Baidashree

Shree Brahma Baidarkala Garodi, Marali – Nalkuru

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಾರಾಳಿ - ನಾಲ್ಕೂರು

ಉಡುಪಿಯಿಂದ ಕೊಕ್ಕರ್ಣೆ ತಲುಪಿ ಕೊಕ್ಕರ್ಣೆ ಬಸ್ ನಿಲ್ದಾಣದಿಂದ ಕೊಕ್ಕರ್ಣೆ ಮಂದಾರ್ತಿ ರಸ್ತೆಯಲ್ಲಿ ಸುಮಾರು 5ಕಿ.ಮೀ. ದೂರದಲ್ಲಿ ಎಡಕ್ಕೆ ಕೊಕ್ಕರ್ಣೆ – ಮದ್ದೂರು ರಸ್ತೆಗೆ ತಿರುಗಿ ಸುಮಾರು 4.5ಕಿ.ಮೀ. ಸಾಗಿದರೆ ಮಾರಾಳಿ ಮಹಾಗಣಪತಿ ದೇವಸ್ಥಾನದ ಹತ್ತಿರ ಈ ಗರೋಡಿ ಇದೆ.
ಗರೋಡಿಯ ಮುಖ್ಯ ದ್ವಾರವು ಬಡಗು ಮುಖವಾಗಿದ್ದು ಬ್ರಹ್ಮಗುಡಿಯು ಪೂವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಗಿಂಡೆಯಲ್ಲಿ ನೀರಿಟ್ಟು ಆರಾಧನೆಯಿದೆ.
ಗುಂಡದ ಬಲಬದಿಯಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ. ಪಕ್ಕದಲ್ಲಿ ದೇಯಿಬೈದೆತಿ ಮಣೆಮಂಚವಿದೆ. ಗುಂಡದ ಎಡಭಾಗದಲ್ಲಿ ಕುಜುಂಬ ಕಾಂಜವರ ಹಾಗೂ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿಪುರುಷ ಮರದ ಮೂರ್ತಿಯಿದೆ.
ಮೈಂದಾಳ್ತಿ, ಮಗು, ತೊಟ್ಟಿಲು, ಚಿಕ್ಕಮ್ಮನ ಮರದ ಮೂರ್ತಿಗಳಿವೆ, ಹಾಗೂ ಜುಮಾದಿಯ ಮಣೆಮಂಚವಿದೆ.
ಗರೋಡಿಯ ಹೊರಗೆ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ ಹಾಗೂ ಬಲಿಕಲ್ಲುಗಳಿವೆ.
ಗರೋಡಿಯ ಎದುರು ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಗರೋಡಿಯ ಪರಿಸರದಲ್ಲಿ ರಾವುತರ ಗುಡಿ ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನಗಳಿವೆ.

ಕೃಷ್ಣ ಪೂಜಾರಿ

2004 ರಿಂದ ಕೃಷ್ಣ ಪೂಜಾರಿ (40 ವರ್ಷ ಪ್ರಾಯ) ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಹಿರಿಯರಾದ ಬಾಬು ಪೂಜಾರಿ, ಬೋಳು ಪೂಜಾರಿ, ಚೆನ್ನ ಪೂಜಾರಿ ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಚೆನ್ನು ಪೂಜಾರಿ, ನಾರಾಯಣ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ವಿಠಲ ಶೆಟ್ಟಿ ಇವರು ಈ ಗರೋಡಿಯ ಮೊಕ್ತೇಸರರು. (ಮೊಬೈಲ್: 990221148)
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲ್ ಸೇವೆ, ಹಾಲು ಹಬ್ಬ, ಚಿಕ್ಕಮ್ಮದೇವಿಗೆ ಗೆಂಡ ಸೇವೆ ನಡೆಯುವುದು. ಪ್ರತೀ ವರ್ಷ ಮಾರ್ಚ ತಿಂಗಳ 25ನೇ ತಾರೀಖಿಗೆ ಬೈದೇರುಗಳ ನೇಮ, ಶಿವರಾಯ ಕೋಲ, ಮಾಯಂದಾಳ್ತಿ ಕೋಲ ನಡೆಯುತ್ತದೆ.
ನಾಲ್ಕೂರು, ಕಜ್ಕೆ, ಮಿಯಾರು, ಮಾರಾಳಿಯ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಕಾಣಿಕೆ, ವಂತಿಗೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1991ರಲ್ಲಿ ಗರೋಡಿಗೆ ಹಾಗೂ ಮರದ ಮೂರ್ತಿಗಳಿಗೆ ಬಣ್ಣಕೊಟ್ಟು ಗರೋಡಿಯ ಜೀಣೋದ್ಧಾರವಾಗಿದೆ. ಈಗ 2024-25ರಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶಿವರಾಯ ಶಿಲಾಮಯ ಗುಡಿಗಳ ನಿರ್ಮಾಣ ಹಾಗೂ ಹೊಸ ಗುಂಡ, ದೇಯಿಬೈದೆತಿ ಹಾಗೂ ಜುಮಾದಿಯ ಮರದ ಮೂರ್ತಿಗಳ ನಿರ್ಮಾಣದ ಯೋಜನೆಯು ಕಾರ್ಯರೂಪದಲ್ಲಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ಗಣಪ ಮಡಿವಾಳ ಮಾರಾಳಿ ಇವರು ಮಡಿವಾಳರಾಗಿ, ಅಶೋಕ ಸೇರಿಗಾರ ಪಾದೆಮಠ ಇವರು ವಾದ್ಯದವರಾಗಿ, ಚೀಂಕ ಮಾರಾಳಿ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಾರಾಳಿ, ನಾಲ್ಕೂರು,
ನಾಲ್ಕೂರು ಅಂಚೆ,
ಬ್ರಹ್ಮಾವರ ತಾಲೂಕು
ಉಡುಪಿ 576234.

ಅರ್ಚಕರು:

ಕೃಷ್ಣ ಪೂಜಾರಿ – 9880420559

ಮೊಕ್ತೇಸರರು:

ವಿಠಲ ಶೆಟ್ಟಿ – 990221148

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024

Shree Brahma Baidarkala Garodi Padematha, Kenjooru

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪಾದೆಮಠ, ಕೆಂಜೂರು

ಉಡುಪಿಯಿಂದ ಕೊಕ್ಕರ್ಣೆ ತಲುಪಿ, ಕೊಕ್ಕರ್ಣೆ – ಮಂದಾರ್ತಿ ರಸ್ತೆಯಲ್ಲಿ ಕೊಕ್ಕರ್ಣೆ ಬಸ್ಸು ನಿಲ್ದಾಣದಿಂದ ಸುಮಾರು 5ಕಿ.ಮೀ. ದೂರದಲ್ಲಿ ಬೈದೆಬೆಟ್ಟು ಎಂಬಲ್ಲಿ ರಸ್ತೆಯ ಎಡಬದಿಯಲ್ಲಿದೆ ಈ ಗರೋಡಿ.
ಗರೋಡಿಗೆ ಬಡಗು ಮುಖವಾಗಿರುವ ಮುಖ್ಯದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ. ಇಲ್ಲಿ ಷಡಾಧಾರ ಪ್ರತಿಷ್ಟೆ ಇಲ್ಲ. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಈ ಪ್ರದೇಶದ ಜನ ಮೊದಲು ವಡ್ಡಂಬೆಟ್ಟು ಗರೋಡಿಗೆ ಹೋಗುತ್ತಿದ್ದರು. ಒಂದು ಸಂದರ್ಭದಲ್ಲಿ ಪಾದೆಮಠದವರನ್ನು ಬಿಟ್ಟು ವಡ್ಡಂಬೆಟ್ಟು ಗರೋಡಿಯಲ್ಲಿ ಪೂಜೆ ನಡೆಸಿದರೆಂಬ ವಿವಾದದ ಪರಿಣಾಮವಾಗಿ ಈ ಗರೋಡಿ ನಿರ್ಮಾಣವಾಯಿತಂತೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಬ್ರಹ್ಮಗುಂಡದಲ್ಲಿ ಕೆಳಗೆ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ, ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆ. ಮೇಲಿನ ಅಂತಸ್ತಿನಲ್ಲಿ ದೀಪವನ್ನಿಟ್ಟು ಪೂಜಿಸುತ್ತಾರೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ ಹಾಗೂ ಕೋಟಿಬೈದರ ಮರದ ಮೂರ್ತಿಗಳಿವೆ.
ಎಡಭಾಗದಲ್ಲಿ ಚೆನ್ನಯಬೈದರು ಹಾಗೂ ಕುಜುಂಬ ಕಾಂಜವರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹುಲಿಚಾಮುಂಡಿ ದೈವದ ಮಣೆಮಂಚ, ಕೈಯಲ್ಲಿ ಮಗುವನ್ನು ಹಿಡಿದ ಮೈಂದಾಳ್ತಿಯ ಮರದ ಮೂರ್ತಿ, ಚಿಕ್ಕುವಿನ ಮರದ ಮೂರ್ತಿ, ಮೂವರು ಮಕ್ಕಳ ಮರದ ಮೂರ್ತಿ, ಜೋಗಿ ಪುರುಷ ಮರದ ಮೂರ್ತಿ ಹಾಗೂ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿ ಶಿವರಾಯ ಮತ್ತು ಬಂಟರ ಮರದ ಮೂರ್ತಿ ಹಾಗೂ ಪರಿವಾರ ದೈವಗಳ ಮಣೆಮಂಚಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಬಲಿಕಲ್ಲು, ನೇಮ ನಡೆಯುವ ಚಪ್ಪರ, ದೀಪದ ಕಂಬಗಳಿವೆ.

