ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕಕ್ಕುಂಜೆ
ಉಡುಪಿ ಕಲ್ಸಂಕ ಗುಂಡಿಬೈಲು ಮಾರ್ಗವಾಗಿ ಅಂಬಾಗಿಲಿ ನಿಂದ ಬಲಕ್ಕೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಸಾಗಬೇಕು. ಶ್ಯಾಂ ಸರ್ಕಲ್ನಿಂದ ಎಡಕ್ಕೆ ತಿರುಗಿ ಸುಮಾರು 1.25 ಕಿ.ಮೀ. ಸಾಗಬೇಕು. ಇಲ್ಲವಾದರೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲೇ ಮುಂದುವರಿದು ಪೆರಂಪಳ್ಳಿ ರೈಲ್ವೆ ಸೇತುವೆ ದಾಟುವ ಮೊದಲೇ ಎಡಕ್ಕೆ ತಿರುಗಿ 1 ಕಿ.ಮೀ. ಸಾಗಿದರೆ ಗರೋಡಿಯಿದೆ.

ಉಡುಪಿ ಕಲ್ಸಂಕ ಗುಂಡಿಬೈಲು ಮಾರ್ಗವಾಗಿ ಅಂಬಾಗಿಲಿ ನಿಂದ ಬಲಕ್ಕೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಸಾಗಬೇಕು. ಶ್ಯಾಂ ಸರ್ಕಲ್ನಿಂದ ಎಡಕ್ಕೆ ತಿರುಗಿ ಸುಮಾರು 1.25 ಕಿ.ಮೀ. ಸಾಗಬೇಕು. ಇಲ್ಲವಾದರೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲೇ ಮುಂದುವರಿದು ಪೆರಂಪಳ್ಳಿ ರೈಲ್ವೆ ಸೇತುವೆ ದಾಟುವ ಮೊದಲೇ ಎಡಕ್ಕೆ ತಿರುಗಿ 1 ಕಿ.ಮೀ. ಸಾಗಿದರೆ ಗರೋಡಿಯಿದೆ.

ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆರ್ಮೆರ್, ಮೇಲೆ ಗಾಳಿ ದೇವರು, ಗುಂಡದ ಹೊರಗೆ ಎಡಭಾಗದಲ್ಲಿ ಬೈದೇರುಗಳ ಪಾಪೆ, ಮಕ್ಕಳ ಪಾಪೆ, ದೇಯಿಬೈದೆತಿ-ಮಂಚದಲ್ಲಿ, ಬಲಭಾಗದಲ್ಲಿ ಕುಜುಂಬ ಕಾಂಜವರಿಗೆ ಮಣೆಮಂಚದಲ್ಲಿ ಆರಾಧನೆಯಿದೆ. ಬ್ರಹ್ಮಗುಡಿಯ ಹೊರಗೆ ಗುರುಕಂಬ, ಜೋಗಿಪುರುಷ ಪಾಪೆ,

ಗರೋಡಿ ಆವರಣದೊಳಗೆ; ಗುಡಿಯಲ್ಲಿ ಮಾಯಂದಾಲ್-ಮಗು ಪಾಪೆ, ಪಂಚಧೂಮಾವತಿ- ಬಂಟ ಗುಡಿ, ಬೊಬ್ಬರ್ಯಗುಡಿ. ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದಂತೆ 2019ರಲ್ಲಿ ಪಕ್ಕಿಬೆಟ್ಟು ಗರೋಡಿಯಿಂದ ಬಂದ ಪಂಜುರ್ಲಿಯನ್ನು ಗುಡಿಕಟ್ಟಿ ಪ್ರತಿಷ್ಠಾಪಿಸಲಾಗಿದೆ. ಅಯ್ಯರ ಕಲ್ಲು, ಪ್ರತ್ಯೇಕ ನಾಗ ಸನ್ನಿಧಿ ಇದೆ.

