Baidashree

Shree Brahma Baidarkala Garodi, Kallugudde

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಲ್ಲುಗುಡ್ಡೆ

ಉಡುಪಿಯಿಂದ ಕಾಪು ಶಿರ್ವ ರಸ್ತೆಯಲ್ಲಿ ಮಜೂರಿನ ನಂತರ ಎಡಕ್ಕೆ ತಿರುಗಿ ಕಲ್ಲುಗುಡ್ಡೆ ರಸ್ತೆಯಲ್ಲಿ 1.5ಕಿ.ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿ ಕಲ್ಲುಗುಡ್ಡೆ ಗರೋಡಿ ಇದೆ.
ಇದು ಆಯದ ಗರೋಡಿ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ, ಇನ್ನೊಂದು ದ್ವಾರವು ಪಶ್ಚಿಮಾಭಿಮುಖವಗಿಯೂ ಇದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯಲ್ಲಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕಲ್ಲುಗುಡ್ಡೆಯ ಅನಂತ ಬಲ್ಲಾಳ ಎಂಬ ಜೈನ ವಂಶಸ್ಥರು ಕೇಂಜದಲ್ಲಿ ಗರೋಡಿ ಕಟ್ಟುವಾಗ ವಿವಾದ ಬಂದುದರಿಂದಾಗಿ ಕಲ್ಲುಗುಡ್ಡೆಯಲ್ಲಿಯೇ ಗರೋಡಿ ಸ್ಥಾಪಿಸಿದರಂತೆ. ಕೇಂಜದಲ್ಲಿ ಜಗಳವಾಡಿ ಬಂದುದರಿಂದ ಬೈದೇರುಗಳು ಅವರ ಬೆನ್ನು ಬಿಡದೆ ಈ ಗರೋಡಿ ಸ್ಥಾಪನೆ ಮಾಡಿಸಿದರೆಂಬುದು ಪ್ರತೀತಿ.
ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಬೆಳ್ಳಿ ಮುಚ್ಚಿದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಆರಾಧನೆ ಇದೆ. ಗುಂಡದ ಎಡಭಾಗದಲ್ಲಿ ಉಯ್ಯಾಲೆಯಲ್ಲಿ ಕೋಟಿಚೆನ್ನಯರಿಗೂ ಬಲಬಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರಿಗೂ ಪೂಜೆ ಸಲ್ಲುತ್ತದೆ. ಬ್ರಹ್ಮ ಗುಡಿಯ ಹೊರಗೆ ಎಡಭಾಗದಲ್ಲಿ ಮಣೆ ಮಂಚದಲ್ಲಿ ಜಾರಂದಾಯ ಹಾಗೂ ಕೊಡಮಣಿತ್ತಾಯ ದೈವಗಳಿಗೂ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಪಿಲ್ಚಂಡಿ ದೈವಗಳಿಗೂ ಪೂಜೆ ನಡೆಯುತ್ತದೆ. ಗುಂಡದ ಗರೋಡಿಯ ಒಳಗೆ ಬಡಗು ದಿಕ್ಕಿನಲ್ಲಿ ಗುರು ಕಂಬವಿದೆ.
ಗರೋಡಿಯ ಹೊರಾಂಗಣದಲ್ಲಿ ಗುಡಿಯೊಳಗೆ ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆ ಇದೆ. ಅಯ್ಯಕಲ್ಲು , ತುಳಸೀಕಟ್ಟೆ, ಹಾಗೂ ದೀಪದ ಕಂಬಗಲೂ ಇವೆ.
ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬ್ರಹ್ಮಸ್ಥಾನವೂ ಇದೆ.
ಗರಡಿ ಮನೆ ದಿನೇಶ್ ಪೂಜಾರಿ (50 ವರ್ಷ ಪ್ರಾಯ) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗಿಂತ ಮೊದಲು ಹಿರಿಯರಾದ ಶಿವರಾಮ ಪೂಜಾರಿ, ಹಿರಿಯಣ್ಣ ಪೂಜಾರಿ ಪೂ ಪೂಜನೆಯ ಸೇವೆ ಮಾಡಿದ್ದರು.

ಚಂದ್ರ ಕಾಂತ ಪೂಜಾರಿ

ಚಂದ್ರ ಕಾಂತ ಪೂಜಾರಿ(67 ವರ್ಷ ಪ್ರಾಯ) ಇವರು ಇಲ್ಲಿಯ ಬೈದೇರುಗಳ ದರ್ಶನದ ಸ್ಥಳ ಪಾತ್ರಿ. ಕಲ್ಲುಗುಡ್ಡೆ ಬರ್ಕೆಮನೆ ವಸಂತ ಶೆಟ್ಟಿ ಹಾಗೂ ಬರ್ಪಾಣಿ ಸುಧೀರ್ ಶೆಟ್ಟಿ ಇವರುಗಳು ಇಲ್ಲಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರ ಕಟ್ಟುವುದು, ಪುಯಿಂತೆಲ್(ಜನವರಿ – ಫೆಬ್ರವರಿ) ತಿಂಗಳಲ್ಲಿ ಪ್ರತಿ ವರ್ಷವೂ ಅಗೆಲ್ ಸೇವೆ, ಬೈದೇರುಗಳ ನೇಮೋತ್ಸವ, ಜೋಗಿ ಪುರುಷ, ಮಾಯಂದಾಲ್ ಕೋಲ ಹಾಗೂ ಶುದ್ದದ ಅಗೆಲ್ ಸೇವೆ ನಡೆಯುತ್ತದೆ. ಊರವರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಎಲ್ಲಾ ಕಾರ್ಯಗಳ ವೆಚ್ಚವನ್ನು ಭರಿಸಲಾಗುತ್ತಿದೆ.
ಕಲ್ಲುಗುಡ್ಡೆ, ಹೇರೂರು, ಪಾದೂರು, (ಭಾಗಶಃ ಕರಂದಾಡಿ, ಮುಡುಂಬು, ಉಂಡಾರು ಗ್ರಾಮದ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದಾರೆ. ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಮುಂತಾದ ಹರಕೆ ಸೇವೆಗಳಲ್ಲಿ ಕೂಡು ಕಟ್ಟಿಗೆ ಸೇರಿದ ಜನರು ಭಾಗಿಯಾಗುತ್ತಾರೆ.
ಇತ್ತೀಚೆಗೆ 22-01-2011ರಲ್ಲಿ ಈ ಗರೋಡಿಯು ಜೀರ್ಣೋದ್ಧಾರಗೊಂಡಿದ್ದು ಹಿಂದೆ 1981ರಲ್ಲಿ ಜೀರ್ಣೋದ್ಧಾರವಾಗಿದೆ.
ಗರೋಡಿಯ ನೃತ್ಯ ವಿಶಾರದರಾಗಿ ಬೊಗ್ಗು ಪರವ ಮೂಡುಬೆಳ್ಳೆ, ಮಡಿವಾಳರಾಗಿ ಸುನೀಲ್ ಮಡಿವಾಳ ಕೊಮಬಗುಡ್ಡೆ, ವಾದ್ಯದವರಾಗಿ ಶೇಖರ ಸೇರಿಗಾರ ಬೆಳಿಯಾಲು, ಇವರುಗಳು ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ “ಶ್ರೀ ಬ್ರಹ್ಮ ಬೈದರ್ಕಳ ಕಲಾ ಸಂಘ‘’ ಎಂಬ ಸಂಘ ಕಾರ್ಯನಿರ್ವಹಿಸುತ್ತಿದ್ದು, ಚಂದ್ರಕಾಂತ ಪೂಜಾರಿಯವರು ಅದ್ಯಕ್ಷರಾಗಿದ್ದಾರೆ. ಅರವಿಂದ ಕಲ್ಲುಗುಡ್ಡೆ ಹಾಗೂ ರಮಾನಂದ ಇವರುಗಳು ಕರ್ಯದರ್ಶಿಗಳಾಗಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಕಲ್ಲುಗುಡ್ಡೆ ಗ್ರಾಮ, 92ನೇ ಹೇರೂರು,
ಬಂಟಕಲ್ಲು ಅಂಚೆ, ಕಾಪು ತಾಲೂಕು,
ಉಡುಪಿ. 574115.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಕಲ್ಲುಗುಡ್ಡೆ ಗ್ರಾಮ, 92ನೇ ಹೇರೂರು,
ಬಂಟಕಲ್ಲು ಅಂಚೆ, ಕಾಪು ತಾಲೂಕು,
ಉಡುಪಿ. 574115.

