ಶ್ರೀ ಧರ್ಮರಸು, ಕೊಡಿಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಸ್ಥಾನ, ಮಾಯಂದಾಲ್ ಮತ್ತು ಬ್ರಹ್ಮಬೈದರ್ಕಳ ಗರೋಡಿ - ಕುಕ್ಕುಂದೂರು
ಉಡುಪಿಯಿಂದ ಹಿರಿಯಡ್ಕ, ಬೈಲೂರು ಮಾರ್ಗವಾಗಿ ಕಾರ್ಕಳಕ್ಕೆ ಹೋಗುವ ಮೊದಲು ಕುಕ್ಕುಂದೂರು ಮಹಾತ್ಮಾಗಾಂಧಿ ರೆಸಿಡೆನ್ಸಿಯಲ್ ಶಾಲೆಯ ನಂತರ ಬಲಕ್ಕೆ ಗರಡಿ ರಸ್ತೆಗೆ ತಿರುಗಿ ಸುಮಾರು 650ಮೀಟರ್ ದೂರದಲ್ಲಿದೆ ಈ ಗರೋಡಿ.
ಸುತ್ತು ಪೌಳಿಯಿದ್ದು ಶಿಲಾಮಯವಾಗಿರುವ ಈ ಗರೋಡಿಯ ಮುಖ್ಯದ್ವಾರವು ಪೂರ್ವಮುಖವಾಗಿದ್ದು, ಉತ್ತರ ದಿಕ್ಕಿಗೆ ಇನ್ನೊಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರ ಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಎಡಬದಿಯಲ್ಲಿ ಮಣೆಮಂಚದಲ್ಲಿ ಕೋಟಿಚೆನ್ನಯರ ಪೊಟೋ ಇದೆ. ಬಲಬದಿಯಲ್ಲಿ ಕುಜುಂಬ ಕಾಂಜವರ ಮಣೆಮಂಚವಿದೆ.
ಗರೋಡಿಯ ಎಡಭಾಗದಲ್ಲಿ ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ, ಪಕ್ಕದಲ್ಲಿ ಜುಮಾದಿಯ ಮಣೆಮಂಚವಿದೆ.
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕುಕ್ಕಿನಂತಾಯ, ಹಾಗೂ ಕೊಡಮಣಿತ್ತಾಯ ದೈವಗಳ ಸಾನಿಧ್ಯವಿದೆ.
ಗರೋಡಿಯ ಸುತ್ತು ಪೌಳಿಯೊಳಗೆ ಅಜೆಕಾಯಿ ಕಲ್ಲುಗಳಿವೆ.
ಗರೋಡಿಯ ಸುತ್ತು ಪೌಳಿಯೊಳಗೆ ಅಜೆಕಾಯಿ ಕಲ್ಲುಗಳಿವೆ.
ಮೂಲ್ಕಿಬೆಟ್ಟು (ಮುಲ್ಕೊಟ್ಟು) ಬರ್ಕೆಮನೆ ಧೀರಜ್ ಸುವರ್ಣ (37 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಹಿರಿಯರಾದ ಕೋಟಿ ಸುವರ್ಣ, ಬೊಲ್ಲು ಬೋಂಟ್ರ ಇವರುಗಳು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೋಟಿ ಸುವರ್ಣರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.
ಈ ಗರೋಡಿಯು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನ ಕುಕ್ಕುಂದೂರು ಇದರ ಆಡಳಿತಕ್ಕೊಳಪಟ್ಟಿದ್ದು ರತ್ನರಾಜ ಮುದ್ಯರು ದೇವಸ್ಥಾನ ಹಾಗೂ ಗರೋಡಿಗಳ ಮೊಕ್ತೇಸರರಾಗಿದ್ದಾರೆ.
ಈ ಗರೋಡಿಯು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನ ಕುಕ್ಕುಂದೂರು ಇದರ ಆಡಳಿತಕ್ಕೊಳಪಟ್ಟಿದ್ದು ರತ್ನರಾಜ ಮುದ್ಯರು ದೇವಸ್ಥಾನ ಹಾಗೂ ಗರೋಡಿಗಳ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಮಾರ್ಚ 8 ರಂದು ಭಂಡಾರದ ಮನೆಯಿಂದ ಭಂಡಾರ ಬಂದು ಧರ್ಮರಸು, ಕೊಡಿಮಣಿತ್ತಾಯ, ಕುಕ್ಕಿನಂತಾಯ ನೇಮ, ಬೈದರ್ಕಳ ನೇಮ, ದರ್ಶನ ನಡೆದು ಭಂಡಾರ ವಾಪಾಸು ಹೋಗುವುದು, ಮಾರ್ಚ 9 ಕ್ಕೆ ಮಾಯಂದಾಳ್ ನೇಮ ನಡೆಯುವುದು.
ಕುಕ್ಕುಂದೂರು ಗ್ರಾಮದ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ಸಹಾಯಧನ, ಕಾಣಿಕೆಗಳಿಂದ ಗರೊಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ಗರೋಡಿಯು 2014ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಚುಕುಡ ಪರವ ಕುಕ್ಕುಂದೂರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ರವೀಂದ್ರ ಮಡಿವಾಳರು ಮಡಿವಾಳರಾಗಿ, ಜಗ್ಗು ಸೇರಿಗಾರ ವಾದ್ಯದವರಾಗಿ, ಸುಧಾಕರ ಕುಕ್ಕುಂದೂರು ಡೋಲಿನವರಾಗಿ ಈ ಗರೊಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ಮಾಹಿತಿ ಸಂಗ್ರಹಿಸಿದವರು.
ಗರೋಡಿಯ ವಿಳಾಸ:
ಶ್ರೀ ಧರ್ಮರಸು, ಕೊಡಿಮಣಿತ್ತಾಯ ಮತ್ತು ಕುಕ್ಕಿನಂತಾಯ, ದೈವಸ್ಥಾನ, ಮಾಯಂದಾಲ್ ಮತ್ತು ಬ್ರಹ್ಮಬೈದರ್ಕಳ ಗರೋಡಿ ಕುಕ್ಕುಂದೂರು
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ 576117
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ 576117
ಅರ್ಚಕರು:
ಧೀರಜ್ ಸುವರ್ಣ – 9164640372
ಮಾಹಿತಿ ನೀಡಿದವರು:
ಧೀರಜ್ ಸುವರ್ಣ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
10.06.2025