ಶ್ರೀ ಬ್ರಹ್ಮ ಬೈದರ್ಕಳ ಗರೋಡಿ , ಪರ್ಕಳ, ಹೆರ್ಗ ಗ್ರಾಮ
ಉಡುಪಿಯಿಂದ ಮಣಿಪಾಲ ಮಾರ್ಗವಾಗಿ ಪರ್ಕಳ ಪೇಟೆಗೆ ಬಂದು ಎಡಕ್ಕೆ ತಿರುಗಿ ಸುಮಾರು 650ಮೀ. ಸಾಗಿ ಪುನ: ಎಡಕ್ಕೆ ಸರಳೇಬೆಟ್ಟು ಮಾರ್ಗದಲ್ಲಿ 300ಮೀ.ನಲ್ಲಿ ಎಡಕ್ಕೆ ತಿರುಗಿ ಸುಮಾರು 200ಮೀ. ಸಾಗಿದರೆ ಬಲಬದಿಯಲ್ಲಿ ಪರ್ಕಳ ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು ಮುಖ್ಯದ್ವಾರ ಪೂರ್ವಾಭಿಮುಖವಾಗಿ ಇನ್ನೊಂದು ದ್ವಾರ ಪಶ್ಚಿಮ ಮುಖವಾಗಿದೆ.
ಗರೋಡಿಯ ಬ್ರಹ್ಮ ಗುಡಿಯಲ್ಲಿ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆ ಇದೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ.
ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.
ಪಿ.ಕೆ.ಶೀನ ಪೂಜಾರಿ
ಪಿ.ಕೆ.ಶೀನ ಪೂಜಾರಿ (73 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದು ಹಳೆಯಮನೆ ದಿನೇಶ್ ಶೆಟ್ಟಿ ಇವರು ಆಡಳಿತ ಮೊಕ್ತೇಸರರಾಗಿದ್ದಾರೆ. ಪಿ.ಕೆ.ಶೀನ ಪೂಜಾರಿಯವರಿಗೆ ಮೊದಲು ವಿಶ್ವನಾಥ ಪೂಜಾರಿ, ಕಿಟ್ಟ ಪೂಜಾರಿ, ತಮ್ಮಯ ಪೂಜಾರಿ, ವೆಂಕ ಪೂಜಾರಿ, ಮೊದಲಾದ ಹಿರಿಯರು ಪೂ ಪೂಜನೆಯ ಸೇವೆ ಮಾಡಿರುವರು. ದಿನೇಶ ಶೆಟ್ಟಿಯವರ ಮೊದಲು ಹಳೆಮನೆ ಸಂಜೀವ ಶೆಟ್ಟಿಯವರು ಆಡಳಿತ ಮೊಕ್ತೇಸರರಾಗಿದ್ದರು.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಆದಿತ್ಯವಾರದ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ಚೌತಿ ಪೂಜೆ, ದೀಪಾವಳಿಯಂದು ಕಂಬಕ್ಕೆ ದೀಪವಿಟ್ಟು ಪೂಜೆ ಮಾಡುವುದು, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಕೊಡಿ ತಿಂಗಳಲ್ಲಿ ಪೊಸರಿತ ಅಗೆಲ್, ತುಳಸೀ ಪೂಜೆ ನಡೆಯುತ್ತದೆ. ಸುಗ್ಗಿ ತಿಂಗಳಲ್ಲಿ (ಫೆಬ್ರವರಿ-ಮಾರ್ಚ) ಒಂದನೇ ದಿನ ಮಣ್ಣ ಮುಹೂರ್ತ, ಮರ ಮುಹೂರ್ತ, ಎರಡನೇ ದಿನ ಅಂಗಣಕ್ಕೆ ಅಂಗಣಕ್ಕೆ ಸೆಗಣಿ ಸಾರಿಸುವುದು, ಮೂರನೇ ದಿನ – ಅಗೆಲು ಸೇವೆ ಬಾಲು ಬಂಡಾರ ಗರೋಡಿಯ ಹೊರಗೆ ತಂದು ಗುಂಡದಲ್ಲಿ ಇಡುವುದು. ನಾಲ್ಕನೇ ದಿನ ಬೈದೇರುಗಳ ನೇಮ, ಐದನೇ ದಿನ – ಮಾಯಂದಾಲ್, ಜುಮಾದಿ, ಮರ್ಲಜುಮಾದಿ, ಜೋಗಿಪುರುಷ, ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. 6ನೇ ದಿನ – ಶುದ್ದದ ಅಗೆಲು ಇರುತ್ತದೆ. ಇವಲ್ಲದೆ ನೀರುಸ್ನಾನ, ಕಂಚಿಲ್ ಸೇವೆ. ಮುದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಲ್ಲಿ ಕೂಡುಕಟ್ಟಿಗೆ ಸೇರಿದ ಭಕ್ತರು ಪಾಲ್ಗೊಳ್ಳುತಾರೆ.
