Baidashree

Shree Brahma Baidarkala Koti Chennnaya Garodi – Ulluru 11

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ – ಉಳ್ಳೂರು 11

ಉಡುಪಿಯಿಂದ – ಕುಂದಾಪುರ – ನಾವುಂದದ ನಂತರ ಎನ್.ಎಚ್. 66ರಲ್ಲಿ ಅರೆಹೊಳೆ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ ಸುಮಾರು 2.48ಕಿ.ಮೀ. ಸಾಗಿದ ನಂತರ ಎಡಕ್ಕೆ ತಿರುಗಿ ಸುಮಾರು 2.58 ಕಿ. ಮೀ. ಸಾಗಿದರೆ ಉಳ್ಳೂರು 11 ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಸಿಮೆಂಟಿನಿಂದ ಕಟ್ಟಿ, ಟೈಲ್ಸ್ ಹಾಕಲಾದ ಬ್ರಹ್ಮಗುಂಡದ ಒಳಗೆ ಮರದ ಮೂರ್ತಿಗೆ ಬೆಳ್ಳಿಯ ಕವಚ ಹಾಕಲಾದ ನಾಗ ಬ್ರಹ್ಮರ ಹಾಗೂಮರದ ಮೂರ್ತಿಗೆ ಬೆಳ್ಳಿ ಕವಚ ಹಾಕಲಾದ ವೆಂಕಟರಮಣ ದೇವರ ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಬಂಟ ಹಾಗೂ ನಂದಿಯ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ದೇಯಿ ಬೈದೆತಿಯ ಬೆಳ್ಳಿಯ ಮೂರ್ತಿ, ಬೈದ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಬಲಭಾಗದಲ್ಲಿ ಪಂಜುರ್ಲಿ ಹಾಗೂ ಕುಪ್ಪೆ ಪಂಜುರ್ಲಿ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಕರಿಬೆಟ್ಟಿನ ಹೈಗುಳಿ, ಕಂಚಿನ ಹೈಗುಳಿ, ಮೂಕ ಹೈಗುಳಿ, ಧೂಮಾವತಿ, ಮೈಂದಾಳತಿ, ವೀರ ಜಟ್ಟಿಗ, ದೊಟ್ಟೆಕಾಲಚಿಕ್ಕು, ಬಾಲಮ್ಮ, ದೊಟ್ಟೆಕಾಲಮ್ಮ, ಮಾಸ್ತಿ, ನಿರ್ವಾಣ ಚಿಕ್ಕು, ಮರ್ಲುಚಿಕ್ಕು, ಮರ್ಲಮ್ಮ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಜೋಗಿಪುರುಷ, ಕೆಪ್ಪಹೈಗುಳಿ, ಮೂಡೂರ ಹೈಗುಳಿ, ಸುಕುರಹೈಗುಳಿ, ಮುರ್ಚಂಡಿ, ನಾಲ್ಕುಪಾದದಹೈಗುಳಿ, ಹಣೇರಹೈಗುಳಿ, ಸ್ಥಳದಹೈಗುಳಿ, ಮಾಸ್ತಿ, ಕೆಂಪುಬಣ್ಣದಹೈಗುಳಿ, ಜೈನಹೈಗುಳಿ, ಪಾತ್ರಿಪುರುಷ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಒಂದು ಬದಿಯಲ್ಲಿ ಬಾಗಿಲಬೊಬ್ಬರ್ಯನ ಮರದ ಮೂರ್ತಿ ಹಾಗೂ ಬಲಿಕಲ್ಲು, ಇನ್ನೊಂದು ಬದಿಯಲ್ಲಿ ಯಕ್ಷಿ ಹಾಗೂ ಹೊರಸುತ್ತಿನ ಹೈಗುಳಿ ದೈವಗಳ ಮರದ ಮೂರ್ತಿ ಹಾಗೂ ರಾಹು, ಭೂತ, ಚಂಡಿ, ಹಾಗೂ ಕೀಳು ದೈವಗಳ ಕಲ್ಲುಗಳಿವೆ.
ಗರೋಡಿಯ ಆವರಣದಲ್ಲಿರುವ ಗುಡಿಯೊಂದರಲ್ಲಿ ಹೊಸ ಹೈಗುಳಿ, ಹಾಗೂ ರಾಹುವಿನ ಸಾನಿಧ್ಯವಿದೆ.
ಗರೋಡಿಯ ಆವರಣದೊಳಗೆ ಹಿಂಬದಿಯಲ್ಲಿ ನಾಗಬನವಿದೆ.
ಗರೋಡಿಯ ಅಂಗಣದಲ್ಲಿ ಕ್ಷೇತ್ರಪಾಲ ಕಟ್ಟೆ ಹಾಗೂ ತುಳಸಿಕಟ್ಟೆಗಳಿವೆ.
ಗರೋಡಿಯ ಒಳಗೆ ಹೋಗುವ ಗಂಡಸರು, ಹುಡುಗರು ತಮ್ಮ ಅಂಗಿ ಬನಿಯಾನ್ ಗಳನ್ನು ತೆಗೆದು ಗರೋಡಿ ಪ್ರವೇಶಿಸಬೇಕೆಂಬ ಸಂಪ್ರದಾಯವಿದೆ.