ಮಂಜುನಾಥ ಪೂಜಾರಿ

2014ರಿಂದ ಮಂಜುನಾಥ ಪೂಜಾರಿ(69 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಗೋಪ ಪೂಜಾರಿ, ಸುಬ್ಬ ಪೂಜಾರಿ, ಪರದೇಶಿ ಪೂಜಾರಿ, ಬೆರ್ಮು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಗುಂಡು ಪೂಜಾರಿ ಹಾಗೂ ವಾಸು ಪೂಜಾರಿಯವರು ಈ ಗರೋಡಿಯ ಬೈದರ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ಕೊಂಬ ಪೂಜಾರಿ, ಸುಬ್ಬ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು.
ಸುಧಾಕರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಕೆಂಜೂರು ಮನೆ ಸುಧಾಕರ ಶೆಟ್ಟಿಯವರು ಸಮಿತಿಯ ಅಧ್ಯಕ್ಷರಾಗಿಯೂ ಚಂದ್ರಕಾಂತ ಶ್ಯಾನುಭೋಗ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ನವೆಂಬರ್ ತಿಂಗಳಲ್ಲಿ ಹಾಲುಹಬ್ಬ, ಅಗೆಲು ಸೇವೆ, ಮಾರ್ಚ 26ಕ್ಕೆ ಅಗೆಲು ಸೇವೆ, 27ಕ್ಕೆ ಬೈದೇರುಗಳ ನೇ, ಮಾಯಂದಾಳ್ ಕೋಲ, ಶಿವರಾಯ ಕೋಲ ನಡೆಯುತ್ತದೆ.
ಕೆಂಜೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರವರ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಷ್ಷ ಭರಿಸಲಾಗುತ್ತದೆ.
1981ರಲ್ಲಿ ಹಾಗೂ 2017-18ರಲ್ಲಿ ಗರೋಡಿಯ ಜೀರ್ಣೋದ್ಧಾರವಗಿರುತ್ತದೆ
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ಕುಮಾರ ಮಡಿವಾಳ ಕೆಂಜೂರು ಇವರು ಮಡಿವಾಳರಾಗಿ ಈ ಗರೋಡಿಯ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪಾದೆಮಠ,
ಕೆಂಜೂರು ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು, ಉಡುಪಿ.

ಅರ್ಚಕರು:

ಮಂಜುನಾಥ ಪೂಜಾರಿ – 7259660969

ಮಾಹಿತಿ ನೀಡಿದವರು :

ಮಂಜುನಾಥ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024

Shree Brahma Baidarkala – Shivaraya Parivara Daivagala Garodi, Kukkude – Haradi

ಶ್ರೀ ಬ್ರಹ್ಮಬೈದರ್ಕಳ - ಶಿವರಾಯ ಪರಿವಾರ ದೈವಗಳ ಗರೋಡಿ, ಕುಕ್ಕುಡೆ - ಹಾರಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ದೂಪದಕಟ್ಟೆ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಸುಮಾರು 4.8ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಇದು ಆಯದ ಶಿಲಾಮಯ ಗರೋಡಿಯಾಗಿದ್ದು ಹಂಚಿನ ಮಾಡನ್ನು ಹೊಂದಿದೆ. ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮ ಗುಡಿಯ ದ್ವಾರವು ಬಡಗು ಮುಖವಾಗಿದ್ದು, ಬ್ರಹ್ಮಗುಡಿಗೆ ಬಾಗಿಲು ಅಳವಡಿಸಿರುವುದಿಲ್ಲ. ಷಢಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚ ಹೊಂದಿದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಕುದುರೆಯ ಮೇಲೆ ಕುಳಿತ ಗಾಳಿದೇವರ ಪಂಚಲೋಹದ ಬೆಳ್ಳಿಯ ಕವಚ ಹೊಂದಿದ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮಣೆಮಂಚದಲ್ಲಿ ಪಂಜುರ್ಲಿಯ ಪಂಚಲೋಹದ ಬೆಳ್ಳಿ ಕವಚ ಹೊಂದಿದ ಮೂರ್ತಿಯಿದೆ. ಪಕ್ಕದಲ್ಲಿ ಚೌಂಡಿಯ ಮಣೆಮಂಚ, ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಯಿದೆ. ಬ್ರಹ್ಮಗುಡಿಯ ಬಲಭಾಗದಲ್ಲಿ ಜುಮಾದಿ ಹಾಗೂ ಬಂಟರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ಮಣೆಮಂಚವಿದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ಮಣೆಮಂಚವಿದೆ.
ಗರೋಡಿಯ ಎದುರಿನ ಗುಡಿಯ ಗುಡಿಯಲ್ಲಿ ಶಿವರಾಯ, ಬಂಟ ಹಾಗೂ ಕಾಳಿಯ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ ಗುಡಿ, ನೆಲ್ಲಿಕಾಯಿ ಮರದ ಕಟ್ಡೆ, ಬಲಿಕಲ್ಲುಗಳಿವೆ.
ಗರೋಡಿಯ ಪರಿಸರದಲ್ಲಿ ನಾಗಬನ, ನೇಮದ ಚಪ್ಪರ, ಮಲಸಾವರ ಮತ್ತು ಪರಿವಾರ ದೈವಗಳ ಗುಡಿಯಿದೆ. ನಾಗಬನದಲ್ಲಿ ರೆಂಜದ ಮರ, ಗರೋಡಿಯ ಎದುರಿಗೆ ಅಶ್ವಸ್ಥ ಮರದ ಕಟ್ಟೆ, ಅತ್ತಿಮರದ ಕಟ್ಟೆ, ಜಾರಿಗೆ ಮರಗಳಿವೆ.

