ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರುಡುಂಜೆ, ಆರೂರು
ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ಭದ್ರಗಿರಿಯಲ್ಲಿ ಬಲಕ್ಕೆ ತಿರುಗಿ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಸುಮಾರು 8 ಕಿ.ಮೀ. ಸಾಗಿದ ನಂತರ, ಆರ್.ಕೆ.ಪಾಟ್ಕರ್ ಶಾಲೆಯ ಹತ್ತಿರ ಬಲಕ್ಕೆ ಆರೂರು ರಸ್ತೆಯಲ್ಲಿ ಸುಮಾರು 2.5ಕಿ.ಮೀ. ದೂರದಲ್ಲಿ ಇದೆ ಈ ಗರೋಡಿ.
ಗರೋಡಿಯು ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು ಬ್ರಹ್ಮಗುಡಿಯು ಯತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಕುದುರೆಯೇರಿ ಕುಳಿತ ನಾಗಬ್ರಹ್ಮರ ಬೆಳ್ಳಿಯ ಕವಷ ಹೊದಿಸಿದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿಯ ಮಣೆಮಂಚ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುದುರೆಯೇರಿ ಕುಳಿತ ಒಕ್ಕು ಬಲ್ಲಾಳ ಹಾಗೂ ಮಗುವಿನ ಮರದ ಮೂರ್ತಿ, ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಮೂಲ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಶಿವರಾಯ ದೈವದ ಮಣೆಮಂಚ, ಜುಮಾದಿ, ಬಾಲೆ, ಹಾಗೂ ಮೈಂದಾಳ್ತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಹೈಗುಳಿ ದೈವದ ಮಣೆಮಂಚ, ಜೋಗಿಪುರುಷ, ಬಾಲೆ ಹಾಗೂ ಚಿಕ್ಕಮ್ಮ ದೈವಗಳ ಮರದ ಮೂರ್ತಿ ಹಾಗೂ ಗುರುಕಂಬವಿದೆ.
ಗರೋಡಿಯ ಹೊರಗೆ ಜಗಲಿಯಲ್ಲಿ ಬಾಗಿಲ ಒಂದು ಪಕ್ಕದಲ್ಲಿ ಬಾಗಿಲಬೋಬ್ಬರ್ಯ ಮರದ ಮೂರ್ತಿ ಇನ್ನೊಂದು ಪಕ್ಕದಲ್ಲಿ ಪಿಲ್ಚಂಡಿ ದೈವದ ಮಣೆಮಂಚವಿದೆ.
ಗರೊಡಿಯ ಎದುರಿನ ಒಂದು ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ. ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಅಮ್ಮನವರ ಸಾನಿದ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗಬನ, ಬ್ರಹ್ಮಸ್ಥಾನಗಳಿವೆ.
ದೋಜು ಪೂಜಾರಿ
ದೋಜು ಪೂಜಾರಿ (80 ವರ್ಷ) ಇವರು ಇಲ್ಲಿಯ ಅರ್ಚಕರು ಹಾಗೂ ದರ್ಶನದ ಸ್ಥಳ ಪಾತ್ರಿ. ಇವರ ಮೊದಲು ಸಂಜೀವ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು.
ಅಶೋಕ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಇವರ ಮೊದಲು ಸುಖಾನಂದ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ಇವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಕೊಡಿತಿಂಗಳಲ್ಲಿ ಡಿಸೆಂಬರ್ ಒಂದನೇ ತಾರೀಖಿನಂದು ಪೂಜಾರಿ ಮನೆಯವರಿಂದ ಅಗೆಲು ಸೇವೆ, ಮರುದಿನ ಭಂಡಾರದ ಮನೆಯವರಿಂದ ಶುದ್ಧದ ಅಗೆಲು, ಹನೊಂದಕ್ಕೆ ಬೈದರ್ಕಳ ನೇಮ, ಜೋಗಿ ಪುರುಷ, ಮೈಂದಾಳ್ತಿ ಕೋಲ ನಡೆದು ಹನ್ನೆರಡನೇ ತಾರೀಖಿನಂದು ಶಿವರಾಯ ದೈವಕ್ಕೆ ಮುಂಡಿಗೆ ಪೂಜೆ ನಡೆಯುತ್ತದೆ.
ಆರೂರು, ಬೆಳ್ಮಾರು, ಅಡ್ಪು, ಆಳುಂಜೆ, ಅಡ್ಜಿಲ್, ನಡಿಬೆಟ್ಟು, ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆಯಂತಹ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರಜನರ ವರಡ ವಂತಿಗೆಯಿಂದ ಭರಿಸಲಾಗುತ್ತದೆ.
ಗರೋಡಿಯು 1953, 1978-79 ಹಾಗೂ 2010ರಲ್ಲಿ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿ, ರವಿ ಸೇರಿಗಾರ ಆರೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರುಡುಂಜೆ, ಆರೂರು,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576213.
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576213.
ಗರೋಡಿಯ ಅರ್ಚಕರು:
ದೋಜು ಪೂಜಾರಿ
ಸಂತೋಷ್ ಪೂಜಾರಿ – 96861 79964
ಸಂತೋಷ್ ಪೂಜಾರಿ – 96861 79964
ಮಾಹಿತಿ ನೀಡಿದವರು :
ಸಂಸಂತೋಷ್ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
27.12.2024