Baidashree

Shree Satyadekke, Dharmarasu, Kodamnittaaya, Kukkinantaaya, Brahma Baidarkala & Mayandal Devi Jodu Garodi, Sanoor

ಶ್ರೀ ಸತ್ಯದೆಕ್ಕೆ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲ್ ದೇವಿ ಜೋಡುಗರೋಡಿ ಸಾಣೂರು

ಉಡುಪಿಯಿಂದ ಕಾರ್ಕಳ ತಲುಪಿ ಕಾರ್ಕಳ – ಪಡುಬಿದ್ರಿ ರಸ್ತೆಯಲ್ಲಿ ಕುಂಟಲ್ಪಾಡಿ ಬಸ್ ಸ್ಟಾಪ್ನ ಹತ್ತಿರ ಎಡಕ್ಕೆ ತಿರುಗಿ ಸುಮಾರು ಒಂದು ಕಿ. ಮೀ. ಸಾಗಿದರೆ ಸಾಣೂರು ಜೋಡು ಗರೊಡಿ ಇದೆ.
sanoor-jodu-garodi-1
sanoor-jodu-garodi-2
sanoor-jodu-garodi-3
sanoor-jodu-garodi-4
sanoor-jodu-garodi-5
ಗರೋಡಿಯು ಶಿಲಾಮಯವಾಗಿದ್ದು ಪೂರ್ವಾಭಿಮುಖವಾದ ಮುಖ್ಯದ್ವಾರ ಹಾಗೂ ಉತ್ತರಾಭಿಮುಖವಾದ ಇನ್ನೊಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾದಾರ ಪ್ರತಿಷ್ಟೆಯನ್ನು ಹೊಂದಿದೆ.
sanoor-jodu-garodi-6
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಮಧ್ಯದಲ್ಲಿ ಗಾಳಿ ದೇವರು ಹಾಗೂ ಮೇಲಂತಸ್ತಿನಲ್ಲಿ ಗರುಡ ದೇವರ ಆರಾಧನೆಯಿದೆ.
sanoor-jodu-garodi-7
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯರ ಮಣೆಮಂಚ, ಮಣೆಮಂಚದ ಹಿಂದೆ ಕೋಟಿಚೆನ್ನಯರ ಮರದ ಮೂರ್ತಿಗಳಿವೆ.
sanoor-jodu-garodi-8
ಗುಂಡದ ಬಲಬದಿಯಲ್ಲಿ ಕುಜುಂಬಕಾಂಜವರ ಮರದ ಮಣೆಮಂಚವಿದೆ.
sanoor-jodu-garodi-9
sanoor-jodu-garodi-10
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಜೋಗಿಪುರುಷರ ಮಣೆಮಂಚ, ಪಕ್ಕದಲ್ಲಿ ಮಾಯಂದಾಲ್ ಹಾಗೂ ಮಾಣಿ ಬಾಲೆಯ ಮರದ ಮೂರ್ತಿ ಹಾಗೂ ಮಣೆಮಂಚಗಳಿವೆ.
sanoor-jodu-garodi-11
ಉತ್ತರ ಈಶಾನ್ಯ ದಿಕ್ಕಿನಲ್ಲಿ ಗುರುಕಂಬವಿದೆ.
sanoor-jodu-garodi-12
ಗರೋಡಿಯ ಆವರಣದೊಳಗೆ ಗುಡಿಯೊಂದರಲ್ಲಿ ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿಧ್ಯವಿದ್ದು, ಎದುರಿಗೆ ದ್ವಜಸ್ಥಂಭವಿದೆ. ಕೊಡಮಣಿತ್ತಾಯ ದೈವದ ಕೋಲದ ದಿನ ಅಂಗಣದಲ್ಲಿ ಮೂರು ಸುತ್ತು ಬಲಿ ಬರುವ ಮರದ ಹುಲಿ ಬಂಡಿಯಿದೆ.
sanoor-jodu-garodi-13
ಹತ್ತಿರದಲ್ಲಿ ಧರ್ಮರಸು ದೈವದ ಮಾಡವಿದೆ. ಉತ್ಸವದ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವದ ಬಲಿಮೂರ್ತಿಯನ್ನಿಟ್ಟು ಪೂಜಿಸುವ ವಸಂತ ಮಂಟಪವಿದೆ.
sanoor-jodu-garodi-14
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ ಕಲ್ಲು, ತುಳಸಿಕಟ್ಟೆ, ಅಜೆಕಾಯಿ ಕಲ್ಲು, ತೀರ್ಥಭಾವಿಗಳಿವೆ.
sanoor-jodu-garodi-15

