Baidashree

Shree Kodamanittaya Brahma Baidarkala Garodi, Nakre

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ನಕ್ರೆ

ಉಡುಪಿಯಿಂದ ಪಳ್ಳಿ – ರಂಗನ ಪಲ್ಕೆ – ನಕ್ರೆ ಮಾರ್ಗದಲ್ಲಿ ನಕ್ರೆ ಸರಕಾರಿ ಪ್ರೌಢ ಶಾಲೆಯ ನಂತರ 350 ಮೀ. ನಲಿ ಎಡಕ್ಕೆ ತಿರುಗಿ ಸುಮಾರು 250 ಮೀ. ದೂರದಲ್ಲಿದೆ ಈ ಗರೋಡಿ.
Nakre-Garodi-1
Nakre-Garodi-2
ಗರೋಡಿಗೆ ಪೂರ್ವಾಭಿಮುಖವಾಗಿ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚ ಲೋಹದ ಬೆಳ್ಳಿ ಮುಚ್ಚಿದ ಮೂರ್ತಿಇದೆ. ಸಾಮಾನ್ಯವಾಗಿ ಇದು ಭಂಡಾರದ ಮನೆಯಲ್ಲಿದ್ದು ವಿಶೇಷ ದಿನಗಳಂದು ತರಲಾಗುತ್ತಿದೆ. ಗುಂಡದ ಎಡಭಾಗದ ಮಣೆಮಂಚದಲ್ಲಿ ಪಂಚಲೋಹದ ಬೆಳ್ಳಿಮುಚ್ಚಿದ ಕೋಟಿ-ಚೆನ್ನಯರ ಮೂರ್ತಿಗಳಿವೆ. ಬಲಬದಿಯಲ್ಲಿ ಕುಜುಂಬ ಕಾಂಜವರ ಮಣೆ ಮಂಚವಿದೆ.
Nakre-Garodi-3
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಸಾನಿಧ್ಯವಿದೆ.
Nakre-Garodi-4
ಗರೋಡಿಯ ಆವರಣ ಗೋಡೆಯ ಹೊರಗೆ ಮಹಮ್ಮಾಯಿ ಕಟ್ಟೆ, ನಂದಿಗೋಣ, ಜುಮಾದಿ, ಜುಮಾದಿ ಬಂಟ ದೈವಗಳ ಸಾನಿಧ್ಯವಿದೆ.

ರಮೇಶ ಪೂಜಾರಿ

ರಮೇಶ ಪೂಜಾರಿ (53 ವರ್ಷ) ಇವರು ಈ ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಕೆಂಪ ಪೂಜಾರಿ, ಗೋಪ ಪೂಜಾರಿ, ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಪಾತ್ರಿಗಳಿಲ್ಲ. ಹಿಂದೆ ಗೋಪ ಪೂಜಾರಿ, ಅಪ್ಪಿ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು. ನಡಿಬೆಟ್ಟುಗುತ್ತು ಮುತ್ತಯ್ಯ ನೈಯ್ಕ ಇವರು ಗರೋಡಿಯ ಮೊಕ್ತೇಸರರು.
ಗರೋಡಿಯ ಕೂಡುಕಟ್ಟಿನಲ್ಲಿ 1. ವರ್ನಬೆಟ್ಟು 2. ಮಾಣಿಬೆಟ್ಟು 3. ನಡಿಬೆಟ್ಟು 4. ಕದಿಕೆ 5. ದೊಡ್ಡಮನೆ 6. ಬಲಿಪಗುತ್ತುಗಳೆಂಬ 6 ಗುತ್ತುಗಳು, 1. ನಡಿಬೆಟ್ಟು 2.ಕುರುಡೇಲು 3. ಪೆತ್ತಾಜೆ 4. ತೆಂಕಯ್ಯಬೆಟ್ಟು 5.ಮುರ್ಗಿ ಎಂಬ 5 ಬರ್ಕೆಗಳಿವೆ.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾಂತಿ ಪೂಜೆ,ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ. ಮಾಯಿ ತಿಂಗಳ ಹುಣ್ಣಿಮೆಯಂದು ಎಲ್ಲಾ ದೈವಗಳ ಕೋಲ ನಡೆಯುತ್ತದೆ.
ನಕ್ರೆ ಗ್ರಾಮದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 20 ಸೆಂಟ್ಸ ಜಾಗವಿದ್ದು 2012ರಲ್ಲಿ ಜೀರ್ಣೋದ್ದಾರವಾಗಿದೆ.
ವಿಠಲ ಪರವ ನಕ್ರೆ, ದಯಾನಂದ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಮಾಣಿಗ ಮಡಿವಾಳ ಇವರು ಮಡಿವಾಳರಾಗಿ, ನಾರಾಯಣ ದೇವಾಡಿಗ ರೆಂಜಾಳ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರೋಡಿ, ನಕ್ರೆ,
ನಕ್ರೆ ಅಂಚೆ, ಕಾರ್ಕಳ ತಾಲೂಕು

ಗರೋಡಿಯ ಪೂ ಪೂಜನೆಯವರು:

ರಮೇಶ ಪೂಜಾರಿ – 9980898070

ಮಾಹಿತಿ ನೀಡಿದವರು:

ರಮೇಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದರವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

19-06-2025

Shree Vyagra Chamundi Shree Brahma Baidarkala Garodi, Handelu Devasa

ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಬ್ರಹ ಬೈದರ್ಕಳ ಗರೋಡಿ, ಹಂಡೇಲು ದೇವಸ

