Baidashree

Shri Brahma Baidarkala Garodi 80 Badagabettu

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ 80 ಬಡಗಬೆಟ್ಟು

ಉಡುಪಿಯಿಂದ ಮಣಿಪಾಲದ ಮೂಲಕ ಪರ್ಕಳ ಪೇಟೆ ತಲುಪಿ ಮುಂದೆ 80ನೇ ಬಡಗಬೆಟ್ಟು ರಸ್ತೆಗೆ ಬಲಕ್ಕೆ ತಿರುಗಿ ಸುಮಾರು 2.5 ಕಿ.ಮೀ. ಸಾಗಿದರೆ ರಸ್ತೆಯ ಬಲಭಾಗದಲ್ಲಿ 80ನೇ ಬಡಗಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸಿಗುವುದು.
ಇದೊಂದು ಪುರಾತನ ಆಯದ ಗರೋಡಿಯಾಗಿದೆ. ಷಡಾಧಾರ ಪ್ರತಿಷ್ಠೆ ಇರುವ ಈ ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಉತ್ತರ ದಿಕ್ಕಿಗೆ ಇನ್ನೊಂದು ದ್ವಾರವಿದೆ.
ಗರೋಡಿಯು ಈಗ ಜೀರ್ಣೋದ್ಧಾರದ ಹಂತದಲ್ಲಿದ್ದು, ಕಾಮಗಾರಿಗಳು ಚಾಲ್ತಿಯಲ್ಲಿವೆ.
ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆರ್ಮೆರ್, ಮೇಲೆ ಗಾಳಿ ದೇವರು, ಗುಂಡದ ಹೊರಗೆ ಎಡಭಾಗದಲ್ಲಿ ಬೈದೇರುಗಳ ಪಾಪೆ, ಮಕ್ಕಳ ಪಾಪೆ, ದೇಯಿಬೈದೆತಿ-ಮಂಚದಲ್ಲಿ, ಬಲಭಾಗದಲ್ಲಿ ಕುಜುಂಬ ಕಾಂಜವರಿಗೆ ಮಣೆಮಂಚದಲ್ಲಿ ಆರಾಧನೆಯಿದೆ. ಬ್ರಹ್ಮಗುಡಿಯ ಹೊರಗೆ ಗುರುಕಂಬ, ಜೋಗಿಪುರುಷ ಪಾಪೆ,
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಕುದುರೆಯ ಮೇಲೆ ಕುಳಿತ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಮೇಲಿನ ಅಂತಸ್ತಿನಲ್ಲಿ ಗಿಂಡೆಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಆರಾಧನೆಯಿದೆ. ಬ್ರಹ್ಮ ಗುಂಡದ ಎಡಬಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಕಂಚಿನ ಪಾಪೆಯನ್ನು ಆರಾಧಿಸುತ್ತಾರೆ.
ಬ್ರಹ್ಮ ಗುಂಡದ ಬಲಬಾಗದಲ್ಲಿ ಮಣೆ ಮಂಚದಲ್ಲಿ ಕುಜುಂಬಕಾಂಜವರ ಕಂಚಿನ ಪಾಪೆಯನ್ನು ಆರಾಧಿಸುತ್ತಾರೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜುಮಾದಿಯ ಕಂಚಿನ ಮುಖ ಹಾಗೂ ಜುಮಾದಿ ಬಂಟರಿಗೂ, ಎಡಭಾಗದಲ್ಲಿ ಮಣೆ ಮಂಚದಲ್ಲಿ ಕಂಚಿನ ಮೂರ್ತಿಯನ್ನಿಟ್ಟು ಮಾಯಂದಾಲ್ ಹಾಗೂ ಮಣೆ ಮಂಚದಲ್ಲಿ ಕೂಚಿಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಅರಸು ದೈವ (ಒಕ್ಕು ಬಲ್ಲಾಳರಿಗೆ) ಪೂಜೆ ನಡೆಯುತ್ತದೆ.
ಗರೋಡಿಯ ಒಳಗೆ ಗುರು ಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಹೊರಗೆ ಆವರಣದಲ್ಲಿ ಗುಡಿಯಲ್ಲಿ ಮಣೆ ಮಂಚದಲ್ಲಿ ಕೂಚಿಯಲ್ಲಿ ನೀರು ಹಾಗೂ ದೀಪನ್ನಿಟ್ಟು ಪಂಚ ದೈವಗಳಿಗೆ ಆರಾಧನೆ ನಡೆಯುತ್ತದೆ. ಗರೋಡಿಯ ಆವರಣದೊಳಗೆ ಅಯ್ಯ ಕಲ್ಲು, ತುಳಸೀಕಟ್ಟೆಗಳೂ ಇವೆ.