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024

Shri Brahma Baidarkala Garodi 80 Badagabettu

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ 80 ಬಡಗಬೆಟ್ಟು

ಉಡುಪಿಯಿಂದ ಮಣಿಪಾಲದ ಮೂಲಕ ಪರ್ಕಳ ಪೇಟೆ ತಲುಪಿ ಮುಂದೆ 80ನೇ ಬಡಗಬೆಟ್ಟು ರಸ್ತೆಗೆ ಬಲಕ್ಕೆ ತಿರುಗಿ ಸುಮಾರು 2.5 ಕಿ.ಮೀ. ಸಾಗಿದರೆ ರಸ್ತೆಯ ಬಲಭಾಗದಲ್ಲಿ 80ನೇ ಬಡಗಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸಿಗುವುದು.
ಇದೊಂದು ಪುರಾತನ ಆಯದ ಗರೋಡಿಯಾಗಿದೆ. ಷಡಾಧಾರ ಪ್ರತಿಷ್ಠೆ ಇರುವ ಈ ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಉತ್ತರ ದಿಕ್ಕಿಗೆ ಇನ್ನೊಂದು ದ್ವಾರವಿದೆ.
ಗರೋಡಿಯು ಈಗ ಜೀರ್ಣೋದ್ಧಾರದ ಹಂತದಲ್ಲಿದ್ದು, ಕಾಮಗಾರಿಗಳು ಚಾಲ್ತಿಯಲ್ಲಿವೆ.
ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆರ್ಮೆರ್, ಮೇಲೆ ಗಾಳಿ ದೇವರು, ಗುಂಡದ ಹೊರಗೆ ಎಡಭಾಗದಲ್ಲಿ ಬೈದೇರುಗಳ ಪಾಪೆ, ಮಕ್ಕಳ ಪಾಪೆ, ದೇಯಿಬೈದೆತಿ-ಮಂಚದಲ್ಲಿ, ಬಲಭಾಗದಲ್ಲಿ ಕುಜುಂಬ ಕಾಂಜವರಿಗೆ ಮಣೆಮಂಚದಲ್ಲಿ ಆರಾಧನೆಯಿದೆ. ಬ್ರಹ್ಮಗುಡಿಯ ಹೊರಗೆ ಗುರುಕಂಬ, ಜೋಗಿಪುರುಷ ಪಾಪೆ,
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಕುದುರೆಯ ಮೇಲೆ ಕುಳಿತ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಮೇಲಿನ ಅಂತಸ್ತಿನಲ್ಲಿ ಗಿಂಡೆಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಆರಾಧನೆಯಿದೆ. ಬ್ರಹ್ಮ ಗುಂಡದ ಎಡಬಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಕಂಚಿನ ಪಾಪೆಯನ್ನು ಆರಾಧಿಸುತ್ತಾರೆ.
ಬ್ರಹ್ಮ ಗುಂಡದ ಬಲಬಾಗದಲ್ಲಿ ಮಣೆ ಮಂಚದಲ್ಲಿ ಕುಜುಂಬಕಾಂಜವರ ಕಂಚಿನ ಪಾಪೆಯನ್ನು ಆರಾಧಿಸುತ್ತಾರೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜುಮಾದಿಯ ಕಂಚಿನ ಮುಖ ಹಾಗೂ ಜುಮಾದಿ ಬಂಟರಿಗೂ, ಎಡಭಾಗದಲ್ಲಿ ಮಣೆ ಮಂಚದಲ್ಲಿ ಕಂಚಿನ ಮೂರ್ತಿಯನ್ನಿಟ್ಟು ಮಾಯಂದಾಲ್ ಹಾಗೂ ಮಣೆ ಮಂಚದಲ್ಲಿ ಕೂಚಿಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಅರಸು ದೈವ (ಒಕ್ಕು ಬಲ್ಲಾಳರಿಗೆ) ಪೂಜೆ ನಡೆಯುತ್ತದೆ.
ಗರೋಡಿಯ ಒಳಗೆ ಗುರು ಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಹೊರಗೆ ಆವರಣದಲ್ಲಿ ಗುಡಿಯಲ್ಲಿ ಮಣೆ ಮಂಚದಲ್ಲಿ ಕೂಚಿಯಲ್ಲಿ ನೀರು ಹಾಗೂ ದೀಪನ್ನಿಟ್ಟು ಪಂಚ ದೈವಗಳಿಗೆ ಆರಾಧನೆ ನಡೆಯುತ್ತದೆ. ಗರೋಡಿಯ ಆವರಣದೊಳಗೆ ಅಯ್ಯ ಕಲ್ಲು, ತುಳಸೀಕಟ್ಟೆಗಳೂ ಇವೆ.

ಸುಕೇಶ ಪೂಜಾರಿ

ಸಂಜೀವ ಪೂಜಾರಿ

ಗರಡಿಮನೆ ಸುಕೇಶ ಪೂಜಾರಿ(44 ವರ್ಷ) ಇವರು ಪೂ ಪೂಜನೆಯವರಾಗಿರುವರು. ಇವರಿಗಿಂತ ಮೊದಲು ಇವರ ಹಿರಿಯರಾದ ಸಂಜೀವ ಪೂಜಾರಿ (72 ವರ್ಷ) ರಾಜು ಪೂಜಾರಿ. ತಿಮ್ಮ ಪೂಜಾರಿ, ಗುರುವ ಪೂಜಾರಿ ಮುಂತಾದವರು ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಮೂಡುಮನೆ ಅರುಣಾಚಲ ಹೆಗ್ಡೆಯವರು ಆಡಳಿತ ಮೊಕ್ತೇಸರರಾಗಿರುವರು. ಇವರು ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ ಇರುವರು. ಕಾರ್ಯದರ್ಶಿಯಾಗಿ ಪ್ರೇಮನಾಥ ಪೂಜಾರಿ ಇವರು ಕಾರ್ಯನಿರ್ವಹಿಸುತ್ತಿರುವರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರೊಇ ಕಜ್ಜಾಯ ಸೇವೆ, ಮಕರದ ದ್ವಾದಶಿಯಂದು ಅಗೆಲು ಸೇವೆ, ತ್ರಯೋದಶಿಯಂದು – ಬೈದೇರುಗಳ ನೇಮೋತ್ಸವ, ಚತುರ್ದಶಿಯಂದು ಮಾಯಂದಾಲ್, ಜೋಗಿಪುರುಷ, ಹಾಗೂ ಪಂಚ ದೈವಗಳಾದ ಪಡಿಕಂದಾಯ, ಪಿಲ್ಚಂಡಿ, ಪಂಜುರ್ಲಿ, ಜುಮಾದಿ ಮತ್ತು ಬಂಟ, ಹಾಗೂ ರಾಜನ್ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. ನೀರುಸ್ನಾನ, ಕಂಚಿಲ್ ಶೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆದಿಟ್ಟ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಹರಕೆಯ ಸೇವೆಗಳು, ಗರೋಡಿಯಲ್ಲಿ ನಡೆಯುತ್ತವೆ. ಗರೋಡಿಗೆ ಸ್ಥಿರ ಆದಾಯವಿಲ್ಲದೆ ಖರ್ಚು ವೆಚ್ಚಗಳನ್ನು ಹರಕೆ, ವಂತಿಗೆ, ಸಹಾಯ ಧನಗಳಿಂದ ಭರಿಸಲಾಗಿತ್ತಿದೆ.
ಈಗ 2024 – 2025 ರಲ್ಲಿ ಜಿಣೋದ್ಧಾರಗೊಳ್ಳುತ್ತಿರುವ ಈ ಗರೋಡಿಯು ಹಿಂದೆ 2000 ಹಾಗೂ 1942ನೇ ವರ್ಷಗಳಲ್ಲಿ ಜೀರ್ಣೋದ್ಧಾರ ಗೊಂಡಿತ್ತು.
ಗರೋಡಿಯ ಸೇವೆಯವರಾಗಿ ಜಯ ಪರವ ನೀರೆ, ಹಾಗೂ ಬೊಗ್ಗು ಪರವ ಮೂಡುಬೆಳ್ಳೆ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟಂತೆ “ ಬಿಲ್ಲವ ಜನ ಜಾಗ್ರತಿ ಸಮಿತಿ” ಎಂಬ ಸಂಸ್ಥೆಯು ಕೆಲಸ ಮಾಡುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, 80 ಬಡಗಬೆಟ್ಟು,
ಬಡಗುಬೆಟ್ಟು ಅಂಚೆ,
ಉಡುಪಿ ತಾಲೂಕು – 576107.

