ಹಾಡಿ ಶ್ರೀ ಬ್ರಹ್ಮ ಬೈದರ್ಕಳ ಮಾಯಿಂದಾಲ್ ದೇವಿ ಸನ್ನಿಧಿ, ಹಿರ್ಗಾನ
ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಬೈಲೂರಿನಲ್ಲಿ ಹಿರ್ಗಾನ ರಸ್ತೆಗೆ ತಿರುಗಿ ಸುಮಾರು 11ಕಿ.ಮೀ. ಸಾಗಿದರೆ ಹಾಡಿಗರೋಡಿ ಇದೆ.
ಗರೋಡಿಯು ಶಿಲಾಮಯವಾಗಿದ್ದು ಎರಡು ದ್ವಾರಗಳಿದ್ದು ಒಂದು ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ಉತ್ತರ ಮುಖವಾಗಿದೆ. ಗರೋಡಿಯ ಬ್ರಹ್ಮಗುಡಿಯು ಉತ್ತರ ಮುಖವಾಗಿದ್ದು ಷಢಾದಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಗುಂಡದ ಕೆಳ ಅಂತಸ್ತಿನಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ಇಬ್ಬರು ಬಳ್ಳಾಲರಿಗೂ, ಮೇಲಂತಸ್ತಿನಲ್ಲಿ ಗಾಳಿದೇವರಿಗೂ ಪೂಜೆ ನಡೆಯುತ್ತದೆ.
ಗುಂಡದ ಎಡಬದಿಯಲ್ಲಿ ಮಣೆಮಂಚದಲ್ಲಿ ಕೋಟಿ ಹಾಗೂ ಚೆನ್ನಯರ ಪಂಚಲೋಹದ ಕುದುರೆಯ ಮೇಲೆ ಕುಳಿತ ಮೂರ್ತಿಗಳಿವೆ.
ಗುಂಡದ ಬಲಬದಿಯಲ್ಲಿ ಮಣೆಮಂಚದ ಮೇಲೆ ಕುದುರೆಯ ಮೇಲೆ ಕುಳಿತ ಬಲ್ಲಾಳರ ಪಂಚಲೋಹದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಮಣೆಮಂಚದ ಮೇಲೆ ಜೋಗಿಪುರುಷರ ಪಂಚಲೋಹದ ಮೂರ್ತಿಯಿದೆ.
ಎಡಬದಿಯಲ್ಲಿ ಮಾಯಂದಾಳ್ ಮತ್ತು ಮಗುವಿನ ಕಂಚಿನ ಪ್ರಭಾವಳಿಯಿರುವ ಮರದ ಮೂರ್ತಿಗಳಿವೆ.
ಪಕ್ಕದ ಮಣೆಮಂಚದ ಮೇಲೆ ಧೂಮಾವತಿಯ ಪಂಚಲೋಹದ ಮೂರ್ತಿಯಿದೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಪಕ್ಕದಲ್ಲಿ ಬಲಿಯಂದ್ರ ಕಲ್ಲು, ಬಲಿಕಲ್ಲು, ಹುಲಿಚಾಮುಂಡಿ ದೈವಗಳ ಸಾನಿದ್ಯವಿದೆ.
ಗರೋಡಿಯ ಪಕ್ಕದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮಸ್ಥಾನವಿದೆ.
ಕೃಷ್ಣಪ್ಪ ಪೂಜಾರಿ
ಹಾಡಿ ಗರೋಡಿ ಮನೆ ಕೃಷ್ಣಪ್ಪ ಪೂಜಾರಿ (60 ವರ್ಷ) ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಸಂಜೀವ ಪೂಜಾರಿ ಹಾಗೂ ಹೀಂಕ್ಲ ಪೂಜಾರಿಯವರು ಸಹ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಲೋಕು ಪೂಜಾರಿ ಹಾಗೂ ಹೊನ್ನಯ್ಯ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಪಡುಮನೆ ಸದಾನಂದ ಪೂಜಾರಿಯವರು ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಶಶಿಕಾಂತ ಕಾನಂಗಿಯವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಶುಕ್ರವಾರ ಪೂಜೆ ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು ಮೊದಲಾದ ಪೂಜಾಕೈಂಕರ್ಯಗಳು ನಡೆಯುತ್ತವೆ.
ಸೋಣ ತಿಂಗಳ ಸಂಕ್ರಾಂತಿಯಂದು ಗರೋಡಿ ಮನೆಯಿಂದ ಭಂಡಾರ ಬಂದು ತೋರಣ ಮುಹೂರ್ತ ನಡೆಯುತ್ತದೆ. ಮರುದಿನ ಬೈದರ್ಕಳ ನೇಮ, ಜೋಗಿಪುರುಷ ಕೋಲ ನಡೆಯುತ್ತದೆ. ಅದರ ಮರುದಿನ ಪಿಲ್ಚಂಡಿ ಕೋಲದ ನಂತರ ಮಾಯಂದಾಲ್ ಕೋಲ ನಡೆಯುತ್ತದೆ. ಮೂರನೇ ದಿನ ಅನ್ನ ನೈವೇದ್ಯದ ಅಗೆಲು ಸೇವೆ ನಡೆಯುತ್ತದೆ. ಮರುದಿನ ಸಂಪ್ರೋಕ್ಷಣೆಯ ನಂತರ ಭಂಡಾರವು ವಾಪಾಸು ಗರೋಡಿ ಮನೆಗೆ ಹೊರಡುವುದು. ಗರೋಡಿಗಳ ವಾರ್ಷಿಕ ನೇಮೋತ್ಸವವು ಈ ಗರೋಡಿಯಿಂದ ಆರಂಭವಾಗುವುದು ಇಲ್ಲಿಯ ವಿಶೇಷ.
ಮೂಜೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ , ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 30 ಸೆಂಟ್ಸ ಜಾಗವಿದ್ದು 2015ರಲ್ಲಿ ಜೀರ್ಣೋದ್ದಾರಗೊಂಡು ಶಿಲಾಮಯ ಗರೋಡಿಯಾಗಿ ಪರಿವರ್ತಿಸಲ್ಪಟ್ಟಿದೆ.
ಜೀರ್ಣೋದ್ದಾರದ ಮೊದಲಿನ ಗರೋಡಿಯ ಚಿತ್ರ ಇಲ್ಲಿದೆ.
ಈಗ ಪುನ: ಗರೋಡಿಯ ಸುತ್ತು ಪೌಳಿಯ ನವೀಕರಣದ ಯೋಜನೆಯಿದೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು.
ಸುಕುಡ ಪರವ ಮತ್ತು ಸಂಘಟಿಗರು ಗರೋಡಿಯ ನೃತ್ಯವಿಶಾರದರಾಗಿ, ರಮೇಶ ಮಡಿವಾಳರು ಮಡಿವಾಳರಾಗಿ, ಜಗ್ಗು ಸೇರಿಗಾರ ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಹಾಡಿ ಗರೋಡಿ ಶ್ರೀಬ್ರಹ್ಮಬೈದರ್ಕಳ ಮಾಯಂದಾಳ್ ದೇವಿ ಸನ್ನಿಧಿ ಹಿರ್ಗಾನ,
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ 576117
ಉಡುಪಿ ಜಿಲ್ಲೆ 576117
ಅರ್ಚಕರು:
ಕೃಷ್ಣಪ್ಪ ಪೂಜಾರಿ – 8277529807
ಮಾಹಿತಿ ನೀಡಿದವರು:
ಕೃಷ್ಣಪ್ಪ ಪೂಜಾರಿ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
10.06.2025