ನಿತಿನ್ ಬೋಂಟ್ರ

ನಿತಿನ್ ಬೋಂಟ್ರ ಸಾತಿಂಜೆ ಬರ್ಕೆ ಇವರು ಈ ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಹಿರಿಯರಾದ ಕಾಡ್ಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
sanoor-jodu-garodi-16

ಜಗಧೀಶ ಪೂಜಾರಿ

ಜಗಧೀಶ ಪೂಜಾರಿ ಸೇನರ ಬೆಟ್ಟು ಸಾಣೂರು ಇವರು ಗರೋಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದು , ಜೀರ್ಣೋದ್ದಾರದ ನಂತರ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
sanoor-jodu-garodi-17

ವೇದಮೂರ್ತಿ ಶ್ರೀ ರಾಮ್ ಭಟ್

ಸಾಣೂರು ಕ್ಷೇತ್ರದ ಅನುವಂಶೀಯ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಮ್ ಭಟ್ ದೇಂದಬೆಟ್ಟು ಇವರು ಇಲ್ಲಿಯ ಪ್ರಧಾನ ಅಸ್ರಣ್ಣರು ಆಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಶಿವರಾತ್ರಿ ಪೂಜೆ ಸೌರಮಾನ ಯುಗಾದಿ, ಪೂಜೆಗಳು ನಡೆಯುತ್ತವೆ.
ಸುಗ್ಗಿ ತಿಂಗಳಲ್ಲಿ 18 ದಿನ ಮಾನದಲ್ಲಿ ಏಪ್ರಿಲ್ 1 ರಂದು ಸಾಯಂಕಾಲ ಸಾಯಂಕಾಲ 5ಕ್ಕೆ ಬೈದರ್ಕಳ ಭಂಡಾರ ಸಾಂತಿಂಜ ಬರ್ಕೆಯಿಂದ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಭಂಡಾರ ಪೊರ್ಲೊಟ್ಟು ಗುತ್ತುವಿನಿಂದ ಗರೋಡಿಗೆ ಬಂದು ದ್ವಜಾರೋಹಣ ನಡೆಯುತ್ತದೆ.
ಏಪ್ರಿಲ್ 2ರಂದು ಬೆಳಿಗ್ಗೆ ಧರ್ಮರಸು ಉಲ್ಲಾಯ ನೇಮ ನಡೆದು ಪಲ್ಲಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ 5ಕ್ಕೆ ಚೆಂಡು, ರಾತ್ರಿ ಕೊಡಮಣಿತ್ತಾಯ, ಕುಕ್ಕಿನಂತಾಯ, ಧರ್ಮದೈವಗಳ ನೇಮೋತ್ಸ, ಕಡ್ಸಲೆ ಬಲಿ, ಬೈದರ್ಕಳ ದರ್ಶನ ಸೇವೆ ನಡೆಯುತ್ತದೆ.
ಏಪ್ರಿಲ್ 3ರಂದು ಬೆಳಿಗ್ಗೆ ಕೊಡಮಣಿತ್ತಾಯ ಕೋಲದಲ್ಲಿ ಹರಕೆ ಸ್ವೀಕಾರ, ಸಂಜೆ 6ರಿಂದ ಬೈದರ್ಕಳ ಅನ್ನನೈವೇದ್ಯದ ಅಗೆಲು ಸೇವೆ ಬೈದರ್ಕಳ ದರ್ಶನ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯುತ್ತದೆ.