ಆಡಳಿತ ಸಮಿತಿ:

ಅಧ್ಯಕ್ಷರು ಅರುಣಾಚಲ ಹೆಗ್ಡೆ
9113299198 ಕಾರ್ಯದರ್ಶಿಪ್ರೇಮನಾಥ ಪೂಜಾರಿ
944905906

ಪೂಪೂಜನೆಯವರ ವಿಳಾಸ:

ಸುಕೇಶ್ ಪೂಜಾರಿ,
ಗರಡಿ ಮನೆ, 80 ಬಡಗಬೆಟ್ಟು , ಬಡಗಬೆಟ್ಟು ಅಂಚೆ.
ಮೊಬೈಲ್: ನಂ. 9964243488

ಸ್ಥಳ ಪಾತ್ರಿಯವರ ವಿಳಾಸ:

ಸುಧಾಕರ ಪೂಜಾರಿ,
ದರ್ಶನ ಪಾತ್ರಿ, ಹಾಲಂಬಿ, 80 ಬಡಗುಬೆಟ್ಟು,
ಬಡಗುಬೆಟ್ಟು ಅಂಚೆ,
ಉಡುಪಿ – 576107
ಮೊಬೈಲ್ ನಂ: 9844676017

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024

Shree Brahma Baidarkala Garodi Kakkunje

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕಕ್ಕುಂಜೆ

ಉಡುಪಿ ಕಲ್ಸಂಕ ಗುಂಡಿಬೈಲು ಮಾರ್ಗವಾಗಿ ಅಂಬಾಗಿಲಿ ನಿಂದ ಬಲಕ್ಕೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಸಾಗಬೇಕು. ಶ್ಯಾಂ ಸರ್ಕಲ್ನಿಂದ ಎಡಕ್ಕೆ ತಿರುಗಿ ಸುಮಾರು 1.25 ಕಿ.ಮೀ. ಸಾಗಬೇಕು. ಇಲ್ಲವಾದರೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲೇ ಮುಂದುವರಿದು ಪೆರಂಪಳ್ಳಿ ರೈಲ್ವೆ ಸೇತುವೆ ದಾಟುವ ಮೊದಲೇ ಎಡಕ್ಕೆ ತಿರುಗಿ 1 ಕಿ.ಮೀ. ಸಾಗಿದರೆ ಗರೋಡಿಯಿದೆ.
ಉಡುಪಿ ಕಲ್ಸಂಕ ಗುಂಡಿಬೈಲು ಮಾರ್ಗವಾಗಿ ಅಂಬಾಗಿಲಿ ನಿಂದ ಬಲಕ್ಕೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಸಾಗಬೇಕು. ಶ್ಯಾಂ ಸರ್ಕಲ್ನಿಂದ ಎಡಕ್ಕೆ ತಿರುಗಿ ಸುಮಾರು 1.25 ಕಿ.ಮೀ. ಸಾಗಬೇಕು. ಇಲ್ಲವಾದರೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲೇ ಮುಂದುವರಿದು ಪೆರಂಪಳ್ಳಿ ರೈಲ್ವೆ ಸೇತುವೆ ದಾಟುವ ಮೊದಲೇ ಎಡಕ್ಕೆ ತಿರುಗಿ 1 ಕಿ.ಮೀ. ಸಾಗಿದರೆ ಗರೋಡಿಯಿದೆ.
ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆರ್ಮೆರ್, ಮೇಲೆ ಗಾಳಿ ದೇವರು, ಗುಂಡದ ಹೊರಗೆ ಎಡಭಾಗದಲ್ಲಿ ಬೈದೇರುಗಳ ಪಾಪೆ, ಮಕ್ಕಳ ಪಾಪೆ, ದೇಯಿಬೈದೆತಿ-ಮಂಚದಲ್ಲಿ, ಬಲಭಾಗದಲ್ಲಿ ಕುಜುಂಬ ಕಾಂಜವರಿಗೆ ಮಣೆಮಂಚದಲ್ಲಿ ಆರಾಧನೆಯಿದೆ. ಬ್ರಹ್ಮಗುಡಿಯ ಹೊರಗೆ ಗುರುಕಂಬ, ಜೋಗಿಪುರುಷ ಪಾಪೆ,
ಗರೋಡಿ ಆವರಣದೊಳಗೆ; ಗುಡಿಯಲ್ಲಿ ಮಾಯಂದಾಲ್-ಮಗು ಪಾಪೆ, ಪಂಚಧೂಮಾವತಿ- ಬಂಟ ಗುಡಿ, ಬೊಬ್ಬರ್ಯಗುಡಿ. ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದಂತೆ 2019ರಲ್ಲಿ ಪಕ್ಕಿಬೆಟ್ಟು ಗರೋಡಿಯಿಂದ ಬಂದ ಪಂಜುರ್ಲಿಯನ್ನು ಗುಡಿಕಟ್ಟಿ ಪ್ರತಿಷ್ಠಾಪಿಸಲಾಗಿದೆ. ಅಯ್ಯರ ಕಲ್ಲು, ಪ್ರತ್ಯೇಕ ನಾಗ ಸನ್ನಿಧಿ ಇದೆ.