ನಾರಾಯಣ ಪೂಜಾರಿ

ಶೇಖರ ಪೂಜಾರಿ

2007 ರಿಂದ ನಾರಾಯಣ ಪೂಜಾರಿ (72 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. 1982 ರಿಂದ ಶೇಖರ ಪೂಜಾರಿ (57 ವರ್ಷ) ಹಾಗೂ ಸುಶಾಂತ ಪೂಜಾರಿ (30 ವರ್ಷ) ಇವರುಗಳು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮೊದಲು ಹಿರಿಯರಾದ ಮಂಜಯ್ಯ ಪೂಜಾರಿ, ಅಣ್ಣಯ್ಯ ಪೂಜಾರಿ, ತೌಡ ಪೂಜಾರಿ, ಸೋಮ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು. ತೌಡ ಪೂಜಾರಿ ಹಾಗೂ ಸೋಮ ಪೂಜಾರಿಯವರ ಕಾಲದಲ್ಲಿ ಈ ಗರೋಡಿಯ ನಿರ್ಮಾಣವಾಯಿತಂತೆ.
2020 ರಿಂದ ಸತೀಷ್ ಪೂಜಾರಿ (38 ವರ್ಷ) ಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಹಿಂದೆ ಗೋವಿಂದ ಪೂಜಾರಿ, ಅಂಗರ ಪೂಜಾರಿ, ಬಾಬು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಕುಕ್ಕುಡೆ ಮನೆ ಜಗದೀಶ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಇವರ ಮೊದಲು ಶ್ರೀಧರ ಶೆಟ್ಟಿ, ಶಿವರಾಮ ಹೆಗ್ಡೆ, ನಂದ್ಯಪ್ಪ ಶೆಟ್ಟಿ, ನಾರಾಯಣ ಶೆಟ್ಟಿ, ರಾಮಣ್ಣ ಶೆಟ್ಟಿ ಇವರುಗಳು ಇಲ್ಲಿ ಮೊಕ್ತೇಸರರಾಗಿದ್ದರು. ರಾಮಣ್ಣ ಶೆಟ್ಟಿಯವರ ಕಾಲದಲ್ಲಿ ಈ ಗರೋಡಿ ಸ್ಥಾಪನೆಯಾಯಿತಂತೆ.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಸುರೇಶ ಪೂಜಾರಿಯವರು ಅಧ್ಯಕ್ಷರಾಗಿಯೂ, ಉಮೇಶ ಪೂಜಾರಿಯವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ವಾರದ ಎಡರು ದಿನ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಪಸರಣೆ ಪೂಜೆ, ಶಿವರಾಯನಿಗೆ ಹರಕೆಯ ಕುರಿ ಕೋಳಿ ಸೇವೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲು ಹಬ್ಬ, ತುಲಾಭಾರ ಸೇವೆ, ದರ್ಶನ , ಸುಗ್ಗಿ ತಿಂಗಳಲ್ಲಿ 10ನೇ ದಿನ ಅಗೆಲು, ದರ್ಶನ ಸೇವೆ, 11ನೇ ದಿನ ನೇಮ, ಜೋಗಿಪುರುಷ, ಮಾಯಂದಾಲ್ ಕೋಲ, ಶಿವರಾಯ ಕೋಲ ನಡೆಯುತ್ತದೆ.
ಮೂಡು ಕುಕ್ಕುಡೆ, ಪಡು ಕುಕ್ಕುಡೆ, ಕುಕ್ಕುಡೆ, ಹಾರಾಡಿ, ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವರಡ, ವಂತಿಗೆಯಿAದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತಿದೆ.
ಗರೋಡಿಗೆ 26 ಸೆಂಟ್ಸ ಜಾಗವಿದೆ. 2000 ನೇ ಇಸವಿಯಲ್ಲಿ ಜೀರ್ಣೋದ್ದಾರ ಗೊಂಡಿದ್ದ ಗರೋಡಿಯು 2014ರಲ್ಲಿ ಜೀರ್ಣೋದ್ದಾರಗೊಂಡು ಶಿಲಾಮಯವಾಗಿ ಮೂಡಿ ಬಂದಿದೆ.
ಸಂತು ಪರವ ಬೈಲೂರು ಮತ್ತು ಸಂಘಡಿಗರು ಇಲ್ಲಿಯ ನೃತ್ಯವಿಶಾದರಾಗಿ, ಬಾಲಕೃಷ್ಣ ಮಡಿವಾಳ ಹಾರಾಡಿ ಮಡಿವಾಳರಾಗಿ, ರವಿ ಸೇರಿಗಾರ ಆರೂರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ – ಶಿವರಾಯ ಪರಿವಾರ ದೈವಗಳ ಗರೋಡಿ,
ಕುಕ್ಕುಡೆ – ಹಾರಾಡಿ
ಬ್ರಹ್ಮಾವರ ತಾಲೂಕು
ಉಡುಪಿ ಜಿಲ್ಲೆ – 576213.

ಅರ್ಚಕರು:

ಶೇಖರ ಪೂಜಾರಿ – 9481847573
ಸುಶಾಂತ ಪೂಜಾರಿ – 9902560499

ಮೊಕ್ತೇಸರರು:

ಜಗದೀಶ ಶೆಟ್ಟಿ – 9902280701

ಆಡಳಿತ ಸಮಿತಿಯ ಅಧ್ಯಕ್ಷರು:

ಸುರೇಶ ಪೂಜಾರಿ – 9880605713.

ಮಾಹಿತಿ ನೀಡಿದವರು :

ಶೇಖರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Shivaraya Parivara Garodi, Haradi, Bokkapatna, Honnala

ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಪರಿವಾರ ಗರೋಡಿ ಹಾರಾಡಿ, ಬೊಕ್ಕಪಟ್ನ ಹೊನ್ನಾಳ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66ರಲ್ಲಿ ಬ್ರಹ್ಮಾವರಕ್ಕೆ ಮೊದಲು ದೂಪದಕಟ್ಟೆ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಹೊನ್ನಾಳಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 4.1ಕಿ.ಮೀ ದೂರದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮ ಗುಡಿಯು ಬಡಗು ಮುಖವಾಗಿದೆ. ಇಲ್ಲಿ ಷಢಾಧಾರ ಪ್ರತಿಷ್ಠೆಯಾಗಿಲ್ಲ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ನಾಗ ಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚ ಹಾಗೂ ಮುಖಕ್ಕೆ ಬಂಗಾರದ ಕವಚವಿರುವ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುದುರೆಯ ಮೇಲೆ ಕುಳಿತ ಒಕ್ಕು ಬಲ್ಲಾಳ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಜಾರಂದಾಯ ಹಾಗೂ ಕುಕ್ಕಿನಂತಾಯ ದೈವಗಳ ಮಣೆಮಂಚಗಳಿವೆ. ಎಡಭಾಗದಲ್ಲಿ ಪಂಜುರ್ಲಿಯ ಮಣೆ ಮಂಚ, ಜುಮಾದಿ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ದೈವದ ಮಣೆಮಂಚದಲ್ಲಿ ಪಂಚಲೋಹದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯನ ಮೂರ್ತಿ ಇದೆ. ಪಕ್ಕದಲ್ಲಿಯೇ ಹಳೆಯ ಶಿಲಾಶಾಸನವೊಂದಿದೆ.
ಗರೋಡಿಯ ಎದುರಿನ ಶಿವರಾಯ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ.
ಗರೋಡಿಯ ಬಲಭಾಗದಲ್ಲಿರುವ ಇನ್ನೊಂದು ಗುಡಿಯಲ್ಲಿ ವರ್ತೆ, ಪಂಜುರ್ಲಿ, ಹಾಗೂ ಬೈಕಾಡ್ತಿ ದೈವಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ ಗುಡಿ, ನೆಲ್ಲಿಕಾಯಿ ಮರದ ಕಟ್ಡೆ, ಬಲಿಕಲ್ಲುಗಳಿವೆ.
ಗರೋಡಿಯ ಹೊರ ಭಾಗದಲ್ಲಿ ತನ್ನಮಾನಿಗ ದೈವದ ಕಲ್ಲು ಇದೆ.