ಉಡುಪಿ – ಮೂಡಬಿದಿರೆ ಮಾರ್ಗವಾಗಿ ಹಂಡೇಲು ತಲುಪಿ ಈ ಗರೋಡಿಗೆ ಹೋಗ ಬಹುದು.
Devasa-Handelu-Garadi-1
Devasa-Handelu-Garadi-2
ಗರೋಡಿಗೆ ಪೂವಾಭಿಮುಖವಾದ ಮುಖ್ಯ ದ್ವಾರವಿದ್ದು, ಇನ್ನೊಂದು ದ್ವಾರವು ಉತ್ತರ ದಿಕ್ಕಿಗೆ ಇದೆ.
ಗರೋಡಿಯ ಒಳಗೆ ಉತ್ತರಾಭಿಮುಖವಾಗಿ ಮಣೆಮಂಚದ ಮೇಲೆ ಮರದ ಗುಂಡವಿದೆ. ಪೂಜಾ ಸಂದರ್ಭಗಳಲ್ಲಿ ಭಂಡಾರದ ಮನೆಯಿಂದ ನಾಗಬ್ರಹ್ಮರ ಕಂಚಿನ ಮೂರ್ತಿ ಹಾಗೂ ಕೋಟಿ-ಚೆನ್ನಯರ ಎರಡು ಸುರಿಯ ಹಾಗೂ ಕುಜುಂಬ ಕಾಂಜವರ ಒಂದು ಸುರಿಯ ತಂದು ಇದರ ಮೇಲೆ ಇಡಲಾಗುತ್ತದೆ. ಕುಜುಂಬ ಕಾಂಜವರಿಗೂ ಮಣೆ ಮಂಚದಲ್ಲಿ ಪೂಜೆ ನಡೆಯುತ್ತದೆ. ಪಕ್ಕದಲ್ಲಿ ಮಾಯಂದಾಲ್ ಮಣೆ ಮಂಚ ಹಾಗೂ ಮೈಸಂದಾಯ, ಓಡಿಲ್ತಾಯ ದೈವಗಳ ಮಣೆ ಮಂಚಗಳಿವೆ.
ಪಕ್ಕದಲ್ಲಿ ಪೂರ್ವಾಭಿಮುಖವಾಗಿ ಪಿಲ್ಚಂಡಿ ದೈವದ ಮಣೆ ಮಂಚವಿದೆ. ಭಂಡಾರದ ಮನೆಯಿಂದ ದೈವದ ಮೂರ್ತಿ ಹಾಗೂ ಕಡ್ಸಲೆಗಳನ್ನು ಪೂಜಾ ಸಂದರ್ಭಗಳಲ್ಲಿ ಇಲ್ಲಿಗೆ ತಂದು ಇಟ್ಟು ಪೂಜೆ ಮಾಡಲಾಗುತ್ತದೆ.
Devasa-Handelu-Garadi-4
ಗರೋಡಿಯ ಪಕ್ಕದಲ್ಲಿ ಬೈದೇರುಗಳ ಭಂಡಾರದ ಮನೆ.
Devasa-Handelu-Garadi-5
ಬೈದೇರುಗಳ ಭಂಡಾರದ ಮನೆಯ ಮುಂದೆ ಇರುವ ಭಂಡಾರ ಇಡುವ ಗುಡಿ.
Devasa-Handelu-Garadi-6
ಬೈದೇರುಗಳ ಭಂಡಾರ.
Devasa-Handelu-Garadi-7
ಪಿಲ್ಚಂಡಿ ದೈವದ ಭಂಡಾರದ ಮನೆ.
ಪಿಲ್ಚಂಡಿ ದೈವದ ಭಂಡಾರದ ಮನೆಯ ಮುಂದೆ ಇರುವ ಭಂಡಾರ ಇಡುವ ಗುಡಿ.
Devasa-Handelu-Garadi-9
ಗರೋಡಿಯ ಆವರದೊಳಗೆ ಅಜೆಕಾಯಿ ಕಲ್ಲುಗಳಿವೆ.
Devasa-Handelu-Garadi-10

ಶಿವಾನಂದ ಪೂಜಾರಿ

ಶಿವಾನಂದ ಪೂಜಾರಿ (60 ವರ್ಷ) ಬೈದೇರುಗಳ ಭಂಡಾರದ ಮನೆಯ ಹಿರಿಯರಾಗಿದ್ದು, ಭಂಡಾರದ ಕೋಣೆಯಲ್ಲಿ ನಿತ್ಯ ಹೂ ನೀರು ಇಡುತ್ತಾರೆ ಸಂಕ್ರಾಂತಿಯಂದು ಪೂಜೆ ನಡೆಯುತ್ತದೆ. ಇವರಿಗೆ ಮೊದಲು ಅಣ್ಣಿ ಪೂಜಾರಿ, ನಕ್ರ ಪೂಜಾರಿ, ಪೂವ ಪೂಜಾರಿಯವರು ಇಲ್ಲಿಯ ಹಿರಿಯರಾಗಿ ಈ ಸೇವೆ ಮಾಡುತ್ತಿದ್ದರು.
ಶ್ರೀ ರಕ್ಷಿತ್ ಬಲ್ಲಾಳರು ಈ ಗರೋಡಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷರಾಗಿ, ಎಚ್.ಧನಕೀರ್ತಿ ಬಲಿಪರು ಅಧ್ಯಕ್ಷರಾಗಿ, ಶ್ರೀಧರ್ ಕೆ ಇವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯಲ್ಲಿ ಸೋಣ ಸಂಕ್ರಾಂತಿಯಂದು ಪೂಜೆ ಇದೆ. ಜಾರ್ದೆ ಹೋಗಿ ಪೆರಾರ್ದೆ ಬರುವ ಸಂಕ್ರಾಂತಿಯಂದು ಭಂಡಾರ ಬಂದು ಬೈದೇರುಗಳ, ಜೋಗಿಪುರುಷ, ಪಿಲ್ಚಂಡಿ ಹಾಗೂ ಮಾಯಂದಾಲ್ ಕೋಲ ನಡೆದು ಭಂಡಾರ ವಾಪಾಸು ಹೋಗುವ ಕ್ರಮ ಇದೆ.
ಹಂಡೇಲು ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರ ವರಡ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1942 ಹಾಗೂ 1972ರಲ್ಲಿ ಈ ಗರೋಡಿಯ ಜೀರ್ಣೋದ್ದಾರವಾಗಿದೆ.
Devasa-Handelu-Garadi-11

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ವ್ಯಾಘ್ರ ಚಾಮುಂಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹಂಡೇಲು ದೇವಸ
ಮಿಜಾರು ಅಂಚೆ, ಪುತ್ತಿಗೆ ಗ್ರಾಮ,
ಮೂಡಬಿದಿರೆ – 574225

ಮಾಹಿತಿ ನೀಡಿದವರು:

ಶಿವಾನಂದ ಪೂಜಾರಿ – 9900714790
ಯಕ್ಷಿತ್ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

23-12-2025

Shree Kodamanittaya Shree Dharmarasu Shree Brahma Baidarkala Garodi, Hajankabetta, Ladi

ಶ್ರೀ ಕೊಡಮಣಿತ್ತಾಯ, ಶ್ರೀ ಧರ್ಮರಸುಕುಮಾರ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹಜಂಕಾಲಬೆಟ್ಟ, ಲಾಡಿ ಮೂಡಬಿದಿರೆ

ಉಡುಪಿಯಿಂದ – ಮೂಡಬಿದಿರೆ ತಲುಪಿ, ಮೂಡಬಿದಿರೆ ನಗರದಿಂದ ಸುಮಾರು 1ಕಿ.ಮೀ.ದೂರದಲ್ಲಿದೆ ಈ ಗರೋಡಿ
Laadi-Garodi-1
Laadi-Garodi-2
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವನ್ನು ಹೊಂದಿದೆ. ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡವಿದೆ. ನಾಗಬ್ರಹ್ಮರ ಕಂಚಿಗೆ ಬೆಳ್ಳಿ ಮುಂಚ್ಚಿದ ಮೂರ್ತಿ ಇದೆ. ಮೂರು ಸುರಿಯಗಳಿವೆ. ಎಡಬದಿಯಲ್ಲಿ ಮಾಯಂದಾಲ್ ಮಣೆ ಮಂಚವಿದೆ.
Laadi-Garodi-4
ಗರೋಡಿಯ ಎದುರಿಗೆ ಇರುವ ಗುಡಿಯಲ್ಲಿ ಕೊಡಮಣಿತ್ತಾಯ ದೈವದ ಸಾನಿಧ್ಯವಿದೆ. ಎದುರಿಗೆ ಧ್ವಜಸ್ಥಂಭವಿದೆ. ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ದೇವಕುಮಾರ ದೈವಗಳ ಸಾನಿಧ್ಯವಿದೆ.
Laadi-Garodi-5
ಗರೋಡಿಯ ಆವರಣದೊಳಗೆ ಅಜೆಕಾಯಿಕಲ್ಲುಗಳಿವೆ.
Laadi-Garodi-6

