Baidashree

Shree Brahma Baidarkala Garodi Kalatthuru

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು

ಉಡುಪಿಯಿಂದ ಕಾಪು – ಶಿರ್ವ ರಸ್ತೆಯಲ್ಲಿ ಸಾಗಿ ಕಳತ್ತೂರು ಎಂಆರ್‌ಪಿಎಲ್ ಪೆಟ್ರೋಲ್ ಪಂಪಿನ ಬದಿಯ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸುಮಾರು 1.3ಕಿ.ಮೀ. ದೂರ ಸಾಗಿದರೆ ಕಳತ್ತೂರು ಗರೋಡಿ ಸಿಗುವುದು.
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು
ಆಯದ ಗರೋಡಿಯಾದ ಇದಕ್ಕೆ ಮೂರು ಬಾಗಿಲುಗಳಿವೆ. ಮುಖ್ಯ ದ್ವಾರವು ಪೂರ್ವಾಭಿ ಮುಖವಾಗಿದ್ದು ಉತ್ತರ ಹಾಗೂ ಪಶ್ಚಿಮ ಹಾಗೂ ದಿಕ್ಕಿಗೆ ಒಂದೊಂದು ದ್ವಾರಗವಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಕುದುರೆಯಲ್ಲಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕೋಟಿಚೆನ್ನಯರು, ದೇಯಿ ಬೈದೆತಿ ಹಾಗೂ ಜೋಗಿ ಪುರುಷರಿಗೂ ಆರಾಧನೆಯಿದೆ.
ಗುಂಡದ ಬಲ ಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಆರಾಧನೆಯಿದೆ.
ಬ್ರಹ್ಮ ಗುಡಿಯ ಹೊರಗೆ ಬಲ ಭಾಗದಲ್ಲಿ ಮಣೆ ಮಂಚದಲ್ಲಿ ಜುಮಾದಿಗೂ ಎಡಬದಿಯ ಮಣೆ ಮಂಚಗಳಲ್ಲಿ ಕೊಡಮಣಿತ್ತಾಯ ಹಾಗೂ ಜಾರಂದಾಯ ದೈವಗಳ ಆರಾಧನೆ ಇದೆ.
ಗರೋಡಿಯೊಳಗೆ ಉತ್ತರ ದಿಕ್ಕಿನ ದ್ವಾರದ ಬಳಿ ಗುರು ಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಹೊರಾಂಗಣದಲ್ಲಿ ಗುಡಿಯೊಳಗೆ ಪಿಲ್ಚಂಡಿ ದೈವದ ಬಂಡಿಯನ್ನಿಟ್ಟು ಪೂಜೆ ನಡೆಯುತ್ತದೆ.
ಹೆಬ್ಬಾಗಿಲಿನ ಒಂದು ಬದಿಯಲ್ಲಿ ಗುಡಿಯೊಳಗೆ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗೂ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟೆ ಹಾಗೂ ಸ್ಥಳದ ನಾಗಬನಗಳೂ ಇದೆ.

ವಿಶ್ವನಾಥ ಕೆ ಪೂಜಾರಿ

ಗರೋಡಿಮನೆ ವಿಶ್ವನಾಥ ಕೆ ಪೂಜಾರಿ (76 ವರ್ಷ) ಇವರು ಪೂ ಪೂಜನೆಯ ವರಾಗಿದ್ದಾರೆ.ಇವರಿಗಿಂತ ಮೊದಲು ಮುದ್ದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು.

ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜಾರ್ದೆ ಹುಣ್ಣಿಮೆಯ ಷಷ್ಠಿಯಂದು ಅಗೆಲು ಸೇವೆ, ಸಪ್ತಮಿಯಂದು ಬೈದೇರುಗಳ ನೇಮೋತ್ಸವ ನಡೆಯುತ್ತದೆ. ಪಿಲ್ಚಂಡಿ, ಮಾಯಂದಾಲ್, ಜೋಗಿ ಪುರುಷರಿಗೂ ಕೋಲ ಸೇವೆ ನಡೆಯುತ್ತದೆ. ನಂತರ ಶುದ್ಧದ ಅಗೆಲು ನಡಿಗುತ್ತು ಮನೆತನದವರ ವತಿಯಿಂದ ನಡೆಯುತ್ತದೆ. ಸೋಣ ತಿಂಗಳಲ್ಲಿ ಬರಬೆಟ್ಟು ಗುತ್ತಿನವರ ವತಿಯಿಂದ ಅಗೆಲು ಸೇವೆ ನಡೆಯುತ್ತದೆ. ಆಟಿಯಲ್ಲಿ ಅಗೆಲ್ ಸೇವೆ ನಡೆಯುವ 6 ಗರೋಗಳಲ್ಲಿ ಇದೂ ಒಂದು. ಸೋಣದ ಸಂಕ್ರಾಂತಿಯಂದು ಹೂವಿನ ಪೂಜೆ ನಡೆಯುತ್ತದೆ.

ಕಳತ್ತೂರು ಹಾಗೂ ಪಾದೂರು ಗ್ರಾಮಗಳ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರದ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿಯೂ ಭಾಗಿಯಾಗಿರುತ್ತಾರೆ. ವಂತಿಗೆ ಹಾಗೂ ಹರಕೆಯ ಹಣದಿಂದ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತದೆ.

ಗರೋಡಿಯು ಈಗ ಜೀರ್ಣೋದ್ದಾರದ ಯೋಜನೆಯಲ್ಲಿದೆ. ಹಿಂದೆ 25.05.1994 ಹಾಗೂ 1963 ರಲ್ಲಿ ಜೀಣೋದ್ದಾರಗೊಂಡಿತ್ತು.
ಬೊಗ್ಗು ಪರವ, ಉಗ್ಗಪ್ಪ ಪರವ, ಸಂತು ಪರವ ಇವರುಗಳು ಈ ಗರೋಡಿಯ ನೃತ್ಯ ವಿಶಾರದರಾಗಿಯೂ, ಶಶಿ ಮಡಿವಾಳ ಪಣಿಯೂರು, ಇವರು ಮಡಿವಾಳರಾಗಿಯೂ, ಲಕ್ಷಣ ಸೇರಿಗಾಎ ಎಲ್ಲೂರು, ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಳತ್ತೂರು,
ಕಳತ್ತೂರು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು,
ಉಡುಪಿ ಜಿಲ್ಲೆ. 576106.
ಪೂ ಪೂಜನೆಯವರ ವಿಳಾಸ:
ವಿಶ್ವನಾಥ ಕೆ. ಪೂಜಾರಿ,
ಗರೋಡಿ ಮನೆ, ಕಳತ್ತೂರು ಗ್ರಾಮ ಮತ್ತು ಅಂಚೆ,
ಕಾಪು ತಾಲೂಕು,
ಉಡುಪಿ ಜಿಲ್ಲೆ – 576106.
ಮೊಬೈಲ್: 9945772269

Shri Brahma Baidarkala Garodi, Parkala, Herga Village

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ , ಪರ್ಕಳ, ಹೆರ್ಗ ಗ್ರಾಮ

ಉಡುಪಿಯಿಂದ ಮಣಿಪಾಲ ಮಾರ್ಗವಾಗಿ ಪರ್ಕಳ ಪೇಟೆಗೆ ಬಂದು ಎಡಕ್ಕೆ ತಿರುಗಿ ಸುಮಾರು 650ಮೀ. ಸಾಗಿ ಪುನ: ಎಡಕ್ಕೆ ಸರಳೇಬೆಟ್ಟು ಮಾರ್ಗದಲ್ಲಿ 300ಮೀ.ನಲ್ಲಿ ಎಡಕ್ಕೆ ತಿರುಗಿ ಸುಮಾರು 200ಮೀ. ಸಾಗಿದರೆ ಬಲಬದಿಯಲ್ಲಿ ಪರ್ಕಳ ಗರೋಡಿ ಇದೆ.

ಇದು ಆಯದ ಗರೋಡಿಯಾಗಿದ್ದು ಮುಖ್ಯದ್ವಾರ ಪೂರ್ವಾಭಿಮುಖವಾಗಿ ಇನ್ನೊಂದು ದ್ವಾರ ಪಶ್ಚಿಮ ಮುಖವಾಗಿದೆ.