ಉದಯ ಪೂಜಾರಿ
ಕಕ್ಕುಂಜೆ ಗರೋಡಿಮನೆ ಉದಯ ಪೂಜಾರಿ ಅವರು 2019ರಿಂದ ಪೂಪೂಜೆಯವರಾಗಿದ್ದಾರೆ. ಈ ಗರೋಡಿಗೆ 98 ವರ್ಷಗಳ ಇತಿಹಾಸವಿದ್ದು 1924ರಿಂದ 1944ರವರೆಗೆ ಸದಿಯ ಪೂಜಾರಿ ಮೊದಲ ಪೂ ಪೂಜನೆಯವರಾಗಿದ್ದರು. ಆ ನಂತರದವರು ಕೊಂಬ ಪೂಜಾರಿ 1944ರಿಂದ 1979. ಈ ನಡುವೆ ತೋಮ ಪೂಜಾರಿ ಅಲ್ಪಾವಧಿ. ಕೊಂಬ ಪೂಜಾರಿ ಅವರ ತಮ್ಮ ಬದಿಯ ಪೂಜಾರಿ 1979-1983. ಉದಯ ಪೂಜಾರಿ 1983-1996. ವಿಜಯ ಪೂಜಾರಿ 1996-1999. ಜಬ್ಬ ಪೂಜಾರಿ 199-2000. ಶಂಕರ ಪೂಜಾರಿ 2000-2004, ವಿಜಯ ಪೂಜಾರಿ ಕಕ್ಕುಂಜೆ 2004-2007. ರಮೇಶ್ ಯು ಕಕ್ಕುಂಜೆ 2007-2019.
ಸ್ಥಳ ಪಾತ್ರಿಗಳು ಈಗ ಇಲ್ಲ. ಹಿಂದೆ ಐತ ಪೂಜಾರಿ ಕಕ್ಕುಂಜೆ, ರಾಜುಪೂಜಾರಿ, ರಾಮ ಪೂಜಾರಿ, ಕಕ್ಕುಂಜೆ ರಾಜು ಪೂಜಾರಿ ಸ್ಥಳ
ಪಾತ್ರಿಗಳಾಗಿದ್ದರು.
ಕಕ್ಕುಂಜೆ “ಮೇಲ್ಮನೆ”ಯ ಕೆ. ಶ್ರೀಕಾಂತ್ ಶೆಟ್ಟಿ ಅವರು ಗರೋಡಿ ಮೊಕ್ತೇಸರರಾಗಿರುತ್ತಾರೆ. ಭಾಸ್ಕರ್ ಡಿ. ಸುವರ್ಣ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ಥಳ ಪುರಾಣ ದಲ್ಲಿ ತಿಳಿದು ಬಂದಂತೆ, ಇಲ್ಲಿಗೆ ಮೂಲ ಪಕ್ಕಿಬೆಟ್ಟು ಗರೋಡಿ ಕಲ್ಯಾಣಪುರ. ಕಕ್ಕುಂಜೆಯಲ್ಲಿ ಗರೋಡಿ ಕಟ್ಟಲು ಕಾರಣವಾದ ಘಟನೆ. ಅಂದು ಕಕ್ಕುಂಜೆಯ ಗುರಿಕಾರರಾದ ಸದಿಯ ಪೂಜಾರಿ, ಹಿರಿಯರಾದ ತಿಮ್ಮ ಮಾಸ್ತರರು, ಅಂಗರ ಮಾಸ್ತರರು, ಅಬ್ಬಣ್ಣಕುದ್ರು ಕೊರಗ ಪೂಜಾರಿಯವರು, ಪೊಕ್ರು