ಸ್ಥಿರ ಆದಾಯ ಇಲ್ಲದ ಈ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವಂತಿಗೆ, ಕಾಣಿಕೆ, ಹಾಗೂ ಸಹಾಯಧನಗಳಿಂದ ಭರಿಸುತ್ತಾರೆ.
ಹದಿನೇಳು ವರ್ಷಗಳ ಹಿಂದೆ ಅಂದರೆ 2006ರಲ್ಲಿ ಗರೋಡಿಯ ಕಾಂಕ್ರೀಟ್ ಚಪ್ಪರ ನಿರ್ಮಾಣವಾಗಿದ್ದು ಅದಕ್ಕೆ ಮೊದಲು 04-04-1971ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿತ್ತು.
ಈ ಗರೋಡಿಯ ನೃತ್ಯವಿಶಾರದರಾಗಿ ಜಯಪರವ ನೀರೆ, ಹಾಗೂ ಕಿಟ್ಟ ಪಂಬದ(ಮಾಯಂದಾಲ್ ಮತ್ತು ಜುಮಾದಿಗೆ) ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದೆ ಗರೋಡಿಗೆ ಸಂಬಂಧಪಟ್ಟ “ಕೋಟಿಚೆನ್ನಯ ವ್ಯಾಯಾಮ ಶಾಲೆ ‘’ ಯೊಂದು ಇತ್ತು. ಈಗ ಅಸ್ಥಿತ್ವದಲ್ಲಿಲ್ಲ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪರ್ಕಳ,
ಹೆರ್ಗ ಗ್ರಾಮ,
ಪರ್ಕಳ ಅಂಚೆ,
ಉಡುಪಿ 576107.
ಹೆರ್ಗ ಗ್ರಾಮ,
ಪರ್ಕಳ ಅಂಚೆ,
ಉಡುಪಿ 576107.
ಪೂ ಪೂಜನೆಯವರ ವಿಳಾಸ:
ಪಿ.ಕೆ. ಶೀನ ಪೂಜಾರಿ,
” ಪದ್ಮಶ್ರೀ ‘’ ಶೆಟ್ಟಿಬೆಟ್ಟು ಶಾಲೆಯ ಹತ್ತಿರ,
ಹೆರ್ಗ ಗ್ರಾಮ,
ಪರ್ಕಳ ಅಂಚೆ, 576107.
ಮೊಬೈಲ್: 9449367825
” ಪದ್ಮಶ್ರೀ ‘’ ಶೆಟ್ಟಿಬೆಟ್ಟು ಶಾಲೆಯ ಹತ್ತಿರ,
ಹೆರ್ಗ ಗ್ರಾಮ,
ಪರ್ಕಳ ಅಂಚೆ, 576107.
ಮೊಬೈಲ್: 9449367825
ದರ್ಶನದ ಪೂಜಾರಿಯವರ ವಿಳಾಸ:
ದಿನೇಶ್ ಪೂಜಾರಿ,
ದರ್ಶನ ಪಾತ್ರಿ,
ಮಾರುತಿ ನಗರ ಪರ್ಕಳ,
ಪರ್ಕಳ ಅಂಚೆ,
ಉಡುಪಿ 576107.
ಮೊಬೈಲ್: 9844211997
ದರ್ಶನ ಪಾತ್ರಿ,
ಮಾರುತಿ ನಗರ ಪರ್ಕಳ,
ಪರ್ಕಳ ಅಂಚೆ,
ಉಡುಪಿ 576107.
ಮೊಬೈಲ್: 9844211997
ಮಾಹಿತಿ ಸಂಗ್ರಹಿಸಿದ ದಿನಾಂಕ:
16-11-2024