Baidashree

Shree Koti Chennayyara panjurli Garodi, Mudkeri Basruru

ಶ್ರೀ ಕೋಟಿ ಚೆನ್ನಯ್ಯರ ಪಂಜುರ್ಲಿ ಗರೋಡಿ, ಮೂಡ್ಕೇರಿ ಬಸ್ರೂರು

ಉಡುಪಿಯಿಂದ ಕುಂದಾಪುರ ತಲುಪಿ ಬಸ್ರೂರು ಮೂರುಕೈ ಬಸ್ ನಿಲ್ದಾಣದ ಹತ್ತಿರ ಕುಂದಾಪುರ ಶಿವಮೊಗ್ಗ ರಸ್ತೆಗೆ ಬಲಕ್ಕೆ ತಿರುಗಿ ಸುಮಾರು 6ಕಿ.ಮೀ. ದೂರದಲ್ಲಿ ಬಸ್ರೂರಿನಲ್ಲಿ ಎಡಕ್ಕೆ ತಿರುಗಿ 800ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿ ಈ ಗರೋಡಿ ಇದೆ.
ಬ್ರಹ್ಮ ಗುಡಿಯ ಹೊರಗೆ ಬಲಬದಿಯಲ್ಲಿ ಮಾಸ್ತಿಯಮ್ಮ ಊಮಲ್ತಿ ಹಾಗೂ ಬೊಬ್ಬರ್ಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಆಂಜನೇಯ ವರಾಹ ಪಂಜುರ್ಲಿ ಹಾಗೂ ವಾರಾಹಿ ದೈವಗಳ ಆರಾಧನೆಯಿದೆ.
ಗರೋಡಿಗೆ ಪೂರ್ವಾಭಿಮುಖವಾಗಿ ಒಂದು ದ್ವಾರವಿದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿರುವ ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಲಕ್ಷೀವೆಂಕಟೇಶ ಹಾಗೂ ಪದ್ಮಾವತಿಯರ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಈಶ್ವರ ದೇವರಿಗೆ ಪೂಜೆಯಿದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ದೇಯಿ ಬೈದೆತಿ, ಚಿಟುಕರ, ಕೋಟಿ, ಚಿಟುಕರ, ಚೆನ್ನಯ್ಯ ಚಿಟುಕರ ಹಾಗೂ ನಿಗಳರ ಮರದ ಮೂರ್ತಿಗಳಿವೆ.
ಗುಂಡದ ಬಲ ಭಾಗದಲ್ಲಿ ಪೈಯ್ಯ ಬೈದ್ಯರು, ಚಿಟುಕರ, ಪಾತ್ರಿ ಬಿಂಬ ಹಾಗೂ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಮೂರ್ತಿಗಳಿವೆ.
ಬ್ರಹ್ಮ ಗುಡಿಯ ಹೊರಗೆ ಬಲಬದಿಯಲ್ಲಿ ಮಾಸ್ತಿಯಮ್ಮ ಊಮಲ್ತಿ ಹಾಗೂ ಬೊಬ್ಬರ್ಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಆಂಜನೇಯ ವರಾಹ ಪಂಜುರ್ಲಿ ಹಾಗೂ ವಾರಾಹಿ ದೈವಗಳ ಆರಾಧನೆಯಿದೆ.
ಪಕ್ಕದಲ್ಲಿ ಧೂಮಾವತಿ, ಬಾಲಯ್ಯ, ಮೈಂದಾಲ್ತಿ, ಬಾಲಯ್ಯ, ದೊಟ್ಟೆಕಾಲು ಚಿಕ್ಕು, ಜೋಡು ಹೈಗುಳಿ, ನಂದಿಕೇಶ್ವರ, ಒಂಟಿ ಹೈಗುಳಿ ಮೋಡ, ಮರ್ಲು ಚಿಕ್ಕು, ರಕ್ತ ಹೈಗುಳಿ ಮೋಡ, ಚಿನಿಕರ ಭೂತ ಅಮ್ಮನವರ ದೈವಗಳ ಆರಾಧನೆಯಿದೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಗಣಕೂಟ, ಜೋಡು ಹೈಗುಳಿ, ಜೋಗಿ ಪುರುಷ, ಕಳುವಿನ ಚಿಕ್ಕು ದೈವಗಳ ಮರದ ಮೂರ್ತಿಯಿದೆ.
ಗರೋಡಿಯ ಬಲಬದಿಯಲ್ಲಿರುವ ಗುಡಿಯೊಂದರಲ್ಲಿ ಶಿವರಾಯ ಹಾಗೂ ಚಿಟುಕರ ಮರದ ಮೂರ್ತಿಗಳಿವೆ. ಇನ್ನೊಂದು ಗುಡಿಯಲ್ಲಿ ವೀರಮಾಸ್ತಿ, ಮಹಾಕಾಳಿ ಹಾಗೂ ಹೊರಸುತ್ತಿನ ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಅಂಗಣದಲ್ಲಿ ತುಳಸೀಕಟ್ಟೆ ಹಾಗೂ ಕ್ಷೇತ್ರಪಾಲ ಕಟ್ಟೆ ಹಾಗೂ ಅಮ್ಮನವರ ಕಟ್ಟೆಗಳಿವೆ.
ಇನ್ನೊಂದು ಗುಡಿಯಲ್ಲಿ ಸ್ವಾಮಿ ಹಾಗೂ ನಾಗದೇವರಿಗೆ ಪೂಜೆ ನಡೆಯುತ್ತದೆ.