ಸದಾಶಿವ ಪೂಜಾರಿ

2021ರಿಂದ ಸದಾಶಿವ ಪೂಜಾರಿ (52 ವರ್ಷ) ಯವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ರಾಮ ಪೂಜಾರಿ, ಜಬ್ಬ ಪೂಜಾರಿ, ಗೋವಿಂದ ಪೂಜಾರಿಯವರು ಇಲ್ಲಿಯ ಅರ್ಚಕ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕುಂರ್ಬಿಲ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಯಾಗಿದ್ದರು.
ನಾರಾಯಣ ಶೆಟ್ಟಿ ಪಡು ಹಾರಾಡಿ ಇವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಉದಯ ಪೂಜಾರಿಯವರು ಅದ್ಯಕ್ಷರಾಗಿ, ಪ್ರದೀಪ ಇವರು ಕಾರ್ಯದರ್ಶಿಯಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ಹಸರಣೆ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆಗಳು ನಡೆಯುತ್ತವೆ. ಏಪ್ರಿಲ್ ತಿಂಗಳ 6ನೇ ತಾರೀಖಿಗೆ ಅಗೆಲು, ದರ್ಶನ ಸೇವೆ, 7ಕ್ಕೆ ಬೈದೇರುಗಳ ನೇಮ, ಮೈಂದಾಳ್ತಿ ಕೋಲ, ಜೋಗಿ ಪುರುಷ ಕೋಲ, ಶಿವರಾಯ ಕೋಲಗಳು ನಡೆಯುತ್ತವೆ.
ಹಾರಾಡಿ, ಬೊಕ್ಕಪಟ್ನ, ಕುಕ್ಕುಡೆ, ಬೈಕಾಡಿ, ಸೂಲ್ ಕುದ್ರು, ಬೆಂಗ್ರೆ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು ಗರೋಡಿಯಲ್ಲಿ ನೀರು ಸ್ನಾನ, ತುಲಾಭಾರ ಸೇವೆ, ಮದುವೆ ಮುಂತಾದ ಸಂದಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತಿದೆ.
1980, 2004 ಹಾಗೂ 2019ರಲ್ಲಿ ಗರೋಡಿಯ ಜೀರ್ಣೋದ್ದಾರವಗಿದೆ.
ಸಂತು ಪರವ ಬೈಲೂರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಲಕೃಷ್ಣ ಮಡಿವಾಳ ಹಾರಾಡಿ ಇವರು ಮಡಿವಾಳರಾಗಿ, ಪ್ರಭಾಕರ ದೇವಾಡಿಗ ನೀಲಾವರ ವಾದ್ಯದವರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ – ಶಿವರಾಯ ಪರಿವಾರ ಗರೋಡಿ,
ಹಾರಾಡಿ ಬೊಕ್ಕಪಟ್ನ,
ಹೊನ್ನಾಳ ಪೋಸ್ಟ,
ಬ್ರಹ್ಮಾವರ ತಾಲೂಕು,
ಉಡುಪಿ 576213.

ಅರ್ಚಕರು:

ಸದಾಶಿವ ಪೂಜಾರಿ 9481344691

ಆಡಳಿತ ಸಮಿತಿ:

ಅಧ್ಯಕ್ಷರು: ಉದಯ ಪೂಜಾರಿ 9483709715

ಮಾಹಿತಿ ನೀಡಿದವರು :

ಸದಾಶಿವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Garodi – Gudebettu Varamballi

ಶ್ರೀ ಬ್ರಹ್ಮಬೈದರ್ಕಳ ಗರೋಡಿ - ಗುಡೆಬೆಟ್ಟು ವಾರಂಬಳ್ಳಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66ರಲ್ಲಿ ಬ್ರಹ್ಮಾವರ ದಾಟಿ ಉಪ್ಪಿನಕೋಟೆಯಲ್ಲಿ ಎಡಕ್ಕೆ ಸಾಲಿಕೇರಿ ಮಾರ್ಗದಲ್ಲಿ ಸುಮಾರು 800ಮೀ. ಒಳಗೆ ಸಾಗಿದರೆ ರಸ್ತೆಯ ಬಲಭಾಗದಲ್ಲಿದೆ ಈ ಗರೋಡಿ.
ಪೂರ್ವಾಭಿಮುಖವಾಗಿರುವ ದ್ವಾರವಿರುವ ಈ ಗರೋಡಿಯ ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹಗುಡಿಯ ಒಳಗೆ ಗುಂಡದಲ್ಲಿ ಕುದುರೆಯ ಮೇಲೆ ಕುಳಿತ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಕುದುರೆಗೆ ಬೆಳ್ಳಿಯ ಕವಚವಿದೆ. ಗುಂಡದ ಮೇಲ್ಬಾಗದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಮಣೆಮಂಚದಲ್ಲಿ ಪಂಜುರ್ಲಿಯ ಪಂಚಲೋಹದ ಮೂರ್ತಿ, ಚೌಂಡಿಯ ಮರದ ಮೂರ್ತಿ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ನಂದಿಕೋಣ, ಜೋಗಿಪುರುಷರ ಮರದ ಮೂರ್ತಿ, ಗುರುಕಂಭ, ಚಿಕ್ಕಮ್ಮನ, ಹೈಗುಳಿಯ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಎರಡು ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ, ಬಂಟ, ಹಾಗೂ ಕಾಳಿಯ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ ದೈವದ ಕಲ್ಲುಕಂಬದ ಗುಡಿ, ತುಳಸೀಕಟ್ಟೆ, ಬಲಿಕಲ್ಲುಗಳಿವೆ.
ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಬಿ.ಶಂಕರ ಪೂಜಾರಿ

ಬಿ.ಶಂಕರ ಪೂಜಾರಿ (71 ವರ್ಷ) ಯವರು 2014ರಿಂದ ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ನಾರಾಯಣ ಪೂಜಾರಿ, ಮುತ್ತ ಪೂಜಾರಿಯವರು ಇಲ್ಲಿ ಅರ್ಚಕರಾಗಿದ್ದರು.
ನರಸಿಂಹ ಪೂಜಾರಿ (70 ವರ್ಷ) ಹಾಗೂ ಐತ ಪೂಜಾರಿಯವರು ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಹಿಂದೆ ಕೊರಗ ಪೂಜಾರಿ, ಅಣ್ಣಯ್ಯ ಪೂಜಾರಿ, ತೌಡ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ರಾಜಾರಾಮ ಶೆಟ್ಟಿಯವರು ಗರೋಡಿಯ ಮೊಕ್ತೇಸರರು. ಹಿಂದೆ ರಘುರಾಮ ಶೆಟ್ಟಿ, ನಾಗಯ್ಯ ಶೆಟ್ಟಿ, ಸದಾಶಿವ ಮಾಸ್ತರ್ರವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಪಸರಣೆ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ತುಲಾಭಾರ ಸೇವೆ,ಏಪ್ರಿಲ್ ತಿಂಗಳ 4ನೇ ತಾರೀಖು ಅಗೆಲು, 5ಕ್ಕೆ ನೇಮೋತ್ಸವ, ಜೋಗಿಪುರುಷ, ಮೈಂದಾಳ್ತಿ ಕೋಲ, ಶಿವರಾಯ ಮತ್ತು ಪಂಜುರ್ಲಿ ದೈವಕ್ಕೆ ಎರಡು ವರ್ಷಕ್ಕೊಮ್ಮೆ ಕೋಲ ನಡೆಯುತ್ತದೆ. ಸೋಣ ತಿಂಗಳಲ್ಲಿ ದಿನಾಲು ರಾತ್ರಿ 7-00ರಿಂದ 9-00 ರವರೆಗೆ ಸೋಣಾರತಿ ನಡೆಯುತ್ತದೆ.
ವಾರಂಬಳ್ಳಿ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು, ಗರೋಡಿಯಲ್ಲಿ ನೀರುಸ್ನಾನ, ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಜನರು ಭಾಗಿಯಾಗುತ್ತಾರೆ. ಊರ ಜನರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
01-04-2015ರಲ್ಲಿ ಗರೋಡಿಯ ಜೀರ್ಣೋದ್ದಾರವಗಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಲ ಬಂಡಾರಿ ಉಪ್ಪಿನಕೋಟೆ ಇವರು ಮಡಿವಾಳರಾಗಿ, ಪ್ರಭಾಕರ ನೀಲಾವರ ಇವರು ವಾದ್ಯದವರಾಗಿ, ಗಣೇಶ ಬ್ರಹ್ಮಾವರ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಗುಡೆಬೆಟ್ಟು, ವಾರಂಬಳ್ಳಿ,
ಬ್ರಹ್ಮಾವರ ಅಂಚೆ,
ಉಡುಪಿ 576213.

ಅರ್ಚಕರು:

ಬಿ.ಶಂಕರ ಪೂಜಾರಿ – 9880780359.