ಗರೋಡಿಯ ಬ್ರಹ್ಮ ಗುಡಿಯಲ್ಲಿ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆ ಇದೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ. ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.

ಪಿ.ಕೆ.ಶೀನ ಪೂಜಾರಿ

ಪಿ.ಕೆ.ಶೀನ ಪೂಜಾರಿ (73 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದು ಹಳೆಯಮನೆ ದಿನೇಶ್ ಶೆಟ್ಟಿ ಇವರು ಆಡಳಿತ ಮೊಕ್ತೇಸರರಾಗಿದ್ದಾರೆ. ಪಿ.ಕೆ.ಶೀನ ಪೂಜಾರಿಯವರಿಗೆ ಮೊದಲು ವಿಶ್ವನಾಥ ಪೂಜಾರಿ, ಕಿಟ್ಟ ಪೂಜಾರಿ, ತಮ್ಮಯ ಪೂಜಾರಿ, ವೆಂಕ ಪೂಜಾರಿ, ಮೊದಲಾದ ಹಿರಿಯರು ಪೂ ಪೂಜನೆಯ ಸೇವೆ ಮಾಡಿರುವರು. ದಿನೇಶ ಶೆಟ್ಟಿಯವರ ಮೊದಲು ಹಳೆಮನೆ ಸಂಜೀವ ಶೆಟ್ಟಿಯವರು ಆಡಳಿತ ಮೊಕ್ತೇಸರರಾಗಿದ್ದರು.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಆದಿತ್ಯವಾರದ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ಚೌತಿ ಪೂಜೆ, ದೀಪಾವಳಿಯಂದು ಕಂಬಕ್ಕೆ ದೀಪವಿಟ್ಟು ಪೂಜೆ ಮಾಡುವುದು, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಕೊಡಿ ತಿಂಗಳಲ್ಲಿ ಪೊಸರಿತ ಅಗೆಲ್, ತುಳಸೀ ಪೂಜೆ ನಡೆಯುತ್ತದೆ. ಸುಗ್ಗಿ ತಿಂಗಳಲ್ಲಿ (ಫೆಬ್ರವರಿ-ಮಾರ್ಚ) ಒಂದನೇ ದಿನ ಮಣ್ಣ ಮುಹೂರ್ತ, ಮರ ಮುಹೂರ್ತ, ಎರಡನೇ ದಿನ ಅಂಗಣಕ್ಕೆ ಅಂಗಣಕ್ಕೆ ಸೆಗಣಿ ಸಾರಿಸುವುದು, ಮೂರನೇ ದಿನ – ಅಗೆಲು ಸೇವೆ ಬಾಲು ಬಂಡಾರ ಗರೋಡಿಯ ಹೊರಗೆ ತಂದು ಗುಂಡದಲ್ಲಿ ಇಡುವುದು. ನಾಲ್ಕನೇ ದಿನ ಬೈದೇರುಗಳ ನೇಮ, ಐದನೇ ದಿನ – ಮಾಯಂದಾಲ್, ಜುಮಾದಿ, ಮರ್ಲಜುಮಾದಿ, ಜೋಗಿಪುರುಷ, ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. 6ನೇ ದಿನ – ಶುದ್ದದ ಅಗೆಲು ಇರುತ್ತದೆ. ಇವಲ್ಲದೆ ನೀರುಸ್ನಾನ, ಕಂಚಿಲ್ ಸೇವೆ. ಮುದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಲ್ಲಿ ಕೂಡುಕಟ್ಟಿಗೆ ಸೇರಿದ ಭಕ್ತರು ಪಾಲ್ಗೊಳ್ಳುತಾರೆ.
ಸ್ಥಿರ ಆದಾಯ ಇಲ್ಲದ ಈ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವಂತಿಗೆ, ಕಾಣಿಕೆ, ಹಾಗೂ ಸಹಾಯಧನಗಳಿಂದ ಭರಿಸುತ್ತಾರೆ.
ಹದಿನೇಳು ವರ್ಷಗಳ ಹಿಂದೆ ಅಂದರೆ 2006ರಲ್ಲಿ ಗರೋಡಿಯ ಕಾಂಕ್ರೀಟ್ ಚಪ್ಪರ ನಿರ್ಮಾಣವಾಗಿದ್ದು ಅದಕ್ಕೆ ಮೊದಲು 04-04-1971ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿತ್ತು.
ಈ ಗರೋಡಿಯ ನೃತ್ಯವಿಶಾರದರಾಗಿ ಜಯಪರವ ನೀರೆ, ಹಾಗೂ ಕಿಟ್ಟ ಪಂಬದ(ಮಾಯಂದಾಲ್ ಮತ್ತು ಜುಮಾದಿಗೆ) ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದೆ ಗರೋಡಿಗೆ ಸಂಬಂಧಪಟ್ಟ “ಕೋಟಿಚೆನ್ನಯ ವ್ಯಾಯಾಮ ಶಾಲೆ ‘’ ಯೊಂದು ಇತ್ತು. ಈಗ ಅಸ್ಥಿತ್ವದಲ್ಲಿಲ್ಲ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪರ್ಕಳ,
ಹೆರ್ಗ ಗ್ರಾಮ,
ಪರ್ಕಳ ಅಂಚೆ,
ಉಡುಪಿ 576107.