ರಾಜು ಕೋಟ್ಯಾನ್

ರಾಜು ಕೋಟ್ಯಾನ್(83 ವರ್ಷ)ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಕೂಕ್ರ ಪೂಜಾರಿ, ಕೊರಗ ಪೂಜಾರಿಯವರು ಈ ಸೇವೆ ಮಾಡಿದ್ದರು. ವೃಷಭರಾಜ ಬಲ್ಲಾಳರು ಈ ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆಗಳು ನಡೆಯುತ್ತದೆ.
ಜನವರಿ ತಿಂಗಳ 14ನನೇ ತಾರೀಖಿನಂದು ಭಂಡಾರ ಬಂದು, ಕೊಡಿ ಏರಿ,ದೈವಕುಮಾರ ನೇಮ ನಡೆಯುತ್ತದೆ. 15ನೇ ತಾರೀಖಿನಂದು ಕೊಡಮಣಿತ್ತಾಯ ನೇಮ, ಬಲಿ, 16ನೇ ತಾರೀಖಿನಂದು ಬೈದೇರುಗಳ ನೇಮ, ಮಾಯಂದಾಲ್ ನೇಮದ ಬಳಿಕ ಬಲಿ 17ನೇ ತಾರೀಖಿನಂದು ಕೊಡಮಣಿತ್ತಾಯ ದೈವಕ್ಕೆ ಕುರಿತಂಬಿಲ ಸೇವೆ ನಡೆದು ಕೊಡಿ ಇಳಿಸಿ ಭಂಡಾರ ವಾಪಾಸು ಹೋಗುವುದು. ಬೈದೇರುಗಳ ಭಂಡಾರ ಅನರೊಟ್ಟು ಬರ್ಕೆಯಿಂದಲೂ, ದೈವಕುಮಾರ ಭಂಡಾರವು ಈಶ್ವರ ಪೂಜಾರಿ, ಗಡಿ ಪ್ರಧಾನರು, ಮಿತ್ತಲಾಡಿ ಬರ್ಕೆಯಿಂದಲೂ, ಕೊಡಮಣಿತ್ತಾಯ ದೈವ ಭಂಡಾರವು ಲಾಡಿಗುತ್ತು ವೃಷಭರಾಜ ಬಲ್ಲಾಳರ ಮನೆಯಿಂದಲೂ ಬರುವುದು.
ಲಾಡಿ ಗ್ರಾಮದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಅಂಸರ್ಭದಲ್ಲಿ ಪ್ರಾರ್ಥಿಸಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ವರಡ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಸುಮಾರು ಇಪ್ಪತೈದು ವರ್ಷಗಳ ಕಾಲ ಇಲ್ಲಿ ಜಾತ್ರೆ ನೇಮ ನಡೆಯದೆ ಇದ್ದು 2001ರಲ್ಲಿ ಜೀರ್ಣೋದ್ಧಾರವಾದ ನಂತರ ಪುನ: ನೇಮ ಜಾತ್ರೆ ನಡೆಯಲಾರಂಭಿಸಿದ್ದಿ ಈಗ ಪುನ: ಜೀರ್ಣೋದ್ದಾರದ ಯೋಜನೆಯಿದೆ.
ನಾರಾಯಣ ಪರವ ಮಾರೂರು, ಜಯ ಪರವ, ಪ್ರಶಾಂತ ಪರವ ವಾಲ್ಪಾಡಿ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿ, ಶ್ರೀನಿವಾಸ ಮಡಿವಾಳ ಲಾಡಿ ಇವರು ಮಡಿವಾಳರಾಗಿ, ದಿನೇಶ್ ಹೊಸಬೆಟ್ಟು ವಾಧ್ಯದದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ಆವರಣದಲ್ಲಿ ಭಜರಂಗದಳ ಲಾಡಿ ಘಟಕ, ಹೆಜಂಕಾಲಬೆಟ್ಟ ಭಜನಾಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ
Laadi-Garodi-7

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಶ್ರೀ ಧರ್ಮರಸುಕುಮಾರ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹಜಂಕಾಲಬೆಟ್ಟ, ಲಾಡಿ
ಮೂಡಬಿದಿರೆ

ಮಾಹಿತಿ ನೀಡಿದವರು:

ಸುರೇಶ್ ಕೋಟ್ಯಾನ್ – 9611098309
ಗಣೇಶ್ ಕೋಟ್ಯಾನ್
ರಾಜು ಕೋಟ್ಯಾನ್

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

23-12-2025

Shree Dharmarasu, Kodamanittayi, Kukkinantayi, Brahma Baidarkala Garodi, Kellaputtige Dharegudde

ಶ್ರೀ ಧರ್ಮರಸು, ಕೊಡಿಮಣಿತ್ತಾಯಿ, ಕುಕ್ಕಿನಂತಾಯಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕೆಲ್ಲಪುತ್ತಿಗೆ ಧರೆಗುಡ್ಡೆ

ಉಡುಪಿಯಿಂದ ಕಾರ್ಕಳ ತಲುಪಿ, ಕಾರ್ಕಳ – ಮೂಡುಬಿದಿರೆ ಹೆದ್ದಾರಿಯಲ್ಲಿ ಸುಮಾರು 3 ಕಿ. ಮಿ. ನಂತರ ಬಲಕ್ಕೆ ತಿರುಗಿ ಬೆಳುವಾಯಿ – ಅಳಿಯೂರು ರಸ್ತೆಯಲ್ಲಿ ಸುಮಾರು 7 ಕಿ. ಮೀ. ಸಾಗಿದರೆ ಈ ಗರೋಡಿ ಸಿಗುವುದು.

