ಅತ್ತೂರು ಶ್ರೀ ಕೋಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರೋಡಿ, ಬೆರಂದೊಟ್ಟು
ಉಡುಪಿಯಿಂದ ಬೆಳ್ಮಣ್ಣು-ಕಾರ್ಕಳ ಮಾರ್ಗವಾಗಿ ನಿಟ್ಟೆ ದಾಟಿದ ನಂತರ ದೂಪದ ಕಟ್ಟೆಯಲ್ಲಿ ಎಡಕ್ಕೆ ತಿರುಗಿ ಸುಮಾರು 2.5 ಕಿ. ಮೀ. ಸಾಗಿದರೆ ಬೆರೊಂದೊಟ್ಟು ಗರೋಡಿ ಸಿಗುವುದು.
ಶಿಲಾಮಯವಾದ ಈ ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಗೆ ಪೂಜೆ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ಮೂರ್ತಿಯನ್ನು ತಂದು ಪೂಜಿಸಲಾಗುತ್ತಿದೆ. ಮಿಕ್ಕಿದಂತೆ ಈ ಮೂರ್ತಿ ಭಂಡಾರದ ಮನೆಯಾದ ಬಲಿಪ ಗುತ್ತಿನಲ್ಲಿ ಇಡಲಾಗುತ್ತದೆ. ಗುಂಡದ ಎಡಬಲಗಳಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿಗಳಿವೆ.
ಬಲಬದಿಯಲ್ಲಿ ಕುಜುಂಬ ಕಾಂಜವರ ಮರದ ಮೂರ್ತಿಯಿದೆ.
ಬಲಬದಿಯಲ್ಲಿ ಮಾಯಂದಾಳ್ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಗರೋಡಿಯ ಬಲಬದಿಯಲ್ಲಿರುವ ಗುಡಿಯಲ್ಲಿ ಕೊಡಮಣಿತ್ತಾಯ, ಕುಕ್ಕಿನಂತಾಯ, ಧರ್ಮರಸು ದೈವಗಳ ಸಾನಿಧ್ಯವಿದೆ.
ಗರೋಡಿಯ ಆವರಣದಲ್ಲಿ ಮಹಾಮ್ಮಾಯಿ ಕಟ್ಟೆಯಿದೆ.
ಗರೋಡಿಯ ಆವರಣದಲ್ಲಿ ಗರೋಡಿಯ ಹಿಂಬದಿಯಲ್ಲಿ ನಾಗನಕಟ್ಟೆ, ಅಜೆಕಾಯಿ ಕಲ್ಲು ಇದೆ.
ಗರೋಡಿಯ ಹೊರಾಂಗಣದಲ್ಲಿರು ಗುಡಿಯಲ್ಲಿ ವರ್ತೆ, ಕಲ್ಕುಡ, ತೂಕತ್ತರಿ ದೈವಗಳ ಸಾನಿಧ್ಯವಿದೆ.
ರಾಮ ಪೂಜಾರಿ (65 ವರ್ಷ), ಸುರೇಂದ್ರ ಪೂಜಾರಿ, ಕಿಟ್ಟಣ್ಣ ಇವರು ಈ ಗರೋಡಿಯ ಪೂ ಪೂಜನೆಯವರಾಗಿದ್ಧಾರೆ. ಇವರ ಮೊದಲು ಬಾಬು ಪೂಜಾರಿ, ತನಿಯ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು. ಈಗ ಈ ಗರೋಡಿಯಲ್ಲಿ ಬೈದ್ಯರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ರಾಮ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು.
ಈ ಗರೋಡಿಯ ಕೂಡುಕಟ್ಟಿನಲ್ಲಿ 1. ಬಲಿಪ ಗುತ್ತು 2. ಕೈಲಜೆ ಗುತ್ತು 3. ಕಡಂಬರ ಗುತ್ತು 4. ಕಿಲಬೆಟ್ಟು ಗುತ್ತು 5. ಎಲಿಕಾನ ಗುತ್ತು 6. ಕಲಂಬಾಡಿ ಗುತ್ತು 7. ಗುಂಡ್ಯಡ್ಕ ಗುತ್ತುಗಳೆಂಬ ಏಳು ಗುತ್ತು ಹಾಗೂ 1. ಮೊಯ್‌ಲ್ದೊಟ್ಟು ಬರ್ಕೆ 2. ಮಹಾಬಲೊಟ್ಟು ಬರ್ಕೆ 3. ಮೈಲಾಜೆ ಬರ್ಕೆಗಳೆಂಬ ಮೂರು ಬರ್ಕೆ ಮನೆಗಳು ಇವೆ. ಬಲಿಪ ವಿಠಲ್ ಶೆಟ್ಟಿಯವರು ಒಂದನೇ ಗುತ್ತಿನವರಾಗಿದ್ದಾರೆ.
ಗರೋಡಿಯಲ್ಲಿ ವರ್ಷದ 12 ಸಂಕ್ರಾಂತಿಯಂದು ಪೂಜೆ, ಅನ್ನ ಸಂತರ್ಪಣೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವುದು, ಚಾಂದ್ರಮಾನ ಯುಗಾದಿಯಂದು ಭಂಡಾರ ಬಂದು ದ್ವಜಾರೋಹಣ, ಧರ್ಮರಸು ಕೋಲ, ಅನ್ನ ಸಂತರ್ಪಣೆ, ಅದರ ಮರುದಿನ ಸತ್ಯ ನಾರಾಯಣ ಪೂಜೆ, ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ, ವರ್ತೆ, ಕಲ್ಕುಡ, ತೂಕತ್ತರಿ ಕೋಲ, ಗೋಂದೋಲು ಸೇವೆ, ಅನ್ನ ಸಂತರ್ಪಣೆ ನಡೆಯುತ್ತದೆ. ಅದರ ಮರುದಿನ ಬೈದರ್ಕಳ ಕೋಲ, ಬಲಿಪೂಜೆ, ಬಾಕ್ಯಾಅರಿಗೆ ಇಳಿದು ಬುದ್ಯಂತ ಜಯಿಸುವುದು ಅನ್ನ ಸಂತರ್ಪಣೆ ನಡೆಯುತ್ತದೆ. ನಾಲ್ಕನೇ ದಿನ ಮಾಯಂದಾಲ್ ಕೋಲ, ಅನ್ನ ಸಂತರ್ಪಣೆ, ಭಂಡಾರ ವಾಪಾಸು ಹೋಗುವುದು.
ಐದು ವರ್ಷಗಳಿಗೊಮ್ಮೆ ದೂಪದಕಟ್ಟೆ, ಕಂಚಾರಬೆಟ್ಟು ಕಟ್ಟೆ (ಗಣಪತಿ ದೇವಸ್ಥಾನದ ಎದುರಿನಲ್ಲಿ) ಭಂಡಾರ ಬಂದು ದೊಂಪದ ಬಲಿ ನಡೆಯುತ್ತದೆ. ಮಾಯಂದಾಲ್ ಹೊರತುಪಡಿಸಿ ಉಳಿದೆಲ್ಲಾ ದೈವಗಳ ಕೋಲ ನಡೆದು ಭಂಡಾರ ವಾಪಾಸು ಹೋಗುವುದು.
ಅತ್ತೂರು ಗ್ರಾಮದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆಯ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರಊರ ಜನರ ವರಡ, ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಯು 1978 ಹಾಗೂ 2014ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಚುಕುಡ ಪರವ ಕುಕ್ಕುಂಜಾರು, (ಮಾಯಂದಾಲ್ ಹಾಗೂ ಕೊಡಮಣಿತ್ತಾಯ) ಸುಕೇಶ ಕುಕ್ಕುಂದೂರು (ಕುಕ್ಕಿನಂತಾಯ) ಗಂಗಯ್ಯ ಪರವ ಕೆರ್ವಾಸೆ, ಪ್ರಶಾಂತ ಪರವ, ರಮೇಶ್ ಪರವ, ಇವರು ಬೈದೇರುಗಳ ನೃತ್ಯ ವಿಶಾರದರಾಗಿ, ಜಗನ್ನಾಥ ಶೇರಿಗಾರ ನಿಟ್ಟೆ ಇವರು ವಾಧ್ಯದವರಾಗಿ, ನಾರಾಯಣ ಕಾರ್ಕಳ ಇವರು ಬ್ಯಾಂಡ್‌ನವರಾಗಿ, ಸುಧಾಕರ ಕುಕ್ಕುಂದೂರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರಡಿ ಪ್ರೆಂಡ್ಸ, ಬೆರಂದೊಟ್ಟು ಎಂಬ ಯುವಕರ ಸಂಘಟನೆಯು ಇಲ್ಲಿ ಸಕ್ರಿಯವಾಗಿದೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಅತ್ತೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರೋಡಿ,
ಬೆರಂದೊಟ್ಟು ದೂಪದ ಕಟ್ಟೆ,
ಅಂಚೆ ಕಾರ್ಕಳ ಉಡುಪಿ – 574110
ಅಂಚೆ ಕಾರ್ಕಳ ಉಡುಪಿ – 574110
ಮಾಹಿತಿ ನೀಡಿದವರು:
ಬಾಲಕೃಷ್ಣ ಹೆಗಡೆ, ಕಿಲ್ಲಬೆಟ್ಟು ಗುತ್ತು (ಸಂಚಾಲಕರು) – 9008091987
ಕಿಶೋರ್ ಶೆಟ್ಟೆ ಬೆರೊಂದೊಟ್ಟ – 8296292820
ಸುಕೇಶ ಪೂಜಾರಿ ಕೊಡಂಗೆ – 7090812186
ಕಿಶೋರ್ ಶೆಟ್ಟೆ ಬೆರೊಂದೊಟ್ಟ – 8296292820
ಸುಕೇಶ ಪೂಜಾರಿ ಕೊಡಂಗೆ – 7090812186
ಮಾಹಿತಿ ಸಂಗ್ರಹಿಸಿದವರು:
ಎ.ಮಾಧವ ಆದಿವುಡುಪಿ
ಹರೀಶ್ ಎಂ.ಕಲ್ಮಾಡಿ
ಹರೀಶ್ ಎಂ.ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
19-06-2025