ಉದಯ ಪೂಜಾರಿ

ಕಕ್ಕುಂಜೆ ಗರೋಡಿಮನೆ ಉದಯ ಪೂಜಾರಿ ಅವರು 2019ರಿಂದ ಪೂಪೂಜೆಯವರಾಗಿದ್ದಾರೆ. ಈ ಗರೋಡಿಗೆ 98 ವರ್ಷಗಳ ಇತಿಹಾಸವಿದ್ದು 1924ರಿಂದ 1944ರವರೆಗೆ ಸದಿಯ ಪೂಜಾರಿ ಮೊದಲ ಪೂ ಪೂಜನೆಯವರಾಗಿದ್ದರು. ಆ ನಂತರದವರು ಕೊಂಬ ಪೂಜಾರಿ 1944ರಿಂದ 1979. ಈ ನಡುವೆ ತೋಮ ಪೂಜಾರಿ ಅಲ್ಪಾವಧಿ. ಕೊಂಬ ಪೂಜಾರಿ ಅವರ ತಮ್ಮ ಬದಿಯ ಪೂಜಾರಿ 1979-1983. ಉದಯ ಪೂಜಾರಿ 1983-1996. ವಿಜಯ ಪೂಜಾರಿ 1996-1999. ಜಬ್ಬ ಪೂಜಾರಿ 199-2000. ಶಂಕರ ಪೂಜಾರಿ 2000-2004, ವಿಜಯ ಪೂಜಾರಿ ಕಕ್ಕುಂಜೆ 2004-2007. ರಮೇಶ್ ಯು ಕಕ್ಕುಂಜೆ 2007-2019.
ಸ್ಥಳ ಪಾತ್ರಿಗಳು ಈಗ ಇಲ್ಲ. ಹಿಂದೆ ಐತ ಪೂಜಾರಿ ಕಕ್ಕುಂಜೆ, ರಾಜುಪೂಜಾರಿ, ರಾಮ ಪೂಜಾರಿ, ಕಕ್ಕುಂಜೆ ರಾಜು ಪೂಜಾರಿ ಸ್ಥಳ ಪಾತ್ರಿಗಳಾಗಿದ್ದರು.
ಕಕ್ಕುಂಜೆ “ಮೇಲ್ಮನೆ”ಯ ಕೆ. ಶ್ರೀಕಾಂತ್ ಶೆಟ್ಟಿ ಅವರು ಗರೋಡಿ ಮೊಕ್ತೇಸರರಾಗಿರುತ್ತಾರೆ. ಭಾಸ್ಕರ್ ಡಿ. ಸುವರ್ಣ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ಥಳ ಪುರಾಣ ದಲ್ಲಿ ತಿಳಿದು ಬಂದಂತೆ, ಇಲ್ಲಿಗೆ ಮೂಲ ಪಕ್ಕಿಬೆಟ್ಟು ಗರೋಡಿ ಕಲ್ಯಾಣಪುರ. ಕಕ್ಕುಂಜೆಯಲ್ಲಿ ಗರೋಡಿ ಕಟ್ಟಲು ಕಾರಣವಾದ ಘಟನೆ. ಅಂದು ಕಕ್ಕುಂಜೆಯ ಗುರಿಕಾರರಾದ ಸದಿಯ ಪೂಜಾರಿ, ಹಿರಿಯರಾದ ತಿಮ್ಮ ಮಾಸ್ತರರು, ಅಂಗರ ಮಾಸ್ತರರು, ಅಬ್ಬಣ್ಣಕುದ್ರು ಕೊರಗ ಪೂಜಾರಿಯವರು, ಪೊಕ್ರು ಪೂಜಾರಿಯವರು ಪಕ್ಕಿಬೆಟ್ಟು ಗರೋಡಿಯ ನೇಮಕ್ಕೆ ಚಪ್ಪರ ಹಾಕಲು ಹೋಗುವಾಗ ವಿಳಂಬವಾಗಿತ್ತು. ಇವರಿಗೆ ಅಲ್ಲಿನ ಗುರಿಕಾರರುಗಳು ಖಾರವಾಗಿ ಬೈದು ಬಿಟ್ಟರು. ಇದರಿಂದ ಒಂದು ರೀತಿಯ ಅವಮಾನದಿಂದ ನೊಂದ ಗುರಿಕಾರರುಗಳು ವಾಪಾಸು ಊರಿಗೆ ಬಂದು ಜಮೀನ್ದಾರ್ ರಾಮಣ್ಣ ಶೆಟ್ಟಿ ಅವರಲ್ಲಿ ದೂರಿತ್ತರು. ರಾಮಣ್ಣ ಶೆಟ್ಟರು ನಾವೇ ಕೂಡಿ ಒಂದು ಹೊಸ ಗರೋಡಿ ಕಟ್ಟುವ ಎಂಬ ತೀರ್ಮಾನಕ್ಕೆ ಬಂದು 1924ರಲ್ಲಿ ಇಲ್ಲಿ ಗರೋಡಿ ನಿರ್ಮಾಣವಾಯಿತು. ಕಟ್ಟಿದ ಹೊಸ ಗರೋಡಿಯಲ್ಲಿ ಬಿಕ್ರಿ ಪೂಜಾರಿಯವರ ದರುಶನ ಸೇವೆ ನಡೆಯುತ್ತಿರುವಾಗ ಕೆಲವು ಹಿರಿಯರು ಬೈದೇರುಗಳು ಇಲ್ಲಿ ನೆಲೆಯಾದ ಬಗ್ಗೆ ಸಾಕ್ಷಿ ಬೇಕೆಂದರು. ಬೈದೇರುಗಳು ತಮ್ಮ ಕಲೆ-ನೆಲೆ ತೋರಿಸುತ್ತೇವೆ ಎಂದ ಸ್ವಲ್ಪವೇ ಹೊತ್ತಿನಲ್ಲಿ ಗರೋಡಿ ಸನಿಹದಲ್ಲೇ ಇದ್ದ ಬಾಕಿಮಾರು ಗದ್ದೆಗೆ ಭಾರೀ ಹುಣಸೇ ಮರದ ಬೃಹತ್ ಕೊಂಬೆಯೊಂದು ಜನ ಅವಕ್ಕಾಗಿ ನೋಡುತ್ತಾ ನಿಂತಿದ್ದಂತೆಯೇ ಜರಿದು ಬಿದ್ದಿತ್ತು.!
ಗರೋಡಿಯಲ್ಲಿ ನಿತ್ಯ ದೀಪ ಉರಿಸಲಾಗುತ್ತದೆ. ಪ್ರತಿ ಸೋಮವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲ್ ಅನ್ನ ನೈವೇದ್ಯ, ಕಾಲಾವಧಿ ನೇಮೋತ್ಸವ ಇದೆ. ಬೆಳಿಗ್ಗೆ ಮಾಯಂದಾಲ್ ಕೋಲ. 2014ರಿಂದ ರಾತ್ರಿ ಪಂಚಧೂಮಾವತಿ ಕೋಲ ನಡೆಯುತ್ತಿದೆ.
ಕಕ್ಕುಂಜೆ, ಅಬ್ಬಣಕುದ್ರು, ಕರಂಬಳ್ಳಿ ಮೂರು ಊರುಗಳು ಇಲ್ಲಿನ ಗರೋಡಿ ಕೂಡುಕಟ್ಟಿಗೆ ಸೇರುತ್ತವೆ. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಗುರಿಕಾರರುಗಳು : 1. ರೋಹಿದಾಸ ಪೂಜಾರಿ (ನಾಲ್ಕರೆ ಗುರಿಕಾರರು)
2. ಓಮಯ್ಯ ಪೂಜಾರಿ
3. ಅನಂತ ಪೂಜಾರಿ
4. ಕುಟ್ಟಿ ಪೂಜಾರಿ
5. ರಾಮ ಪೂಜಾರಿ
6. ಚೆನ್ನಯ ಪೂಜಾರಿ
7. ಕುಡ್ಪ ಪೂಜಾರಿ
8. ಸುಂದರ ಪೂಜಾರಿ
9. ಗೋಪಾಲ ಪೂಜಾರಿ ಕರಂಬಳ್ಳಿ

ಗುರಿಕಾರರುಗಳು :
1. ರೋಹಿದಾಸ ಪೂಜಾರಿ (ನಾಲ್ಕರೆ ಗುರಿಕಾರರು)
2. ಓಮಯ್ಯ ಪೂಜಾರಿ
3. ಅನಂತ ಪೂಜಾರಿ
4. ಕುಟ್ಟಿ ಪೂಜಾರಿ
5. ರಾಮ ಪೂಜಾರಿ
6. ಚೆನ್ನಯ ಪೂಜಾರಿ
7. ಕುಡ್ಪ ಪೂಜಾರಿ
8. ಸುಂದರ ಪೂಜಾರಿ
9. ಗೋಪಾಲ ಪೂಜಾರಿ ಕರಂಬಳ್ಳಿ