ಪೂಜಾರಿಯವರು ಪಕ್ಕಿಬೆಟ್ಟು ಗರೋಡಿಯ ನೇಮಕ್ಕೆ ಚಪ್ಪರ ಹಾಕಲು ಹೋಗುವಾಗ ವಿಳಂಬವಾಗಿತ್ತು. ಇವರಿಗೆ ಅಲ್ಲಿನ ಗುರಿಕಾರರುಗಳು ಖಾರವಾಗಿ ಬೈದು ಬಿಟ್ಟರು. ಇದರಿಂದ ಒಂದು ರೀತಿಯ ಅವಮಾನದಿಂದ ನೊಂದ ಗುರಿಕಾರರುಗಳು ವಾಪಾಸು ಊರಿಗೆ ಬಂದು ಜಮೀನ್ದಾರ್ ರಾಮಣ್ಣ ಶೆಟ್ಟಿ ಅವರಲ್ಲಿ ದೂರಿತ್ತರು. ರಾಮಣ್ಣ ಶೆಟ್ಟರು ನಾವೇ ಕೂಡಿ ಒಂದು ಹೊಸ ಗರೋಡಿ ಕಟ್ಟುವ ಎಂಬ ತೀರ್ಮಾನಕ್ಕೆ ಬಂದು 1924ರಲ್ಲಿ ಇಲ್ಲಿ ಗರೋಡಿ ನಿರ್ಮಾಣವಾಯಿತು. ಕಟ್ಟಿದ ಹೊಸ ಗರೋಡಿಯಲ್ಲಿ ಬಿಕ್ರಿ ಪೂಜಾರಿಯವರ ದರುಶನ ಸೇವೆ ನಡೆಯುತ್ತಿರುವಾಗ ಕೆಲವು ಹಿರಿಯರು ಬೈದೇರುಗಳು ಇಲ್ಲಿ ನೆಲೆಯಾದ ಬಗ್ಗೆ ಸಾಕ್ಷಿ ಬೇಕೆಂದರು. ಬೈದೇರುಗಳು ತಮ್ಮ ಕಲೆ-ನೆಲೆ ತೋರಿಸುತ್ತೇವೆ ಎಂದ ಸ್ವಲ್ಪವೇ ಹೊತ್ತಿನಲ್ಲಿ ಗರೋಡಿ ಸನಿಹದಲ್ಲೇ ಇದ್ದ ಬಾಕಿಮಾರು ಗದ್ದೆಗೆ ಭಾರೀ ಹುಣಸೇ ಮರದ ಬೃಹತ್ ಕೊಂಬೆಯೊಂದು ಜನ ಅವಕ್ಕಾಗಿ ನೋಡುತ್ತಾ ನಿಂತಿದ್ದಂತೆಯೇ ಜರಿದು ಬಿದ್ದಿತ್ತು.!
ಗರೋಡಿಯಲ್ಲಿ ನಿತ್ಯ ದೀಪ ಉರಿಸಲಾಗುತ್ತದೆ. ಪ್ರತಿ ಸೋಮವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ
ಪೂಜೆ ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲ್ ಅನ್ನ ನೈವೇದ್ಯ, ಕಾಲಾವಧಿ ನೇಮೋತ್ಸವ ಇದೆ. ಬೆಳಿಗ್ಗೆ ಮಾಯಂದಾಲ್ ಕೋಲ. 2014ರಿಂದ ರಾತ್ರಿ ಪಂಚಧೂಮಾವತಿ ಕೋಲ ನಡೆಯುತ್ತಿದೆ.
