Baidashree

Singara Garodi Naaguru, Kirimanjeshwara

ಸಿಂಗಾರ ಗರೋಡಿ ನಾಗೂರು, ಕಿರಿಮಂಜೇಶ್ವರ.

ಉಡುಪಿಯಿಂದ – ಕುಂದಾಪುರ – ಮರವಂತೆ – ನಾವುಂದ – ಕಿರಿಮಂಜೇಶ್ವರದಿAದ ಸುಮಾರು ಒಂದು ಕಿ.ಮೀ. ನಂತರ ಎನ್.ಎಚ್. 66 ರಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಎರಡು ಅಂತಸ್ತಿನ ಗುಂಡದ ಕೆಳ ಅಂತಸ್ತಿನಲ್ಲಿ ನಾಗಬ್ರಹ್ಮರ ಮೇಲಂತಸ್ತಿನಲ್ಲಿ ಗುಂಡದ ಕರ್ತುವಿನ ಮರದ ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯ, ಇಬ್ಬರು ಬಂಟರು ಹಾಗೂ ದೇಯಿ ಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಮೂರ್ ಬಂಟರ ಹಾಗೂ ಗುಂಡದ ನಂದಿಕೇಶ್ವರರ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಬಾಗಿಲನಂದಿ, ಕಾಶಿ ಪಂಜುರ್ಲಿ, ಮಳಿಯಾಳಿ ಪಂಜುರ್ಲಿ ಬಂಟ ಪಂಜುರ್ಲಿ ( ತುಳು ಪಂಜುರ್ಲಿ) ಅಣ್ಣಪ್ಪ ಪಂಜುರ್ಲಿ, ವಾಹನ ಪಂಜುರ್ಲಿ ದೈವಗಳ ಸಾನಿದ್ಯವಿದೆ.
ಗುಂಡದ ಎಡಭಾಗದಲ್ಲಿ ಗೆಂಡದ ಹೈಗುಳಿ, ಮುಡೂರ ಹೈಗುಳಿ, ದೊಟ್ಟಿಕಾಲಮ್ಮ, ದೊಟ್ಟಿಕಾಲ ಚಿಕ್ಕು, ಚಿಕ್ಕು, ಮರ್ಲಮ್ಮ, ಬಗ್ಗ ಚಿಕ್ಕು, ಬಾಲಚಿಕ್ಕು, ನೇತ್ರ ಹೈಗುಳಿ, ಗುರುದೇವ್ರು, ಮೈದಾಳಿ ಅಮ್ಮ, ಬಾಲಮ್ಮ, ಪಾತ್ರಿ ಕೋಟಿಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದರು ಮುಖವಾಗಿ ಜೋಗದೇವರು (ಜೋಗಿಪುರುಷ) ಮಾಸ್ತಿ ಅಮ್ಮ, ಕ್ಷೇತ್ರ ಹೈಗುಳಿ, ಹನಾರ ಹೈಗುಳಿ, ಮೂರ್ಚಂಡಿ, ಹೀತ್ರ ಮೂತ್ರ ಹೈಗುಳಿ, ಕಂಚಿನ ಹೈಗುಳಿ, ಮೂಕ ಹೈಗುಳಿ, ಖಂಬದ ಕೋಣೆ ಹೈಗುಳಿ, ಬಣ್ಣದ ಹೈಗುಳಿ, ಕರಿಬೆಟ್ಟು ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿಯಿದೆ.
ಗರೊಡಿಯ ಆವರದಲ್ಲಿರುವ ಗುಡಿಯೊಂದರಲ್ಲಿ ಬ್ಯಾಟಿ ಬೀರ ಹಾಗೂ ಅಸಲ ತಿಮ್ಮ ಶಕ್ತಿಗಳ ಆರಾಧನೆಯಿದೆ.
ಇನ್ನೊಂದು ಗುಡಿಯಲ್ಲಿ ಒತ್ತಿನ ಹೈಗುಳಿ, ಸಿಂಗೂರ ಹೈಗುಳಿ, ಸಿಂಗೂರ ನಂದಿ, ಪರಿವಾರ, ಊರ್ ಮಾರಮ್ಮ, ಜಪದಮಣಿ, ಸನ್ಯಾಸಿ, ಸ್ವಾಮಿಲಿಂಗ, ಭುವನೇಶ್ವರ, ಮರ್ರಕಾಳ, ಪಾತ್ರಿಕೋಲಿ, ಮೈಸ್ವಾಮಿ, ಗಂಡ ಯಕ್ಷಿ, ಹೆಣ್ಣು ಯಕ್ಷಿ, ಜಟ್ಕ, ಜೋಡು ಕೋಣ, ಬಾಗಿಲ ನಂದಿ ದೈವಗಳ ಸಾನಿದ್ಯವಿದ್ದು, ಈ ಗುಡಿಯ ಹೊರಗೆ ಕಾಡಚಿ ಅಮ್ಮನ ಮರದ ಮೂರ್ತಿಯಿದೆ.
