Baidashree

Bailadka Anekallu Shree Brahma Baidarkala Garodi Anekere, Karkala

ಬೈಲಡ್ಕ ಆನೆಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಆನೆಕೆರೆ, ಕಾರ್ಕಳ

ಉಡುಪಿಯಿಂದ ಕಾರ್ಕಳಕ್ಕೆ ಬಂದು, ಕಾರ್ಕಳ ನಗರದಲ್ಲಿ ಆನೆಕೆರೆ ಎಂಬ ಸ್ಥಳದಲ್ಲಿ ಇದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಈ ಗರೋಡಿ ಬೈರವ ಅರಸರ ಕಾಲದ್ದೆನ್ನಲಾಗಿದೆ. ಬೈದೇರುಗಳು ಬೈರವ ಅರಸರಿಗೆ ಕನಸಿನಲ್ಲಿ ತೋರಿ ಬಂದು ಗರೋಡಿ ಕಟ್ಟಬೇಕೆಂದು ಎಚ್ಚರಿಸಿದಾಗ ಅರಸರು ಗಣನೆಗೆ ತಾರದೆ ತಾತ್ಸಾರ ಭಾವ ತೋರಿದರಂತೆ. ಕೋಟಿಚೆನ್ನಯರ ಕಾರಣೀಕದಿಂದಾಗಿ ಅರಸರ ಪಟ್ಟದ ಆನೆ ಆಹಾರ ಸ್ವೀಕರಿಸದೆ ಮಾರಣಾಂತಿಕ ಸ್ಥಿತಿಯಲ್ಲಿದ್ದು ಅರಮನೆಯಲ್ಲಿ ಅನೇಕ ಅನಿಷ್ಟಕಾರಕ ವಿಘ್ನಗಳು ತೋರಿದಾಗ ಅರಸರು ಜ್ಯೋತಿಷಿಗಳಲ್ಲಿ ಕೇಳಿದಾಗ “ ಈ ರಾಜ್ಯಕ್ಕೆ ಬೈದೇರುಗಳು” ಬಂದಿದ್ದಾರೆ. ಅವರಿಗೆ ಮೊದಲು ಗರೋಡಿ ಕಟ್ಟಿಸಿ ಆಗ ಪಟ್ಟದ ಆನೆಗೆ ಮತ್ತು ಅರಮನೆಗೆ ಕ್ಷೇಮವಾಗುವುದೆಂದು ತಿಳಿದು ಅರಸರು ಹರಕೆ ಕಾಣಿಕೆ ಹಿಡಿದು ಪಟ್ಟದ ಆನೆ ಸೌಖ್ಯವಾದರೆ ಅದೇ ಆನೆಯಿಂದ ಕಲ್ಲೆಳಸಿ ಗರೋಡಿ ಕಟ್ಟಿಸುವುದಾಗಿ ನೆನೆಸಿಕೊಂಡರು. ಆ ಪ್ರಕಾರ ಪಟ್ಟದ ಆನೆ ಸೌಖ್ಯವಾಗಿ ಅರಸರ ಎಲ್ಲಾ ಕೆಲಸಗಳೂ ಜಯ ಹೊಂದಿ ವಾಗ್ದಾನ ಪ್ರಕಾರ ಆನೆಯಿಂದ ಕಲ್ಲೆಳೆಸಿ ಗರೋಡಿ ಕಟ್ಟಿಸಿದರು. ಈಗಲೂ ಈ ಗರೋಡಿಗೆ “ ಆನೆಕಲ್ಲು “ ಗರೋಡಿ ಎಂಬ ಹೆಸರೂ ಇದೆ.
bailadka-1
bailadka-2
ಗರೋಡಿಗೆ ಪೂರ್ವಮುಖವಾದ ಮುಖ್ಯ ದ್ವಾರವಿದ್ದು ಉತ್ತರಕ್ಕೆ ಇನ್ನೊಂದು ದ್ವಾರವಿದೆ.
bailadka-3
ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾದಾರ ಪ್ರತಿಷ್ಠೆಯನ್ನು ಹೊಂದಿದೆ.
bailadka-4
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಮದ್ಯದಲ್ಲಿ ಗಾಳಿದೇವರಿಗೆ ಹಾಗೂ ಮೇಲಂತಸ್ತಿನಲ್ಲಿ ಆಕಾಶಕ್ಕೂ ಪೂಜೆ ನಡೆಯುತ್ತದೆ.
bailadka-5
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಮೂರ್ತಿ ಇದೆ.
bailadka-6
ಗುಂಡದ ಬಲಭಾಗದಲ್ಲಿ ಕುಜುಂಬಕಾಂಜವರ ಮಣೆಮಂಚವಿದೆ.
bailadka-8
ಬ್ರಹ್ಮಗುಡಿಯ ಎದುರು ಮುಖವಾಗಿ ಗುರುಕಂಭವಿದೆ.
bailadka-9
ಬ್ರಹ್ಮಗುಡಿಯ ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
bailadka-10
bailadka-11
bailadka-12
ಗರೋಡಿಯ ಹೊರಗೆ ಗುಡಿಯೊಂದರಲ್ಲಿ ಧರ್ಮರಸು, ಕೊಡಮಣಿತ್ತಾಯ, ಹಾಗೂ ಕುಕ್ಕಿನಂತಾಯ ದೈವಗಳ ಮಣೆಮಂಚಗಳಿವೆ. ಎದುರಿಗೆ ದ್ವಜಸ್ಥಂಭವಿದೆ.
bailadka-13
ಇನ್ನೊಂದು ಗುಡಿಯಲ್ಲಿ ಪಿಲ್ಚಂಡಿ ದೈವದ ಮಣೆಮಂಚದಲ್ಲಿ ಕಂಚಿನ ಮೂರ್ತಿ ಇದೆ.
bailadka-14
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ತೀರ್ಥಬಾವಿ, ಅಜೆಕಾಯಿ ಕಲ್ಲುಗಳಿವೆ. ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
bailadka-15

