Baidashree

Kadpottu Shree Dharmarasu, Kukkinantaya Kodamanittaya Brahma Baidarkala Garodi, Shirthadi

ಕಡ್ಪೊಟ್ಟು ಶ್ರೀ ಧರ್ಮರಸು, ಶ್ರೀ ಕುಕ್ಕಿನಂತಾಯ. ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಶಿರ್ತಾಡಿ

ಉಡುಪಿಯಿಂದ ಮೂಡಬಿದಿರೆ ಮೂಲಕ ಶಿರ್ತಾಡಿ ತಲುಪಿ ಈ ಗರೋಡಿಗೆ ಹೋಗ ಬಹುದು.
Shirthadi-1
Shirthadi-2
ಈಗ ಗರೋಡಿಯ ಜೀರ್ಣೋದ್ಧಾರ ಪ್ರಗತಿಯಲ್ಲಿದ್ದು ಶಕ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಳೆಯ ಗರೋಡಿಯು ಬಡಗು ಮುಖವಾಗಿದ್ದರೆ ಪಕ್ಕದಲ್ಲಿಯೇ ಮೂಡು ಮುಖವಾಗಿರುವ ಹೊಸ ಗರೋಡಿಯನ್ನು ನಿರ್ಮಿಸಲಾಗುತ್ತಿದೆ. ಅದರ ಪಕ್ಕದಲ್ಲಿಯೇ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಗುಡಿಯ ನಿರ್ಮಾಣದ ಕೆಲಸವೂ ಪ್ರಗತಿಯಲ್ಲಿದೆ.
ಯಶೋಧರ ಪೂಜಾರಿ (47 ವರ್ಷ) ಹಾಗೂ ಸಂತೋಷ ಪೂಜಾರಿ (46 ವರ್ಷ) ಇವರು ಇಲ್ಲಿಯ ಪೂ ಪೂಜಾನಿಯರವರು ಹಾಗೂ ದರ್ಶನ ಪಾತ್ರಿಗಳು ಆಗಿದ್ದಾರೆ. ಇವರಿಗೆ ಮೊದಲು ಗೋವಿಂದ ಪೂಜರಿ, ರಾಮ ಪೂಜಾರಿ ಮೊದಲಾದ ಹಿರಿಯರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು. ಶ್ರೀಧರ ಪೂಜಾರಿಯವರು ಕುಕ್ಕಿನಂತಾಯ ದೈವದ ಹಾಗೂ ಅಚ್ಚಪ್ಪ ಪೂಜಾರಿಯವರು ಕೊಡಮಣಿತ್ತಾಯ ದೈವದ ಮುಕ್ಕಾಲಿಯಾಗಿ ಸೇವೆ ಮಾಡುತ್ತದ್ದಾರೆ. ಎಸ್.ಡಿ.ಸಂಪತ್ ಸಾಮ್ರಾಜ್ಙಿ ಇವರು ಇಲ್ಲಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಮಾಯಿ ತಿಂಗಳ ಹುಣ್ಣಿಮೆಯ ಎರಡು ದಿನ ಮೊದಲು ಭಂಡಾರ ಬಂದು ದ್ವಜಾರೋಹಣ ಮಾಡಿ ಧರ್ಮರಸು ದೈವದ ನೇಮ, ಮರುದಿನ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವದ ನೇಮ, ಹುಣ್ಣಿಮೆಯ ದಿನ ಬೈದೆರುಗಳು, ಜೋಗಿಪುರುಷರ, ಮಾಯಂದಾಲ್ ನೇಮ ನಡೆದ ನಂತರ ದ್ವಜಾವರೋಹಣ ಮಾಡಿ ಭಂಡಾರ ವಾಪಾಸು ಹೋಗುವುದು. ಮರುದಿನ ಕುಕ್ಕಿನಂತಾಯ ದೈವದ ಕುರಿತಂಬಿಲ ಕೋಲ ನಡೆಯುತ್ತದೆ.
ಶಿರ್ತಾಡಿ ಗ್ರಾಮದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಗೆ 82 ಸೆಂಟ್ಸ ಜಾಗವಿದೆ.
ಜಯ ಪರವ, ಪ್ರಶಾಂತ್ ಪರವ ಶಿರ್ತಾಡಿ, ವೆಂಕಪ್ಪ ಪರವ, ಸಂತೋಷ ಪರವ, ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.

ಮಾಹಿತಿ ನೀಡಿದವರು ಮತ್ತು ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಕಡ್ಪೊಟ್ಟು ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಶಿರ್ತಾಡಿ ಅಂಚೆ,
ಮೂಡಬಿದಿರೆ ತಾಲೂಕು,
ದ.ಕ.ಜಿಲ್ಲೆ

ಪೂ ಪೂಜನೆಯವರು:

ಯಶೋಧರ ಪೂಜಾರಿ -9980479012

ಮಾಹಿತಿ ನೀಡಿದವರು:

ಅಚ್ಚಪ್ಪ ಪೂಜಾರಿ
ಯಶೋಧರ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

09-12-2025