Baidashree

Shree Dharmarasu, Kodamanittayi, Kukkinantayi, Brahma Baidarkala Garodi, Kellaputtige Dharegudde

ಶ್ರೀ ಧರ್ಮರಸು, ಕೊಡಿಮಣಿತ್ತಾಯಿ, ಕುಕ್ಕಿನಂತಾಯಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕೆಲ್ಲಪುತ್ತಿಗೆ ಧರೆಗುಡ್ಡೆ

ಉಡುಪಿಯಿಂದ ಕಾರ್ಕಳ ತಲುಪಿ, ಕಾರ್ಕಳ – ಮೂಡುಬಿದಿರೆ ಹೆದ್ದಾರಿಯಲ್ಲಿ ಸುಮಾರು 3 ಕಿ. ಮಿ. ನಂತರ ಬಲಕ್ಕೆ ತಿರುಗಿ ಬೆಳುವಾಯಿ – ಅಳಿಯೂರು ರಸ್ತೆಯಲ್ಲಿ ಸುಮಾರು 7 ಕಿ. ಮೀ. ಸಾಗಿದರೆ ಈ ಗರೋಡಿ ಸಿಗುವುದು.

Daregudde-Kellaputtige-Garadi-1
Daregudde-Kellaputtige-Garadi-2
Daregudde-Kellaputtige-Garadi-3
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
Daregudde-Kellaputtige-Garadi-4
ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡವಿದ್ದು, ನಾಗ ಬ್ರಹ್ಮರ ಮೂರ್ತಿ ಇದೆ. ಮಣೆ ಮಂಚದಲ್ಲಿ ಕೋಟಿ – ಚೆನ್ನಯರ ಮೂರ್ತಿಗಳಿವೆ.
Daregudde-Kellaputtige-Garadi-6
ಗರೋಡಿಗೆ ಎದುರಿಗೆ ಇರುವ ಗುಡಿಯಲ್ಲಿ ಮಾಯಂದಾಲ್ ಮರದ ಮೂರ್ತಿ ಇದೆ.
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಸಾನಿಧ್ಯವಿದೆ. ಪಕ್ಕದಲ್ಲಿ ದೈವರಸು ದೈವದ ಕಟ್ಟೆ ಇದೆ. ದ್ವಜಸ್ಥಂಭ, ಅಜೆಕಾಯಿ ಕಲ್ಲುಗಳೂ ಇದೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
ಅಶೋಕ ಪೂಜಾರಿ, ಸುನಿಲ್ ಪೂಜಾರಿಯವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಜಿನ್ನಪ್ಪ ಪೂಜಾರಿ, ಶೇಖರ ಪೂಜಾರಿಯವರು ಇಲ್ಲಿಯ ಪೂ ಪೂಜನೆಯ ಸೇವೆ ಮಾಡಿದ್ದರು. ಅಶೋಕ ಪೂಜಾರಿ ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಯಾಗಿಯೂ ಸೇವೆ ಮಾಡುತ್ತಿದ್ದಾರೆ. ನವೀನ್ಚಂದ್ರ ಚೌಟರವರು ಇಲ್ಲಿಯ ಮೊಕ್ತೇಸರಾಗಿದ್ದಾರೆ. ಹಿಂದೆ ಕೆ.ಜೀವಂದರ್ ಚೌಟರವರು ಇಲ್ಲಿಯ ಮೊಕ್ತೇಸರಾಗಿದ್ದರು.
ಗರೋಡಿಯಲ್ಲಿ ಸೋಣ ಸಂಕ್ರಾಂತಿಯಂದು ಪೂಜೆ, ದೀಪಾವಳಿಯಂದು ದೀಪ ಇಟ್ಟು ಪ್ರಾರ್ಥನೆ ಮಾಡುವ ಕ್ರಮ ಇದೆ. ಪ್ರತೀ ವರ್ಷ ಸೋಣ ತಿಂಗಳ ಹುಣ್ಣಿಮೆಯಂದು ಕುಕ್ಕಿನಂತಾಯ, ಕೊಡಮಣಿತ್ತಾಯ ದರ್ಶನ, ಬೈದೇರುಗಳಿಗೆ ಸಂಕ್ರಾಂತಿ ಪೂಜೆ (ಪಂಚ ಕಜ್ಜಾಯ) ಸೇವೆ ನಡೆಯುತ್ತದೆ. ಪ್ರತೀ ವರ್ಷ ಮಾರ್ಚ ತಿಂಗಳಲ್ಲಿ ಸುಗ್ಗಿ ತಿಂಗಳ ಅಮಾವಾಸ್ಯೆಯ ನಂತರದ ಸಪ್ತಮಿಯಂದು ಭಂಡಾರ ಬಂದು ದ್ವಜಾರೋಹಣ ಮಾಡಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ ನಡೆಯುತ್ತದೆ. ಮರುದಿನ ಬೈದೇರುಗಳ ನೇಮ, ಮಾಯಂದಾಲ್, ಕೋಲ, ಜೋಗಿಪುರುಷರ ಕೋಲ, ನಡೆದು ಅದರ ಮರುದಿನ ಧ್ವಜಾವರೋಣ ಮಾಡಿ ಭಂಡಾರ ವಾಪಾಸು ಹೋದ ನಂತರ ಕುರಿ ತಂಬಿಲ ಸೇವೆ ನಡೆಯುತ್ತದೆ.
ಕೆಲ್ಲಪುತ್ತಿಗೆ ಧರೆಗುಡ್ಡೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಗೆ ಸುಮಾರು 22 ಸೆಂಟ್ಸ ಜಾಗವಿದ್ದು, 2002ರಲ್ಲಿ ಗರೋಡಿಯು ಜೀರ್ಣೋದ್ಧಾರಗೊಂಡಿದೆ.
ವೆಂಕಪ್ಪ ಪರವ ಕೊಣಾಜೆ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾದರಾಗಿ ಅಪ್ಪು ಮಡಿವಾಳರು ಮಡಿವಾಳರಾಗಿ, ರಮೇಶ ಮೈಲಿ ವಾಧ್ಯದವರಾಗಿ, ವಿಶ್ವನಾಥ ಕೆಲ್ಲಪುತ್ತಿಗೆ ಡೋಲಿನವರಾಗಿ ಸೇವೆ ಮಾಡುತ್ತಿದ್ದಾರೆ.
Daregudde-Kellaputtige-Garadi-8

ಮಾಹಿತಿ ನೀಡಿದವರು ಮತ್ತು ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕೆಲ್ಲಪುತ್ತಿಗೆ ಧರೆಗುಡ್ಡೆ,
ಮೂಡಬಿದಿರೆ ತಾಲೂಕು,
ದ.ಕ.ಜಿಲ್ಲೆ

ಪೂ ಪೂಜನೆಯವರು:

ಅಶೋಕ ಸುವರ್ಣ – 9901659939

ಮಾಹಿತಿ ನೀಡಿದವರು:

ಸುಭಾಶ್ಚಂದ್ರ ಚೌಟ – 9980513125, 8971454727

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

09-12-2025