ಪೂ ಪೂಜನೆಯವರ ವಿಳಾಸ:

ಪಿ.ಕೆ. ಶೀನ ಪೂಜಾರಿ,
” ಪದ್ಮಶ್ರೀ ‘’ ಶೆಟ್ಟಿಬೆಟ್ಟು ಶಾಲೆಯ ಹತ್ತಿರ,
ಹೆರ್ಗ ಗ್ರಾಮ,
ಪರ್ಕಳ ಅಂಚೆ, 576107.
ಮೊಬೈಲ್: 9449367825

ದರ್ಶನದ ಪೂಜಾರಿಯವರ ವಿಳಾಸ:

ದಿನೇಶ್ ಪೂಜಾರಿ,
ದರ್ಶನ ಪಾತ್ರಿ,
ಮಾರುತಿ ನಗರ ಪರ್ಕಳ,
ಪರ್ಕಳ ಅಂಚೆ,
ಉಡುಪಿ 576107.
ಮೊಬೈಲ್: 9844211997

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024

Shri Kodamannithaya Brahmabaidarkala Neralu Adisthana Garodi

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ. 41 ನೇ ಶೀರೂರು, ಗ್ರಾಮ ಹರಿಖಂಡಿಗೆ

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಶೀರೂರು ಮೂಲಮಠದ ರಸ್ತೆಯ ಮೂಲಕ ಸಾಗಿ ಹರಿಖಂಡಿಗೆ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಬಲಕ್ಕೆ ತಿರುಗಿ ಸುಮಾರು 350 ಮೀಟರ್ ದೂರ ಸಾಗಿದರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ ಸಿಗುವುದು. ಇದೋಂದು ಆಯದ ಗರೋಡಿಯಾಗಿದ್ದು 26.01.1996 ರ   ಜೀರ್ಣೋದ್ಧಾರದ ಸಮಯದಲ್ಲಿ ಷಢಾಧಾರ ಪ್ರತಿಷ್ಠೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಗರೋಡಿಯ ಆವರಣದಲ್ಲಿ ಬ್ರಹತ್ ನೇರಳೆ ಮರವಿದ್ದು ಅದರ ಅಡಿಯಲ್ಲಿ ಗರೋಡಿ ಇರುವುದರಿಂದ ಈ ಗರೋಡಿಗೆ ನೇರಳೆ ಅಡಿಸ್ಥಾನ ಗರೋಡಿಯೆಂಬ ಹೆಸರು ಬಂದಿದೆ.

ಗರೋಡಿಯ ಆವರಣದಲ್ಲಿರುವ ನೇರಳೆ ಮರ.