Daregudde-Kellaputtige-Garadi-1
Daregudde-Kellaputtige-Garadi-2
Daregudde-Kellaputtige-Garadi-3
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
Daregudde-Kellaputtige-Garadi-4
ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡವಿದ್ದು, ನಾಗ ಬ್ರಹ್ಮರ ಮೂರ್ತಿ ಇದೆ. ಮಣೆ ಮಂಚದಲ್ಲಿ ಕೋಟಿ – ಚೆನ್ನಯರ ಮೂರ್ತಿಗಳಿವೆ.
Daregudde-Kellaputtige-Garadi-6
ಗರೋಡಿಗೆ ಎದುರಿಗೆ ಇರುವ ಗುಡಿಯಲ್ಲಿ ಮಾಯಂದಾಲ್ ಮರದ ಮೂರ್ತಿ ಇದೆ.
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಸಾನಿಧ್ಯವಿದೆ. ಪಕ್ಕದಲ್ಲಿ ದೈವರಸು ದೈವದ ಕಟ್ಟೆ ಇದೆ. ದ್ವಜಸ್ಥಂಭ, ಅಜೆಕಾಯಿ ಕಲ್ಲುಗಳೂ ಇದೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
ಅಶೋಕ ಪೂಜಾರಿ, ಸುನಿಲ್ ಪೂಜಾರಿಯವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಜಿನ್ನಪ್ಪ ಪೂಜಾರಿ, ಶೇಖರ ಪೂಜಾರಿಯವರು ಇಲ್ಲಿಯ ಪೂ ಪೂಜನೆಯ ಸೇವೆ ಮಾಡಿದ್ದರು. ಅಶೋಕ ಪೂಜಾರಿ ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಯಾಗಿಯೂ ಸೇವೆ ಮಾಡುತ್ತಿದ್ದಾರೆ. ನವೀನ್ಚಂದ್ರ ಚೌಟರವರು ಇಲ್ಲಿಯ ಮೊಕ್ತೇಸರಾಗಿದ್ದಾರೆ. ಹಿಂದೆ ಕೆ.ಜೀವಂದರ್ ಚೌಟರವರು ಇಲ್ಲಿಯ ಮೊಕ್ತೇಸರಾಗಿದ್ದರು.
ಗರೋಡಿಯಲ್ಲಿ ಸೋಣ ಸಂಕ್ರಾಂತಿಯಂದು ಪೂಜೆ, ದೀಪಾವಳಿಯಂದು ದೀಪ ಇಟ್ಟು ಪ್ರಾರ್ಥನೆ ಮಾಡುವ ಕ್ರಮ ಇದೆ. ಪ್ರತೀ ವರ್ಷ ಸೋಣ ತಿಂಗಳ ಹುಣ್ಣಿಮೆಯಂದು ಕುಕ್ಕಿನಂತಾಯ, ಕೊಡಮಣಿತ್ತಾಯ ದರ್ಶನ, ಬೈದೇರುಗಳಿಗೆ ಸಂಕ್ರಾಂತಿ ಪೂಜೆ (ಪಂಚ ಕಜ್ಜಾಯ) ಸೇವೆ ನಡೆಯುತ್ತದೆ. ಪ್ರತೀ ವರ್ಷ ಮಾರ್ಚ ತಿಂಗಳಲ್ಲಿ ಸುಗ್ಗಿ ತಿಂಗಳ ಅಮಾವಾಸ್ಯೆಯ ನಂತರದ ಸಪ್ತಮಿಯಂದು ಭಂಡಾರ ಬಂದು ದ್ವಜಾರೋಹಣ ಮಾಡಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ ನಡೆಯುತ್ತದೆ. ಮರುದಿನ ಬೈದೇರುಗಳ ನೇಮ, ಮಾಯಂದಾಲ್, ಕೋಲ, ಜೋಗಿಪುರುಷರ ಕೋಲ, ನಡೆದು ಅದರ ಮರುದಿನ ಧ್ವಜಾವರೋಣ ಮಾಡಿ ಭಂಡಾರ ವಾಪಾಸು ಹೋದ ನಂತರ ಕುರಿ ತಂಬಿಲ ಸೇವೆ ನಡೆಯುತ್ತದೆ.
ಕೆಲ್ಲಪುತ್ತಿಗೆ ಧರೆಗುಡ್ಡೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಗೆ ಸುಮಾರು 22 ಸೆಂಟ್ಸ ಜಾಗವಿದ್ದು, 2002ರಲ್ಲಿ ಗರೋಡಿಯು ಜೀರ್ಣೋದ್ಧಾರಗೊಂಡಿದೆ.
ವೆಂಕಪ್ಪ ಪರವ ಕೊಣಾಜೆ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾದರಾಗಿ ಅಪ್ಪು ಮಡಿವಾಳರು ಮಡಿವಾಳರಾಗಿ, ರಮೇಶ ಮೈಲಿ ವಾಧ್ಯದವರಾಗಿ, ವಿಶ್ವನಾಥ ಕೆಲ್ಲಪುತ್ತಿಗೆ ಡೋಲಿನವರಾಗಿ ಸೇವೆ ಮಾಡುತ್ತಿದ್ದಾರೆ.
Daregudde-Kellaputtige-Garadi-8

ಮಾಹಿತಿ ನೀಡಿದವರು ಮತ್ತು ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕೆಲ್ಲಪುತ್ತಿಗೆ ಧರೆಗುಡ್ಡೆ,
ಮೂಡಬಿದಿರೆ ತಾಲೂಕು,
ದ.ಕ.ಜಿಲ್ಲೆ

ಪೂ ಪೂಜನೆಯವರು:

ಅಶೋಕ ಸುವರ್ಣ – 9901659939

ಮಾಹಿತಿ ನೀಡಿದವರು:

ಸುಭಾಶ್ಚಂದ್ರ ಚೌಟ – 9980513125, 8971454727

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

09-12-2025

Kadpottu Shree Dharmarasu, Kukkinantaya Kodamanittaya Brahma Baidarkala Garodi, Shirthadi

ಕಡ್ಪೊಟ್ಟು ಶ್ರೀ ಧರ್ಮರಸು, ಶ್ರೀ ಕುಕ್ಕಿನಂತಾಯ. ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಶಿರ್ತಾಡಿ

ಉಡುಪಿಯಿಂದ ಮೂಡಬಿದಿರೆ ಮೂಲಕ ಶಿರ್ತಾಡಿ ತಲುಪಿ ಈ ಗರೋಡಿಗೆ ಹೋಗ ಬಹುದು.
Shirthadi-1
Shirthadi-2
ಈಗ ಗರೋಡಿಯ ಜೀರ್ಣೋದ್ಧಾರ ಪ್ರಗತಿಯಲ್ಲಿದ್ದು ಶಕ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಳೆಯ ಗರೋಡಿಯು ಬಡಗು ಮುಖವಾಗಿದ್ದರೆ ಪಕ್ಕದಲ್ಲಿಯೇ ಮೂಡು ಮುಖವಾಗಿರುವ ಹೊಸ ಗರೋಡಿಯನ್ನು ನಿರ್ಮಿಸಲಾಗುತ್ತಿದೆ. ಅದರ ಪಕ್ಕದಲ್ಲಿಯೇ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಗುಡಿಯ ನಿರ್ಮಾಣದ ಕೆಲಸವೂ ಪ್ರಗತಿಯಲ್ಲಿದೆ.
ಯಶೋಧರ ಪೂಜಾರಿ (47 ವರ್ಷ) ಹಾಗೂ ಸಂತೋಷ ಪೂಜಾರಿ (46 ವರ್ಷ) ಇವರು ಇಲ್ಲಿಯ ಪೂ ಪೂಜಾನಿಯರವರು ಹಾಗೂ ದರ್ಶನ ಪಾತ್ರಿಗಳು ಆಗಿದ್ದಾರೆ. ಇವರಿಗೆ ಮೊದಲು ಗೋವಿಂದ ಪೂಜರಿ, ರಾಮ ಪೂಜಾರಿ ಮೊದಲಾದ ಹಿರಿಯರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು. ಶ್ರೀಧರ ಪೂಜಾರಿಯವರು ಕುಕ್ಕಿನಂತಾಯ ದೈವದ ಹಾಗೂ ಅಚ್ಚಪ್ಪ ಪೂಜಾರಿಯವರು ಕೊಡಮಣಿತ್ತಾಯ ದೈವದ ಮುಕ್ಕಾಲಿಯಾಗಿ ಸೇವೆ ಮಾಡುತ್ತದ್ದಾರೆ. ಎಸ್.ಡಿ.ಸಂಪತ್ ಸಾಮ್ರಾಜ್ಙಿ ಇವರು ಇಲ್ಲಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಮಾಯಿ ತಿಂಗಳ ಹುಣ್ಣಿಮೆಯ ಎರಡು ದಿನ ಮೊದಲು ಭಂಡಾರ ಬಂದು ದ್ವಜಾರೋಹಣ ಮಾಡಿ ಧರ್ಮರಸು ದೈವದ ನೇಮ, ಮರುದಿನ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವದ ನೇಮ, ಹುಣ್ಣಿಮೆಯ ದಿನ ಬೈದೆರುಗಳು, ಜೋಗಿಪುರುಷರ, ಮಾಯಂದಾಲ್ ನೇಮ ನಡೆದ ನಂತರ ದ್ವಜಾವರೋಹಣ ಮಾಡಿ ಭಂಡಾರ ವಾಪಾಸು ಹೋಗುವುದು. ಮರುದಿನ ಕುಕ್ಕಿನಂತಾಯ ದೈವದ ಕುರಿತಂಬಿಲ ಕೋಲ ನಡೆಯುತ್ತದೆ.
ಶಿರ್ತಾಡಿ ಗ್ರಾಮದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಗೆ 82 ಸೆಂಟ್ಸ ಜಾಗವಿದೆ.
ಜಯ ಪರವ, ಪ್ರಶಾಂತ್ ಪರವ ಶಿರ್ತಾಡಿ, ವೆಂಕಪ್ಪ ಪರವ, ಸಂತೋಷ ಪರವ, ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.