ಗರೋಡಿ ಜೀರ್ಣೋದ್ಧಾರದ ವಿವರ :
1924-ಗರೋಡಿ ಸ್ಥಾಪನೆ
1970-71 ಸಾಧುಶೆಟ್ಟಿ ನೇತೃತ್ವ
2004-2005 ಮುದ್ದು ಪೂಜಾರಿ ಕಕ್ಕುಂಜೆ
2016-ಬ್ರಹ್ಮಕುಂಭಾಭಿಷೇಕ
2019-20 : ಪ್ರತಿಷ್ಠೆ – ಪ್ರವೀಣ ಪೂಜಾರಿ
2022- ಕುಂಭಾಭಿಷೇಕ – ಭಾಸ್ಕರ ಡಿ. ಸುವರ್ಣ
ಬೊಗ್ಗು ಪರವ, ಬೂಬ ಪರವ, ಮನು ಪರವ ಇವರು ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದು ಹಿಂದೆ ನರಂಗ ಪರವ, ಮೆಣ್ಕ ಪರವ, ಪಿಜಿನ ಪರವ, ಅಮ್ಮು ಪರವ ಸೇವೆ ಮಾಡಿದ್ದರು. ಧೂಮಾವತಿಗೆ ಕೋಲ ಕಟ್ಟುವವರು – ಭಾಸ್ಕರ ಪಡುಬಿದ್ರಿ, ಆನಂದ ಪಡುಬಿದ್ರಿ

ಕಕ್ಕುಂಜೆ ಗರೋಡಿಯ ವಿಶೇಷತೆಗಳು :

ಮುಂಬೈಯ ಗರೋಡಿ ಭಕ್ತರೊಬ್ಬರು ಕಳುಹಿಸಿದ ಎರಡು ಗಿಡಗಳನ್ನು ಗರೋಡಿ ಆವರಣದಲ್ಲಿ ನೆಡಲಾಗಿತ್ತು. ಆ ಗಿಡಗಳು ಎತ್ತರಕ್ಕೆ ಬೆಳೆದು ನಿಂತಾಗ ಅದರ ಎಲೆಗಳು ಗರೋಡಿ ಸುತ್ತಮುತ್ತ ಬೀಳುವುದು ಮಾತ್ರವಲ್ಲದೆ ಬೇರೇನೂ ಪ್ರಯೋಜನ ಇಲ್ಲವೆಂದು ಅವುಗಳನ್ನು ಕಡಿಯಲು ನಿರ್ಧರಿಸಲಾಗಿತ್ತು. ಮರ ಕಡಿಯುವ ಆಳುಗಳಿಗೆ ಕರೆ ಹೋಗಿತ್ತು. ಮುಂಚಿನ ದಿನ ಅಲ್ಲಿನ ಬಂದ ಎರಡು ಮಂಗಗಳು ಆ ಮರದ ಎರಡು ಗೆಲ್ಲುಗಳನ್ನು ಮುರಿದು ಹಾಕಿದವು. ಗರೋಡಿಯ ಮಂದಿ ಆ ಗೆಲ್ಲುಗಳನ್ನು ನೋಡುವಾಗ ಅದರಲ್ಲಿ ರುದ್ರಾಕ್ಷಿ ಕಾಯಿಗಳು ಗೋಚರಿಸಿದವು. ಮುಂದೆ ಮರ ಕಡಿಯಲಿಲ್ಲ. ಇದೇ ಪ್ರಚಾರವಾಗಿ ರುದ್ರಾಕ್ಷಿಗಾಗಿಯೇ ಜನ ಎಲ್ಲೆಲ್ಲಿಂದಲೋ ಬರಲಾರಂಭಿಸಿದ್ದು ಇಲ್ಲಿನ ವಿಶೇಷ. ಅದರಲ್ಲೂ ರುದ್ರಾಕ್ಷಿಯ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಹೈದರಾಬಾದಿನ ವ್ಯಕ್ತಿಯೊಬ್ಬರಿಗೆ ಇಲ್ಲಿನ ಗರೋಡಿಯಲ್ಲಿರುವ ರುದ್ರಾಕ್ಷಿ ಮರದ ಕನಸು ಬಿದ್ದು ಅದನ್ನು ಹುಡುಕಿಕೊಂಡು ಈ ಗರೋಡಿಗೆ ಭೇಟಿ ಕೊಟ್ಟು ರುದ್ರಾಕ್ಷಿ ಕಾಯಿಯನ್ನು ಪಡೆದುಕೊಂಡು ಹೋಗಿದ್ದರು.
ನಾಗಮಂಡಲ : ಕಕ್ಕುಂಜೆ ಗರೋಡಿಯಲ್ಲಿ ನಾಗ ಸಾನಿಧ್ಯವಿದ್ದು ಇಲ್ಲಿ ಹಿಂದೆ ನಾಗಮಂಡಲ ಜರಗಿತ್ತು.
ಅಗೆಲು ಸೇವೆ : ಇಲ್ಲಿ ಪ್ರತ್ಯೇಕ ಗುಂಡವಿದ್ದು – ಅದನ್ನು ಅಗೆಲು, ನೇಮೋತ್ಸವದ ಸಂದರ್ಭದಲ್ಲಿ ಅಂಗಣದಲ್ಲಿ ಇರಿಸಿ ದಲ್ಲೆ ಹಾಕುತ್ತಾರೆ.ಭತ್ತ, ನೀರೊಳಿಗೆ ಎಲೆ, ಅಶ್ವತ್ಥ, ಹಲಸಿನ ಎಲೆ, ಬಾಳೆದಿಂಡಿನ ಸಿಪ್ಪೆಯಿಂದ ಮಾಡುತ್ತಾರೆ. ಅನ್ನ ನೈವೇದ್ಯಕ್ಕೆ ಕಾಚಿಕುಂಬಳ, ಬಾಳೆಕಾಯಿ, ನುಗ್ಗೆ, ಮರ್ಸಣ್ ಹಲಸಿನಕಾಯಿ ಹಾಕುತ್ತಾರೆ. ಉದ್ದು ಹಾಕಿದ ಅಕ್ಕಿಯ ಗಟ್ಟಿ ಮಾಡುತ್ತಾರೆ. ಬಹಳ ಹಿಂದೆ ತಿಮ್ಮ ಮಾಸ್ತರರ, ಅಂಗರ ಮಾಸ್ತರರ ಕಾಲದಲ್ಲಿ ಅಗೆಲು ಸೇವೆಯ ದಿನ ಇಲ್ಲಿ ಕೋಡಂಗೆ ನೃತ್ಯ ನಡೆಯುತ್ತಿತ್ತು.

ಗರೋಡಿಯ ವಿಳಾಸ:

“ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕಕ್ಕುಂಜೆ,
ಶಿವಳ್ಳಿ ಗ್ರಾಮ,
ಉಡುಪಿ -576102

ಮೊಬೈಲ್ ನಂಬರ್ :

ಉದಯ ಪೂಜಾರಿ (ಪೂಪೂಜನೆಯವರು)
9591752769.
ಭಾಸ್ಕರ್ ಡಿ. ಸುವರ್ಣ (ಆಡಳಿತ ಸಮಿತಿಯ ಅಧ್ಯಕ್ಷರು)
9900771242

