ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ, ಬಿಜೂರು
ಉಡುಪಿಯಿಂದ – ಕುಂದಾಪುರ – ನಾವುಂದ – ಕಿರಿಮಂಜೇಶ್ವರ – ಕೆರ್ಗಾಲ್ – ಖಂಬದಕೋಣೆ – ಉಪ್ಪುಂದದ ನಂತರ ಬಿಜೂರು ತಲುಪಿ ಎನ್ ಎಚ್ 66ರಲ್ಲಿ ಬಲಕ್ಕೆ ತಿರುಗಿ ಸುಮಾರು 2.5 ಕಿ. ಮೀ. ದೂರದಲ್ಲಿ ಬೈಂದೂರು ಹೊಳೆಯ ಬದಿಯಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲ್ಪಟ್ಟ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರ ಮರದ ಮೂರ್ತಿ, ಆಕಾಶ ಪಂಜುವಿನ ಕಲ್ಲಿನ ಮೂರ್ತಿ, ಪಕ್ಕದಲ್ಲಿ ಸ್ಥಾನದ ನಂದಿಕೇಶ್ವರನ ಮರದಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ, ಬೈದ, ಹಾಗೂ ಬಂಟರ ಆರಾಧನೆಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಮರ್ಲಮ್ಮ, ಹಿಜನ್ ಹೈಗುಳಿ, ದೊಟ್ಟಿಕಾಲ ಚಿಕ್ಕು, ಬಾಲಚಿಕ್ಕು, ಮರ್ಲ ಚಿಕ್ಕು, ಪಂಜುರ್ಲಿ ವಾಹನ, ಪಂಜಿರ್ಲಿ ದೈವಗಳ ಮರದ ಮೂರ್ತಿಗಳಿಗೆ ಪೂಜೆ ಇದೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಕಾಶಿನಂದಿ, ಪರಿವಾರ ದೈವಗಳು, ಧೂಮಾವತಿ, ಹೊನ್ನಳ್ಳಿ ಮಾಸ್ತಿ, ಮಾಯ್ದಳಿ, ಕರೂರು ಮಾಸ್ತಿ, ತಂತ್ರಿ, ಜೋಗದೇವರು, ಪರಿವಾರದೈವ, ಮೂಡೂರ ಹೈಗುಳಿ, ಪರಿವಾರ ದೈವ, ಸಿಂಗಾರ ಹೈಗುಳಿ, ಮೂರ್ಚಂಡು, ಪರಿವಾರ ದೈವಗಳು, ವಿಶ್ವಕರ್ಮ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗಿರುವ ಗುಡಿಯಲ್ಲಿ ಸ್ವಾಮಿ, ಹೊರಸುತ್ತಿನ ಹೈಗುಳಿ, ಹಾಗೂ ಹೈಗುಳಿ ದೈವಗಳ ಸಾನಿಧ್ಯವಿದೆ.
ಇನ್ನೊಂದು ಗುಡಿಯಲ್ಲಿ ಕೆಂಚ ಹೈಗುಳಿ ದೈವದ ಕಲ್ಲು ಇದ.
ಗರೋಡಿಯ ಆವರಣದ ಹೊರಗೆ ಕೀಳಿನ ಕಲ್ಲು ಇದೆ.
ಬೈಂದೂರು, ಶೀರೂರು, ಕಳವಾಡಿ, ತಗ್ಗರ್ಸೆ, ಉಪ್ಪುಂದ, ಯೆಡ್ತರೆ, ಮುಡಿಕಲ್ಲು ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಗರೋಡಿಯ ಆವರಣದೊಳಗೆ ಹುಲಿಯಪ್ಪನ ಕಲ್ಲು, ತುಳಸಿಕಟ್ಟೆ, ಬಲಿಕಲ್ಲುಗಳಿವೆ.
ಬಾಬು ಪೂಜಾರಿ
ಬಾಬು ಪೂಜಾರಿ (58 ವರ್ಷ), ಶ್ರೀನಿವಾಸ ಪೂಜಾರಿ (45 ವರ್ಷ) ಇವರುಗಳು ಗರೋಡಿಯ ಪ್ರಧಾನ ಅರ್ಚಕರಾಗಿದ್ದಾರೆ. ಇವರೊಂದಿಗೆ ಹೆರಿಯ ಪೂಜಾರಿ, ಪಂಜು ಪೂಜಾರಿಯವರು, ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಕೊರಗ ಪೂಜಾರಿ, ಚಿಕ್ಕಯ್ಯ ಪೂಜಾರಿಯವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.
ರಾಮ ಪೂಜಾರಿಯವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಬೈರ ಪೂಜಾರಿ, ಗೋವಿಂದ ಪೂಜಾರಿ, ಓಬು ಪೂಜಾರಿಯವರು ಈ ಗರೋಡಿಯ ಸ್ಥಳ ಪಾತ್ರಿಗಳಾಗಿದ್ದರು.
ಪ್ರಧಾನ ಅರ್ಚಕರಾದ ಬಾಬು ಪೂಜಾರಿಯವರು ಗರೋಡಿಯ ಮೊಕ್ತೇಸರರೂ ಆಗಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳಲ್ಲಿ ಒಂದು ದಿನ ಹಾಲು ಹಬ್ಬ, ಅಗೆಲು ಸೇವೆ, ದರ್ಶನ ಸೇವೆ ನಡೆದು ಮರುದಿನ ಗುರಿ ಪೂಜೆ ನಡೆಯುತ್ತದೆ.
ಬಿಜೂರು ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಹರಕೆ, ಕಾಣಿಕೆ, ಸಹಾಯ ಧನದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ 52ಸೆಂಟ್ಸ ಜಾಗವಿದ್ದು 2001 ರಲ್ಲಿ ಜೀರ್ಣೋದ್ದಾರಗೊಂಡಿದೆ. ಪ್ರಸ್ತುತ ಸುಮಾರು 5ಕೋಟಿ ರೂಪಾಯಿ ವೆಚ್ಚದಲ್ಲಿ ಪುನ: ಜೀರ್ಣೋದ್ಧಾರದ ಯೋಜನೆಯಿದೆ.
ಗರೋಡಿಯ ವಿಳಾಸ:
ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ಬಿಜೂರು,
ಬಿಜೂರು ಗ್ರಾಮ ಮತ್ತು ಅಂಚೆ,
ಬೈಂದೂರು ತಾಲೂಕು – 576232
ಬಿಜೂರು ಗ್ರಾಮ ಮತ್ತು ಅಂಚೆ,
ಬೈಂದೂರು ತಾಲೂಕು – 576232
ಅರ್ಚಕರು ಮತ್ತು ಮೊಕ್ತೇಸರರು:
ಬಾಬು ಪೂಜಾರಿ – 9741507620
ಮಾಹಿತಿ ನೀಡಿದವರು :
ಬಾಬು ಪೂಜಾರಿ, ಮಂಜು ಪೂಜಾರಿ – 99003 93953
ಮಾಹಿತಿ ಸಂಗ್ರಹಿಸಿದ ದಿನಾಂಕ :
26.02.2025