ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಜಾರ್ಕಳ
ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಬೈಲೂರು ಪದವಿಪೂರ್ವ ಕಾಲೇಜಿನ ಒಂದು ಕಿ.ಮೀ. ನಂತರ ಎಡಕ್ಕೆ ತಿರುಗಿ ಪುನ: ಒಂದು ಕಿ.ಮೀ. ಸಾಗಿದರೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಈ ಗರೋಡಿ ಇದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯರ ಮರದ ಮೂರ್ತಿಯಿದೆ. ಗುಂಡದ ಬಲಬದಿಯಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ ಹಾಗೂ ಕುಜುಂಬ ಕಾಂಜವರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಮಾಯಂದಾಳ್ ಮತ್ತು ಮಗು, ಜೋಗಿಪುರುಷರ ಮರದ ಮೂರ್ತಿಗಳಿವೆ,
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕುಕ್ಕಿನಂತಾಯ, ಕೊಡಮಣಿತ್ತಾಯ ದೈವದ ಸಾನಿಧ್ಯವಿದೆ. ಗರೊಡಿಯ ಆವರಣದಲ್ಲಿ ತುಳಸಿಕಟ್ಟೆ ಹಾಗೂ ಬಲಿಕಲ್ಲುಗಳಿವೆ.
ಮೋಹನ್‌ದಾಸ್ ಹೆಗ್ಡೆ
ಜಾರ್ಕಳ ಮನೆಯ ಮೋಹನ್‌ದಾಸ್ ಹೆಗ್ಡೆಯವರು ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನ ಹಾಗೂ ಗರೋಡಿಗಳ ಅನುವಂಶಿಕ ಮೋಕ್ತೇಸರರಾಗಿದ್ದಾರೆ.
ರಾಘು ಪೂಜಾರಿ
ರಾಘು ಪೂಜಾರಿ(57 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಕರುಣಾಕರ ಪೂಜಾರಿ (57 ವರ್ಷ) ಇವರಯ ಸಹ ಅರ್ಚಕರಾಗಿದ್ದಾರೆ. ಇವರ ಮೊದಲು ಕೃಷ್ಣ ಪೂಜಾರಿ, ಲೋಕು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮವಿದೆ. ಸುಗ್ಗಿ ತಿಂಗಳ ಹುಣ್ಣಿಮೆ ಮೂರನೇ ದಿನ (ಮಾರ್ಚ ಏಪ್ರಿಲ್ ತಿಂಗಳಲ್ಲಿ) ಗುತ್ತಿನ ಮನೆಯಲ್ಲಿರುವ ಭಂಡಾರವನ್ನು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುರೋಹಿತರ ಮನೆಗೆ ತಂದಿಟ್ಟು, ಅಲ್ಲಿಂದ ಗರೋಡಿಗೆ ಬಂದು ಕುಕ್ಕಿನಂತಾಯ ಹಾಗೂ ಕೊಡಮಣಿತ್ತಾಯ ಮತ್ತು ಬೈದರ್ಕಳ ನೇಮ ನಡೆಯುತ್ತದೆ. ಮರುದಿನ ಮಾಯಂದಾಲ್ ಕೋಲ ನಡೆದ ನಂತರ ಅನ್ನ ಸಂತರ್ಪಣೆ ನಡೆಯುತ್ತದೆ.
ಜಾರ್ಕಳ ಪರಿಸರದ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮುಂತಾದ ಶುಭಸಂದರ್ಬದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ, ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು 1984ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಚುಕುಡು ಪರವ ಕುಕ್ಕುಂದೂರು ಮತ್ತು ಸಂಗಡಿಗರು ಗರೋಡಿಯ ನೃತ್ಯವಿಶಾದರರಾಗಿ, ಗೋಪ ಮಡಿವಾಳ ಜಾರ್ಕಳ ಮಡಿವಾಳರಾಗಿ, ಸುಕೇಶ ದೇವಾಡಿಗ ಜಾರ್ಕಳ ವಾದ್ಯದವರಾಗಿ, ವಿಜಯ ಜಾರ್ಕಳ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು.
ಗರೋಡಿಯ ವಿಳಾಸ:
ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಜಾರ್ಕಳ,
ಯರ್ಲಪ್ಪಾಡಿ ಗ್ರಾಮ, ಕಾರ್ಕಳ ತಾಲೂಕು.
ಯರ್ಲಪ್ಪಾಡಿ ಗ್ರಾಮ, ಕಾರ್ಕಳ ತಾಲೂಕು.
ಅನುವಂಶಿಕ ಆಡಳಿತ ಮೊಕ್ತೇಸರರು:
ಜೆ ಮೋಹನ್‌ದಾಸ್ ಹೆಗ್ಡೆ
ಅರ್ಚಕರು:
ರಾಘು ಪೂಜಾರಿ – 9611388215
ಮಾಹಿತಿ ನೀಡಿದವರು:
ಜೆ ಮೋಹನ್‌ದಾಸ್ ಹೆಗ್ಡೆ
ರಾಘು ಪೂಜಾರಿ
ರಾಘು ಪೂಜಾರಿ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
03.06.2025