿಜಯ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

27.12.2024