Baidashree

Shree Dharmarasu, Kodamanittaya, Kukkinantaya, Brahma Baidarkala Mayandal Garodi, Nadyodi Beluvai

ಶ್ರೀ ಧರ್ಮರಸು, ಕೊಡಮಣಿತ್ತಾಯ,ಕುಕ್ಕಿನಂತಾಯ ಬ್ರಹ್ಮಬೈದರ್ಕಳ ಮಾಯಂದಾಳ್ ಗರೋಡಿ, ನಡ್ಯೋಡಿ ಬೆಳುವಾಯಿ

ಉಡುಪಿಯಿಂದ ಕಾರ್ಕಳ ತಲುಪಿ ಕಾರ್ಕಳ – ಮೂಡಬಿದಿರೆ ಹೆದ್ದಾರಿಯಲ್ಲಿ ಸುಮಾರು 9.5ಕಿ.ಮೀ. ಸಾಗಿ ಬಲಕ್ಕೆ ತಿರುಗಿ ಸುಮಾರು 3ಕಿ.ಮೀ. ದೂರದಲ್ಲಿದೆ ಈ ಗರೋಡಿ.
Nadyodi-Beluvayi-Garadi-1
Nadyodi-Beluvayi-Garadi-2
Nadyodi-Beluvayi-Garadi-3
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡವಿದೆ. ಕಂಚಿಗೆ ಬೆಳ್ಳಿ ಮುಚ್ಚಿದ ನಾಗ ಬ್ರಹ್ಮರ ಮೂರ್ತಿ ಇದೆ. ಮಣೆ ಮಂಚದ ಎಡ ಬಲದಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದಮೂರ್ತಿಗಳಿವೆ.
Nadyodi-Beluvayi-Garadi-5
ಗರೋಡಿಯ ಪಕ್ಕದ ಗುಡಿಯಲ್ಲಿ ಕೊಡಮಣಿತ್ತಾಯ,ಕುಕ್ಕಿನಂತಾಯ, ದೈವಗಳ ಸಾನದ್ಯವಿದ್ದು ಬೆಳ್ಳಿ ಮುಚ್ಚಿದ ಕಂಚಿನ ಮೂರ್ತಿಗಳಿವೆ. ಎದುರಿಗೆ ದ್ವಜಸ್ಥಂಭವಿದೆ. ಹತ್ತಿರದಲ್ಲಿಯೇ ಧರ್ಮರಸು ದೈವದ ಮಾಡವಿದೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮಸ್ಥಾನವಿದೆ
Nadyodi-Beluvayi-Garadi-6

ರತ್ನಾಕರ ಪೂಜಾರಿ

ಕುಕ್ಕಿನಾಡಿ ಬರ್ಕೆ ರತ್ನಾಕರ ಪೂಜಾರಿ(54 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಬಾಬು ಪೂಜಾರಿ, ಇಸರ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು. ರತ್ನಾಕರ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯೂ ಆಗಿದ್ದಾರೆ.
ಪೆರೋಡಿಗುತ್ತು ದಿನಕರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಈಂದಗುತ್ತು ಬಾಲಕೃಷ್ಣ ಶೆಟ್ಟಿಯವರು ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ.
ಪ್ರತೀ ವರ್ಷ ಮಾರ್ಚ 19ರಂದು ಭಂಡಾರ ಬಂದು ಧ್ವಜಾರೋಹನ ಮಾಡಿ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದರ್ಶನ, ನೇಮ ಅನ್ನ ಸಂತರ್ಪಣೆ ನಡೆಯುತ್ತದೆ.
20ನೇ ತಾರೀಖಿನಂದು ಬೈದರ್ಕಳ ನೇಮ, ದರ್ಶನ, ಜೋಗಿ ಪುರುಷ, ಮಾಯಂದಾಲ್ ಕೋಲ, ಅನ್ನ ಸಂತರ್ಪಣೆ, 21ನೇ ತಾರೀಖಿನಂದು ದ್ವಜಾವರೋಹಣ ನಂತರ ಭಂಡಾರ ವಾಪಾಸು ಹೋಗುವುದು.
ಬೆಳುವಾಯಿ ಹಾಗೂ ಪುತ್ತಿಗೆಯ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ. ಗರೋಡಿಗೆ ಸುಮಾರು ಮುಕ್ಕಾಲು ಎಕರೆ ಜಾಗವಿದ್ದು 2023ರಲ್ಲಿ ಜೀರ್ಣೋದ್ಧಾರಗೋಂಡಿದೆ.
ಶಿವಾನಂದ ಪರವ ಹಂಡೇಲು, ಮೂಡಬಿದಿರೆ ಮತ್ತು ಸಂಘಡಿಗರು, ವೆಂಕಪ್ಪ ಪರವ, ನಾರಾಯಣ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ಜಯ ಮಡಿವಾಳ ಬೆಳುವಾಯಿ ಇವರು ಮಡಿವಾಳರಾಗಿ, ಸುಂದರ ಸೇರಿಗಾರ ಬೆಳುವಾಯಿ ವಾದ್ಯದವರಾಗಿ, ಕೆಲ್ಲಪುತ್ತಿಗೆಯ ತಂಡದವರು ಡೋಲಿನವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮಬೈದರ್ಕಳ ಮಾಯಂದಾಲ್ ಗರೋಡಿ ನಡ್ಯೋಡಿ, ಬೆಳುವಾಯಿ
ತಾಲೂಕು ಮೂಡಬಿದಿರೆ
ಉಡುಪಿ 576123

ಪೂ ಪೂಜನೆಯವರು:

ರತ್ನಾಕರ ಪೂಜಾರಿ – 7026408529

ಮಾಹಿತಿ ನೀಡಿದವರು:

ರತ್ನಾಕರ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು

ಮಾಹಿತಿ ಸಂಗ್ರಹಿಸಿದ ದಿನಾಂಕ:

09.12.2025