ಏಪ್ರಿಲ್ 4ರಂದು ಸಂಜೆ 5ಕ್ಕೆ ಚೆಂಡು ರಾತ್ರಿ 9ಕ್ಕೆ ಬೈದರ್ಕಳ ನೇಮದ ನಂತರ ದ್ವಜ ಅವರೋಹಣ ನಡೆಯುತ್ತದೆ.
ಏಪ್ರಿಲ್ 5ರಂದು ಜೋಗಿಪುರುಷರ ಕೋಲ, 10ಕ್ಕೆ ಮಾಯಂದಾಲ್ ಕೋಲದ ನಂತರ ಹರಕೆ ಸ್ವೀಕಾರ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ. ನಂತರ ಭಂಡಾರ ವಾಪಾಸು ಹೋಗುವುದು. ಶುದ್ದ ಸಂಪ್ರೋಕ್ಷಣೆಯಾಗುವುದು.
ಇದಲ್ಲದೆ ಡಿಸೆಂಬರ್ 14ರಂದು ಮಂಡಕಲ್ಲು ದೊಂಪದ ಬಲಿ, ಗಡುವಾಡು ಜಾಗದಲ್ಲಿರುವ ಚಾವುಂಡಿ ದೈವ ಸಾನಿದ್ಯದಲ್ಲಿ, ಮಹಮ್ಮಾಯಿಗೆ ಗದ್ದಿಗೆ ಪೂಜೆ,(ಧರ್ಮರಸು, ಮಾಯಂದಾಲ್, ಜೋಗಿಪುರುಷ ಹೊರತುಪಡಿಸಿ) ಉಳಿದೆಲ್ಲ ದೈವಗಳಿಗೆ ಕೋಲ ನಡೆಯುತ್ತದೆ.
ಸಾಣೂರು ಗ್ರಾಮದ ಜನರು ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಬೈದೇರುಗಳಿಗೆ ಹರಕೆಯ ಅನ್ನ ನೈವೇದ್ಯ ಸೇವೆ ನೀಡುವುದಕ್ಕೆ ಈ ಗರೋಡಿಯಲ್ಲಿ ಅವಕಾಶವಿದೆ.
ಭಕ್ತ ಜನರ ಕಾಣಿಕೆ, ವರಡ ವಂತಿಗೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 73ಸೆಂಟ್ಸ ಜಾಗವಿದ್ದು 2023ರಲ್ಲಿ ಗರೋಡಿಯು ಜೀರ್ಣೋದ್ದಾರಗೊಂಡು ಶಿಲಾಮಯವಾಗಿ ಮೂಡಿ ಬಂದಿದೆ.
ನಾರಾಯಣ ಪರವ ಮಾಂಟ್ರಾಡಿ ಮತ್ತು ಸಂಗಡಿಗರು ಗರೋಡಿಯ ನೃತ್ಯವಿಶಾರದರಾಗಿ, ಸೋಮಯ್ಯ ಮಡಿವಾಳ ಮತ್ತು ಸಂಘಡಿಗರು ಮಡಿವಾಳರಾಗಿ, ಸಂತೋಷ ದೇವಾಡಿಗ ಕಾಂತಾವರ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
sanoor-jodu-garodi-18

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮಬೈಕರ್ದಳ ಮಾಯಂದಾಲ್ ದೇವಿ ಜೋಡು ಗರೋಡಿ ಸಾಣೂರು,
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ

ಅರ್ಚಕರು

ನಿತಿನ್ ಬೋಂಟ್ರ – 8722370077

ಆಡಳಿತ ಸಮಿತಿಯ ಅಧ್ಯಕ್ಷರು

ಜಗಧೀಶ ಪೂಜಾರಿ – 7624833315

ಮಾಹಿತಿ ನೀಡಿದವರು

ವೇದಮೂರ್ತಿ ಶ್ರೀ ರಾಮ್ ಭಟ್
ನಿತಿನ್ ಬೋಂಟ್ರ
ಜಗಧೀಶ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025