ಪ್ರಕಾಶ್ ಪೂಜಾರಿ

ಸುಧಾಕರ ಶೆಟ್ಟಿ

ಇಂದಿಗೆ ಸುಮಾರು ನಾಲ್ಕು ತಲೆಮಾರಿಗೆ ಮುಂಚೆ ಇಲ್ಲಿ ಗರಡಿ ಇಲ್ಲವಾಗಿದ್ದು, ಇಲ್ಲಿಯವರು ಹತ್ತಿರದ ಬೇರೆ ಗರೋಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಶೀರೂರು ಮಠದ ಪ್ರತಿನಿಧಿಗೆ ಆ ಗರೋಡಿಯಲ್ಲಿ ಸರಿಯಾದ ಗೌರವ ಸಲ್ಲಲಿಲ್ಲ ಎಂಬ ಕಾರಣಕ್ಕೆ ಕಂರ್ಬುಕಲ್ಲು ಮನೆಯ ಹಿರಿಯರಾದ ತೋಪ ಪೂಜಾರಿಯವರನ್ನು ಕರೆದು ಶೀರೂರು ಮಠದ ಸ್ವಾಮಿಗಳು ಗರೋಡಿ ಸ್ಥಾಪಿಸಿದರು ಎಂಬ ಸ್ಥಳ ಪುರಾಣವಿದೆ. ಅಂದಿನಿಂದ ಕಂರ್ಬುಕಲ್ಲು ಮನೆಯವರು ಗರೋಡಿಯ ಪೂ ಪೂಜನೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕಾಶ್ ಪೂಜಾರಿಯವರ ಮೊದಲು ಅವರ ಹಿರಿಯರಾದ ಬೀರ ಪೂಜಾರಿ, ರಾಮಣ್ಣ ಪೂಜಾರಿ, ಕೂಕ್ರ ಪೂಜಾರಿ ಹಾಗೂ ತೋಪ ಪೂಜಾರಿ ಇವರುಗಳೂ ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಪ್ರಕಾಶ್ ಪೂಜಾರಿಯವರು (55 ವರ್ಷ ಪ್ರಾಯ) ಬೈದೇರುಗಳ ದರ್ಶನ ಪಾತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದು,  ಇವರಲ್ಲದೆ ಶ್ರೀ ಕೃಷ್ಣ ಪೂಜಾರಿ, (60 ವರ್ಷ ಪ್ರಾಯ) ಇನ್ನೋರ್ವ ಕೃಷ್ಣ ಪೂಜಾರಿ (55 ವರ್ಷ ಪ್ರಾಯ), ಹರೀಶ್ ಪೂಜಾರಿ (40 ವರ್ಷ ಪ್ರಾಯ) ಹಾಗು ರಂಜಿತ್ ಪೂಜಾರಿ (32 ವರ್ಷ ಪ್ರಾಯ) ಇವರುಗಳು ಒಟ್ಟಿಗೆ ಐದು ಮಂದಿ ಸ್ಥಳ ಪಾತ್ರಿಗಳಾಗಿಸೇವೆ ಸಲ್ಲಿಸುತ್ತಿರುವುದು ಇಲ್ಲಿಯ ವಿಶೇಷತೆ.