ಇನ್ನೊಂದು ಗುಡಿಯಲ್ಲಿ ಒತ್ತಿನ ಹೈಗುಳಿ, ಸಿಂಗೂರ ಹೈಗುಳಿ, ಸಿಂಗೂರ ನಂದಿ, ಪರಿವಾರ, ಊರ್ ಮಾರಮ್ಮ, ಜಪದಮಣಿ, ಸನ್ಯಾಸಿ, ಸ್ವಾಮಿಲಿಂಗ, ಭುವನೇಶ್ವರ, ಮರ್ರಕಾಳ, ಪಾತ್ರಿಕೋಲಿ, ಮೈಸ್ವಾಮಿ, ಗಂಡ ಯಕ್ಷಿ, ಹೆಣ್ಣು ಯಕ್ಷಿ, ಜಟ್ಕ, ಜೋಡು ಕೋಣ, ಬಾಗಿಲ ನಂದಿ ದೈವಗಳ ಸಾನಿದ್ಯವಿದ್ದು, ಈ ಗುಡಿಯ ಹೊರಗೆ ಕಾಡಚಿ ಅಮ್ಮನ ಮರದ ಮೂರ್ತಿಯಿದೆ.
ಗಂಡಸರು, ಹುಡುಗರು, ಈ ಗರೋಡಿಯೊಳಗೆ ಅಂಗಿ, ಬನಿಯನ್, ತೆಗೆದು ಪ್ರವೇಶಿಸುವ ಸಂಪ್ರದಾಯವಿದೆ.
ನಾಗೂರು ಬಡಾಮನೆ ಪಂಜು ಪೂಜಾರಿಯವರು, ಸಿಂಗಾರ ಬಡಾಮನೆ ಮೂಡೂರ ಪೂಜಾರಿ, ಗಣೇಶ ಪೂಜಾರಿ, ಚಂದ್ರ ಪೂಜಾರಿ, ಗೆದ್ದೆಮನೆ ಪಂಜು ಪೂಜಾರಿ, ಪಡುಮನೆ ವೆಂಕಟೇಶ ಪೂಜಾರಿ, ಮಗಿರಬೆಟ್ಟು ಚಿಕ್ಕ ಪೂಜಾರಿ ಇವರುಗಳು ಈ ಗರೋಡಿಯ ಅರ್ಚಕರು.
ಗೆದ್ದೆಮನೆ ರವಿ ಪೂಜಾರಿ, ಸಿಂಗಾರ ಬಡಾಮನೆ ಭಾಸ್ಕರ ಪೂಜಾರಿ ಹಾಗೂ ಪಡುಮನೆ ಗಿರೀಶ್ ಪೂಜಾರಿ ಇವರು ಈ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳು.
ಮುಡೂರ ಪೂಜಾರಿಯವರು ಈ ಗರೋಡಿಯ ಮೊಕ್ತೇಸರರು. ನರಸಿಂಹ ಶೆಟ್ಟಿ, ಕಂಬಳ ಗದ್ದೆ ಮನೆ ಹಳಗೇರಿ ಇವರು ಈ ಗರೋಡಿಯ ಬಲ್ಲಾಳ ಸೆಟ್ರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿಪೂಜೆ, ಸೋಣಾರತಿ, ಪ್ರತೀ ವರ್ಷ ಜನವರಿ 14-15ನೇ ತಾರೀಖಿಗೆ ಹಾಲುಹಬ್ಬ, ಅಗೆಲು ಸೇವೆ, ತುಲಾಭಾರ ಸೇವೆ, ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಎಲ್ಲಾ ದೈವಗಳ ಕೋಲ ಸೇವೆ ನಡೆಯುತ್ತದೆ.
ನಾಗೂರು, ಬೈಂದೂರು, ಉಪ್ಪುಂದ, ಯೆರುಕೋಣೆ ಭಾಗದ ಜನರು ಈ ಗರೋಡಿಯಲ್ಲಿ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚನ್ನು ಭರಿಸಲಾಗುತ್ತದೆ.
ಗರೋಡಿಗೆ 89 ಸೆಂಟ್ಸ ಜಾಗವಿದ್ದು 2010ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನಾಗ ಪಾಣೇರ ಹಂಪಾರು ಇವರು ಈ ಗರೋಡಿಯ ನೃತ್ಯವಿಶಾರದರಾಗಿ, ಸುರೇಶ ಮಡಿವಾಳ, ಉಳ್ಳೂರು ಇವರು ಮಡಿವಾಳರಾಗಿ, ಕೃಷ್ಣ ದೇವಾಡಿಗ ಆಕಲಬೈಲು ಕಿರಿಮಂಜೇಶ್ವರ ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಸಿಂಗಾರ ಗರೋಡಿ, ನಾಗೂರು,
ಕಿರಿಮಂಜೇಶ್ವರ ಅಂಚೆ,
ಬೈಂದೂರು ತಾಲೂಕು.

ಗರೋಡಿಯ ಅರ್ಚಕರು:

ಗಣೇಶ ಪೂಜಾರಿ – 9535388261

ಮಾಹಿತಿ ನೀಡಿದವರು :

ಗಣೇಶ ಪೂಜಾರಿ,
ಚಂದ್ರೇಶ ಪೂಜಾರಿ – 9880005048

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025