ಮಾಹಿತಿ ನೀಡಿದವರು :

ಬಿ.ಶಂಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Garodi Kshetra, Sastana (Goligarodi)

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರ, ಸಾಸ್ತಾನ (ಗೋಳಿಗರೋಡಿ)

ಉಡುಪಿಯಿಂದ ಸಾಸ್ತಾನ ತಲುಪಿ, ಸಾಸ್ತಾನ ಪೇಟೆಯಲ್ಲಿ ಬಲಕ್ಕಿರುವ ಗರೋಡಿ ರಸ್ತೆಯಲ್ಲಿದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಈ ಸ್ಥಳದಲ್ಲಿ ಪೂರ್ವಕಾಲದಿಂದಲೂ ಒಂದು ಬ್ರಹತ್ತಾದ ಆಲದ ಮರ (ಗೋಳಿ ಮರ) ಇತ್ತಂತೆ. ಆ ಮರದಲ್ಲಿ ಕೋಟಿಚೆನ್ನಯರು ಶಕ್ತಿ ರೂಪದಲ್ಲಿ ಬಂದು ನೆಲೆಸಿದ್ದರಂತೆ. ಈ ಸ್ಥಳಕ್ಕೆ ಧರ್ಮಸ್ಥಳದಿಂದ ಅಣ್ಣಪ್ಪ ಪಂಜುರ್ಲಿಯ ದೃಷ್ಠಿ ಬಿದ್ದ ಕಾರಣ ಇಲ್ಲಿ ಗರೋಡಿಯ ಸ್ಥಾಪನೆಯಾಯಿತಂತೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಷಢಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚದ ಮೂರ್ತಿಯಿದೆ.
ಗುಂಡದ ಹೊರಗೆ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಮಕ್ಕಳು ಹಾಗೂ ದೇಯಿಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ, ನಂದಿಕೇಶ್ವರ ದೈವದ ಮಣೆಮಂಚದಲ್ಲಿ ಪಂಚಲೋಹದ ಮೂರ್ತಿ, ಮಲ್ಲಕೇಶ್ವರ ಹಾಗೂ ಪರಿವಾರ ದೈವಗಳ ಗದ್ದಿಗೆಗಳಿವೆ.
ಬ್ರಹ್ಮ ಗುಡಿಯ ಹೊರಗೆ ಬ್ರಹ್ಮಗುಡಿಯ ಬಲಭಾಗದಲ್ಲಿ ಪರಿವಾರ ದೈವಗಳ ಎರಡು ಗದ್ದಿಗೆಗಳು, ಅಮ್ಮನವರು, ಹೈಗುಳಿ, ದೈವಗಳ ಗದ್ದಿಗೆಗಳಿವೆ. ಎಡಭಾಗದಲ್ಲಿ ಪಂಜುರ್ಲಿಯ ಗದ್ದಿಗೆಯಲ್ಲಿ ಬೆಳ್ಳಿಮುಚ್ಚಿದ ಪಂಚಲೋಹದ ಮೂರ್ತಿಯಿದೆ. ಪಕ್ಕದಲ್ಲಿ ಪಂಜುರ್ಲಿ ಬಂಡಿ ಇದೆ.
ಹತ್ತಿರದಲ್ಲಿ ಎರಡು ಮಣೆಮಂಚಗಳಲ್ಲಿ ಪರಿವಾರ ದೈವಗಳು, ಕಾಲಬೈರವನ ಮರದಮೂರ್ತಿ, ಪರಿವಾರ ದೈವದ ಮರದ ಮೂರ್ತಿ ಹಾಗೂ ಗದ್ದಿಗೆ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿ, ಮಂತ್ರಗಣ ಮತ್ತು ಕಲ್ಕುಡನ ಗದ್ದಿಗೆಗಳು ಇವೆ.
ಬ್ರಹ್ಮಗುಡಿಯ ಎದುರಿಗೆ ಪರಿವಾರ ದೈವದ ಗದ್ದಿಗೆ, ಜೋಗಿ ಪುರುಷ ಹಾಗೂ ಕುದುರೆಯ ಮರದ ಮೂರ್ತಿ, ಚೌಂಡೇಶ್ವರ, ಸಾಹೇಬರ ಗಣಗಳ ಮರದ ಮೂರ್ತಿ, ಗುರು ಕಂಬ, ಚಿಕ್ಕಮ್ಮ ಹಾಗೂ ಮರ್ಲು ಚಿಕ್ಕಮ್ಮರ ಮರದ ಮೂರ್ತಿ, ಪರಿವಾರ ದೈವದ ಗದ್ದುಗೆ, ಹೈಗುಳಿ ಗದ್ದಿಗೆ ಹಾಗೂ ಪರಿವಾರ ದೈವಗಳ ಮೂರು ಗದ್ದುಗೆಗಳಿವೆ.
ಗರೋಡಿಯ ಹೊರ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯ ಹಾಗೂ ದ್ವಾರಪಾಲಕರ ಮರದ ಮೂರ್ತಿಗಳಿವೆ.
ಗರೋಡಿಯ ಎದುರಿಗೆ ಇರುವ ಗುಡಿಯಲ್ಲಿ ಶಿವರಾಯ, ಬಂಟ ಹಾಗು ವ್ಯಾಘ್ರಚಾಮುಂಡೇಶ್ವರಿಯ ಮರದ ಮೂರ್ತಿಗಳಿವೆ.
ಗರೋಡಿಯ ಎದುರಿಗೆ ಆವರಣದೊಳಗೆ ದೀಪದ ಕಂಬ, ತೊಟ್ಟಿಲ ಮಗುವಿನ ಕಲ್ಲು, ಪ್ರೇತ ಶಿಲೆ, ಯಕ್ಷೇಶ್ವರಿಯ ಕಲ್ಲಿನ ಗದ್ದುಗೆ, ಕ್ಷೇತ್ರಪಾಲ ದೈವದ ಮರದ ಗದ್ದಿಗೆಗಳಿವೆ.
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಕೊರಗ ಪೂಜಾರಿ, ಚಂದು ಪೂಜಾರಿಯವರ ಮರದ ಮೂರ್ತಿ, ಶಾಂತಾ ಬಾಯಿಯ ಮರದ ಗದ್ದಿಗೆ ಹಾಗೂ ಎರಡು ಹೆಣ್ಣು ಭೂತಗಳ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬನ, ಬಲಿಕಲ್ಲುಗಳಿವೆ.

ದಿನಕರ ಪೂಜಾರಿ

1987ರಿಂದ ದಿನಕರ ಪೂಜಾರಿ ( 65 ವರ್ಷ) ಯವರು ಅರ್ಚಕರಾಗಿದ್ದಾರೆ. ಇವರೊಂದಿಗೆ ಶೀನ ಪೂಜಾರಿ (60 ವರ್ಷ) ಕರಿಯ ಪೂಜಾರಿ, ಬಸವ ಪೂಜಾರಿ, ಹರೀಶ ಪೂಜಾರಿಯವರು ಇಲ್ಲಿಯ ಅರ್ಚಕರಗಿದ್ದಾರೆ. ಇವರ ಮೊದಲು ಕೃಷ್ಣಯ್ಯ ಪೂಜಾರಿ, ಗಿರಿಯ ಪೂಜಾರಿ, ರಂಗ ಪೂಜಾರಿ, ಚಂದು ಪೂಜಾರಿ, ಸೋಮ ಪೂಜಾರಿ ತೌಡ ಪೂಜಾರಿಯವರು ಈ ಸೇವೆ ಮಾಡಿದ್ದರು.

ಶಂಕರ ಪೂಜಾರಿ

1987ರಿಂದ ಶಂಕರ ಪೂಜಾರಿ (64 ವರ್ಷ)ಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಚಂದು ಪೂಜಾರಿ, ಕೊರಗ ಪೂಜಾರಿ, ಕೃಷ್ಣಯ್ಯ ಪೂಜಾರಿ, ಸದಿಯ ಪೂಜಾರಿ, ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಬಾಳಕುದ್ರು ಹೆಗ್ಡೆಯವರ ಮನೆ ಬಿ.ಸುಧಾಕರ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ಇವರ ಮೊದಲು ಸಂಕಯ್ಯ ಹೆಗಡೆ, ಕೃಷ್ಣಯ್ಯ ಹೆಗಡೆಯವರು ಮೊಕ್ತೇಸರರಾಗಿದ್ದರು.

