ಶ್ರೀ ಬ್ರಹ್ಮಬೈದರ್ಕಳ ಮೂಡೂರ ಹೈಗುಳಿ ಪರಿವಾರ ಗರೋಡಿ, ತಲ್ಲೂರು
ಉಡುಪಿಯಿಂದ ಕುಂದಾಪುರ ದಾಟಿ ಸುಮಾರು 4.2ಕಿ. ಮೀ. ನಂತರ ಎಡಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದ ರಸ್ತೆಗೆ ತಿರುಗಿ ಸುಮಾರು 800ಮೀ. ಸಾಗಿದರೆ ತಲ್ಲೂರು ಗರೋಡಿ ಸಿಗುತ್ತದೆ.
ಇದು ಶಿಲಾಮಯ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಮುಖ್ಯ ದ್ವಾರ ಹಾಗೂ ಉತ್ತರಾಭಿಮುಖವಾದ ಬ್ರಹ್ಮಗುಡಿಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಕಂಚಿನ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯ, ಇಬ್ಬರು ಮಕ್ಕಳ ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿಗಳಿವೆ.
ಗುಂಡದ ಬಲ ಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಬಲ್ಲಾಳ ಪೀಠವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ನಾರಾಯಣ ಹೈಗುಳಿ, ಶಂಕರ ಹೈಗುಳಿ ದೈವಗಳ ಗದ್ದುಗೆಯಲ್ಲಿ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಕರಿಬೆಟ್ಟಿನ ಹೈಗುಳಿ, ರಕ್ತ ಹೈಗುಳಿ, ಪಂಜುರ್ಲಿ ಪರಿವಾರ ಹೈಗುಳಿ, ಮೂಡೂರ ಹೈಗುಳಿ, ಬಾಲಯ್ಯ , ಮೈಂದಾಳ್ತಿ, ದೊಟ್ಟಿಕಾಲ ಚಿಕ್ಕು, ಮರ್ಲು ಚಿಕ್ಕು, ಮಾಸ್ತಿಅಮ್ಮ, ಬಾಲ ಚಿಕ್ಕು, ಬಗ್ಗು ಚಿಕ್ಕು ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಹಳೆಯಮ್ಮ, ಎಳೆಯಮ್ಮ, ಬೊಬ್ಬರ್ಯ, ಉಮ್ಮಾಳ್ತಿ, ಚಂಡೇಶ್ವರ, ಬಾಲ ಚಂಡಿ, ಜೋಗಿ ಪುರುಷ, ಸ್ವಾಮಿ, ಕುಂಜ್ಙಾಡಿ,ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ, ಹೊರಸುತ್ತಿನ ಹೈಗುಳಿಯ ಮರದ ಮೂರ್ತಿಗಳಿವೆ. ಗರೋಡಿಯ ಆವರಣದೊಳಗೆ ತುಳಸೀ ಕಟ್ಟೆ, ಕ್ಷೇತ್ರಪಾಲ ಗುಡಿ ಹಾಗೂ ಬಲಿಕಲ್ಲುಗಳಿವೆ.
ಗರೋಡಿಯ ಪಕ್ಕದಲ್ಲಿ ಮಹಾಕಾಳಿ ದೇವಸ್ಥಾನ ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.
ಗರೋಡಿಯ ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
ಕುಮಾರ ಪೂಜಾರಿ
ಗೋಪಾಲ ಪೂಜಾರಿ
ನಾಗರಾಜ ಪೂಜಾರಿ
ಕುಮಾರ ಪೂಜಾರಿ (45 ವರ್ಷ) ಗೋಪಾಲ ಪೂಜಾರಿ 61 ವರ್ಷ) ನಾಗರಾಜ ಪೂಜಾರಿ (60 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಮುತ್ತ ಪೂಜಾರಿ, ಮಾಸ್ತಿ ಪೂಜಾರಿ ಮೊದಲಾದ ಹಿರಿಯರು ಈ ಗರೋಡಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ರಾಜು ಪೂಜಾರಿ (72 ವರ್ಷ) ಇವರು 1990ರಿಂದ ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರಿಗೆ ಮೊದಲು ಇವರ ಅಜ್ಜ ವೆಂಕ ಪೂಜಾರಿ, ಶೇಷ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ತಲ್ಲೂರು ದೊಡ್ಡಮನೆ ವಸಂತ್ ಆರ್ ಹೆಗ್ಡೆಯವರು ಮೊಕ್ತೇಸರಾಗಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ತಲ್ಲೂರು ಕಂಬಳದ ಮೂರನೇ ದಿನ ಅಗೆಲು ಸೇವೆ, ದರ್ಶನ ಸೇವೆ ನಡೆಯುತ್ತದೆ. ಜನವರಿ 27ನೇ ತಾರೀಖಿನಂದು ಗೆಂಡ ಸೇವೆ, 28 ನೇ ತಾರೀಖಿನಂದು ತುಲಾಭಾರ ಸೇವೆ, 29 ನೇ ತಾರೀಖಿನಂದು ಕರಿಬೆಟ್ಟಿನ ಹೈಗುಳಿ ದೈವಕ್ಕೆ ಕುರಿ ಸೇವೆ ನಡೆಯುತ್ತದೆ. ಜೂನ್ ತಿಂಗಳಲ್ಲಿ ಮಹಾಕಾಳಿ ಮಾರಿ ಹಬ್ಬ ನಡೆಯುತ್ತದೆ.
ಹೆಮ್ಮಾಡಿ, ಉಪ್ಪಿನ ಕುದ್ರು, ಹೇರಿಕುದ್ರು, ಹಟ್ಟಿಯಂಗಡಿ, ನೇರಳೆಕಟ್ಟೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಭಕ್ತಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ 92ಸೆಂಟ್ಸ ಜಾಗವಿದೆ. 2024ರ ಜನವರಿ ತಿಂಗಳಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನಾಗರಾಜ ಮಡಿವಾಳ ತಲ್ಲೂರು ಇವರು ಮಡಿವಾಳರಾಗಿ, ಅಮ್ಮಯ್ಯ ದೇವಾಡಿಗ ಉಪ್ಪಿನ ಕುದ್ರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹಬೈದರ್ಕಳ ಮೂಡೂರ ಹೈಗುಳಿ ಪರಿವಾರ ಗರೋಡಿ
ತಲ್ಲೂರು ಗ್ರಾಮ ಮತ್ತು ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576230
ತಲ್ಲೂರು ಗ್ರಾಮ ಮತ್ತು ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576230
ಗರೋಡಿಯ ಅರ್ಚಕರು:
ಕುಮಾರ ಪೂಜಾರಿ – 9845605256
ಗೋಪಾಲ ಪೂಜಾರಿ – 9008854523
ನಾಗರಾಜು ಪೂಜಾರಿ – 8971914099
ಗೋಪಾಲ ಪೂಜಾರಿ – 9008854523
ನಾಗರಾಜು ಪೂಜಾರಿ – 8971914099
ಪಾತ್ರಿಗಳು
ರಾಜು ಪೂಜಾರಿ – 9845980346
ಮಾಹಿತಿ ನೀಡಿದವರು
ರಾಜು ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
29.04.2025