ಶ್ರೀ ಬ್ರಹ್ಮಬೈದರ್ಕಳ ಗರೋಡಿ , ಮಾಯಂದಾಲ್ ಕ್ಷೇತ್ರ ಮಾರ್ನಾಡು
ಉಡುಪಿಯಿಂದ ಕಾರ್ಕಳ ಮೂಡುಬಿದರೆ ಹೆದ್ದಾರಿಯಲ್ಲಿ ಎಡಕ್ಕೆ ಬನ್ನಡ್ಕ ಮಾರ್ನಾಡ್ ರಸ್ತೆಗೆ ತಿರುಗಿ ಮೂಡುಮಾರ್ನಾಡ್ಗೆ ಹೋದರೆ ಈ ಗರೋಡಿ ಸಿಗುವುದು.
ಗರೋಡಿಗೆ ಮೂಡು ಮುಖವಾದ ಒಂದು ದ್ವಾರವಿದೆ.
ಗರೋಡಿಯ ಒಳಗೆ ಮಣೆಮಂಚದ ಮೇಲೆ ಮರದ ಗುಂಡವಿದೆ. ಮಣೆಮಂಚದ ಎಡಬಲದಲ್ಲಿ ಕೋಟಿಚೆನ್ನಯರ ಮರದ ಮೂರ್ತಿಗಳಿವೆ.
ಗರೋಡಿಯ ಪಕ್ಕದಲ್ಲಿ ಮಾಯಂದಾಲ್ ಗುಡಿ ಇದೆ. ಗುಡಿಯೊಳಗೆ ಮಾಯಂದಾಲ್ ಮತ್ತು ಮಗುವಿನ ಮೂರ್ತಿಗಳಿವೆ.
ಗರೋಡಿಯ ಪಕ್ಕದಲ್ಲಿ ಪಂಜುರ್ಲಿ ದೈವದ ಗುಡಿ, ಕೊಡಮಣಿತ್ತಾಯ ಗುಡಿ, ಎದುರಿಗೆ ದ್ವಜಸ್ಥಂಭ, ಧರ್ಮರಸು ಗುಡಿ, ಮತ್ತು ಮಾಡ ಅಜೆಕಾಯಿ ಕಲ್ಲುಗಳಿವೆ.
ಸುಂದರ ಪೂಜಾರಿ (62 ವರ್ಷ) ಇವರು ಗರೋಡಿಯ ಪೂ ಪೂಜನೆಯವರು. ಇವರಿಗೆ ಮೊದಲು ಬಾಬುಯಾನೆ ಓಬಯ್ಯ ಪೂಜಾರಿ, ಅಪ್ಪು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು. ರಾಜೇಶ್ ಬಲ್ಲಾಳರು ಈ ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆಗಳು ನಡೆಯುತ್ತವೆ. ಪ್ರತೀ ವರ್ಷ ಮಾರ್ಚ 15ರಂದು ಧರ್ಮರಸು ಕೋಲ, 16ರಂದು ಕೊಡಮಣಿತ್ತಾಯ ಕೊಲ, 17ರಂದು ಬೈದೇರುಗಳ ಹಾಗೂ ಮಾಯಂದಾಲ್ ನೇಮ ನಡೆಯುತ್ತದೆ.
ಮೂಡು ಮಾರ್ನಾಡ್ ಹಾಗೂ ಪಡು ಮಾರ್ನಾಡ್ ಜನ ಈ ಗರೋಡಿಗೆ ಸೇವೆ ಸಲ್ಲಿಸುತ್ತಾರೆ. ಇಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಜನ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು ಸುಮಾರು 2010ರಲ್ಲಿ ಜೀರ್ಣೋದ್ಧಾರಗೊಂಡಿದೆ.
ರಾಜು ಪರವ ಮಾರ್ನಾಡು ಇವರು ಧರ್ಮರಸು, ಕೊಡಣಿತ್ತಾಯ ದೈವಗಳ ನೃತ್ಯ ವಿಶಾರದರಾಗಿ ರಮೇಶ್ ಪರವ ಶಿರ್ತಾಡಿ ಮತ್ತು ಸಂಘಡಿಗರು ಬೈದೇರುಗಳ ನೃತ್ಯ ವಿಶಾರದರಾಗಿ, ಸುಂದರ ಮಡಿವಾಳ ಬೆಳುವಾಯಿ ಇವರು ಮಡಿವಾಳರಾಗಿ, ಗಣೇಶ ಮಾರ್ನಾಡು ವಾದ್ಯದವರಾಗಿ , ವಿಶ್ವನಾಥ ಕೆಲ್ಲಪುತ್ತಿಗೆ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಚೇತನ ಯುವಕ ಮಂಡಲ , ಕುಂಭಕಂಠಿನಿ ಮಹಿಳಾ ಬಳಗ, ಪಡು ಮಾರ್ನಾಡು ಯುವಕ ಮಂಡಲಗಳು ಕಾರ್ಯನಿರ್ವಹಿಸುತ್ತಿದ್ದು ಗರೋಡಿಯ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ.
ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಾಯಂದಾಲ್ ಕ್ಷೇತ್ರ,
ಮಾರ್ನಾಡು,
ಮೂಡು ಮಾರ್ನಾಡ್ ಅಂಚೆ,
ಮೂಡಬಿದರೆ ತಾಲೂಕು, ದ.ಕ.ಜಿಲ್ಲೆ
ಮೂಡಬಿದರೆ ತಾಲೂಕು, ದ.ಕ.ಜಿಲ್ಲೆ
ಪೂ ಪೂಜನೆಯವರು:
ಸುಂದರ ಪೂಜಾರಿ
ಮಾಹಿತಿ ನೀಡಿದವರು:
ದೇವರಾಜ ಸುವರ್ಣ
ಪೊಸಲಾಯಿ ತಾವು (ಭಂಡಾರದ ಮನೆ)
ಪೊಸಲಾಯಿ ತಾವು (ಭಂಡಾರದ ಮನೆ)
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು
ಮಾಹಿತಿ ಸಂಗ್ರಹಿಸಿದ ದಿನಾಂಕ:
09-12-2025