ಈ ಗರೋಡಿಗೆ ಸಂಬಂಧಪಟ್ಟಂತೆ ವರಡ ವಂತಿಗೆ ನೀಡುವ ಹರಿಖಂಡಿಗೆ ಗ್ರಾಮದ 16 ಬಿಲ್ಲವ ಸಮಾಜ ಬಾಂಧವರ ಮನೆಯಿದ್ದು, 9 ಬಂಟರ ಮನೆಗಳಿವೆ. ಉಳಿದಂತೆ ಹರಿಖಂಡಿಗೆ ಹಾಗೂ ಸುತ್ತಮುತ್ತಲ ಊರ ಜನರು ಗರೋಡಿಯ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವರು. ಗರೋಡಿಯಲ್ಲಿ ಮಂಗಳವಾರ ಪೂಜೆ, ಸೋಣ ಮತ್ತು ಆಟಿ ತಿಂಗಳ ಸಂಕ್ರಾಂತಿಗಳಂದು ಪೂಜೆ, ಚೌತಿಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಹೊಸ ಭತ್ತದ ಅಗೆಲ್ ಸೇವೆ, ಕಾಲಾವಧಿ ಅಗೆಲ್ ಸೇವೆ, ನೇಮೋತ್ಸವಗಳು ನಡೆಯುತ್ತವೆ. ಕಾಲಾವಧಿ ಅಗೆಲ್ ಹಾಗೂ ನೇಮೋತ್ಸವವು ಸುಗ್ಗಿ ತಿಂಗಳ ಹುಣ್ಣಿಮೆಯಂದು ನಡೆಯುತ್ತವೆ. ಬೈದೇರುಗಳ ಅಗೆಲ್ ಸೇವೆ, ನೇಮೋತ್ಸವದ ಜೊತೆಗೆ ಧರ್ಮರಸು, ರಾಜನ್ ದೈವ, ಜೋಗಿ ಪುರುಷ ಹಾಗೂ ಮಾಯಂದಾಲ್, ದೈವಗಳ ಕೋಲ ಸೆವೆಯೂ ನಡೆಯುತ್ತದೆ
ಈ ಗರೋಡಿಗೆ ಬರ್ಕೆಮನೆ(ಕೇದಗೆ ಮನೆ) ಉದಯ ಪೂಜಾರಿ, ಕಂರ್ಬುಕಲ್ಲು ಮನೆ ಪ್ರಭಾಕರ ಪೂಜಾರಿ, ಪರಾರಿಮನೆ ಅಶೋಕ ಶೆಟ್ಟಿ, ಮೇಲ್ಮನೆ ಸತೀಶ್ ಶೆಟ್ಟಿ, ಕಿನ್ನಿಗುಡ್ಡೆ ಕೀಸು ಶೆಟ್ಟಿ, ತುರ್ಕೆರಬೆಟ್ಟು ಭೋಜ ಶೆಟ್ಟಿ ಇವರುಗಳು ಗುರಿಕಾರರಾಗಿರುತ್ತಾರೆ.
ಶೀರೂರು ಮಠದ ಜಾಗದಲ್ಲಿರುವ ಈ ಗರೋಡಿಗಯ ಕಾರ್ಯಕ್ರಮಗಳು ವರಡ, ವಂತಿಗೆ, ಹರಕೆ ಹಾಗೂ ಊರವರ, ಭಕ್ತರ ಸಹಾಯಧನದಿಂದ ನಡೆಯುತ್ತವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ. ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗದ್ದಿಗೆ ದೇವಸ್ಥಾನ 41 ನೇ ಶೀರೂರು, ಜಂಬೆ ಇಲ್ಲಿಂದ ದೇವಿಯ ಗದ್ದಿಗೆಯು ಗರೋಡಿಗೆ ಬಂದು ಇಲ್ಲಿ ದರ್ಶನ ಸೇವೆಯೂ ನಡೆಯುತ್ತದೆ.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