ಜಿ. ವಿಠಲ ಪೂಜಾರಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಜಿ. ವಿಠಲ ಪೂಜಾರಿಯವರು ಇದರ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪಂಜುರ್ಲಿಗೆ ಭೋಗ ಸೇವೆ, ನವಂಬರ್ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ ನಡೆಯುತ್ತದೆ. ಫೆಬ್ರವರಿ ತಿಂಗಳ 22ನೇ ತಾರೀಖಿನಂದು ಗೆಂಡ ಸೇವೆ, 23ಕ್ಕೆ ತುಲಾಭಾರ ಹಾಗೂ ಮಾರಿಹಬ್ಬವು 10 ವರ್ಷಕ್ಕೊಮ್ಮೆ ನಡೆಯುತ್ತದೆ.
ಪಾಂಡೇಶ್ವರ, ಮೂಡೋಡು, ಐರೋಡಿ, ಗುಂಡ್ಮಿ, ವಾರಂಬಳ್ಳಿ, ಹಂದಟ್ಟು, ಬಾಳಕುದ್ರು, ಹಂಗಾರಕಟ್ಟೆ, ಕೋಡಿ, ಪಾರಂಪಳ್ಳಿ ಹಾಗೂ ಎಡಬೆಟ್ಟು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರು. ಊರ ಜನರು ಗರೋಡಿಯಲ್ಲಿ ನೀರುಸ್ನಾನ, ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರವೂರ ಭಕ್ತರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಯು 1977 ಹಾಗೂ 2018ರಲ್ಲಿ ಜೀರ್ಣೋದ್ದಾರವಾಗಿದೆ.
ಜಯ ಮಡಿವಾಳ ಪಾಂಡೇಶ್ವರ ಇವರು ಈ ಗರೋಡಿಯ ಮಡಿವಾಳರಾಗಿ, ರಾಮ ದೇವಾಡಿಗ ಕಾರ್ಕಡ ಇವರು ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ ಶ್ರೀ ಪಂಜುರ್ಲಿ ಕೃಪಾ ಪೋಷಿತ ಯಕ್ಷಗಾನ ಕಲಾ ಮಂಡಳಿ (ರಿ) ಹಾಗೂ ಬ್ರಹ್ಮ ಬೈದರ್ಕಳ ಭಜನಾ ಮಂಡಳಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗೋಳಿ ಗರಡಿ ಕ್ಷೇತ್ರ ಸಾಸ್ಥಾನ,
ಸಾಸ್ತಾನ ಅಂಚೆ, ಬ್ರಹ್ಮಾವರ ತಾಲೂಕು.
ಉಡುಪಿ 576276,

ಅರ್ಚಕರು:

ದಿನಕರ ಪೂಜಾರಿ – 9886587191

ಸ್ಥಳ ಪಾತ್ರಿಗಳು:

ಶಂಕರ ಪೂಜಾರಿ – 9611387821,

ಆಡಳಿತ ಸಮಿತಿ ಅಧ್ಯಕ್ಷರು:

ಜಿ. ವಿಠಲ ಪೂಜಾರಿ -9682302071

ಮೊಕ್ತೇಸರರು:

ಬಿ.ಸುಧಾಕರ ಶೆಟ್ಟಿ – 8971816220

ಮಾಹಿತಿ ನೀಡಿದವರು :

ಶಂಕರ ಪೂಜಾರಿ, ಜಿ. ವಿಠಲ ಪೂಜಾರಿ, ದಿನಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

04.01.2025

Shree Brahma Baidarkala Hosa Garodi Cherkadi

ಶ್ರೀ ಬ್ರಹ್ಮಬೈದರ್ಕಳ ಹೊಸ ಗರೋಡಿ ಚೇರ್ಕಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ಮೂಲಕ ಬ್ರಹ್ಮಾವರದ ಮೊದಲು ಭದ್ರಗಿರಿಯಲ್ಲಿ ಬಲಕ್ಕೆ ತಿರುಗಿ, ರುಡ್ಸೆಡ್ ರಸ್ತೆಯಲ್ಲಿ ಸಾಗಿ ನಂತರ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸುಮಾರು 7.5ಕಿ.ಮೀ. ಚೇರ್ಕಾಡಿಯಲ್ಲಿ ಎಡಕ್ಕೆ ತಿರುಗಿ ಸುಮಾರು 3ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಷಢಾಧಾರ ಪ್ರತಿಷ್ಟೆಯನ್ನು ಹೊಂದಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಚೇರ್ಕಾಡಿಯ ಹಳೆ ಗರೋಡಿಯಲ್ಲಿ ಉಂಟಾದ ವಿವಾದದಿಂದಾಗಿ ಚೇರ್ಕಾಡಿಯ ಹಳೆ ಗರೋಡಿಯಿಂದ ಬ್ರಹ್ಮರ ಮೂರ್ತಿಯನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿ ಹೊಸ ಗರೋಡಿಯ ನಿರ್ಮಾಣವಾಯಿತಂತೆ.
ಗರೋಡಿಯ ಬ್ರಹ್ಮರ ಗುಡಿಯ ಒಳಗಡ ಬ್ರಹ್ಮಗುಂಡದಲ್ಲಿ ಹಳೆಗರೋಡಿಯಿಂದ ತರಲಾಯಿತು ಎನ್ನಲಾದ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ದೀಪ ಹಾಗೂ ಹೂಜಿಯಲ್ಲಿ ನೀರನ್ನಿಟ್ಟು ಆರಾಧನೆಯಿದೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಮಣೆಮಂಚದಲ್ಲಿ ಹೂಜಿಯನ್ನಿಟ್ಟು ಕೋಟಿಚೆನ್ನಯರಿಗೆ, ದೇಯಿಬೈದೆತಿಗೆ ಪೂಜೆ ನಡೆಯುತ್ತದೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಬಲ್ಲಾಳರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಬಲಭಾಗದಲ್ಲಿ ವರ್ತೆ, ಪಂಜುರ್ಲಿ, (ಎರಡು) ಬಂಟ, ಧೂಮಾವತಿ, ಜೋಗಿಪುರುಷರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಮೈಂದಾಳ್ತಿ, ಜೋಗಿಪುರುಷ, ಅರಸು, ಚಿಕ್ಕು, ಯಕ್ಷಿ, ಹಾಗೂ ಮೈಸಂದಾಯ ದೈವಗಳ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಬಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಎದುರು ಬಲಬದಿಯ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯ ದೈವದ ಮಣೆಮಂಚಗಳಿವೆ. ಗರೋಡಿಯ ಬಲಭಾಗದ ಜಗಲಿಯಲ್ಲಿ ಬೈರವ, ಹಾಯ್ಗುಳಿ ಹಾಗೂ ವ್ಯಾಘ್ರ ಚಾಮುಂಡಿ ದೈವಗಳ ಮಣೆಮಂಚಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಮಾರಿ ಶಿವರಾಯ ಹಾಗೂ ಬಂಟರ ಮಣೆಮಂಚಗಳಿವೆ. ಗರೋಡಿಯ ಪರಿಸರದಲ್ಲಿ ಮಲಸಾವರ, ಕ್ಷೇತ್ರಪಾಲ ಹಾಗೂ ನಾಗಬನಗಳಿವೆ.

ರಾಮ ಪೂಜಾರಿ

ರಾಮ ಪೂಜಾರಿ (65 ವರ್ಷ ಪ್ರಾಯ) ಇವರು 2021 ರಿಂದ ಈ ಗರೋಡಿಯ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ನರಸಿಂಹ ಪೂಜಾರಿ, ಬಚ್ಚು ಪೂಜಾರಿ, ವಿಟ್ಟು ಪೂಜಾರಿ ಇವರುಗಳು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.