ಸುಕೇಶ ಪೂಜಾರಿ

ಸಂಜೀವ ಪೂಜಾರಿ

ಗರಡಿಮನೆ ಸುಕೇಶ ಪೂಜಾರಿ(44 ವರ್ಷ) ಇವರು ಪೂ ಪೂಜನೆಯವರಾಗಿರುವರು. ಇವರಿಗಿಂತ ಮೊದಲು ಇವರ ಹಿರಿಯರಾದ ಸಂಜೀವ ಪೂಜಾರಿ (72 ವರ್ಷ) ರಾಜು ಪೂಜಾರಿ. ತಿಮ್ಮ ಪೂಜಾರಿ, ಗುರುವ ಪೂಜಾರಿ ಮುಂತಾದವರು ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಮೂಡುಮನೆ ಅರುಣಾಚಲ ಹೆಗ್ಡೆಯವರು ಆಡಳಿತ ಮೊಕ್ತೇಸರರಾಗಿರುವರು. ಇವರು ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ ಇರುವರು. ಕಾರ್ಯದರ್ಶಿಯಾಗಿ ಪ್ರೇಮನಾಥ ಪೂಜಾರಿ ಇವರು ಕಾರ್ಯನಿರ್ವಹಿಸುತ್ತಿರುವರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರೊಇ ಕಜ್ಜಾಯ ಸೇವೆ, ಮಕರದ ದ್ವಾದಶಿಯಂದು ಅಗೆಲು ಸೇವೆ, ತ್ರಯೋದಶಿಯಂದು – ಬೈದೇರುಗಳ ನೇಮೋತ್ಸವ, ಚತುರ್ದಶಿಯಂದು ಮಾಯಂದಾಲ್, ಜೋಗಿಪುರುಷ, ಹಾಗೂ ಪಂಚ ದೈವಗಳಾದ ಪಡಿಕಂದಾಯ, ಪಿಲ್ಚಂಡಿ, ಪಂಜುರ್ಲಿ, ಜುಮಾದಿ ಮತ್ತು ಬಂಟ, ಹಾಗೂ ರಾಜನ್ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. ನೀರುಸ್ನಾನ, ಕಂಚಿಲ್ ಶೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆದಿಟ್ಟ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಹರಕೆಯ ಸೇವೆಗಳು, ಗರೋಡಿಯಲ್ಲಿ ನಡೆಯುತ್ತವೆ. ಗರೋಡಿಗೆ ಸ್ಥಿರ ಆದಾಯವಿಲ್ಲದೆ ಖರ್ಚು ವೆಚ್ಚಗಳನ್ನು ಹರಕೆ, ವಂತಿಗೆ, ಸಹಾಯ ಧನಗಳಿಂದ ಭರಿಸಲಾಗಿತ್ತಿದೆ.
ಈಗ 2024 – 2025 ರಲ್ಲಿ ಜಿಣೋದ್ಧಾರಗೊಳ್ಳುತ್ತಿರುವ ಈ ಗರೋಡಿಯು ಹಿಂದೆ 2000 ಹಾಗೂ 1942ನೇ ವರ್ಷಗಳಲ್ಲಿ ಜೀರ್ಣೋದ್ಧಾರ ಗೊಂಡಿತ್ತು.
ಗರೋಡಿಯ ಸೇವೆಯವರಾಗಿ ಜಯ ಪರವ ನೀರೆ, ಹಾಗೂ ಬೊಗ್ಗು ಪರವ ಮೂಡುಬೆಳ್ಳೆ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟಂತೆ “ ಬಿಲ್ಲವ ಜನ ಜಾಗ್ರತಿ ಸಮಿತಿ” ಎಂಬ ಸಂಸ್ಥೆಯು ಕೆಲಸ ಮಾಡುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, 80 ಬಡಗಬೆಟ್ಟು,
ಬಡಗುಬೆಟ್ಟು ಅಂಚೆ,
ಉಡುಪಿ ತಾಲೂಕು – 576107.

ಆಡಳಿತ ಸಮಿತಿ:

ಅಧ್ಯಕ್ಷರು ಅರುಣಾಚಲ ಹೆಗ್ಡೆ
9113299198 ಕಾರ್ಯದರ್ಶಿಪ್ರೇಮನಾಥ ಪೂಜಾರಿ
944905906

ಪೂಪೂಜನೆಯವರ ವಿಳಾಸ:

ಸುಕೇಶ್ ಪೂಜಾರಿ,
ಗರಡಿ ಮನೆ, 80 ಬಡಗಬೆಟ್ಟು , ಬಡಗಬೆಟ್ಟು ಅಂಚೆ.
ಮೊಬೈಲ್: ನಂ. 9964243488

ಸ್ಥಳ ಪಾತ್ರಿಯವರ ವಿಳಾಸ:

ಸುಧಾಕರ ಪೂಜಾರಿ,
ದರ್ಶನ ಪಾತ್ರಿ, ಹಾಲಂಬಿ, 80 ಬಡಗುಬೆಟ್ಟು,
ಬಡಗುಬೆಟ್ಟು ಅಂಚೆ,
ಉಡುಪಿ – 576107
ಮೊಬೈಲ್ ನಂ: 9844676017

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024