ಗರೋಡಿಯ ಪೂರ್ಣ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು, ,br>ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಗರೋಡಿ ಪೂ ಪೂಜನೆಯವರ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು,
ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಕೊಡಮಾಣಿತ್ತಾಯ ಮುಕ್ಕಾಲ್ದಿ ವಿಳಾಸ:

ಸುಧಾಕರ ಶೆಟ್ಟಿ,
ಬೆಟ್ಟುಮನೆ, 41 ನೇ ಶೀರೂರು,
ಹರಿಖಂಡಿಗೆ ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು – 576124.
ಮೊಬೈಲ್: 78993 09751

ಪ್ರವೀಣ್ ಪೂಜಾರಿ – ಅಧ್ಯಕ್ಷರು, ಆಡಳಿತ ಮಂಡಳಿ

ಮೊಬೈಲ್ : 98803 89859

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2024

2022 ಡಿಸೆಂಬರ್ ತಿಂಗೂಲ್ಡ್ ನಡಪರೆ ಉಪ್ಪುನ ಬೆರ್ಮೆರ್ ಬೈದರ್ಲೆ ಗರೋಡಿದ ನೇಮ

1/12 – ಕಪ್ಪೆಟ್ಟು ಗರೋಡಿ
2/12 – ಪಡುಬೆಳ್ಳೆ ಗರೋಡಿ
4/12 – ಗುಡೆಬೆಟ್ಟು ಗರೋಡಿ (ಹಾಲಬ್ಬ)
5/12 – ಚಾರ ಮೇಲ್ಬೆಟ್ಟು ಗರೋಡಿ (ಕಾಯಿದ ಪೂಜೆ)
6/12 – ಹೂಸಾಳ ಬಾರ್ಕೂರು ಗರೋಡಿ (ಹಾಲಬ್ಬ)
7/12 – ಉಗ್ಗೇಲ್ ಬೆಟ್ಟು ಗರೋಡಿ
8/12 – ಕಿನ್ನಿಮುಲ್ಕಿ ಗರೋಡಿ, ಬೋಳ ಗರೋಡಿ, ಬುಡ್ನಾರು ಗರೋಡಿ
9/12 – ಬೋಳ್ಜ ಗರೋಡಿ, ಹಂದಾಡಿ ಗರೋಡಿ (ಹಾಲಬ್ಬ)
10/12 – ಕೇಂಜ ಗರೋಡಿ, ಮೂಡನಿಡಂಬೂರು ಗರೋಡಿ
11/12 – ಮಾಣಿಬೆಟ್ಟು ಗರೋಡಿ
13/12 – ಅಡ್ವೆ ಗರೋಡಿ
14/12 – ಕುರ್ಕಾಲು ಗರೋಡಿ, ಮುಂಡ್ಕೂರು ಗರೋಡಿ
15/12 – ಮಾರ್ಪಳ್ಳಿ ಗರೋಡಿ, ಕಳತ್ತೂರು ಗರೋಡಿ
16/12 – ಹಂಡೇಲು ದೇವಸ ಗರೋಡಿ ಮಿಜಾರು
22/12 – ಕನ್ನಾಂಗಾರು ಗರೋಡಿ
28/12 – ಹೆಜಮಾಡಿ ಗರೋಡಿ
30/12 – ಎಲ್ಲೂರು ಗರೋಡಿ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ.), ಆದಿವುಡುಪಿ ಇದರ ಉದ್ಘಾಟನೆ

ಸ್ಥಳ : ಗೋವಿಂದ ಪೈ ಸಂಶೋಧನಾ ಕೇಂದ್ರ, ಎಮ್. ಜಿ. ಎಮ್. ಕಾಲೇಜು, ಉಡುಪಿ.

ದಿನಾಂಕ : 11.12.1988

ಶ್ರೀ ವಾಮನ ನಂದಾವರ, ಶ್ರೀ ಬಾಲಕೃಷ್ಣ ಶೆಟ್ಟಿ ಪೊಳಲಿ, ಶ್ರೀ ಸೋಮಪ್ಪ ಸುವರ್ಣ, ಶ್ರೀ ಯು. ಪಿ. ಉಪಾದ್ಯಾಯ, ಶ್ರೀ ಬನ್ನಂಜೆ ಬಾಬು ಅಮೀನ್, ಶ್ರೀ ಮೋಹನ್ ಕೋಟ್ಯಾನ್

ತುಳುನಾಡ ಗರೋಡಿ ಸಾಂಸ್ಕೃತಿಕ ಸಮ್ಮೇಳನ ಉದ್ಘಾಟನಾ ಸಮಾರಂಭ ಹಾಗು “ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ” ಗ್ರಂಥ ಬಿಡುಗಡೆ

ಸ್ಥಳ: ಪೂರ್ಣ ಪ್ರಜ್ಞ ಆಡಿಟೋರಿಯಂ, ಪಿ. ಪಿ. ಸಿ. ಉಡುಪಿ.

ದಿನಾಂಕ : 03.06.1990

ಉಪಸ್ಥಿತಿ :- ಶ್ರೀ ಮೋಹನ್ ಕೋಟ್ಯಾನ್, ಶ್ರೀ ಯು. ನಾರಾಯಣ, ಶ್ರೀ ವಸಂತ ಸಾಲ್ಯಾನ್, ಶ್ರೀಮತಿ ಮನೋರಮಾ ಮದ್ವರಾಜ್, ಶ್ರೀ ದಾಮೋದರ್ ಸುವರ್ಣ, ಶ್ರೀ ಉಮೇಶ್ ಬಿ. ಸನಿಲ್, ಶ್ರೀ ಅಮೃತ ಸೋಮೇಶ್ವರ, ಶ್ರೀ ಯು. ನಾರಾಯಣ, ಶ್ರೀ ಬನ್ನಂಜೆ ಬಾಬು ಅಮೀನ್