ಶರತ್ ಕುಮಾರ್

ಶರತ್ ಕುಮಾರ್ (36 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ವಿನಾಯಕ ಚಂದರ್ (70 ವರ್ಷ) ಇವರು ಈ ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಮಾಯಿ ತಿಂಗಳ ಹುಣ್ಣಿಮೆಯ ಹಿಂದಿನ ದಿವಸ ಕೊಡಿ ಏರಿಸಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ದೈವಗಳ ಕೋಲ, ಮರುದಿನ ಬೈದರ್ಕಳ ನೇಮ, ದರ್ಶನ, ಪಿಲ್ಚಂಡಿ ಕೋಲ, ಮರುದಿನ ಮಾಯಂದಾಲ್ ಕೋಲ ನಡೆಯುತ್ತದೆ.
ಕಾರ್ಕಳದ ಕಸಬದ ಜನರು ಈ ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ ಸುಮಾರು 2ಎಕರೆ ಜಾಗವಿದ್ದು 2016ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ಉಗ್ಗಪ್ಪ ಪರವ ಕೆರ್ವಾಸೆ ಮತ್ತು ಸಂಗಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ. ಯೂತ್ ಬಿಲ್ಲವ (ರಿ) ಕಾರ್ಕಳ ಎಂಬ ಯುವಕ ಸಂಘವೊಂದು ಗರೊಡಿಗೆ ಸಂಬಂಧಪಟ್ಟು ಸಕ್ರಿಯವಾಗಿದೆ.
bailadka-16

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಬೈಲಡ್ಕ ಆನೆಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಆನೆಕೆರೆ
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ

ಅರ್ಚಕರು

ಶರತ್ ಕುಮಾರ್ – 990207842

ಮೊಕ್ತೇಸರರು

ವಿನಾಯಕ ಚಂದರ್ – 9741931961 ಧೀರಜ್ ಚಂದರ್

ಮಾಹಿತಿ ನೀಡಿದವರು

ಶರತ್ ಕುಮಾರ್

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025