ಗಣೇಶ ಪೂಜಾರಿ

2021 ರಿಂದ ಗಣೇಶ ಪೂಜಾರಿ (44 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ನಾಗಯ್ಯ ಪೂಜಾರಿ, ಪುಟ್ಟಯ್ಯ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.

ರಾಜು ಪೂಜಾರಿ

ರಾಜು ಪೂಜಾರಿ (36 ವರ್ಷ) ಇವರು ಇಲ್ಲಿ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರ ಮೊದಲು ನರಸಿಂಹ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.
ಸೇಸ ಪೂಜಾರಿ ಯಾನೆ ಕೇಶವ ಪೂಜಾರಿ(68 ವರ್ಷ) ಇವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರಿಗೆ ಮೊದಲು ಗುಡಾಡಿ ಮನೆ ಅಣ್ಣಪ್ಪ ಪೂಜಾರಿಯವರು ಇಲ್ಲಿ ಮೊಕ್ತೇಸರರಾಗಿದ್ದರು.
ಸೀತಾರಾಮ ಶೆಟ್ಟಿಯವರು ಇಲ್ಲಿಯ ಬಲ್ಲಾಳ ಶೆಟ್ಟಿಯವರಾಗಿದ್ದಾರೆ. ಇವರ ಮೊದಲು ಸುಬ್ಬಯ್ಯ ಶೆಟ್ಟಿಯವರು ಇಲ್ಲಿಯ ಬಲ್ಲಾಳಶೆಟ್ಟಿಯವರಾಗಿದ್ದರು.
ಗರೋಡಿಯಲ್ಲಿ ನಿತ್ಯ ನೀರು ಇಟ್ಟು ದೀಪ ಹಚ್ಚುವ ಕ್ರಮವಿದೆ. ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳ 14ರಂದು ಹಾಲಹಬ್ಬ, ದರ್ಶನಸೇವೆ, ಫೆಬ್ರವರಿ ತಿಂಗಳ ಒಂದು ದಿನ ಅಗೆಲು ಸೇವೆ, ಮಾರನೇ ದಿನ ಗುರಿ ಪೂಜೆ, ಮರುದಿನ ಮಾಸ್ತಿ ಪೂಜೆಗಳುನನಡೆಯುತ್ತವೆ. ಮೇ ತಿಂಗಳಲ್ಲಿ ಗಡಿ ಪೂಜೆ (ಮಾರಿ ಹಬ್ಬ) ನಡೆಯುತ್ತದೆ.
ಗರೋಡಿಯ ಕೂಡುಕಟ್ಟಿಗೆ ಉಳ್ಳೂರು 11 ಹಾಗೂ ಉಪ್ರಳ್ಳಿ ಊರುಗಳು ಸೇರಿದ್ದು ಜನರು ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
15ಸೆಂಟ್ಸ ಜಾಗವು ಗರೋಡಿಯ ಹೆಸರಲ್ಲಿದ್ದು 2013ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಕೃಷ್ಣ ಮಡಿವಾಳ, ಉಳ್ಳೂರು ಇವರು ಗರೋಟಿಯ ಮಡಿವಾಳರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಟಿ ಉಳ್ಳೂರು – 11,
ಮೂಡುಮಠ ಪೋಸ್ಟ, ಬೈಂದೂರು ತಾಲೂಕು ಉಡುಪಿ576219.

ಗರೋಡಿಯ ಅರ್ಚಕರು:

ಗಣೇಶ ಪೂಜಾರಿ – 8310048245

ಗರೋಡಿಯ ಪಾತ್ರಿಗಳು:

ರಾಜು ಪೂಜಾರಿ – 9686324662

ಗರೋಡಿಯ ಮೊಕ್ತೇಸರರು:

ಸೇಸ ಪೂಜಾರಿ ಯಾನೆ ಕೇಶವ ಪೂಜಾರಿ – 9900305246.

ಮಾಹಿತಿ ನೀಡಿದವರು :

ಗಣೇಶ ಪೂಜಾರಿ,
ಪ್ರಭಾಕರ ಪೂಜಾರಿ (ಸೇಸು ಪೂಜಾರಿಯವರ ತಮ್ಮ)

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025