Baidashree

Shree Brahma Baidarkala & Shivaraya Garodi, Handadi

ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರೋಡಿ, ಹಂದಾಡಿ.

ಉಡುಪಿಯಿಂದ ಬ್ರಹ್ಮಾವರ ತಲುಪಿ, ಬ್ರಹ್ಮಾವರ ಪೇಟೆಯಿಂದ ಸುಮಾರು 1.2ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬಲಕ್ಕೆ ತಿರುಗಿ 1.2ಕಿ.ಮೀ ದೂರ ಸಾಗಿದರೆ ಹಂದಾಡಿ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಷಡಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಉಪಾಸನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿ-ಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಪಂಜುರ್ಲಿ ದೈವದ ಸಾನಿಧ್ಯವಿದೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಹುಲಿಚೌಂಡಿ, ಜುಮಾದಿ, ಬಂಟ, ಮೈಂದಾಳ್ತಿ, ಬಾಲಯ್ಯ, ಪಂಜುರ್ಲಿ, ಚಿಕ್ಕಮ್ಮ, ಹಾಗೂ ಹೈಗುಳಿ ದೈವಗಳಿಗೆ ಪೂಜೆ ನಡೆಯುತ್ತದೆ.
ಬ್ರಹ್ಮಗುಡಿಗೆ ಎದುರುಮುಖವಾಗಿ ನಂದಿ, ಜೋಗಿಪುರುಷ, ಚಾವುಂಡಾ, ಗುರುಕಂಬ, ಸ್ಥಳ ಚಿಕ್ಕಮ್ಮ, ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಎರಡು ಮೂರ್ತಿಗಳಿವೆ.
ಗರೋಡಿಯ ಹೆಬ್ಬಾಗಿಲಿಗೆ ತಾಗಿಕೊಂಡಿರುವ ಗುಡಿಯಲ್ಲಿ ಶಿವರಾಯ, ಬಂಟ ಹಾಗೂ ಕಾಳಮ್ಮ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ ಕಟ್ಟೆ, ತುಳಸಿಕಟ್ಟೆ, ಬಲಿಕಲ್ಲುಗಳಿವೆ.
ಗರೋಡಿಯ ಪಕ್ಕದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಹೆರಿಯ ಪೂಜಾರಿ

ಶ್ರೀಕಾಂತ ಪೂಜಾರಿ

ಪ್ರಕಾಶ ಪೂಜಾರಿ

ರಮೇಶ ಪೂಜಾರಿ

ಅಶೋಕ ಪೂಜಾರಿ

ಹೆರಿಯ ಪೂಜಾರಿ (75 ವರ್ಷ), ಶ್ರೀಕಾಂತ ಪೂಜಾರಿ (40 ವರ್ಷ), ಪ್ರಕಾಶ ಪೂಜಾರಿ (50 ವರ್ಷ), ರಮೇಶ ಪೂಜಾರಿ (50 ವರ್ಷ), ಅಶೋಕ ಪೂಜಾರಿ (38 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಸೋಮ ಪೂಜಾರಿ, ಜಬ್ಬ ಪೂಜಾರಿ, ರಾಮ ಪೂಜಾರಿಯವರು ಗರೋಡಿಯ ಅರ್ಚಕರಾಗಿದ್ದರು.
ಸೀನ ಪೂಜಾರಿ (75 ವರ್ಷ) ಸುಧೀರ ಪೂಜಾರಿ (50 ವರ್ಷ) ಇವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಶಾಸ ಪೂಜಾರಿ, ಬಾಬಿ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ರಾಜೇಶ್ ಶೆಟ್ಟಿ ಅಧ್ಯಕ್ಷರಾಗಿ, ಕರುಣಾಕರ ಶೆಟ್ಟಿ ಕಾರ್ಯದರ್ಶಿಯಾಗಿ, ಶೇಖರ ಪೂಜಾರಿ ಕೋಶಾಧಿಕಾರಿಯಾಗಿ, ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಆದಿತ್ಯವಾರ, ಶುಕ್ರವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಮಾರ್ಚ್ ತಿಂಗಳಲ್ಲಿ ಅಗೆಲು ಸೇವೆ, ಮರುದಿನ ಹಾಲು ಹಬ್ಬ, ತುಲಾಭಾರ ಸೇವೆಗಳು ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಬೈದರ್ಕಳ ನೇಮ, ಶಿವರಾಯ ಕೋಲ ಸೇವೆಗಳು ನಡೆಯುತ್ತವೆ.
ಹಂದಾಡಿ, ಕುಂಬ್ರಗೋಡು, ಹಾಗೂ ಬೆಣ್ಣೆ ಕುದ್ರುವಿನ ಜನ ಈ ಗರೋಡಿಯಲ್ಲಿ ಕೂಡುಕಟ್ಟಿಗೆ ಸೇರಿದವರಾಗಿದ್ದು, ತುಲಾಭಾರ ಸೇವೆ, ಕಾಣಿಕೆ ಸೇವೆ ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 84ಸೆಂಟ್ಸ ಜಾಗವಿದ್ದು, ಗರೋಡಿಯು 2013ರಲ್ಲಿ ಜೀರ್ಣೋದ್ದಾರಗೊಂಡಿದೆ.
ಗುಂಡ ಪರವ ಚೇರ್ಕಾಡಿ ಇವರು ಗರೋಡಿಯ ನೃತ್ಯವಿಶಾರದರಾಗಿ, ಬಾಲಕೃಷ್ಣ ಮಡಿವಾಳರಾಗಿ, ಗಣೇಶ ದೇವಾಡಿಗ ಬಾರ್ಕೂರು ಇವರು ವಾಧ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರೋಡಿ ಹಂದಾಡಿ,
ಬ್ರಹ್ಮಾವರ ತಾಲೂಕು – 576213.

ಗರೋಡಿಯ ಅರ್ಚಕರು:

ಶ್ರೀಕಾಂತ ಪೂಜಾರಿ – 8861885814
ಪ್ರಕಾಶ ಪೂಜಾರಿ – 9964023518
ರಮೇಶ ಪೂಜಾರಿ – 994513741
ಅಶೋಕ ಪೂಜಾರಿ – 9741633406

ಮಾಹಿತಿ ನೀಡಿದವರು

ರಮೇಶ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.04.2025