ಮಾಹಿತಿ ನೀಡಿದವರು ಮತ್ತು ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಕಡ್ಪೊಟ್ಟು ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಶಿರ್ತಾಡಿ ಅಂಚೆ,
ಮೂಡಬಿದಿರೆ ತಾಲೂಕು,
ದ.ಕ.ಜಿಲ್ಲೆ

ಪೂ ಪೂಜನೆಯವರು:

ಯಶೋಧರ ಪೂಜಾರಿ -9980479012

ಮಾಹಿತಿ ನೀಡಿದವರು:

ಅಚ್ಚಪ್ಪ ಪೂಜಾರಿ
ಯಶೋಧರ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

09-12-2025

Shree Rajan Daiva & Shree Brahma Baidarkala Garodi, Valpadi

ಶ್ರೀ ರಾಜನ್‌ದೈವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ವಾಲ್ಪಾಡಿ

ಉಡುಪಿಯಿಂದ ಮೂಡುಬಿದರೆ ತಲುಪಿ ಮೂಡಬಿದರೆ – ಶಿರ್ತಾಡಿ ರಸ್ತೆಯಲ್ಲಿ ಸುಮಾರು 3 ಕಿ. ಮೀ. ನಂತರ ಎಡಕ್ಕೆ ತಿರುಗಿ ಸುಮಾರು 3 ಕಿ. ಮೀ. ಒಳಗೆ ಸಾಗಿದರೆ ಈ ಗರೋಡಿ ಸಿಗುವುದು.
Valpadi-1
Valpadi-2
Valpadi-3
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
Valpadi-4
ಗರೋಡಿಯ ಒಳಗೆ ಮಣೆಮಂಚದ ಮೇಲೆ ಮರದ ಗುಂಡವಿದೆ. ಮಣೆ ಮಂಚದ ಹಿಂದೆ ಕೋಟಿ-ಚೆನ್ನಯರ ಭಾವ ಚಿತ್ರ ಇಡಲಾಗಿದೆ. ಪಕ್ಕದಲ್ಲಿರುವ ಮಣೆ ಮಂಚದಲ್ಲಿ ಮಾಯಂದಾಲ್‌ಗೆ ಪೂಜೆ ಇದೆ.
Valpadi-5
ಗರೋಡಿಯ ಪಕ್ಕದಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಗುಡಿ, ಎದುರಿಗೆ ದ್ವಜಸ್ಥಂಭ ಹಾಗೂ ಧರ್ಮರಸು ಮಾಡಗಳಿವೆ.
ಚೆಲುವಯ್ಯ ಪೂಜಾರಿ (65 ವರ್ಷ) ಇವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಪ್ರಶಾಂತ್ ಪೂಜಾರಿಯವರು ಇಲ್ಲಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಪ್ರತೀವರ್ಷ ಫೆಬ್ರವರಿಯ ಹುಣ್ಣಿಮೆಯಂದು ಭಂಡಾರ ಬಂದು ದ್ವಜಾರೋಹಣ ಮಾಡಿ ಧರ್ಮರಸು ನೇಮ ನಡೆಯುತ್ತದೆ. ಎರಡನೇ ದಿನ ಕುಕ್ಕಿನಂತಾಯ ಮತ್ತು ಕೊಡಮಣಿತ್ತಾಯ ದೈವಗಳ ನೇಮ, ಮೂರನೇ ದಿನ ಬೈದೇರುಗಳ ನೇಮ ಹಾಗೂ ಮಾಯಂದಾಲ್ ನೇಮ ನಡೆದು ದ್ವಜಾವರೋಹಣ ಮಾಡಿ ಭಂಡಾರ ವಾಪಾಸು ಹೋಗವುದು. ನಾಲ್ಕನೇ ದಿನ ಕುಕ್ಕಿನಂತಾಯ ದೈವದ ಕುರಿತಂಬಿಲ ಕೋಲ ನಡೆಯುವುದು.
ವಾಲ್ಪಾಡಿಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರ ವರಡವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2006ರಲ್ಲಿ ಗರೋಡಿಯ ಜೀರ್ಣೋದ್ಧಾರಗೊಂಡಿದೆ.
ಯೋಗೀಶ್ ಪರವ, ಪ್ರಶಾಂತ ಪರವ ಕೊಣಾಜೆ ಮತ್ತು ಸಂಘಡಿಗರು ಇಲ್ಲಿಯ ನೃತ್ಯವಿಶಾರದರಾಗಿ, ಹರೀಶ್ ಪೂಜಾರಿ ನಾರಾವಿ ವಾದ್ಯದವರಾಗಿ ಈ ಗರೋಡಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ರಾಜನ್ ದೈವ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ ವಾಲ್ಪಾಡಿ, ಮೂಡಬಿದಿರೆ ತಾಲೂಕು,
ದ.ಕ.ಜಿಲ್ಲೆ

ಪೂ ಪೂಜನೆಯವರು:

ಚೆಲುವಯ್ಯ ಪೂಜಾರಿ – 8105070296

ಮಾಹಿತಿ ನೀಡಿದವರು:

ಚೆಲುವಯ್ಯ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು

ಮಾಹಿತಿ ಸಂಗ್ರಹಿಸಿದ ದಿನಾಂಕ:

09-12-2025

Shree Brahma Baidarkala Garodi, Mayandal Kshetra Marnadu

ಶ್ರೀ ಬ್ರಹ್ಮಬೈದರ್ಕಳ ಗರೋಡಿ , ಮಾಯಂದಾಲ್ ಕ್ಷೇತ್ರ ಮಾರ್ನಾಡು

ಉಡುಪಿಯಿಂದ ಕಾರ್ಕಳ ಮೂಡುಬಿದರೆ ಹೆದ್ದಾರಿಯಲ್ಲಿ ಎಡಕ್ಕೆ ಬನ್ನಡ್ಕ ಮಾರ್ನಾಡ್ ರಸ್ತೆಗೆ ತಿರುಗಿ ಮೂಡುಮಾರ್ನಾಡ್‌ಗೆ ಹೋದರೆ ಈ ಗರೋಡಿ ಸಿಗುವುದು.
Marnadu-1
Marnadu-3
ಗರೋಡಿಗೆ ಮೂಡು ಮುಖವಾದ ಒಂದು ದ್ವಾರವಿದೆ.
Marnadu-4
ಗರೋಡಿಯ ಒಳಗೆ ಮಣೆಮಂಚದ ಮೇಲೆ ಮರದ ಗುಂಡವಿದೆ. ಮಣೆಮಂಚದ ಎಡಬಲದಲ್ಲಿ ಕೋಟಿಚೆನ್ನಯರ ಮರದ ಮೂರ್ತಿಗಳಿವೆ.
Marnadu-6
ಗರೋಡಿಯ ಪಕ್ಕದಲ್ಲಿ ಮಾಯಂದಾಲ್ ಗುಡಿ ಇದೆ. ಗುಡಿಯೊಳಗೆ ಮಾಯಂದಾಲ್ ಮತ್ತು ಮಗುವಿನ ಮೂರ್ತಿಗಳಿವೆ.
Marnadu-7
Marnadu-8
ಗರೋಡಿಯ ಪಕ್ಕದಲ್ಲಿ ಪಂಜುರ್ಲಿ ದೈವದ ಗುಡಿ, ಕೊಡಮಣಿತ್ತಾಯ ಗುಡಿ, ಎದುರಿಗೆ ದ್ವಜಸ್ಥಂಭ, ಧರ್ಮರಸು ಗುಡಿ, ಮತ್ತು ಮಾಡ ಅಜೆಕಾಯಿ ಕಲ್ಲುಗಳಿವೆ.
ಸುಂದರ ಪೂಜಾರಿ (62 ವರ್ಷ) ಇವರು ಗರೋಡಿಯ ಪೂ ಪೂಜನೆಯವರು. ಇವರಿಗೆ ಮೊದಲು ಬಾಬುಯಾನೆ ಓಬಯ್ಯ ಪೂಜಾರಿ, ಅಪ್ಪು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು. ರಾಜೇಶ್ ಬಲ್ಲಾಳರು ಈ ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆಗಳು ನಡೆಯುತ್ತವೆ. ಪ್ರತೀ ವರ್ಷ ಮಾರ್ಚ 15ರಂದು ಧರ್ಮರಸು ಕೋಲ, 16ರಂದು ಕೊಡಮಣಿತ್ತಾಯ ಕೊಲ, 17ರಂದು ಬೈದೇರುಗಳ ಹಾಗೂ ಮಾಯಂದಾಲ್ ನೇಮ ನಡೆಯುತ್ತದೆ.
ಮೂಡು ಮಾರ್ನಾಡ್ ಹಾಗೂ ಪಡು ಮಾರ್ನಾಡ್ ಜನ ಈ ಗರೋಡಿಗೆ ಸೇವೆ ಸಲ್ಲಿಸುತ್ತಾರೆ. ಇಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಜನ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು ಸುಮಾರು 2010ರಲ್ಲಿ ಜೀರ್ಣೋದ್ಧಾರಗೊಂಡಿದೆ.
ರಾಜು ಪರವ ಮಾರ್ನಾಡು ಇವರು ಧರ್ಮರಸು, ಕೊಡಣಿತ್ತಾಯ ದೈವಗಳ ನೃತ್ಯ ವಿಶಾರದರಾಗಿ ರಮೇಶ್ ಪರವ ಶಿರ್ತಾಡಿ ಮತ್ತು ಸಂಘಡಿಗರು ಬೈದೇರುಗಳ ನೃತ್ಯ ವಿಶಾರದರಾಗಿ, ಸುಂದರ ಮಡಿವಾಳ ಬೆಳುವಾಯಿ ಇವರು ಮಡಿವಾಳರಾಗಿ, ಗಣೇಶ ಮಾರ್ನಾಡು ವಾದ್ಯದವರಾಗಿ , ವಿಶ್ವನಾಥ ಕೆಲ್ಲಪುತ್ತಿಗೆ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಚೇತನ ಯುವಕ ಮಂಡಲ , ಕುಂಭಕಂಠಿನಿ ಮಹಿಳಾ ಬಳಗ, ಪಡು ಮಾರ್ನಾಡು ಯುವಕ ಮಂಡಲಗಳು ಕಾರ್ಯನಿರ್ವಹಿಸುತ್ತಿದ್ದು ಗರೋಡಿಯ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ.

ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಾಯಂದಾಲ್ ಕ್ಷೇತ್ರ, ಮಾರ್ನಾಡು, ಮೂಡು ಮಾರ್ನಾಡ್ ಅಂಚೆ,
ಮೂಡಬಿದರೆ ತಾಲೂಕು, ದ.ಕ.ಜಿಲ್ಲೆ

ಪೂ ಪೂಜನೆಯವರು:

ಸುಂದರ ಪೂಜಾರಿ

ಮಾಹಿತಿ ನೀಡಿದವರು:

ದೇವರಾಜ ಸುವರ್ಣ
ಪೊಸಲಾಯಿ ತಾವು (ಭಂಡಾರದ ಮನೆ)

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು

ಮಾಹಿತಿ ಸಂಗ್ರಹಿಸಿದ ದಿನಾಂಕ:

09-12-2025

Shree Kopdamanittaya, Kukkinantaya, Vyagrachamundi, Shree Brahma Baidarkala Garodi, Nagarakatte

ಶ್ರೀ ಕೊಡಮಣಿತ್ತಾಯ, ಕುಕ್ಕಿನಂತಾಯ,ವ್ಯಾಘ್ರ ಚಾಮುಂಡಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ನಾಗರಕಟ್ಟೆ

ಉಡುಪಿಯಿಂದ ಮೂಡಬಿದಿರೆ ತಲುಪಿ ಮೂಡಬಿದಿರೆ ಪೇಟೆಯಿಂದ ನಾಗರಕಟ್ಟೆ ರಸ್ತೆಯಲ್ಲಿ ಸುಮಾರು 1 ಕಿ.ಮೀ. ಸಾಗಿದರೆ ಈ ಗರೋಡಿ ಸಿಗುವುದು.
Nagara-Katte-Garadi-1
ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯದ್ವಾರ ಹಾಗೂ ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ.
ಗರೋಡಿಯ ಮಾಡು ಕುಸಿದಿದ್ದು ಜೀರ್ಣೋದ್ದಾರದ ಅಗತ್ಯವಿದೆ. ಗರೋಡಿಯಿರುವ ಜಾಗದ ತಕರಾರಿನಿಂದ ಜೀರ್ಣೋದ್ಧಾರ ಸಾದ್ಯವಾಗುತ್ತಿಲ್ಲ ಎಂಬ ಮಾಹಿತಿ ಸಮೀಕ್ಷೆಯ ಸಮಯದಲ್ಲಿ ತಿಳಿದು ಬಂದಿದೆ. ಗರೋಡಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸೂಕ್ತ ವ್ಯಕ್ತಿಗಳು ಸಿಗದ ಕಾರಣ ಲಭ್ಯವಿದ್ದ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
Nagara-Katte-Garadi-3
ಗರೋಡಿಯ ಪಕ್ಕದಲ್ಲಿ ಕೊಡಮಣಿತ್ತಾಯ, ಕುಕ್ಕಿನಂತಯ, ದೈವಸ್ಥಾನವಿದೆ. ಎದುರಿಗೆ ಇರುವ ದ್ವಜಸ್ಥಂಭ ಶಿಧಿಲವಾಗಿರುವ ಕಾರಣ ತೆಗೆದಿಡಲಾಗಿದೆ.
Nagara-Katte-Garadi-4
ಪಕ್ಕದಲ್ಲಿಯೇ ಪಿಲಿ ಚಾಮುಂಡಿ ದೈವಸ್ಥಾನವಿದೆ.
ಭೋಜ ಶೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ ನಡೆಯುತ್ತದೆ. ಪ್ರತೀ ವರ್ಷ ಜನವರಿ ತಿಂಗಳಲ್ಲಿ ಒಂದು ದಿನ ಭಂಡಾರ ಬಂದು ಕೊಡಮಣಿತ್ತಾಯ, ಕುಕ್ಕಿನಂತಾಯ, ಕೋಲ ನಡೆಯುತ್ತದೆ. ಎರಡನೇ ದಿನ ಬೈದೇರುಗಳ ನೇಮ, ಮೂರನೇ ದಿನ ಪಿಲ್ಚಂಡಿ ಕೋಲ ನಡೆದು ಭಂಡಾರ ವಾಪಾಸು ಹೋಗುವುದು.
Nagara-Katte-Garadi-5