Shree Brahma Baidarkala Garodi Kalatthuru

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು

ಉಡುಪಿಯಿಂದ ಕಾಪು – ಶಿರ್ವ ರಸ್ತೆಯಲ್ಲಿ ಸಾಗಿ ಕಳತ್ತೂರು ಎಂಆರ್‌ಪಿಎಲ್ ಪೆಟ್ರೋಲ್ ಪಂಪಿನ ಬದಿಯ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸುಮಾರು 1.3ಕಿ.ಮೀ. ದೂರ ಸಾಗಿದರೆ ಕಳತ್ತೂರು ಗರೋಡಿ ಸಿಗುವುದು.
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು
ಆಯದ ಗರೋಡಿಯಾದ ಇದಕ್ಕೆ ಮೂರು ಬಾಗಿಲುಗಳಿವೆ. ಮುಖ್ಯ ದ್ವಾರವು ಪೂರ್ವಾಭಿ ಮುಖವಾಗಿದ್ದು ಉತ್ತರ ಹಾಗೂ ಪಶ್ಚಿಮ ಹಾಗೂ ದಿಕ್ಕಿಗೆ ಒಂದೊಂದು ದ್ವಾರಗವಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಕುದುರೆಯಲ್ಲಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕೋಟಿಚೆನ್ನಯರು, ದೇಯಿ ಬೈದೆತಿ ಹಾಗೂ ಜೋಗಿ ಪುರುಷರಿಗೂ ಆರಾಧನೆಯಿದೆ.
ಗುಂಡದ ಬಲ ಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಆರಾಧನೆಯಿದೆ.
ಬ್ರಹ್ಮ ಗುಡಿಯ ಹೊರಗೆ ಬಲ ಭಾಗದಲ್ಲಿ ಮಣೆ ಮಂಚದಲ್ಲಿ ಜುಮಾದಿಗೂ ಎಡಬದಿಯ ಮಣೆ ಮಂಚಗಳಲ್ಲಿ ಕೊಡಮಣಿತ್ತಾಯ ಹಾಗೂ ಜಾರಂದಾಯ ದೈವಗಳ ಆರಾಧನೆ ಇದೆ.
ಗರೋಡಿಯೊಳಗೆ ಉತ್ತರ ದಿಕ್ಕಿನ ದ್ವಾರದ ಬಳಿ ಗುರು ಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಹೊರಾಂಗಣದಲ್ಲಿ ಗುಡಿಯೊಳಗೆ ಪಿಲ್ಚಂಡಿ ದೈವದ ಬಂಡಿಯನ್ನಿಟ್ಟು ಪೂಜೆ ನಡೆಯುತ್ತದೆ.
ಹೆಬ್ಬಾಗಿಲಿನ ಒಂದು ಬದಿಯಲ್ಲಿ ಗುಡಿಯೊಳಗೆ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗೂ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟೆ ಹಾಗೂ ಸ್ಥಳದ ನಾಗಬನಗಳೂ ಇದೆ.

ವಿಶ್ವನಾಥ ಕೆ ಪೂಜಾರಿ

ಗರೋಡಿಮನೆ ವಿಶ್ವನಾಥ ಕೆ ಪೂಜಾರಿ (76 ವರ್ಷ) ಇವರು ಪೂ ಪೂಜನೆಯ ವರಾಗಿದ್ದಾರೆ.ಇವರಿಗಿಂತ ಮೊದಲು ಮುದ್ದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು.

ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜಾರ್ದೆ ಹುಣ್ಣಿಮೆಯ ಷಷ್ಠಿಯಂದು ಅಗೆಲು ಸೇವೆ, ಸಪ್ತಮಿಯಂದು ಬೈದೇರುಗಳ ನೇಮೋತ್ಸವ ನಡೆಯುತ್ತದೆ. ಪಿಲ್ಚಂಡಿ, ಮಾಯಂದಾಲ್, ಜೋಗಿ ಪುರುಷರಿಗೂ ಕೋಲ ಸೇವೆ ನಡೆಯುತ್ತದೆ. ನಂತರ ಶುದ್ಧದ ಅಗೆಲು ನಡಿಗುತ್ತು ಮನೆತನದವರ ವತಿಯಿಂದ ನಡೆಯುತ್ತದೆ. ಸೋಣ ತಿಂಗಳಲ್ಲಿ ಬರಬೆಟ್ಟು ಗುತ್ತಿನವರ ವತಿಯಿಂದ ಅಗೆಲು ಸೇವೆ ನಡೆಯುತ್ತದೆ. ಆಟಿಯಲ್ಲಿ ಅಗೆಲ್ ಸೇವೆ ನಡೆಯುವ 6 ಗರೋಗಳಲ್ಲಿ ಇದೂ ಒಂದು. ಸೋಣದ ಸಂಕ್ರಾಂತಿಯಂದು ಹೂವಿನ ಪೂಜೆ ನಡೆಯುತ್ತದೆ.

ಕಳತ್ತೂರು ಹಾಗೂ ಪಾದೂರು ಗ್ರಾಮಗಳ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರದ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿಯೂ ಭಾಗಿಯಾಗಿರುತ್ತಾರೆ. ವಂತಿಗೆ ಹಾಗೂ ಹರಕೆಯ ಹಣದಿಂದ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತದೆ.

ಗರೋಡಿಯು ಈಗ ಜೀರ್ಣೋದ್ದಾರದ ಯೋಜನೆಯಲ್ಲಿದೆ. ಹಿಂದೆ 25.05.1994 ಹಾಗೂ 1963 ರಲ್ಲಿ ಜೀಣೋದ್ದಾರಗೊಂಡಿತ್ತು.
ಬೊಗ್ಗು ಪರವ, ಉಗ್ಗಪ್ಪ ಪರವ, ಸಂತು ಪರವ ಇವರುಗಳು ಈ ಗರೋಡಿಯ ನೃತ್ಯ ವಿಶಾರದರಾಗಿಯೂ, ಶಶಿ ಮಡಿವಾಳ ಪಣಿಯೂರು, ಇವರು ಮಡಿವಾಳರಾಗಿಯೂ, ಲಕ್ಷಣ ಸೇರಿಗಾಎ ಎಲ್ಲೂರು, ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಳತ್ತೂರು,
ಕಳತ್ತೂರು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು,
ಉಡುಪಿ ಜಿಲ್ಲೆ. 576106.
ಪೂ ಪೂಜನೆಯವರ ವಿಳಾಸ:
ವಿಶ್ವನಾಥ ಕೆ. ಪೂಜಾರಿ,
ಗರೋಡಿ ಮನೆ, ಕಳತ್ತೂರು ಗ್ರಾಮ ಮತ್ತು ಅಂಚೆ,
ಕಾಪು ತಾಲೂಕು,
ಉಡುಪಿ ಜಿಲ್ಲೆ – 576106.
ಮೊಬೈಲ್: 9945772269

Shri Brahma Baidarkala Garodi, Parkala, Herga Village

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ , ಪರ್ಕಳ, ಹೆರ್ಗ ಗ್ರಾಮ

ಉಡುಪಿಯಿಂದ ಮಣಿಪಾಲ ಮಾರ್ಗವಾಗಿ ಪರ್ಕಳ ಪೇಟೆಗೆ ಬಂದು ಎಡಕ್ಕೆ ತಿರುಗಿ ಸುಮಾರು 650ಮೀ. ಸಾಗಿ ಪುನ: ಎಡಕ್ಕೆ ಸರಳೇಬೆಟ್ಟು ಮಾರ್ಗದಲ್ಲಿ 300ಮೀ.ನಲ್ಲಿ ಎಡಕ್ಕೆ ತಿರುಗಿ ಸುಮಾರು 200ಮೀ. ಸಾಗಿದರೆ ಬಲಬದಿಯಲ್ಲಿ ಪರ್ಕಳ ಗರೋಡಿ ಇದೆ.

ಇದು ಆಯದ ಗರೋಡಿಯಾಗಿದ್ದು ಮುಖ್ಯದ್ವಾರ ಪೂರ್ವಾಭಿಮುಖವಾಗಿ ಇನ್ನೊಂದು ದ್ವಾರ ಪಶ್ಚಿಮ ಮುಖವಾಗಿದೆ.

ಗರೋಡಿಯ ಬ್ರಹ್ಮ ಗುಡಿಯಲ್ಲಿ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆ ಇದೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ. ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.

