ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರೋಡಿ - ನಡ್ಯೋಡಿಬೆಟ್ಟು - ಸಾಣೂರು
ಉಡುಪಿಯಿಂದ ಕಾರ್ಕಳ ಮೂಡುಬಿದಿರೆ ರಸ್ತೆಗೆ ತಿರುಗಿ ಸುಮಾರು 2.5ಕಿ.ಮೀ. ನಂತರ ಬಲಕ್ಕೆ ತಿರುಗಿ 3ಕಿ.ಮೀ. ಸಾಗಿದರೆ ಈ ಗರೊಡಿ ಸಿಗುತ್ತದೆ.
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯೂ ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಮೂರಂತಸ್ತಿನ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದಲ್ಲಿ ಗಾಳಿದೇವರು ಹಾಗೂ ಮೇಲಂತಸ್ತಿನಲ್ಲಿ ಗರುಡ ದೇವರ ಆರಾಧನೆಯಿದೆ. ಗುಂಡದ ಬದಿಯಲ್ಲಿ ಕೋಟಿಚೆನ್ನಯರ ಮಣೆಮಂಚ ಹಾಗೂ ಕೋಟಿಬೈದ್ಯರ ಮರದ ಮೂರ್ತಿ, ಗುಂಡದ ಎಡಬದಿಯಲ್ಲಿ ಚೆನ್ನಯಬೈದ್ಯರ ಮರದ ಮೂರ್ತಿ ಹಾಗೂ ಕುಜುಂಬಕಾಂಜವರ ಮಣೆಮಂಚವಿದೆ. ಪಕ್ಕದಲ್ಲಿ ಮರದ ಬಿಳಿ ಕುದುರೆಯಿದೆ.
ಗರಡಿಯ ಎದುರಿಗೆ ಧರ್ಮರಸು ದೈವದ ಮಾಡ, ಹಾಗೂ ಇನ್ನೊಂದು ಗುಡಿಯಲ್ಲಿ ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿದ್ಯವಿದೆ. ಎದುರಿಗೆ ದ್ವಜಸ್ಥಂಭವಿದೆ.
ಗರೋಡಿಯ ಆವರಣದೊಳಗೆ ವಸಂತ ಮಂಟಪ, ಅಜೆಕಾಯಿ ಕಲ್ಲು, ತೀರ್ಥಭಾವಿಗಳಿವೆ. ಇಲ್ಲಿ ಕೊಡಮಣಿತ್ತಾಯ ದೈವಕ್ಕೆ ಗುರ್ಜಿ ರಥವೂ ಇದೆ.
ಶಿವ ಪೂಜಾರಿ ಹಾರ್ದಡ್ಪು ಬರ್ಕೆ ಇವರುಬೈದರ್ಕಳ ಪೂ ಪೂಜನೆಯವರಾಗಿದ್ದಾರೆ. ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಸಾಣೂರು ಗುತ್ತು ಪ್ರಭಾತ್ ನಾಯ್ಕ ಇವರು ಇಲ್ಲಿಯ ಅನುವಂಶೀಯ ಮೊಕ್ತೇಸರರಾಗಿದ್ದಾರೆ.
ಸ್ಥಳೀಯ ಕ್ಷೇತ್ರದ ಅನುವಂಶೀಯ ಪ್ರಧಾನ ಅಸ್ರಣ್ಣರಾದ ವೇದಮೂರ್ತಿ ಶ್ರೀ ಶ್ರೀರಾಮಭಟ್ ದೇಂದಬೆಟ್ಟು ಇವರು ಇಲ್ಲಿಯ ಪ್ರಧಾನ ಅಸ್ರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಶಿವರಾತ್ರಿ ಪೂಜೆ, ಚಾಂದ್ರಮಾನ ಪೂಜೆಗಳು ನಡೆಯುತ್ತವೆ. ಸೌರಮಾನ ಯುಗಾದಿಯಂದು ಭಂಡಾರ ಕೋಣೆಯಿಂದ ಧರ್ಮದೈವಗಳ ಭಂಡಾರಗರೋಡಿಗೆ ಬಂದು ದ್ವಜಾರೋಹಣ ನಡೆಯುತ್ತದೆ.