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ, ಕುಕ್ಕಿನಂತಾಯ, ವ್ಯಾಘ್ರ ಚಾಮುಂಡಿ ಬ್ರಹ್ಮ ಬೈದರ್ಕಳ ಗರೋಡಿ ನಾಗರ ಕಟ್ಟೆ,
ಮೂಡಬಿದರೆ

ಮಾಹಿತಿ ನೀಡಿದವರು:

ಕೇಶವ ಅಂಚನ್ – 9945937690

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

09.12.2025

Shree Dharmarasu, Kodamanittaya, Kukkinantaya, Brahma Baidarkala Mayandal Garodi, Nadyodi Beluvai

ಶ್ರೀ ಧರ್ಮರಸು, ಕೊಡಮಣಿತ್ತಾಯ,ಕುಕ್ಕಿನಂತಾಯ ಬ್ರಹ್ಮಬೈದರ್ಕಳ ಮಾಯಂದಾಳ್ ಗರೋಡಿ, ನಡ್ಯೋಡಿ ಬೆಳುವಾಯಿ

ಉಡುಪಿಯಿಂದ ಕಾರ್ಕಳ ತಲುಪಿ ಕಾರ್ಕಳ – ಮೂಡಬಿದಿರೆ ಹೆದ್ದಾರಿಯಲ್ಲಿ ಸುಮಾರು 9.5ಕಿ.ಮೀ. ಸಾಗಿ ಬಲಕ್ಕೆ ತಿರುಗಿ ಸುಮಾರು 3ಕಿ.ಮೀ. ದೂರದಲ್ಲಿದೆ ಈ ಗರೋಡಿ.
Nadyodi-Beluvayi-Garadi-1
Nadyodi-Beluvayi-Garadi-2
Nadyodi-Beluvayi-Garadi-3
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡವಿದೆ. ಕಂಚಿಗೆ ಬೆಳ್ಳಿ ಮುಚ್ಚಿದ ನಾಗ ಬ್ರಹ್ಮರ ಮೂರ್ತಿ ಇದೆ. ಮಣೆ ಮಂಚದ ಎಡ ಬಲದಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದಮೂರ್ತಿಗಳಿವೆ.
Nadyodi-Beluvayi-Garadi-5
ಗರೋಡಿಯ ಪಕ್ಕದ ಗುಡಿಯಲ್ಲಿ ಕೊಡಮಣಿತ್ತಾಯ,ಕುಕ್ಕಿನಂತಾಯ, ದೈವಗಳ ಸಾನದ್ಯವಿದ್ದು ಬೆಳ್ಳಿ ಮುಚ್ಚಿದ ಕಂಚಿನ ಮೂರ್ತಿಗಳಿವೆ. ಎದುರಿಗೆ ದ್ವಜಸ್ಥಂಭವಿದೆ. ಹತ್ತಿರದಲ್ಲಿಯೇ ಧರ್ಮರಸು ದೈವದ ಮಾಡವಿದೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮಸ್ಥಾನವಿದೆ
Nadyodi-Beluvayi-Garadi-6

ರತ್ನಾಕರ ಪೂಜಾರಿ

ಕುಕ್ಕಿನಾಡಿ ಬರ್ಕೆ ರತ್ನಾಕರ ಪೂಜಾರಿ(54 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಬಾಬು ಪೂಜಾರಿ, ಇಸರ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು. ರತ್ನಾಕರ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯೂ ಆಗಿದ್ದಾರೆ.
ಪೆರೋಡಿಗುತ್ತು ದಿನಕರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಈಂದಗುತ್ತು ಬಾಲಕೃಷ್ಣ ಶೆಟ್ಟಿಯವರು ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ.
ಪ್ರತೀ ವರ್ಷ ಮಾರ್ಚ 19ರಂದು ಭಂಡಾರ ಬಂದು ಧ್ವಜಾರೋಹನ ಮಾಡಿ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದರ್ಶನ, ನೇಮ ಅನ್ನ ಸಂತರ್ಪಣೆ ನಡೆಯುತ್ತದೆ.
20ನೇ ತಾರೀಖಿನಂದು ಬೈದರ್ಕಳ ನೇಮ, ದರ್ಶನ, ಜೋಗಿ ಪುರುಷ, ಮಾಯಂದಾಲ್ ಕೋಲ, ಅನ್ನ ಸಂತರ್ಪಣೆ, 21ನೇ ತಾರೀಖಿನಂದು ದ್ವಜಾವರೋಹಣ ನಂತರ ಭಂಡಾರ ವಾಪಾಸು ಹೋಗುವುದು.
ಬೆಳುವಾಯಿ ಹಾಗೂ ಪುತ್ತಿಗೆಯ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ. ಗರೋಡಿಗೆ ಸುಮಾರು ಮುಕ್ಕಾಲು ಎಕರೆ ಜಾಗವಿದ್ದು 2023ರಲ್ಲಿ ಜೀರ್ಣೋದ್ಧಾರಗೋಂಡಿದೆ.
ಶಿವಾನಂದ ಪರವ ಹಂಡೇಲು, ಮೂಡಬಿದಿರೆ ಮತ್ತು ಸಂಘಡಿಗರು, ವೆಂಕಪ್ಪ ಪರವ, ನಾರಾಯಣ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ಜಯ ಮಡಿವಾಳ ಬೆಳುವಾಯಿ ಇವರು ಮಡಿವಾಳರಾಗಿ, ಸುಂದರ ಸೇರಿಗಾರ ಬೆಳುವಾಯಿ ವಾದ್ಯದವರಾಗಿ, ಕೆಲ್ಲಪುತ್ತಿಗೆಯ ತಂಡದವರು ಡೋಲಿನವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮಬೈದರ್ಕಳ ಮಾಯಂದಾಲ್ ಗರೋಡಿ ನಡ್ಯೋಡಿ, ಬೆಳುವಾಯಿ
ತಾಲೂಕು ಮೂಡಬಿದಿರೆ
ಉಡುಪಿ 576123

ಪೂ ಪೂಜನೆಯವರು:

ರತ್ನಾಕರ ಪೂಜಾರಿ – 7026408529

ಮಾಹಿತಿ ನೀಡಿದವರು:

ರತ್ನಾಕರ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು

ಮಾಹಿತಿ ಸಂಗ್ರಹಿಸಿದ ದಿನಾಂಕ:

09.12.2025

Shree Brahma Baidarkala Garodi, Homalke Beluvayi

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಹೋಮಲ್ಕೆ ಬೆಳುವಾಯಿ

ಉಡುಪಿಯಿಂದ ಕಾರ್ಕಳ ತಾಲೂಕು ತಲುಪಿ, ಕಾರ್ಕಳ ಮೂಡಬಿದಿರೆ ಹೆದ್ದಾರಿಯಲ್ಲಿ ಸುಮಾರು 8 ಕಿ. ಮೀ. ದೂರದಲ್ಲಿದೆ ಈ ಗರೋಡಿ.
Homalke-Beluvayi-Garadi-1
ಗರೊಡಿಯು ಪಶ್ಚಿಮಾಭಿಮುಖವಾದ ಒಂದು ದ್ವಾರವನ್ನು ಹೊಂದಿದೆ. ಮೂಲ ಗರೊಡಿಯಾದ ನಡ್ಡೋಡಿ ಬೆಳುವಾಯಿ ಗರೋಡಿಯಿಂದ ಕಲಹವೊಂದರ ಕಾರಣ ವಿಭಜನೆಗೊಂಡು ಗ್ರಾಮಸ್ಥರು 1980ರಲ್ಲಿ ಈಗ ಗರೋಡಿ ಇರುವ ಜಾಗದಲ್ಲಿ ಚಪ್ಪರ ಹಾಕಿ ನೇಮ ನಡೆಸಿದರು. 1981-82ರಲ್ಲಿಯೂ ಅದೇ ರೀತಿ ಚಪ್ಪರ ಹಾಕಿ ನೇಮ ನಡೆಸಿದರು. 1982ರಲ್ಲಿ ಪ್ರಶ್ನೆ ಹಾಕಿ ಗರೋಡಿಗೆ ಪಂಚಾಂಗ ಹಾಕಲಾಯಿತು. 1983ರಲ್ಲಿ ಹಾಕಿದ ಪಂಚಾಂಗದ ಮೇಲೆ ಚಪ್ಪರ ಹಾಕಿ ನೇಮೋತ್ಸವ ನಡೆಸಲಾಯಿತು. ನಂತರ 1984ರ ಫೆಬ್ರವರಿ 21ನೇ ತಾರೀಖಿನಂದು ಹೊಸ ಗರೋಡಿಯ ನಿರ್ಮಾಣ ಮುಕ್ತಾಯವಾಯಿತು.
ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡ ಇದ್ದು, ಗುಂಡದಲ್ಲಿ ನಾಗ ಬ್ರಹ್ಮರ ಕಂಚಿನ ಮೂರ್ತಿ ಇದೆ. ಮಣೆ ಮಂಚದಲ್ಲಿ ಕೋಟಿ-ಚೆನ್ನಯರ ಮತ್ತು ಕುಜುಂಬಕಾಂಜವರ ಆರಾಧನೆಯಿದೆ.
Homalke-Beluvayi-Garadi-6
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಮೂರ್ತಿಗಳಿಗೆ ಪೂಜೆ ಸಲ್ಲುತ್ತದೆ.
Homalke-Beluvayi-Garadi-7
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿಧ್ಯವಿದೆ. ಮಣೆ ಮಂಚದಲ್ಲಿ ಈ ದೈವಗಳ ಕಂಚಿನ ಮೂರ್ತಿಗಳಿವೆ. ಗರೋಡಿಯ ಆವರಣದಲ್ಲಿ ಅಜೆಕಾಯಿ ಕಲ್ಲುಗಳಿವೆ.
ಪೂವಪ್ಪ ಪೂಜಾರಿ(75 ವರ್ಷ) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ವೀರಪ್ಪ ಪೂಜಾರಿಯವರುಸ ಈ ಸೇವೆ ಮಾಡಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಹರ್ಷವರ್ಮ ಹೆಗ್ಗಡೆಯವರು ಅಧ್ಯಕ್ಷರಾಗಿಯೂ, ಸುರೇಶ್ ಭಟ್ ಕಾರ್ಯದರ್ಶಿಯಾಗಿ. ರಾಮ ಪ್ರಸಾದ್ ಜೊತೆ ಕಾರ್ಯದರ್ಶಿಯಾಗಿ, ಅಣ್ಣಿ ಬಿ ಪೂಜಾರಿ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ. ಪ್ರತೀ ವರ್ಷ ಮಾಯಿ ತಿಂಗಳು(ಫೆಬ್ರವರಿಯಲ್ಲಿ)9 ದಿನ ಹೋಗುವಾಗ ಒಂದು ದಿನ ಭಂಡಾರ ಬಂದು, ದ್ವಜಾರೋಹಣದ ನಂತರ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದರ್ಶನ, ಬಲಿ (7 ಸುತ್ತು) ಅನ್ನ ಸಂತರ್ಪಣೆ ನಡೆಯುತ್ತದೆ.
ಎರಡನೇ ದಿನ ಬೈದೇರುಗಳ ನೇಮ, ಅನ್ನ ಸಂತರ್ಪಣೆ, ಬೈದೇರುಗಳ ಹಾಗೂ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ದರ್ಶನ ಬಲಿ, (9 ಸುತ್ತು) ನಡೆಯುತ್ತದೆ. ಬೆಳುವಾಯಿ ನಾರಾಯಣಗುರು ಸಂಥಕ್ಕೆ ನೇಮದಲ್ಲಿ ಹೋಗಿ ಬೈದೇರುಗಳ ಕಟ್ಟೆ ಪೂಜೆ ಮಾಡಿ ಬರುವ ಕ್ರಮವಿದೆ.
ಮೂರನೇ ದಿನ ಸಂಜೆ ಮಾಯಂದಾಲ್ ಕೋಲದ ನಂತರ ದ್ವಜಾವರೋಹಣ ಮಾಡಿ ಭಂಡಾರ ವಾಪಾಸು ಹೋಗುವುದು.
ಬೆಳುವಾಯಿಯ ಜನ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ ಸುಮಾರು 40ಸೆಂಟ್ಸ ಜಾಗವಿದೆ.
ಉಗ್ಗಪ್ಪ ಪರವ ಕೆರ್ವಾಸೆ ಇವರು ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ನೃತ್ಯವಿಶಾರದರಾಗಿ, ಗಂಗಯ್ಯ ಪರವ ಮತ್ತು ಸಂಘಡಿಗರು ಬೈದೇರುಗಳ ನೇಮದ ನೃತ್ಯವಿಶಾರದರಾಗಿ ಸಂಜೀವ ಸಾಲ್ಯಾನ ಮತ್ತು ಸಂತೋಷ್ ಸಾಲ್ಯನ್ ಹಾಅಗೂ ತಿಮ್ಮ ಮಡಿವಾಳ, ಮಡಿವಾಳರಾಗಿ ಸುಂದರ ಸೇರಿಗಾರರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ, ಹೋಮಲ್ಕೆ ಬೆಳುವಾಯಿ,
ಬೆಳುವಾಯಿ ಅಂಚೆ,
ಮೂಡಬಿದಿರೆ ತಾಲೂಕು
ದ.ಕ. ಜಿಲ್ಲೆ 574213

ಮಾಹಿತಿ ನೀಡಿದವರು:

ಅಣ್ಣಿ ಬಿ. ಪೂಜಾರಿ – 9686918852 ರಾಮ ಪ್ರಸಾದ್ – 9448725068

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

09.12.2025