ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು
ವಿಶ್ವನಾಥ ಕೆ ಪೂಜಾರಿ
ಗರೋಡಿಮನೆ ವಿಶ್ವನಾಥ ಕೆ ಪೂಜಾರಿ (76 ವರ್ಷ) ಇವರು ಪೂ ಪೂಜನೆಯ ವರಾಗಿದ್ದಾರೆ.ಇವರಿಗಿಂತ ಮೊದಲು ಮುದ್ದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜಾರ್ದೆ ಹುಣ್ಣಿಮೆಯ ಷಷ್ಠಿಯಂದು ಅಗೆಲು ಸೇವೆ, ಸಪ್ತಮಿಯಂದು ಬೈದೇರುಗಳ ನೇಮೋತ್ಸವ ನಡೆಯುತ್ತದೆ. ಪಿಲ್ಚಂಡಿ, ಮಾಯಂದಾಲ್, ಜೋಗಿ ಪುರುಷರಿಗೂ ಕೋಲ ಸೇವೆ ನಡೆಯುತ್ತದೆ. ನಂತರ ಶುದ್ಧದ ಅಗೆಲು ನಡಿಗುತ್ತು ಮನೆತನದವರ ವತಿಯಿಂದ ನಡೆಯುತ್ತದೆ. ಸೋಣ ತಿಂಗಳಲ್ಲಿ ಬರಬೆಟ್ಟು ಗುತ್ತಿನವರ ವತಿಯಿಂದ ಅಗೆಲು ಸೇವೆ ನಡೆಯುತ್ತದೆ. ಆಟಿಯಲ್ಲಿ ಅಗೆಲ್ ಸೇವೆ ನಡೆಯುವ 6 ಗರೋಗಳಲ್ಲಿ ಇದೂ ಒಂದು. ಸೋಣದ ಸಂಕ್ರಾಂತಿಯಂದು ಹೂವಿನ ಪೂಜೆ ನಡೆಯುತ್ತದೆ.
ಕಳತ್ತೂರು ಹಾಗೂ ಪಾದೂರು ಗ್ರಾಮಗಳ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರದ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿಯೂ ಭಾಗಿಯಾಗಿರುತ್ತಾರೆ. ವಂತಿಗೆ ಹಾಗೂ ಹರಕೆಯ ಹಣದಿಂದ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತದೆ.
ಗರೋಡಿಯು ಈಗ ಜೀರ್ಣೋದ್ದಾರದ ಯೋಜನೆಯಲ್ಲಿದೆ. ಹಿಂದೆ 25.05.1994 ಹಾಗೂ 1963 ರಲ್ಲಿ ಜೀಣೋದ್ದಾರಗೊಂಡಿತ್ತು.
ಬೊಗ್ಗು ಪರವ, ಉಗ್ಗಪ್ಪ ಪರವ, ಸಂತು ಪರವ ಇವರುಗಳು ಈ ಗರೋಡಿಯ ನೃತ್ಯ ವಿಶಾರದರಾಗಿಯೂ, ಶಶಿ ಮಡಿವಾಳ ಪಣಿಯೂರು, ಇವರು ಮಡಿವಾಳರಾಗಿಯೂ, ಲಕ್ಷಣ ಸೇರಿಗಾಎ ಎಲ್ಲೂರು, ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಳತ್ತೂರು,
ಕಳತ್ತೂರು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು,
ಉಡುಪಿ ಜಿಲ್ಲೆ. 576106.
ವಿಶ್ವನಾಥ ಕೆ. ಪೂಜಾರಿ,
ಗರೋಡಿ ಮನೆ, ಕಳತ್ತೂರು ಗ್ರಾಮ ಮತ್ತು ಅಂಚೆ,
ಕಾಪು ತಾಲೂಕು,
ಉಡುಪಿ ಜಿಲ್ಲೆ – 576106.
ಮೊಬೈಲ್: 9945772269