ಶಶಿಧರ ಪೂಜಾರಿ

ಶಶಿಧರ ಪೂಜಾರಿ (31 ವರ್ಷ) ಇವರು ಇಲ್ಲಿಯ ದರ್ಶನದ ಪಾತ್ರಿಗಳಾಗಿದ್ದಾರೆ.

ಸಂಜೀವ ಪೂಜಾರಿ

ಇವರ ಮೊದಲು ಸಂಜೀವ ಪೂಜಾರಿ, ಬಚ್ಚು ಪೂಜಾರಿ, ಮೊದಲಾದವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಸಂತೋಷ ಹೆಗಡೆ ಹಾಗೂ ರತ್ನಾಕರ ಹೆಗಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ. ಇದಕ್ಕೆ ಮೊದಲು ದೊಡ್ಡಮನೆ ನಾರಾಯಣ ಪೂಜಾರಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು ಮೊದಲಾದ ಆಚರಣೆಗಳಿವೆ. ಡಿಸೆಂಬರ್ ತಿಂಗಳಲ್ಲಿ ಹಾಲುಹಬ್ಬ, ಅಗೆಲು ಸೇವೆ ನಡೆಯುತ್ತದೆ. ಪತೀ ವರ್ಷ ಮೇ 09ನೇ ತಾರೀಖಿಗೆ ಅಗೆಲು, 10ನೇ ತಾರೀಖಿಗೆ ನೇಮೋತ್ಸವ, ಶಿವರಾಯ ಕೋಲ, ತುಲಾಭಾರ ಸೇವೆಗಳು, ನಡೆಯುತ್ತವೆ.
ಚೇರ್ಕಾಡಿ, ಮಡಿ, ಕಡಿಕಲ್ಲು, ನೂಜಿಬೈಲು, ಮಾಡೂರು, ಬೆನಗಲ್, ಕನ್ನಾರು, ಕರ್ದಾಡಿ, ಕೆದ್ಲುಬೈಲು ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಊರಜನರು ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ತುಲಾಭಾರ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಗೆ ಸಂಬಂಧಪಟ್ಟ ಸುಮಾರು 70 ಸೆಂಟ್ಸು ಜಾಗವಿದೆ. ವರಡ ವಂತಿಗೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
1950, 2000, ಹಾಗೂ 2003 ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ನರಸಿಂಹ ಪರವ ಮತ್ತು ಸಂಗಡಿಗರು ನೃತ್ಯವಿಶಾರದರಾಗಿ, ನಾರಾಯಣ ಮಡಿವಾಳ ಚೇರ್ಕಾಡಿ, ಜಬ್ಬ ಶೇರಿಗಾರ ಕೊಕ್ಕರ್ಣೆ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹೊಸ ಗರೋಡಿ, ಚೇರ್ಕಾಡಿ,
ಚೇರ್ಕಾಡಿ ಗ್ರಾಮ,
ಪೇತ್ರಿ ಅಂಚೆ,
ಬ್ರಹ್ಮಾವರ ಉಡುಪಿ.

ಅರ್ಚಕರು:

ರಾಮ ಪೂಜಾರಿ – 8197625511,

ದರ್ಶನ ಪಾತ್ರಿ:

ಶಶಿಧರ ಪೂಜಾರಿ – 7348850267.

ಮಾಹಿತಿ ನೀಡಿದವರು

ರಾಮ ಪೂಜಾರಿ – 8197625511,

ಮಾಹಿತಿ ಸಂಗ್ರಹಿಸಿದ ದಿನಾಂಕ:

27.12.2024

Shree Brahma Baidarkala Hale Garodi, Cherkadi

ಶ್ರೀ ಬ್ರಹ್ಮಬೈದರ್ಕಳ ಹಳೆಗರೋಡಿ ಚೇರ್ಕಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 66 ರಲ್ಲಿಬ್ರಹ್ಮಾವರದ ಮೊದಲು ಭದ್ರಗಿರಿಯಲ್ಲಿ ರುಡ್‌ಸೆಡ್ ರಸ್ತೆಯಲ್ಲಿ ಸಾಗಿ, ಮುಂದೆ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸುಮಾರು 6.5ಕಿ.ಮೀ. ಸಾಗಿ ಕುಂಜಾಲುವಿನಲ್ಲಿ ಎಡಕ್ಕೆ ತಿರುಗಿ ಸುಮಾರು 2.78ಕಿ.ಮೀ. ದೂರದಲ್ಲಿ ಚೇರ್ಕಾಡಿ ಹಳೆ ಗರೋಡಿಯಿದೆ.
ಅತ್ಯಂತ ಪುರಾತನ ಗರೋಡಿಗಳಲ್ಲೊಂದಾದ ಈ ಗರೋಡಿಯು 60ನೇ ಗರಡಿಯೆಂದು ಕರೆಯಲ್ಪಡುತ್ತದೆ. ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದ ಪಾಪೆಗಳಿವೆ. ಪಕ್ಕದಲ್ಲಿ ದೇಯಿಬೈದೆತಿಯ ಮರದ ಪಾಪೆಯಿದೆ.
ಗುಂಡದ ಬಲ ಭಾಗದಲ್ಲಿ ಕುದುರೆಯ ಮೇಲೆ ಕುಳಿತ ಒಕ್ಕು ಬಲ್ಲಾಳರ ಮರದ ಪಾಪೆ, ಕುಜುಂಬ ಕಾಂಜವ ಮತ್ತು ಇಬ್ಬರು ಮಕ್ಕಳ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಎಡ ಬದಿಯಲ್ಲಿ ಜುಮಾದಿ ಮತ್ತು ಬಂಟರ ಮರದ ಪಾಪೆ, ಮಾಯಂದಾಲ್ ಮತ್ತು ಮಗುವಿನ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ ಹಾಗೂ ಮಣೆ ಮಂಚದಲ್ಲಿ ಪರಿವಾರ ದೈವಗಳ ಸಾನಿಧ್ಯವಿದೆ. ಬ್ರಹ್ಮಗುಡಿಯ ಬಲ ಭಾಗದಲ್ಲಿ ಮರದ ಗುಡಿಯಲ್ಲಿ ಪಂಜುರ್ಲಿ ಹಾಗೂ ಮಣೆ ಮಂಚದಲ್ಲಿ ಪರಿವಾರ ದೈವಗಳ ಆರಾಧನೆಯಿದೆ.
ಬ್ರಹ್ಮಗುಡಿಯ ಎದುರಿಗೆ ಸಣ್ಣಚಿಕ್ಕು, ಚಿಕ್ಕಮ್ಮದೇವಿ ಮತ್ತು ಮಗು ಹಾಗೂ ಜೋಗಿ ಪುರುಷರ ಮರದ ಪಾಪೆಗಳಿವೆ. ಪಕ್ಕದಲ್ಲಿ ಗುರುಕಂಭ ಹಾಗೂ ಮಣೆ ಮಂಚದಲ್ಲಿ ಪರಿವಾರ ದೈಗಳಿಗೆ ಪೂಜೆ ನಡೆಯುತ್ತದೆ.
ಗರೋಡಿಯ ಹೊರ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಪಾಪೆ, ಉಮ್ಮಳ್ತಿ ದೇವಿಯ ಮರದ ಪಾಪೆ ಹಾಗೂ ಜೈನರ ಎರಡು ಮಣೆ ಮಂಚಗಳಿವೆ.
ಗರೋಡಿಯ ಎದರು ಹೆಬ್ಬಾಗಿಲಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಪಾಪೆಗಳಿವೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಳಿಕಲ್ಲು, ಹಾಗೂ ಕಲ್ಲಿನ ಶಾಸನವಿದೆ.
ಗರೋಡಿಯ ಹೊರಾಂಗಣದ ಗುಡಿಯಲ್ಲಿ ಮಲಸಾವಿರ ಹಾಗೂ ಪರಿವಾರ ದೈವಗಳ ಆರಾಧನೆಯಿದೆ.

