ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಸೂಡ
ಉಡುಪಿಯಿಂದ ಶಿರ್ವ ತಲುಪಿ ಶಿರ್ವ ಪೇಟೆಯಿಂದ ಶಿರ್ವ – ಬೆಳ್ಮಣ್ ರಸ್ತೆಯಲ್ಲಿ ಸುಮಾರು 2 ಕಿ.ಮೀ. ಸಾಗಿದ ನಂತರ ಬಲಕ್ಕೆ ತಿರುಗಿ ಸುಮಾರು 2 ಕಿ.ಮೀ. ಸಾಗಿದರೆ ಸೂಡ ಗರೋಡಿ ಇದೆ.
ಗರೋಡಿಗೆ ಎರಡು ದ್ವಾರಗಳಿದ್ದು, ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ, ಇನ್ನೊಂದು ದ್ವಾರವು ದಕ್ಷಿಣಾಭಿಮುಖವಾಗಿ ಇದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದ್ದು, ಷಡಾಧಾರ ಪ್ರತಿಷ್ಠೆ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬಂಗಾರ ಹೊದಿಸಿದ, ಪ್ರಭಾವಳಿಗೆ ಬೆಳ್ಳಿ ಹೊದಿಸಿದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಬಲಭಾಗದಲ್ಲಿ ಕೋಟಿ-ಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಪಾಪೆಯಿದೆ. ಪಕ್ಕದಲ್ಲಿ ಪಿಲ್ಚಂಡಿ ದೈವದನ ಮಣೆ ಮಂಚವಿದೆ
ಗುಂಡದ ಎಡಭಾಗದಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಪಾಪೆ, ಕುಜುಂಬ ಕಾಂಜವರ ಮರದ ಪಾಪೆ, ಇಬ್ಬರು ಮಕ್ಕಳ ಮರದ ಪಾಪೆ ಹಾಗೂ ಕೊಡಮಣಿತ್ತಾಯ ದೈವದ ಮಣೆ ಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿ ಪುರುಷರ ಮರದ ಮೂರ್ತಿ, ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿ, ಮೈಸಂದಾಯ ಹಾಗೂ ಕುಕ್ಕಿನಂತಾಯ ದೈವಗಳ ಮಣೆ ಮಂಚವಿದೆ.
ಗರೋಡಿಯ ಹೊರಗೆ ಆವರಣದೊಳಗೆ ಬಲಬದಿಯಲ್ಲಿರುವ ಗುಡಿಯಲ್ಲಿ ಪಿಲ್ಚಂಡಿ ದೈವದ ಮರದ ಪಾಪೆ ಹಾಗೂ ಮಣೆ ಮಂಚವಿದೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬ್ರಹ್ಮಸ್ಥಾನವಿದೆ.
ನಾರಾಯಣ ಪೂಜಾರಿ
2015ರಿಂದ ನಾರಾಯಣ ಪೂಜಾರಿ (60 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಸತೀಶ್ ಪೂಜಾರಿ (40 ವರ್ಷ) ಇವರು ಸಹ ಪೂ ಪೂಜನೆಯವರಾಗಿದ್ದು, ನಾರಾಯಣ ಪೂಜಾರಿಯವರಿಗೆ ಮೊದಲು ಅವರ ಹಿರಿಯರಾದ ಕೃಷ್ಣ ಪೂಜಾರಿ (ಅಣ್ಣ) ದೂಜ ಪೂಜಾರಿ (ಮಾವ) ಸೂರು ಪೂಜಾರಿ, ವೆಂಕ ಪೂಜಾರಿ, ಅಪ್ಪಣ್ಣ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು.
ಕೋಟಿ ಪೂಜಾರಿ
ಕೋಟಿ ಪೂಜಾರಿಯವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ದೂಜ ಪೂಜಾರಿ, ವೆಂಕ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಶಿರ್ವಕೋಡು ಜಯಶೀಲ ಹೆಗ್ಡೆಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ಕುಮರ ಹೆಗ್ಡೆ, ಕರುಣಾಕರ ಹೆಗ್ಡೆ, ಮುದ್ದಣ್ಣ ಹೆಗ್ಡೆಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಸಂಕ್ರಾತಿ ಪೂಜೆ, ಚೌತಿ ಪೂಜೆ, ಸೋಣ ಸಂಕ್ರಾಂತಿಯಂದು ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳ ಷಷ್ಠಿಯಂದು ಅಗೆಲು ಸೇವೆ, ಸಪ್ತಮಿಯಂದು ಬೈದೇರುಗಳ ನೇಮೋತ್ಸವ, ಅಷ್ಠಮಿಯಂದು ಜೋಗಿ ಪುರುಷ ಹಾಗೂ ಮಾಯಿಂದಾಲ್ ಕೋಲ ಸೇವೆಗಳು ನಡೆಯುತ್ತವೆ.
ಸೂಡ, ಕುಂಬ್ಳೆ, ನಂದಳಿಕೆ ಹಾಗೂ ಭಾಗಷ: ನಂದಳಿಕೆಯ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ.
2008ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಟಿಗರು ಈ ಗರೋಡಿಯ ನೃತ್ಯ ವಿಶಾದರಾಗಿ, ಸತೀಶ ಬಂಗೇರ ಸೂಡ ಇವರು ಮಡಿವಾಳರಾಗಿ, ಸುನಿಲ್ ದೇವಾಡಿಗ ಇವರು ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸೂಡ,
ಸೂಡ ಗ್ರಾಮ, ಮತ್ತು ಅಂಚೆ,
ಕಾರ್ಕಳ ತಾಲೂಕು,
ಉಡುಪಿ – 574116
ಸೂಡ ಗ್ರಾಮ, ಮತ್ತು ಅಂಚೆ,
ಕಾರ್ಕಳ ತಾಲೂಕು,
ಉಡುಪಿ – 574116
ಪೂ ಪೂಜನೆಯವರು:
ಶ್ರೀ ನಾರಾಯಣ ಪೂಜಾರಿ – 9880472393
ಸ್ಥಳ ಪಾತ್ರಿಗಳು:
ಶ್ರೀ ಕೋಟಿ ಪೂಜಾರಿ – 9008355957
ಮಾಹಿತಿ ನೀಡಿದವರು:
ಶ್ರೀ ನಾರಾಯಣ ಪೂಜಾರಿ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
19-06-2025