ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕೊಳಕೆ ಇರ್ವತ್ತೂರು
ಉಡುಪಿ ಬೈಲೂರು ಕಾರ್ಕಳ ಮಾರ್ಗವಾಗಿ ನಂತರ ಕಾರ್ಕಳ ಮೂಡುಬಿದಿರೆ ರಸ್ತೆಯಲ್ಲಿ ಸುಮಾರು 3.5ಕಿ.ಮೀ. ಸಾಗಿ ಸಾಣೂರು ನಂತರ ಎಡಕ್ಕೆ ಇರ್ವತ್ತೂರು ಮುಖ್ಯ ರಸ್ತೆಗೆ ತಿರುಗಿ 3ಕಿ.ಮೀ. ದೂರ ಸಾಗಿದಾಗ ರಸ್ತೆಯ ಎಡಬದಿಯಲ್ಲಿದೆ ಇರ್ವತ್ತೂರು ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಮೂರಂತಸ್ತಿನ ಮರದ ಗುಂಡವಿದೆ. ಗುಂಡದೊಳಗಿರುವ ನಾಗಬ್ರಹ್ಮರ ಮೂರ್ತಿಯು ಭಂಡಾರದ ಮನೆಯಲ್ಲಿದ್ದು ಉತ್ಸವದ ಸಮಯದಲ್ಲಿ ತರಲಾಗುವುದು. ಗುಂಡದ ಬಲಬದಿಯಲ್ಲಿ ಕೋಟಿ ಹಾಗೂ ಎಡಬದಿಯಲ್ಲಿ ಚೆನ್ನಯ ಮಣೆಮಂಚಗಳಿವೆ.
ಎದುರಿಗೆ ಮರದ ಕುದುರೆ ಇದೆ.
ಗರೋಡಿಯ ಬದಿಯಲ್ಲಿರುವ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಇನ್ನೊಂದು ಬದಿಯಲ್ಲಿ ಮಾಡದಲ್ಲಿ ಧರ್ಮರಸು ದೈವದ ಸಾನಿಧ್ಯವಿದೆ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಕೊಡಮಣಿತ್ತಾಯ ಹಾಗೂ ಹತ್ತಿರದಲ್ಲಿರುವ ಗುಡಿಯಲ್ಲಿ ಕುಕ್ಕಿನಂತಾಯ ದೈವಗಳ ಸಾನಿಧ್ಯವಿದೆ.
ಹತ್ತಿರದಲ್ಲಿಯೇ ಕಲ್ಕುಡ, ಕಲ್ಲುರ್ಟಿ,ಕಾಳಮ್ಮ, ಪಂಜುರ್ಲಿ, ತೂಕತ್ತರಿ, ಪಂಚ ದೈವಗಳ ಗುಡಿಯಿದೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲಕಟ್ಟೆ, ಕೊಡಿಮರ,(ದ್ವಜಸ್ಥಂಭ) ಐದು ಅಜೆಕಾಯಿ ಕಲ್ಲು, ಆರು ಬಲಿಕಲ್ಲುಗಳು, ಗರೋಡಿಯ ಆವರಣದಲ್ಲಿ ಎರಡು ಕೊಡಮಣಿತ್ತಾಯ ದೈವದ ಸವಾರಿ ಕಟ್ಟೆ, ಆವರಣದ ಹೊರಗೆ ಒಂದು ಸವಾರಿ ಕಟ್ಟೆಯಿದೆ.
ಉರುಂದಾರು ಬರ್ಕೆ ಚಂದ್ರಹಾಸ (40 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಸಂಜೀವ ಪೂಜಾರಿ, ಕೃಷ್ಣ ಪೂಜಾರಿ, ಮುತ್ತಯ್ಯ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಅವಳಿ ಜವಳಿಗಳಾದ ಉಮೇಶ ಅಂಚನ್ ಹಾಗೂ ರಮೇಶ ಅಂಚನ್ (70 ವರ್ಷ) ಇವರುಗಳು ಇಲ್ಲಿಯ ದರ್ಶನ ಪಾತ್ರಿಗಳು. ಇವರ ಮೊದಲು ಬೊಮ್ಮಯ್ಯ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ರತ್ನರಾಜ ಹೆಗ್ಡೆಯವರು (60 ವರ್ಷ) ಇವರು ಇಲ್ಲಿಯ ಕೊಡಮಣಿತ್ತಾಯ ದೈವದ ಸ್ಥಳ ಪಾತ್ರಿಗಳು.
ಕೊಳಕೆಮನೆ ಜಯತೀರ್ಥ ಕಡಂಬ ಇವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮಗಳಿವೆ. ಸೋಣ ತಿಂಗಳ ಸಂಕ್ರಾಂತಿಯಂದು ವಿಶೇಷ ಪೂಜೆ ನಡೆಯುತ್ತದೆ. ಸೋಣಸಂಕ್ರಾಂತಿ ನಂತರ ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ ನಡೆಯುತ್ತದೆ.
ಜನವರಿ ತಿಂಗಳ 14ನೇ ತಾರೀಖಿನಂದು ಕೋಳಿಗುಂಟ ಹಾಕಿ, ನಾಲ್ಕು ಬರ್ಕೆ ಮನೆಯವರಿಂದ 10 ದಿನಗಳ ಕೋಳಿ ಅಂಕ ನಡೆಯುತ್ತದೆ. 10ನೇ ದಿನ ಜನವರಿ24ರಂದು ಭಂಡಾರ ಮನೆಯಿಂದ ಭಂಡಾರ ಬಂದು ದ್ವಜಾರೋಹಣ ನಡೆಯುತ್ತದೆ.