ಪಿ.ಕೆ.ಶೀನ ಪೂಜಾರಿ

ಪಿ.ಕೆ.ಶೀನ ಪೂಜಾರಿ (73 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದು ಹಳೆಯಮನೆ ದಿನೇಶ್ ಶೆಟ್ಟಿ ಇವರು ಆಡಳಿತ ಮೊಕ್ತೇಸರರಾಗಿದ್ದಾರೆ. ಪಿ.ಕೆ.ಶೀನ ಪೂಜಾರಿಯವರಿಗೆ ಮೊದಲು ವಿಶ್ವನಾಥ ಪೂಜಾರಿ, ಕಿಟ್ಟ ಪೂಜಾರಿ, ತಮ್ಮಯ ಪೂಜಾರಿ, ವೆಂಕ ಪೂಜಾರಿ, ಮೊದಲಾದ ಹಿರಿಯರು ಪೂ ಪೂಜನೆಯ ಸೇವೆ ಮಾಡಿರುವರು. ದಿನೇಶ ಶೆಟ್ಟಿಯವರ ಮೊದಲು ಹಳೆಮನೆ ಸಂಜೀವ ಶೆಟ್ಟಿಯವರು ಆಡಳಿತ ಮೊಕ್ತೇಸರರಾಗಿದ್ದರು.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಆದಿತ್ಯವಾರದ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ಚೌತಿ ಪೂಜೆ, ದೀಪಾವಳಿಯಂದು ಕಂಬಕ್ಕೆ ದೀಪವಿಟ್ಟು ಪೂಜೆ ಮಾಡುವುದು, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಕೊಡಿ ತಿಂಗಳಲ್ಲಿ ಪೊಸರಿತ ಅಗೆಲ್, ತುಳಸೀ ಪೂಜೆ ನಡೆಯುತ್ತದೆ. ಸುಗ್ಗಿ ತಿಂಗಳಲ್ಲಿ (ಫೆಬ್ರವರಿ-ಮಾರ್ಚ) ಒಂದನೇ ದಿನ ಮಣ್ಣ ಮುಹೂರ್ತ, ಮರ ಮುಹೂರ್ತ, ಎರಡನೇ ದಿನ ಅಂಗಣಕ್ಕೆ ಅಂಗಣಕ್ಕೆ ಸೆಗಣಿ ಸಾರಿಸುವುದು, ಮೂರನೇ ದಿನ – ಅಗೆಲು ಸೇವೆ ಬಾಲು ಬಂಡಾರ ಗರೋಡಿಯ ಹೊರಗೆ ತಂದು ಗುಂಡದಲ್ಲಿ ಇಡುವುದು. ನಾಲ್ಕನೇ ದಿನ ಬೈದೇರುಗಳ ನೇಮ, ಐದನೇ ದಿನ – ಮಾಯಂದಾಲ್, ಜುಮಾದಿ, ಮರ್ಲಜುಮಾದಿ, ಜೋಗಿಪುರುಷ, ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. 6ನೇ ದಿನ – ಶುದ್ದದ ಅಗೆಲು ಇರುತ್ತದೆ. ಇವಲ್ಲದೆ ನೀರುಸ್ನಾನ, ಕಂಚಿಲ್ ಸೇವೆ. ಮುದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಲ್ಲಿ ಕೂಡುಕಟ್ಟಿಗೆ ಸೇರಿದ ಭಕ್ತರು ಪಾಲ್ಗೊಳ್ಳುತಾರೆ.
ಸ್ಥಿರ ಆದಾಯ ಇಲ್ಲದ ಈ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವಂತಿಗೆ, ಕಾಣಿಕೆ, ಹಾಗೂ ಸಹಾಯಧನಗಳಿಂದ ಭರಿಸುತ್ತಾರೆ.
ಹದಿನೇಳು ವರ್ಷಗಳ ಹಿಂದೆ ಅಂದರೆ 2006ರಲ್ಲಿ ಗರೋಡಿಯ ಕಾಂಕ್ರೀಟ್ ಚಪ್ಪರ ನಿರ್ಮಾಣವಾಗಿದ್ದು ಅದಕ್ಕೆ ಮೊದಲು 04-04-1971ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿತ್ತು.
ಈ ಗರೋಡಿಯ ನೃತ್ಯವಿಶಾರದರಾಗಿ ಜಯಪರವ ನೀರೆ, ಹಾಗೂ ಕಿಟ್ಟ ಪಂಬದ(ಮಾಯಂದಾಲ್ ಮತ್ತು ಜುಮಾದಿಗೆ) ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದೆ ಗರೋಡಿಗೆ ಸಂಬಂಧಪಟ್ಟ “ಕೋಟಿಚೆನ್ನಯ ವ್ಯಾಯಾಮ ಶಾಲೆ ‘’ ಯೊಂದು ಇತ್ತು. ಈಗ ಅಸ್ಥಿತ್ವದಲ್ಲಿಲ್ಲ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪರ್ಕಳ,
ಹೆರ್ಗ ಗ್ರಾಮ,
ಪರ್ಕಳ ಅಂಚೆ,
ಉಡುಪಿ 576107.

ಪೂ ಪೂಜನೆಯವರ ವಿಳಾಸ:

ಪಿ.ಕೆ. ಶೀನ ಪೂಜಾರಿ,
” ಪದ್ಮಶ್ರೀ ‘’ ಶೆಟ್ಟಿಬೆಟ್ಟು ಶಾಲೆಯ ಹತ್ತಿರ,
ಹೆರ್ಗ ಗ್ರಾಮ,
ಪರ್ಕಳ ಅಂಚೆ, 576107.
ಮೊಬೈಲ್: 9449367825

ದರ್ಶನದ ಪೂಜಾರಿಯವರ ವಿಳಾಸ:

ದಿನೇಶ್ ಪೂಜಾರಿ,
ದರ್ಶನ ಪಾತ್ರಿ,
ಮಾರುತಿ ನಗರ ಪರ್ಕಳ,
ಪರ್ಕಳ ಅಂಚೆ,
ಉಡುಪಿ 576107.
ಮೊಬೈಲ್: 9844211997

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024

Shri Kodamannithaya Brahmabaidarkala Neralu Adisthana Garodi

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ. 41 ನೇ ಶೀರೂರು, ಗ್ರಾಮ ಹರಿಖಂಡಿಗೆ

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಶೀರೂರು ಮೂಲಮಠದ ರಸ್ತೆಯ ಮೂಲಕ ಸಾಗಿ ಹರಿಖಂಡಿಗೆ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಬಲಕ್ಕೆ ತಿರುಗಿ ಸುಮಾರು 350 ಮೀಟರ್ ದೂರ ಸಾಗಿದರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ ಸಿಗುವುದು. ಇದೋಂದು ಆಯದ ಗರೋಡಿಯಾಗಿದ್ದು 26.01.1996 ರ   ಜೀರ್ಣೋದ್ಧಾರದ ಸಮಯದಲ್ಲಿ ಷಢಾಧಾರ ಪ್ರತಿಷ್ಠೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಗರೋಡಿಯ ಆವರಣದಲ್ಲಿ ಬ್ರಹತ್ ನೇರಳೆ ಮರವಿದ್ದು ಅದರ ಅಡಿಯಲ್ಲಿ ಗರೋಡಿ ಇರುವುದರಿಂದ ಈ ಗರೋಡಿಗೆ ನೇರಳೆ ಅಡಿಸ್ಥಾನ ಗರೋಡಿಯೆಂಬ ಹೆಸರು ಬಂದಿದೆ.

ಗರೋಡಿಯ ಆವರಣದಲ್ಲಿರುವ ನೇರಳೆ ಮರ.

