Baidashree

Shree Brahma Baidarkala Garodi Kalatthuru

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು

ಉಡುಪಿಯಿಂದ ಕಾಪು – ಶಿರ್ವ ರಸ್ತೆಯಲ್ಲಿ ಸಾಗಿ ಕಳತ್ತೂರು ಎಂಆರ್‌ಪಿಎಲ್ ಪೆಟ್ರೋಲ್ ಪಂಪಿನ ಬದಿಯ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸುಮಾರು 1.3ಕಿ.ಮೀ. ದೂರ ಸಾಗಿದರೆ ಕಳತ್ತೂರು ಗರೋಡಿ ಸಿಗುವುದು.
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು
ಆಯದ ಗರೋಡಿಯಾದ ಇದಕ್ಕೆ ಮೂರು ಬಾಗಿಲುಗಳಿವೆ. ಮುಖ್ಯ ದ್ವಾರವು ಪೂರ್ವಾಭಿ ಮುಖವಾಗಿದ್ದು ಉತ್ತರ ಹಾಗೂ ಪಶ್ಚಿಮ ಹಾಗೂ ದಿಕ್ಕಿಗೆ ಒಂದೊಂದು ದ್ವಾರಗವಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಕುದುರೆಯಲ್ಲಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕೋಟಿಚೆನ್ನಯರು, ದೇಯಿ ಬೈದೆತಿ ಹಾಗೂ ಜೋಗಿ ಪುರುಷರಿಗೂ ಆರಾಧನೆಯಿದೆ.
ಗುಂಡದ ಬಲ ಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಆರಾಧನೆಯಿದೆ.
ಬ್ರಹ್ಮ ಗುಡಿಯ ಹೊರಗೆ ಬಲ ಭಾಗದಲ್ಲಿ ಮಣೆ ಮಂಚದಲ್ಲಿ ಜುಮಾದಿಗೂ ಎಡಬದಿಯ ಮಣೆ ಮಂಚಗಳಲ್ಲಿ ಕೊಡಮಣಿತ್ತಾಯ ಹಾಗೂ ಜಾರಂದಾಯ ದೈವಗಳ ಆರಾಧನೆ ಇದೆ.
ಗರೋಡಿಯೊಳಗೆ ಉತ್ತರ ದಿಕ್ಕಿನ ದ್ವಾರದ ಬಳಿ ಗುರು ಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಹೊರಾಂಗಣದಲ್ಲಿ ಗುಡಿಯೊಳಗೆ ಪಿಲ್ಚಂಡಿ ದೈವದ ಬಂಡಿಯನ್ನಿಟ್ಟು ಪೂಜೆ ನಡೆಯುತ್ತದೆ.
ಹೆಬ್ಬಾಗಿಲಿನ ಒಂದು ಬದಿಯಲ್ಲಿ ಗುಡಿಯೊಳಗೆ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗೂ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟೆ ಹಾಗೂ ಸ್ಥಳದ ನಾಗಬನಗಳೂ ಇದೆ.

ವಿಶ್ವನಾಥ ಕೆ ಪೂಜಾರಿ

ಗರೋಡಿಮನೆ ವಿಶ್ವನಾಥ ಕೆ ಪೂಜಾರಿ (76 ವರ್ಷ) ಇವರು ಪೂ ಪೂಜನೆಯ ವರಾಗಿದ್ದಾರೆ.ಇವರಿಗಿಂತ ಮೊದಲು ಮುದ್ದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು.

ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜಾರ್ದೆ ಹುಣ್ಣಿಮೆಯ ಷಷ್ಠಿಯಂದು ಅಗೆಲು ಸೇವೆ, ಸಪ್ತಮಿಯಂದು ಬೈದೇರುಗಳ ನೇಮೋತ್ಸವ ನಡೆಯುತ್ತದೆ. ಪಿಲ್ಚಂಡಿ, ಮಾಯಂದಾಲ್, ಜೋಗಿ ಪುರುಷರಿಗೂ ಕೋಲ ಸೇವೆ ನಡೆಯುತ್ತದೆ. ನಂತರ ಶುದ್ಧದ ಅಗೆಲು ನಡಿಗುತ್ತು ಮನೆತನದವರ ವತಿಯಿಂದ ನಡೆಯುತ್ತದೆ. ಸೋಣ ತಿಂಗಳಲ್ಲಿ ಬರಬೆಟ್ಟು ಗುತ್ತಿನವರ ವತಿಯಿಂದ ಅಗೆಲು ಸೇವೆ ನಡೆಯುತ್ತದೆ. ಆಟಿಯಲ್ಲಿ ಅಗೆಲ್ ಸೇವೆ ನಡೆಯುವ 6 ಗರೋಗಳಲ್ಲಿ ಇದೂ ಒಂದು. ಸೋಣದ ಸಂಕ್ರಾಂತಿಯಂದು ಹೂವಿನ ಪೂಜೆ ನಡೆಯುತ್ತದೆ.

ಕಳತ್ತೂರು ಹಾಗೂ ಪಾದೂರು ಗ್ರಾಮಗಳ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರದ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿಯೂ ಭಾಗಿಯಾಗಿರುತ್ತಾರೆ. ವಂತಿಗೆ ಹಾಗೂ ಹರಕೆಯ ಹಣದಿಂದ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತದೆ.

ಗರೋಡಿಯು ಈಗ ಜೀರ್ಣೋದ್ದಾರದ ಯೋಜನೆಯಲ್ಲಿದೆ. ಹಿಂದೆ 25.05.1994 ಹಾಗೂ 1963 ರಲ್ಲಿ ಜೀಣೋದ್ದಾರಗೊಂಡಿತ್ತು.
ಬೊಗ್ಗು ಪರವ, ಉಗ್ಗಪ್ಪ ಪರವ, ಸಂತು ಪರವ ಇವರುಗಳು ಈ ಗರೋಡಿಯ ನೃತ್ಯ ವಿಶಾರದರಾಗಿಯೂ, ಶಶಿ ಮಡಿವಾಳ ಪಣಿಯೂರು, ಇವರು ಮಡಿವಾಳರಾಗಿಯೂ, ಲಕ್ಷಣ ಸೇರಿಗಾಎ ಎಲ್ಲೂರು, ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಳತ್ತೂರು,
ಕಳತ್ತೂರು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು,
ಉಡುಪಿ ಜಿಲ್ಲೆ. 576106.
ಪೂ ಪೂಜನೆಯವರ ವಿಳಾಸ:
ವಿಶ್ವನಾಥ ಕೆ. ಪೂಜಾರಿ,
ಗರೋಡಿ ಮನೆ, ಕಳತ್ತೂರು ಗ್ರಾಮ ಮತ್ತು ಅಂಚೆ,
ಕಾಪು ತಾಲೂಕು,
ಉಡುಪಿ ಜಿಲ್ಲೆ – 576106.
ಮೊಬೈಲ್: 9945772269