ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಕಲ್ಯ, ಕೈರಬೆಟ್ಟು
ಉಡುಪಿಯಿಂದ ಬೆಳ್ಮಣ್ಣು ಮಾರ್ಗವಾಗಿ ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಬೆಳ್ಮಣ್ಣಿನ ನಂತರ ಸುಮಾರು 6 ಕಿ. ಮೀ.ದೂರದಲ್ಲಿ ಸ್ವಾಗತ ಗೋಪುರದ ಮೂಲಕ ಎಡಕ್ಕೆ ತಿರುಗಿ ಅರ್ಧ ಕಿ. ಮೀ. ದೂರ ಸಾಗಿದರೆ ಈ ಗರೋಡಿ ಇದೆ.
ಶಿಲಾಮಯವಾದ ಈ ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯದ್ವಾರ ಹಾಗೂ ಇನ್ನೊಂದು ಬಡಗು ಮುಖವಾಗಿರುವ ದ್ವಾರವಿದೆ. ಬ್ರಹ್ಮಗುಡಿಯು ಬಡಗು ಮುಖವಾಗಿದ್ದು, ಷಢಾದಾರ ಪ್ರತಿಷ್ಠೆಯನ್ನು ಹೊಂದಿದೆ. ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಎಡಭಾಗದಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿ ಹಾಗೂ ಜೋಗಿಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಗರೋಡಿಯ ಬಲಬದಿಗೆ ಇರುವ ಗುಡಿಯಲ್ಲಿ ಕೊಡಮಣಿತ್ತಾಯ, ಪಿಲ್ಚಂಡಿ, ಕುಕ್ಕಿನಂತಾಯ, ಧರ್ಮರಸು, ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಮಹಮ್ಮಾಯಿಯ ಮಣೆ ಮಂಚವಿದೆ.
ಗರೋಡಿಯ ಎಡಭಾಗದಲ್ಲಿರುವ ಗುಡಿಯಲ್ಲಿ ಮಾಯಂದಾಲ್, ಮಗುವಿನ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದಲ್ಲಿ ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬ್ರಹ್ಮಸ್ಥಾನ ಹಾಗೂ ರಕ್ತೇಶ್ವರಿ ಬನಗಳಿವೆ.
ರಾಜೇಶ್ ಪೂಜಾರಿ
ಸುಧಾಕರ ಪೂಜಾರಿ
ಶ್ರೀಧರ ಪೂಜಾರಿ
ರಾಜೇಶ್ ಪೂಜಾರಿ (40 ವರ್ಷ) ಸುಧಾಕರ ಪೂಜಾರಿ (58 ವರ್ಷ) ಕರುಣಾಕರ ಪೂಜಾರಿ ಇವರು ಗರೋಡಿಯ ಅರ್ಚಕರಾಗಿದ್ದಾರೆ. ಶ್ರೀಧರ ಪೂಜಾರಿಯವರು ಮಾಯಂದಾಳ್ ಗುಡಿಯ ಅರ್ಚಕರಾಗಿದ್ದಾರೆ. ಈ ಗರೋಡಿಯಲ್ಲಿ ದರ್ಶನ ಪಾತ್ರಿಗಳಿಲ್ಲ. ಹಿಂದೆ ಶೀನ ಪೂಜಾರಿಯವರು ಇಲ್ಲಿ ಅರ್ಚಕರಾಗಿಯೂ, ಸ್ಥಳ ಪಾತ್ರಿಗಳಾಗಿಯೂ ಸೇವೆ ಮಾಡಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿ ಇದೆ. ಶಶಿಧರ ಕರ್ಕೇರರು ಅಧ್ಯಕ್ಷರಾಗಿ ಹಾಗೂ ಕರುಣಾಕರ ಪೂಜಾರಿಯವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಕದಿರು ಕಟ್ಟುವ ಕ್ರಮ ಇದೆ. ಪುಯಿಂತೆಲ್ ತಿಂಗಳ ಹುಣ್ಣಿಮೆಯ ಮೊದಲ ದಿನ ಕೈರಬೆಟ್ಟು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಮಹಮ್ಮಾಯಿ ಗದ್ದಿಗೆಯು ದೊಡ್ಡಮನೆ ವೈ. ದಾಮೋದರ ಬೋಂಟ್ರರ ಮನೆಗೆ ಬಂದು ಅಲ್ಲಿಂದ ಬೈದೇರುಗಳ ಭಂಡಾರದೊಂದಿಗೆ ಕಲ್ಯ ಪರಾಡಿ ಜೀತು ಅತಿಕಾರಿಯವರ ಮನೆಗೆ ಹೋಗಿ ಅಲ್ಲಿಂದ ಕೊಡಮಣಿತ್ತಾಯ ಭಂಡಾರದೊಂದಿಗೆ ದರ್ಶನದಲ್ಲಿ ಗರೋಡಿಗೆ ಬಂದು ಅಂದು ಕೊಡಮಣಿತ್ತಾಯ, ಕುಕ್ಕಿನಂತಾಯ, ಕೋಲ ನಡೆಯುತ್ತದೆ. ಮರುದಿನ ಬೈದರ್ಕಳ ನೇಮ ದೇವಿ ದರ್ಶನ ನಡೆಯುತ್ತದೆ. ಮೂರನೇ ದಿನ ಜೋಗಿ ಪುರುಷ, ಮಾಯಂದಾಲ್, ಕೋಲ ನಡೆದ ನಂತರ ಭಂಡಾರ ವಾಪಾಸು ಹೋಗುವುದು.
ಮೇ ತಿಂಗಳ ಮೊದಲ ಗುರುವಾರದಂದು ಮಟ್ಟಾರು ಜಾತ್ರೆಯ ಸಂದರ್ಭದಲ್ಲಿ ಭಂಡಾರ ಬಂದು ಮಾಯಂದಾಳ ಹಾಗೂ ಜೋಗಿಪುರುಷ ಹೊರತುಪಡಿಸಿ ಉಳಿದೆಲ್ಲಾ ದೈವಗಳ ಕಟ್ಟು ಕಟ್ಟಳೆಯ ಕೋಲ ನಡೆದು ಬೆಳಗ್ಗೆ ಭಂಡಾರ ವಾಪಾಸು ಹೋಗುತ್ತದೆ.
ಕಲ್ಯ ಕೈರಬೆಟ್ಟುವಿನ ಜನ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭಸಂದರ್ಭದ್ಲಿ ತೆಗೆದಿಡುವ ಜೋಡಿ ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಗೆ 60 ಸೆಂಟ್ಸ ಜಾಗವಿದ್ದು, 2021ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಮಾಳದ ಪರವರು ಈ ಗರೋಡಿಯ ನೃತ್ಯ ವಿಶಾರದರು. ಶೇಖರ ಮಡಿವಾಳ ಇವರು ಮಡಿವಾಳರಾಗಿ, ರಾಜೇಶ್ ಮೊಯಿಲಿಯವರು ವಾಧ್ಯದವರಾಗಿ ಈ ಗರೊಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದೇರುಗಳ ಗರೋಡಿ ಕಲ್ಯ, ಕೈರಬೆಟ್ಟು
ಕಾರ್ಕಳ ತಾಲೂಕು,
ಉಡುಪಿ – 574116
ಉಡುಪಿ – 574116
ಗರೋಡಿಯ ಅರ್ಚಕರು:
ರಾಜೇಶ್‌ಪೂಜಾರಿ – 9741848280
ಸುಧಾಕರ ಪೂಜಾರಿ – 9901699073
ಶ್ರೀಧರ ಪೂಜಾರಿ – 9901355943
ಸುಧಾಕರ ಪೂಜಾರಿ – 9901699073
ಶ್ರೀಧರ ಪೂಜಾರಿ – 9901355943
ಮಾಹಿತಿ ನೀಡಿದವರು:
ಯಶೋಧರ ಬೋಂಟ್ರ – 9611052905
ಮಾಹಿತಿ ಸಂಗ್ರಹಿಸಿದವರು:
ಎ.ಮಾಧವ ಆದಿಉಡುಪಿ
ಹರೀಶ್ ಎಮ್.ಕೆ.ಕಲ್ಮಾಡಿ
ಹರೀಶ್ ಎಮ್.ಕೆ.ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
19.06.2025