ಜನವರಿ 25ರಂದು ಧರ್ಮರಸು ನೇಮ ನಡೆಯುತ್ತದೆ. ನೇಮದಂದು ನೇಮ ಚಪ್ಪರಕ್ಕೆ 250-300 ಬಾಳೆ ಗೊನೆಗಳನ್ನು ಊರವರು ಹರಕೆಯ ರೂಪದಲ್ಲಿ ತಂದು ಕಟ್ಟುತ್ತಾರೆ. ಜನವರಿ 26ರಂದು ಜಾಗರ ಅಂದರೆ ಗರಡಿಯಿಂದ ಊರ ಬಸದಿಗೆ ಹೋಗಿ ದೇವರಿಗೆ ಪಂಚಾಮೃತ ಅಭಿಷೇಕದ ನಂತರ ಗರೋಡಿಗೆ ಬಂದು ಬಾಗಿಲು ಹಾಕುವುದು.
ಜನವರಿ 27ರಂದು ಬೆಳಗ್ಗೆ ಬಾಗಿಲು ತೆಗೆದು ಕೊಡಮಣಿತ್ತಾಯ ದೈವದ ದರ್ಶನ, ರಾತ್ರಿ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ನೇಮ ನಡೆಯುತ್ತದೆ. ಜನವರಿ 28ರಂದು ಸಾರ್ವಜನಿಕ ಅನ್ನ ಸಂತರ್ಪಣೆ, ಬೈದರ್ಕಳ ನೇಮ, ಇರ್ಲ ದೈವಗಳ ಕೋಲ ಹಾಗೂ ಜೋಗಿಪುರುಷ ಕೋಲ ನಡೆಯುತ್ತದೆ. ಜನವರಿ 29ರಂದು ಮಾಯಂದಾಲ್ ಕೋಲ, ದ್ವಜ ಅವರೋಹಣ , ಕುರಿ ತಂಬಿಲ, ನಡೆದು ಭಂಡಾರ ವಾಪಾಸು ಹೋಗುವುದು.

ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಭಂಡಾರದ ಮನೆಯಿಂದ ಭಂಡಾರ ಹೊರಟು, ಮಿನ್ನಿಕಲ್ಲು, ಮಲೆಯಾಳ ಕಟ್ಟೆ, ಕೋರಂಜ ಬಾಕ್ಯಾರು, ಕೋರಂಜ, ಪಾಲ್ದೆಬೆಟ್ಟು ಈ ಐದು ಸ್ಥಳಗಳಲ್ಲಿ ದೊಂಪದ ಬಲಿ ನಡೆಯುತ್ತದೆ. ಗರೋಡಿಯಲ್ಲಿರುವ ಎಲ್ಲಾ ದೈವಗಳಿಗೆ (ಮಾಯಂದಾಲ್ ಹೊರತುಪಡಿಸಿ) ಕಟ್ಟುಕಟ್ಟಳೆ ನೇಮ, ಕೋಲ, ರಾತ್ರಿಯಿಡೀ ನಡೆದು ಬೆಳಗ್ಗೆ ಮಾರಿ ಪೂಜೆ ನಡೆದು ಭಂಡಾರ ವಾಪಾಸು ಬರುವುದು.
ಊರವರ ವರಡ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ. ಗರೋಡಿಗೆ 10 ಎಕರೆ ಜಾಗವಿದ್ದು 2006ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ಸುರೇಶ ಪರವರು ಕೊಡಮಣಿತ್ತಾಯ ದೈವದ ನೃತ್ಯ ವಿಶಾರದರಾಗಿ, ಸುನಿಲ್ ಪರವರು ಕುಕ್ಕಿನಂತಾಯ ದೈವದ ನೃತ್ಯವಿಶಾರದರಾಗಿ, ಗಂಗಯ್ಯ ಪರವ, ರಮೇಶ್ ಪರವ ಹಾಗೂ ರಮೇಶ್ ಪರವ ಇವರು ಬೈದೇರುಗಳ ನೃತ್ಯವಿಶಾರದರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ. ಸತೀಶ್ ಮಡಿವಾಳ ಇರ್ವತ್ತೂರು ಇವರು ಮಡಿವಾಳರಾಗಿ ಶೇಖರ ಮೊಯಿಲಿ ಇರ್ವತ್ತೂರು ವಾದ್ಯದವರಾಗಿ, ರಮೇಶ್ ಮೊಯಿಲಿ ಬ್ಯಾಂಡಿನವರಾಗಿ, ವಿಶ್ವನಾಥ ಕೆಲ್ಲಪುತ್ತಿಗೆ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕೊಳಕೆ – ಇರ್ವತ್ತೂರು,
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ.
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ.
ಅರ್ಚಕರು
ಉರುಂದಾರ ಬರ್ಕೆ ಚಂದ್ರಹಾಸ – 897156927
ಮಾಹಿತಿ ನೀಡಿದವರು:
ಜಯತೀರ್ಥ ಕಡಂಬ
ಗೋಪಾಲ ಪೂಜಾರಿ
ಶಂಕರ ಪೂಜಾರಿ
ರಘುಚಂದ್ರ ಜೈನ್
ಗೋಪಾಲ ಪೂಜಾರಿ
ಶಂಕರ ಪೂಜಾರಿ
ರಘುಚಂದ್ರ ಜೈನ್
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
10.06.2025