ಎರಡನೇ ದಿನ ಬೆಳಗ್ಗೆ ಧರ್ಮರಸು ಉಲ್ಲಾಯ ದೈವದ ನೇಮೋತ್ಸವ, ಪಲ್ಲ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತಿದೆ. ಸಂಜೆ 5ಗಂಟೆಗೆ ಚೆಂಡು, ರಾತ್ರಿ 9ಕ್ಕೆ ಉತ್ಸವ ಬಲಿ, ಕೊಡಮಣಿತ್ತಾಯ, ಕುಕ್ಕಿನಂತಾಯ, ಧರ್ಮದೈವಗಳ ನೇಮೋತ್ಸವ, ಕಡ್ಸಲೆ ಬಲಿ, ಕೋಟಿಚೆನ್ನಯರ ದರ್ಶನ ನಡೆಯುತ್ತದೆ.
ಮೂರನೇ ದಿನ ಬೆಳಿಗ್ಗೆ 7-00ಕ್ಕೆ ಕೊಡಮಣಿತ್ತಾಯ ದೈವದ ಹರಕೆ ಸ್ವೀಕಾರ, 11-30ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ.
ಸಂಜೆ 5-00 ಕ್ಕೆ ಚೆಂಡು, ರಾತ್ರಿ 9-00 ಕ್ಕೆ ಬೈದರ್ಕಳ ನೇಮೋತ್ಸ, ಕಡ್ಸಲೆ ಬಲಿ, ಅಭಯ ವಾಕ್ಯ, ದ್ವಜ ಅವರೋಹಣ ನಡೆಯುತ್ತದೆ.
ನಾಲ್ಕನೇ ಶುದ್ದ ಸಂಪ್ರೋಕ್ಷಣೆಯ ನಂತರ ಭಂಡಾರ ವಾಪಾಸು ಹೋಗುವುದು.

ನವಂಬರ್ ತಿಂಗಳಲ್ಲಿ ಕಂಬಳದ ಕೋಲ ನಡೆಯುತ್ತದೆ. ಈ ಸಂದರ್ಭದಲ್ಲಿ ಕೊಡಮಣಿತ್ತಾಯ ಕೋಲ, ಎರುನಲಿಕೆ ನಡೆಯುತ್ತದೆ.
ನಾರಾಯಣ ಪರವ ಮತ್ತು ಸಂಗಡಿಗರು ಈ ಗರೋಟಡಿಯ ಈ ಗರೋಡಿಯ ನೃತ್ಯ ವಿಶಾರದರಾಗಿ, ಸೋಮಯ್ಯ ಮಡಿವಾಳ ಮಡಿವಾಳರಾಗಿ, ರಮೇಶ್ ದೇವಾಡಿಗ ಇರ್ವತ್ತೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರೋಡಿ, ನಡ್ಯೋಡಿಬೆಟ್ಟು
ಮುದ್ದಣ್ಣ ನಗರ, ಸಾಣೂರು,
ಕಾರ್ಕಳ ತಾಲೂಕು
ಉಡುಪಿ 574114
ಮುದ್ದಣ್ಣ ನಗರ, ಸಾಣೂರು,
ಕಾರ್ಕಳ ತಾಲೂಕು
ಉಡುಪಿ 574114
ಅರ್ಚಕರು:
ಶಿವ ಪೂಜಾರಿ
ಮೊಕ್ತೇಸರರು:
ಪ್ರಭಾತ್ ನಾಯ್ಕ ಸಾಣೂರು ಗುತ್ತು – 98804463344
ಪ್ರಧಾನ ಅಸ್ರಣ್ಣ:
ವೇದಮೂರ್ತಿ ಶ್ರೀ ರಾಮ್ ಭಟ್
ಮಾಹಿತಿ ನೀಡಿದವರು:
ವೇದಮೂರ್ತಿ ಶ್ರೀ ರಾಮ್ ಭಟ್
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
10.06.2025