ತುಳುನಾಡ ಗರೋಡಿ ಸಾಂಸ್ಕೃತಿಕ ಸಮ್ಮೇಳನ ಹಾಗು ಗರೋಡಿ ಸಾಹಿತ್ಯ ಗೋಷ್ಠಿ

ಸ್ಥಳ: ಪೂರ್ಣ ಪ್ರಜ್ಞ ಆಡಿಟೋರಿಯಂ, ಪಿ. ಪಿ. ಸಿ. ಉಡುಪಿ.

ದಿನಾಂಕ : 03.06.1990

ಉಪಸ್ಥಿತಿ :- ಶ್ರೀ ಗಂಗಾಧರ ಕಿದಿಯೂರು, ಶ್ರೀ ವಾಮನ ನಂದಾವರ, ಶ್ರೀ ಅಮರನಾಥ ಸುಮತಿ, ಶ್ರೀ ಉಮೇಶ್ ಬಿ. ಸನಿಲ್, ಶ್ರೀ ಕು. ಶಿ. ಹರಿದಾಸ ಭಟ್, ಶ್ರೀ ಬಿ. ಎ. ವಿವೇಕ ರೈ, ಶ್ರೀ ಚಿನ್ನಪ್ಪ ಗೌಡ, ಶ್ರೀ ಬಾಲಕೃಷ್ಣ ಶೆಟ್ಟಿ ಪೊಳಲಿ, ಶ್ರೀ ದಾಮೋದರ ಕಲ್ಮಾಡಿ, ಶ್ರೀ ಮೋಹನ್ ಕೋಟ್ಯಾನ್

ತುಳುನಾಡ ಗರೋಡಿ ಸಾಂಸ್ಕೃತಿಕ ಸಮ್ಮೇಳನ ಸಮಾರೋಪ ಸಮಾರಂಭ

ಸ್ಥಳ: ಪೂರ್ಣ ಪ್ರಜ್ಞ ಆಡಿಟೋರಿಯಂ, ಪಿ. ಪಿ. ಸಿ. ಉಡುಪಿ.

ದಿನಾಂಕ : 03.06.1990

ಉಪಸ್ಥಿತಿ :- ಶ್ರೀ ಬನ್ನಂಜೆ ಬಾಬು ಅಮೀನ್, ಶ್ರೀ ಯು. ನಾರಾಯಣ, ಶ್ರೀ ಎ. ವಿಶ್ವನಾಥ, ಶ್ರೀ ಸೋಮಪ್ಪ ಸುವರ್ಣ, ಶ್ರೀ ಜನಾರ್ಧನ ಪೂಜಾರಿ, ಶ್ರೀ ಉಮೇಶ್ ಬಿ. ಸನಿಲ್, ಶ್ರೀ ಜಯ ಸಿ. ಸುವರ್ಣ, ಶ್ರೀ ಮೋಹನ್ ಕೋಟ್ಯಾನ್

“ಬೈದಶ್ರೀ” ಕಟ್ಟಡದ ಶಂಕುಸ್ಥಾಪನೆ

ಸ್ಥಳ: ಆದಿವುಡುಪಿ

ದಿನಾಂಕ : 03.06.1990

“ಬೈದಶ್ರೀ” ಕಟ್ಟಡ ನಿರ್ಮಾಣಕ್ಕೆ ಮುಹೂರ್ತ (ಕಲ್ಮಾಡಿ ಗರೋಡಿಯ ಬೈದ ದರ್ಶನ ಪೂಜಾರಿಯವರಾದ ಶ್ರೀ ಮೆನ್ಪ ಪೂಜಾರಿ ಹಾಗು ಶ್ರೀ ಗುಡ್ಡ ಪೂಜಾರಿಯವರಿಂದ)

ಸ್ಥಳ: ಆದಿವುಡುಪಿ

ದಿನಾಂಕ : 25.11.1993