ಕಕ್ಕುಂಜೆ, ಅಬ್ಬಣಕುದ್ರು, ಕರಂಬಳ್ಳಿ ಮೂರು ಊರುಗಳು ಇಲ್ಲಿನ ಗರೋಡಿ ಕೂಡುಕಟ್ಟಿಗೆ ಸೇರುತ್ತವೆ. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಗುರಿಕಾರರುಗಳು :
1. ರೋಹಿದಾಸ ಪೂಜಾರಿ (ನಾಲ್ಕರೆ ಗುರಿಕಾರರು)
2. ಓಮಯ್ಯ ಪೂಜಾರಿ
3. ಅನಂತ ಪೂಜಾರಿ
4. ಕುಟ್ಟಿ ಪೂಜಾರಿ
5. ರಾಮ ಪೂಜಾರಿ
6. ಚೆನ್ನಯ ಪೂಜಾರಿ
7. ಕುಡ್ಪ ಪೂಜಾರಿ
8. ಸುಂದರ ಪೂಜಾರಿ
9. ಗೋಪಾಲ ಪೂಜಾರಿ ಕರಂಬಳ್ಳಿ
ಗುರಿಕಾರರುಗಳು :
1. ರೋಹಿದಾಸ ಪೂಜಾರಿ (ನಾಲ್ಕರೆ ಗುರಿಕಾರರು)
2. ಓಮಯ್ಯ ಪೂಜಾರಿ
3. ಅನಂತ ಪೂಜಾರಿ
4. ಕುಟ್ಟಿ ಪೂಜಾರಿ
5. ರಾಮ ಪೂಜಾರಿ
6. ಚೆನ್ನಯ ಪೂಜಾರಿ
7. ಕುಡ್ಪ ಪೂಜಾರಿ
8. ಸುಂದರ ಪೂಜಾರಿ
9. ಗೋಪಾಲ ಪೂಜಾರಿ ಕರಂಬಳ್ಳಿ
ಗರೋಡಿ ಜೀರ್ಣೋದ್ಧಾರದ ವಿವರ :
1924-ಗರೋಡಿ ಸ್ಥಾಪನೆ
1970-71 ಸಾಧುಶೆಟ್ಟಿ ನೇತೃತ್ವ
2004-2005 ಮುದ್ದು ಪೂಜಾರಿ ಕಕ್ಕುಂಜೆ
2016-ಬ್ರಹ್ಮಕುಂಭಾಭಿಷೇಕ
2019-20 : ಪ್ರತಿಷ್ಠೆ – ಪ್ರವೀಣ ಪೂಜಾರಿ
2022- ಕುಂಭಾಭಿಷೇಕ – ಭಾಸ್ಕರ ಡಿ. ಸುವರ್ಣ
ಬೊಗ್ಗು ಪರವ, ಬೂಬ ಪರವ, ಮನು ಪರವ ಇವರು ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದು ಹಿಂದೆ ನರಂಗ ಪರವ, ಮೆಣ್ಕ ಪರವ, ಪಿಜಿನ ಪರವ, ಅಮ್ಮು ಪರವ ಸೇವೆ ಮಾಡಿದ್ದರು.
ಧೂಮಾವತಿಗೆ ಕೋಲ ಕಟ್ಟುವವರು – ಭಾಸ್ಕರ ಪಡುಬಿದ್ರಿ, ಆನಂದ ಪಡುಬಿದ್ರಿ
ಕಕ್ಕುಂಜೆ ಗರೋಡಿಯ ವಿಶೇಷತೆಗಳು :

ಮುಂಬೈಯ ಗರೋಡಿ ಭಕ್ತರೊಬ್ಬರು ಕಳುಹಿಸಿದ ಎರಡು ಗಿಡಗಳನ್ನು ಗರೋಡಿ ಆವರಣದಲ್ಲಿ ನೆಡಲಾಗಿತ್ತು. ಆ ಗಿಡಗಳು ಎತ್ತರಕ್ಕೆ ಬೆಳೆದು ನಿಂತಾಗ ಅದರ ಎಲೆಗಳು ಗರೋಡಿ ಸುತ್ತಮುತ್ತ ಬೀಳುವುದು ಮಾತ್ರವಲ್ಲದೆ ಬೇರೇನೂ ಪ್ರಯೋಜನ ಇಲ್ಲವೆಂದು ಅವುಗಳನ್ನು ಕಡಿಯಲು ನಿರ್ಧರಿಸಲಾಗಿತ್ತು. ಮರ ಕಡಿಯುವ ಆಳುಗಳಿಗೆ ಕರೆ ಹೋಗಿತ್ತು. ಮುಂಚಿನ ದಿನ ಅಲ್ಲಿನ ಬಂದ ಎರಡು ಮಂಗಗಳು ಆ ಮರದ ಎರಡು ಗೆಲ್ಲುಗಳನ್ನು ಮುರಿದು ಹಾಕಿದವು. ಗರೋಡಿಯ ಮಂದಿ ಆ ಗೆಲ್ಲುಗಳನ್ನು ನೋಡುವಾಗ ಅದರಲ್ಲಿ ರುದ್ರಾಕ್ಷಿ ಕಾಯಿಗಳು ಗೋಚರಿಸಿದವು. ಮುಂದೆ ಮರ ಕಡಿಯಲಿಲ್ಲ. ಇದೇ ಪ್ರಚಾರವಾಗಿ ರುದ್ರಾಕ್ಷಿಗಾಗಿಯೇ ಜನ ಎಲ್ಲೆಲ್ಲಿಂದಲೋ ಬರಲಾರಂಭಿಸಿದ್ದು ಇಲ್ಲಿನ ವಿಶೇಷ. ಅದರಲ್ಲೂ ರುದ್ರಾಕ್ಷಿಯ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಹೈದರಾಬಾದಿನ ವ್ಯಕ್ತಿಯೊಬ್ಬರಿಗೆ ಇಲ್ಲಿನ ಗರೋಡಿಯಲ್ಲಿರುವ ರುದ್ರಾಕ್ಷಿ ಮರದ ಕನಸು ಬಿದ್ದು ಅದನ್ನು ಹುಡುಕಿಕೊಂಡು ಈ ಗರೋಡಿಗೆ ಭೇಟಿ ಕೊಟ್ಟು ರುದ್ರಾಕ್ಷಿ ಕಾಯಿಯನ್ನು ಪಡೆದುಕೊಂಡು ಹೋಗಿದ್ದರು.
ನಾಗಮಂಡಲ : ಕಕ್ಕುಂಜೆ ಗರೋಡಿಯಲ್ಲಿ ನಾಗ ಸಾನಿಧ್ಯವಿದ್ದು ಇಲ್ಲಿ ಹಿಂದೆ ನಾಗಮಂಡಲ ಜರಗಿತ್ತು.
ಅಗೆಲು ಸೇವೆ : ಇಲ್ಲಿ ಪ್ರತ್ಯೇಕ ಗುಂಡವಿದ್ದು – ಅದನ್ನು ಅಗೆಲು, ನೇಮೋತ್ಸವದ ಸಂದರ್ಭದಲ್ಲಿ ಅಂಗಣದಲ್ಲಿ ಇರಿಸಿ ದಲ್ಲೆ ಹಾಕುತ್ತಾರೆ.ಭತ್ತ, ನೀರೊಳಿಗೆ ಎಲೆ, ಅಶ್ವತ್ಥ, ಹಲಸಿನ ಎಲೆ, ಬಾಳೆದಿಂಡಿನ ಸಿಪ್ಪೆಯಿಂದ ಮಾಡುತ್ತಾರೆ. ಅನ್ನ ನೈವೇದ್ಯಕ್ಕೆ ಕಾಚಿಕುಂಬಳ, ಬಾಳೆಕಾಯಿ, ನುಗ್ಗೆ, ಮರ್ಸಣ್ ಹಲಸಿನಕಾಯಿ ಹಾಕುತ್ತಾರೆ. ಉದ್ದು ಹಾಕಿದ ಅಕ್ಕಿಯ ಗಟ್ಟಿ ಮಾಡುತ್ತಾರೆ. ಬಹಳ ಹಿಂದೆ ತಿಮ್ಮ ಮಾಸ್ತರರ, ಅಂಗರ ಮಾಸ್ತರರ ಕಾಲದಲ್ಲಿ ಅಗೆಲು ಸೇವೆಯ ದಿನ ಇಲ್ಲಿ ಕೋಡಂಗೆ ನೃತ್ಯ ನಡೆಯುತ್ತಿತ್ತು.
ಗರೋಡಿಯ ವಿಳಾಸ:
“ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕಕ್ಕುಂಜೆ,
ಶಿವಳ್ಳಿ ಗ್ರಾಮ,
ಉಡುಪಿ -576102
ಮೊಬೈಲ್ ನಂಬರ್ :
ಉದಯ ಪೂಜಾರಿ (ಪೂಪೂಜನೆಯವರು) 9591752769.
ಭಾಸ್ಕರ್ ಡಿ. ಸುವರ್ಣ (ಆಡಳಿತ ಸಮಿತಿಯ ಅಧ್ಯಕ್ಷರು) 9900771242