ಶಂಕರ ಪೂಜಾರಿ

ಪ್ರಶಾಂತ ಪೂಜಾರಿ

ಶಂಕರ ಪೂಜಾರಿ (76 ವರ್ಷ ಪ್ರಾಯ), ರಾಘವೇಂದ್ರ ಪೂಜಾರಿ (42 ವರ್ಷ), ಪ್ರಶಾಂತ ಪೂಜಾರಿ (40 ವರ್ಷ) ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಹಿರಿಯರಾದ ನಂದು ಪೂಜಾರಿ, ವೆಂಕಟ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.

ಅಶೋಕ ಪೂಜಾರಿ

ಅಶೋಕ ಪೂಜಾರಿ (48 ವರ್ಷ) ಯವರು ಇಲ್ಲಿಯ ಸ್ಥಳ ಪಾತ್ರಿಗಳು. ಹಿಂದೆ ಗೋಪಾಲ ಪೂಜಾರಿ, ಕೃಷ್ಣ ಪೂಜಾರಿ, ಚೆನ್ನಯ್ಯ ಪೂಜಾರಿಯವರು ಈ ಗರೋಡಿಯ ಸ್ಥಳ ಪಾತ್ರಿಗಳಾಗಿದ್ದರು.
14ಜನ ಸದಸ್ಯರಿರುವ “ಬಸ್ರೂರು ಮೂಡ್ಕೇರಿ ಗರೋಡಿ ಮನೆ ಅಳಿಯ ಸಂತಾನ ಕುಟುಂಬ ಟ್ರಸ್ಟ್” ಎಂಬ ಟ್ರಸ್ಟ್ ಆಡಳಿತ ನೋಡಿ ಕೊಳ್ಳುತ್ತಿದ್ದು, ಶಂಕರ ಪೂಜಾರಿಯವರು ಗೌರವ ಅಧ್ಯಕ್ಷರಾಗಿಯೂ, ಅಪ್ಪು ಪೂಜಾರಿಯವರು ಅಧ್ಯಕ್ಷರಾಗಿಯೂ, ವಿಜಯ ಇವರು ಕಾರ್ಯದರ್ಶಿಯಾಗಿಯೂ ಸೇವೆ ಮಾಡುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತಿದೆ. ಸಂಕ್ರಾಂತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ನವರಾತ್ರಿಯಲ್ಲಿ ನವಮಿ ಪೂಜೆ, ನವೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಮರುದಿನ ಎಲ್ಲಾ ದೈವಗಳ ದರ್ಶನ ಸೇವೆ ನಡೆಯುತ್ತದೆ.
ಬಸ್ರೂರು, ಕಂದಾವರ, ಕೋಣಿ, ಜಪ್ತಿ ಹಾಗೂ ಬಳ್ಕೂರು ಭಾಗದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಭಕ್ತ ಜನರ ಕಾಣಿಕೆ ಸಹಾಯ ಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸುಮಾರು ಮೂರು ಎಕರೆ ಜಮೀನು ಇದೆ. 1967ರಲ್ಲಿ, 1983ರಲ್ಲಿ ಗರೋಡಿಯ ಜೀಣೋದ್ಧಾರವಾಗಿದ್ದು, ಸದ್ಯ ಪುನ: ಜೀರ್ಣೋದ್ಧಾರದ ಯೋಜನೆಯಿದೆ.
ಕುಷ್ಟ ಮಡಿವಾಳ ಕುಂದಾಪುರ ಇವರು ಗರೋಡಿಯ ಮಡಿವಾಳರಾಗಿ, ಭಾಸ್ಕರ ದೇವಾಡಿಗ ಬಸ್ರೂರು ಇವರು ವಾದ್ಯದವರಾಗಿ, ವೀರ ಬಸ್ರೂರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಕೋಟಿ ಚೆನ್ನಯರ ಪಂಜುರ್ಲಿ ಗರೋಡಿ,
ಮೂಡ್ಕೇರಿ, ಬಸ್ರೂರು ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576211.

ಗರೋಡಿಯ ಅರ್ಚಕರು:

ಶಂಕರ ಪೂಜಾರಿ – 9686125686
ರಾಘವೇಂದ್ರ ಪೂಜಾರಿ – 9535652787
ಪ್ರಶಾಂತ ಪೂಜಾರಿ – 8971884487

ಪಾತ್ರಿ:

ಅಶೋಕ ಪೂಜಾರಿ – 9741184139

ಮಾಹಿತಿ ನೀಡಿದವರು :

ಶಂಕರ ಪೂಜಾರಿ
ಪ್ರಶಾಂತ ಪೂಜಾರಿ
ಅಶೋಕ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.04.2025