ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹೆರ್ಮುಂಡೆ
ಉಡುಪಿಯಿಂದ ಹಿರಿಯಡ್ಕ – ಅಜೆಕಾರು ಮಾರ್ಗವಾಗಿ ಹೆರ್ಮುಂಡೆಗೆ ಬಂದರೆ ಹೆರ್ಮುಂಡೆ ಶ್ರೀ ಮಹಾವಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಒಳಗೆ ಬ್ರಹ್ಮಗುಂಡದ ಕೆಳ ಅಂತಸ್ಥಿನಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆಯಿದೆ. ಗುಂಡದ ಬಲಬದಿಯಲ್ಲಿರುವ ಮಣೆಮಂಚದಲ್ಲಿ ಕೋಟಿ-ಚೆನ್ನಯರ ಪಂಚಲೋಹದ ಮೂರ್ತಿಯಿದೆ.
ಪಕ್ಕದಲ್ಲಿಯೇ ಇರುವ ಮಣೆ ಮಂಚದ ಮೇಲೆ ಜೋಗಿಪುರುಷರ ಪಂಚಲೋಹದ ಮೂರ್ತಿಯಿದೆ.
ಗುಂಡದ ಎಡಬದಿಯಲ್ಲಿರುವ ಮಣೆ ಮಂಚದ ಮೇಲೆ ಪಂಚಲೋಹದ ಮಾಯಂದಾಲ್ ಮತ್ತು ಮಗುವಿನ ಪಂಚಲೋಹದ ಮೂರ್ತಿಯಿದೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ವಿಷ್ಣುಮೂರ್ತಿ ದೇವರ ಕಟ್ಟೆ ತೀರ್ಥಭಾವಿ ಹಾಗೂ ಅಜೆಕಾಯಿ ಕಲ್ಲುಗಳಿವೆ.
ಮಾಧವ ಪೂಜಾರಿ (55 ವರ್ಷ) ಆನಂದ ಪೂಜಾರಿ (51 ವರ್ಷ) ಸುಕುಮಾರ್ (45 ವರ್ಷ) ಜಯ ಪೂಜಾರಿ (47 ವರ್ಷ) ಇವರುಗಳು ಅಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ನರಂಗ ಪೂಜಾರಿ, ಎಚ್.ಕೆ.ಪೂಜಾರಿ, ಮುದ್ದಣ್ಣ ಪೂಜಾರಿಯವರು ಈ ಗರೋಡಿಯ ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿದ್ದರು.
ಈ ಗರೋಡಿಯ ಪಕ್ಕದಲ್ಲಿಯೇ ಇರುವ ಶ್ರೀ ಮಹಾ ವಿಷ್ಣು ಮೂರ್ತಿ ದೇವಸ್ಥಾನ ಪೆರ್ಮುಂಡೆ ಇದರ ಆಡಳಿತದಲ್ಲಿದ್ದು ಆನಂದ ಹೆಗ್ಡೆಯವರು ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾಂತಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ. ಪ್ರತೀ ವರ್ಷ ಸುಗ್ಗಿಯ ಹುಣ್ಣಿಮೆಯಂದು ದ್ವಜಾರೋಹಣ, ಎರಡು ಹಾಗೂ ಮೂರನೇ ದಿನ ದೇವಸ್ಥಾನದ ಪೂಜೆ, ನಾಲ್ಕನೇ ದಿನ ಭಂಡಾರ ಇಳಿದು ಕೋಲದ ಗದ್ದೆಯಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಕಲ್ಕುಡ ಕೋಲ, ಬ್ರಹ್ಮ ಬೈದರ್ಕಳರ ನೇಮ ನಡೆದು ಭಂಡಾರ ವಾಪಾಸು ಬರುವುದು. ಐದನೇ ದಿನ ಮಾಯಂದಾಲ್ ಕೋಲ ನಡೆಯುತ್ತದೆ.
ಮೂರು ವರ್ಷಗಳಿಗೊಮ್ಮೆ ಭಂಡಾರ ಹೋಗಿ ಗರೋಡಿಯ ಹತ್ತಿರದಲ್ಲಿ ದೊಂಪದ ಬಲಿ, ಮಾಯಂದಾಲ್ ಹೊರತು ಪಡಿಸಿ ಉಳಿದೆಲ್ಲಾ ದೈವಗಳ ಕೋಲ ನಡೆದು ಭಂಡಾರ ವಾಪಾಸು ಬರುವ ಕ್ರಮವಿದೆ.
ಮುಂಡೇಲು ಹಾಗೂ ಪೆರ್ಮುಂಡೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗಿರುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು 2020ರಲ್ಲಿ ಜೀರ್ಣೋದ್ಧಾರ ಗೊಂಡಿದೆ.
ದಾಮು ಮಡಿವಾಳ ಹೆರ್ಮುಂಡೆ ಇವರು ಗರೋಡಿಯ ಮಡಿವಾಳರಾಗಿ, ಜಗ್ಗು ದೇವಾಡಿಗ ಕೆಮ್ಮಣ್ಣು ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆರ್ಮುಂಡೆ,
ಹೆರ್ಮುಂಡೆ ಅಂಚೆ, ಕಾರ್ಕಳ ತಾಲೂಕು, ಉಡುಪಿ 574101
ಹೆರ್ಮುಂಡೆ ಅಂಚೆ, ಕಾರ್ಕಳ ತಾಲೂಕು, ಉಡುಪಿ 574101
ಗರೋಡಿಯ ಪೂ ಪೂಜನೆಯವರು:
ಮಾಧವ ಪೂಜಾರಿ – 978097010
ಆನಂದ ಪೂಜಾರಿ – 989021456
ಸುಕುಮಾರ – 948858404
ಜಯ ಪೂಜಾರಿ – 9980438163
ಆನಂದ ಪೂಜಾರಿ – 989021456
ಸುಕುಮಾರ – 948858404
ಜಯ ಪೂಜಾರಿ – 9980438163
ಮಾಹಿತಿ ನೀಡಿದವರು:
ಮಾಧವ ಪೂಜಾರಿ
ಆನಂದ ಪೂಜಾರಿ
ಆನಂದ ಪೂಜಾರಿ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
16-07-2025