ಪ್ರಕಾಶ್ ಪೂಜಾರಿ

ಸುಧಾಕರ ಶೆಟ್ಟಿ

ಇಂದಿಗೆ ಸುಮಾರು ನಾಲ್ಕು ತಲೆಮಾರಿಗೆ ಮುಂಚೆ ಇಲ್ಲಿ ಗರಡಿ ಇಲ್ಲವಾಗಿದ್ದು, ಇಲ್ಲಿಯವರು ಹತ್ತಿರದ ಬೇರೆ ಗರೋಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಶೀರೂರು ಮಠದ ಪ್ರತಿನಿಧಿಗೆ ಆ ಗರೋಡಿಯಲ್ಲಿ ಸರಿಯಾದ ಗೌರವ ಸಲ್ಲಲಿಲ್ಲ ಎಂಬ ಕಾರಣಕ್ಕೆ ಕಂರ್ಬುಕಲ್ಲು ಮನೆಯ ಹಿರಿಯರಾದ ತೋಪ ಪೂಜಾರಿಯವರನ್ನು ಕರೆದು ಶೀರೂರು ಮಠದ ಸ್ವಾಮಿಗಳು ಗರೋಡಿ ಸ್ಥಾಪಿಸಿದರು ಎಂಬ ಸ್ಥಳ ಪುರಾಣವಿದೆ. ಅಂದಿನಿಂದ ಕಂರ್ಬುಕಲ್ಲು ಮನೆಯವರು ಗರೋಡಿಯ ಪೂ ಪೂಜನೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕಾಶ್ ಪೂಜಾರಿಯವರ ಮೊದಲು ಅವರ ಹಿರಿಯರಾದ ಬೀರ ಪೂಜಾರಿ, ರಾಮಣ್ಣ ಪೂಜಾರಿ, ಕೂಕ್ರ ಪೂಜಾರಿ ಹಾಗೂ ತೋಪ ಪೂಜಾರಿ ಇವರುಗಳೂ ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಪ್ರಕಾಶ್ ಪೂಜಾರಿಯವರು (55 ವರ್ಷ ಪ್ರಾಯ) ಬೈದೇರುಗಳ ದರ್ಶನ ಪಾತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದು,  ಇವರಲ್ಲದೆ ಶ್ರೀ ಕೃಷ್ಣ ಪೂಜಾರಿ, (60 ವರ್ಷ ಪ್ರಾಯ) ಇನ್ನೋರ್ವ ಕೃಷ್ಣ ಪೂಜಾರಿ (55 ವರ್ಷ ಪ್ರಾಯ), ಹರೀಶ್ ಪೂಜಾರಿ (40 ವರ್ಷ ಪ್ರಾಯ) ಹಾಗು ರಂಜಿತ್ ಪೂಜಾರಿ (32 ವರ್ಷ ಪ್ರಾಯ) ಇವರುಗಳು ಒಟ್ಟಿಗೆ ಐದು ಮಂದಿ ಸ್ಥಳ ಪಾತ್ರಿಗಳಾಗಿಸೇವೆ ಸಲ್ಲಿಸುತ್ತಿರುವುದು ಇಲ್ಲಿಯ ವಿಶೇಷತೆ.
ಈ ಗರೋಡಿಗೆ ಸಂಬಂಧಪಟ್ಟಂತೆ ವರಡ ವಂತಿಗೆ ನೀಡುವ ಹರಿಖಂಡಿಗೆ ಗ್ರಾಮದ 16 ಬಿಲ್ಲವ ಸಮಾಜ ಬಾಂಧವರ ಮನೆಯಿದ್ದು, 9 ಬಂಟರ ಮನೆಗಳಿವೆ. ಉಳಿದಂತೆ ಹರಿಖಂಡಿಗೆ ಹಾಗೂ ಸುತ್ತಮುತ್ತಲ ಊರ ಜನರು ಗರೋಡಿಯ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವರು. ಗರೋಡಿಯಲ್ಲಿ ಮಂಗಳವಾರ ಪೂಜೆ, ಸೋಣ ಮತ್ತು ಆಟಿ ತಿಂಗಳ ಸಂಕ್ರಾಂತಿಗಳಂದು ಪೂಜೆ, ಚೌತಿಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಹೊಸ ಭತ್ತದ ಅಗೆಲ್ ಸೇವೆ, ಕಾಲಾವಧಿ ಅಗೆಲ್ ಸೇವೆ, ನೇಮೋತ್ಸವಗಳು ನಡೆಯುತ್ತವೆ. ಕಾಲಾವಧಿ ಅಗೆಲ್ ಹಾಗೂ ನೇಮೋತ್ಸವವು ಸುಗ್ಗಿ ತಿಂಗಳ ಹುಣ್ಣಿಮೆಯಂದು ನಡೆಯುತ್ತವೆ. ಬೈದೇರುಗಳ ಅಗೆಲ್ ಸೇವೆ, ನೇಮೋತ್ಸವದ ಜೊತೆಗೆ ಧರ್ಮರಸು, ರಾಜನ್ ದೈವ, ಜೋಗಿ ಪುರುಷ ಹಾಗೂ ಮಾಯಂದಾಲ್, ದೈವಗಳ ಕೋಲ ಸೆವೆಯೂ ನಡೆಯುತ್ತದೆ
ಈ ಗರೋಡಿಗೆ ಬರ್ಕೆಮನೆ(ಕೇದಗೆ ಮನೆ) ಉದಯ ಪೂಜಾರಿ, ಕಂರ್ಬುಕಲ್ಲು ಮನೆ ಪ್ರಭಾಕರ ಪೂಜಾರಿ, ಪರಾರಿಮನೆ ಅಶೋಕ ಶೆಟ್ಟಿ, ಮೇಲ್ಮನೆ ಸತೀಶ್ ಶೆಟ್ಟಿ, ಕಿನ್ನಿಗುಡ್ಡೆ ಕೀಸು ಶೆಟ್ಟಿ, ತುರ್ಕೆರಬೆಟ್ಟು ಭೋಜ ಶೆಟ್ಟಿ ಇವರುಗಳು ಗುರಿಕಾರರಾಗಿರುತ್ತಾರೆ.
ಶೀರೂರು ಮಠದ ಜಾಗದಲ್ಲಿರುವ ಈ ಗರೋಡಿಗಯ ಕಾರ್ಯಕ್ರಮಗಳು ವರಡ, ವಂತಿಗೆ, ಹರಕೆ ಹಾಗೂ ಊರವರ, ಭಕ್ತರ ಸಹಾಯಧನದಿಂದ ನಡೆಯುತ್ತವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ. ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗದ್ದಿಗೆ ದೇವಸ್ಥಾನ 41 ನೇ ಶೀರೂರು, ಜಂಬೆ ಇಲ್ಲಿಂದ ದೇವಿಯ ಗದ್ದಿಗೆಯು ಗರೋಡಿಗೆ ಬಂದು ಇಲ್ಲಿ ದರ್ಶನ ಸೇವೆಯೂ ನಡೆಯುತ್ತದೆ.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

ಗರೋಡಿಯ ಪೂರ್ಣ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು, ,br>ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಗರೋಡಿ ಪೂ ಪೂಜನೆಯವರ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು,
ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಕೊಡಮಾಣಿತ್ತಾಯ ಮುಕ್ಕಾಲ್ದಿ ವಿಳಾಸ:

ಸುಧಾಕರ ಶೆಟ್ಟಿ,
ಬೆಟ್ಟುಮನೆ, 41 ನೇ ಶೀರೂರು,
ಹರಿಖಂಡಿಗೆ ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು – 576124.
ಮೊಬೈಲ್: 78993 09751

ಪ್ರವೀಣ್ ಪೂಜಾರಿ – ಅಧ್ಯಕ್ಷರು, ಆಡಳಿತ ಮಂಡಳಿ

ಮೊಬೈಲ್ : 98803 89859

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2024