ವಿಜಯ ಪೂಜಾರಿ

2020ರಿಂದ ಗರೋಡಿಮನೆ ವಿಜಯ ಪೂಜಾರಿ (47 ವರ್ಷ ಪ್ರಾಯ) ಇವರು ಗರೋಡಿಯ (ಅರ್ಚಕ) ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಮಾವ ಕರಿಯ ಪೂಜಾರಿ, ಕೊಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು. ಶ್ಯಾಮ ಪೂಜಾರಿಯವರು ಇಲ್ಲಿಯ ಸಹ ಅರ್ಚಕರು.

ದಿನೇಶ ಪೂಜಾರಿ

ದಿನೇಶ ಪೂಜಾರಿ ಯವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರಿಗೆ ಮೊದಲು ಅವರ ಅಜ್ಜ ಬಸವ ಪೂಜಾರಿ ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸುಧಾಕರ ಹೆಗ್ಡೆಯವರು ಗರೋಡಿಯ ಮೊಕ್ತೇಸರರು. ಹಿಂದೆ ದಾಸನಬೆಟ್ಟು ರವಿರಾಜ ಹೆಗ್ಡೆಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಶುಕ್ರವಾರ ಪೂಜೆ, ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಹಾಲಹಬ್ಬ, ಅಗೆಲ್ ಸೇವೆ, ಮಾರ್ಚ 19 ಮಣ್ಣ ಮುಹೂರ್ತ, 20ಕ್ಕೆ ಅಗೆಲು ಸೇವೆ, 21 – ಬೈದೇರುಗಳ ನೇಮೋತ್ಸವ, ಶಿವರಾಯ ಕೋಲ, ತುಲಾಭಾರ ಸೇವೆಗಳು ನಡೆಯುತ್ತವೆ.
ಚೇರ್ಕಾಡಿ, ಪೆಜಮಂಗೂರು, ನೀಲಾವರ, ಎಳ್ಳಂಪಳ್ಳಿ, ಬೆಣಗಲ್, ಕನ್ನಾರು, ಹುತ್ತಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಕೂಡುಕಟ್ಟಿನ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ.ಊರ ಪರವೂರ ಭಕ್ತರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ ಸುಮಾರು 60ಸೆಂಟ್ಸ ಜಾಗವು “ ಶ್ರೀ ಬ್ರಹ್ಮಬೈದರ್ಕಳ ದೇವರ ಆಡಳಿತದಾರರು ಮತ್ತು ಅರ್ಚಕ ಕೊಪ್ಪ ಪೂಜಾರಿ ‘’ ಎಂಬ ಹೆಸರಲ್ಲಿದೆ.
1988ರಲ್ಲಿ ಜೋಣೋದ್ದಾರಗೊಂಡ ಈ ಗರೋಡಿಯು ಈಗ 2024-25ರಲ್ಲಿ ಅಂದಾಜು ಸುಮಾರು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯವಾಗಿ ಜೀಣೋದ್ದಾರಗೊಳ್ಳುವ ಯೋಜನೆಯಲ್ಲಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಇವರು ಈ ಗರೋಡಿಯ ನೃತ್ಯ ವಿಶಾರದರು. ನಾರಾಯಣ ಮಡಿವಾಳ ಚೇರ್ಕಾಡಿ ಇವರು ಮಡಿವಾಳರಾಗಿ, ಸುರೇಶ್ ಶೇರ್ವೆಗಾರ ಚೇರ್ಕಾಡಿ ಇವರು ವಾದ್ಯದವರಾಗಿ, ಪೇತ್ರಿಯ ಜೋಗಿ ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಳೆ ಗರೋಡಿ ಚೇರ್ಕಾಡಿ,
ಚೇರ್ಕಾಡಿ ಗ್ರಾಮ,
ಪೇತ್ರಿ ಅಂಚೆ
ಬ್ರಹ್ಮಾವರ ತಾಲೂಕು – 576215.

ಅರ್ಚಕರ ವಿಳಾಸ:

ವಿಜಯ ಪೂಜಾರಿ, (7406976767) ಕೋಟಿಚೆನ್ನಯ ನಿಲಯ, ಹಳೆಗರೋಡಿ ಮನೆ, ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ – 576125

ಸಹ ಅರ್ಚಕರು:

ಶ್ಯಾಮ ಪೂಜಾರಿ – 9739371291

ಸ್ಥಳ ಪಾತ್ರಿ:

ದಿನೇಶ ಪೂಜಾರಿ – 9880239293

ಮೊಕ್ತೇಸರರು:

ಸುಧಾಕರ ಹೆಗ್ಡೆ – 9620923927

ಮಾಹಿತಿ ನೀಡಿದವರು

ವಿಜಯ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

27.12.2024

Chyavana Rushi Smarakavaada Shree Brahma Baidarkala Garodi, Chanthar

ಚವನ ಋಷಿ ಸ್ಮಾರಕವಾದ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಚಾಂತಾರು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 66ರಲ್ಲಿ ಭದ್ರಗಿರಿಯಲ್ಲಿ ಬಲಕ್ಕೆ ತಿರುಗಿ, ರುಡ್ ಸೆಟ್ ರಸ್ತೆಯಲ್ಲಿ ಸಾಗಿ ನಂತರ ಬ್ರಹ್ಮಾವರ ಹೆಬ್ರಿ ರಸ್ತೆಯಲ್ಲಿ ಎಡಕ್ಕೆ ಚಾಂತಾರು ಕೆರೆ ರಸ್ತೆಯಲ್ಲಿ 18ಮೀ. ಸಾಗಿದರೆ ಚಾಂತಾರು ಕೆರೆಯ ಪಕ್ಕದಲ್ಲಿದೆ ಈ ಗರೋಡಿ.
ಇದು ಶಿಲಾಮಯ ಗರೋಡಿ ಆಗಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಷಡಾಧಾರ ಪ್ರತಿಷ್ಟೆಯೂ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಚಾಂತಾರು ಗ್ರಾಮವು ಹಿಂದೆ ಚ್ಯವನ ಋಷಿಗಳು ತಪಸ್ಸು ಮಾಡಿದ್ದ ಪುಣ್ಯ ಕ್ಷೇತ್ರ. ಇಲ್ಲಿ ಸುಮಾರು 33 ಎಕ್ರೆ ವಿಸ್ತೀರ್ಣದ ಚಾಂತಾರು ಮದಗವೆಂಬ ಕೆರೆ ಇದೆ. ಪಕ್ಕದಲ್ಲಿಯೇ ಒಂದು ಸುರಂಗವಿದ್ದು ಆ ಸುರಂಗದಲ್ಲಿ ಚ್ಯವನ ಋಷಿಗಳು ತಪಸ್ಸು ಮಾಡುತ್ತಿದ್ದರಿಂದ ಈ ಸ್ಥಳಕ್ಕೆ ಚಾಂತಾರು ಎಂಬ ಹೆಸರು ಬಂದಿದೆಯಂತೆ.
ಪುರಾತನವಾದ ಈ ಗರೋಡಿಗೆ 1870ರಲ್ಲಿ ಬ್ರಿಟಿಷ್ ಸರ್ಕಾರದಿಂದ ಸಹಾಯಧನ (ತಸ್ತಿಕ್) ಮಂಜೂರಾಗಿತ್ತಂತೆ. ಆವಾಗ ವರ್ಷಕ್ಕೆ 4/- ರೂಪಾಯಿ ತಸ್ತಿಕ್, ಈಗ 60000/- ರೂಪಾಯಿಗಳಾಗಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಶಿಲಾಮಯ ಗುಂಡದಲ್ಲಿ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಇದಲ್ಲದೆ ಬೆಳ್ಳಿ ಹಾಗೂ ಬಂಗಾರದ ಮೂರ್ತಿಗಳೂ ಇವೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಪಾಪೆಗಳಿವೆ.
ಗುಂಡದ ಬಲಭಾಗದಲ್ಲಿ ಕುದುರೆಯೇರಿ ಕುಳಿತ ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರ ಮರದ ಪಾಪೆಯಿದೆ, ಮತ್ತು ದೇವು ಬಲ್ಲಾಳರ ಮರದ ಪಾಪೆಯಿದೆ. ಮೈಸಂದಾಯ ಪೊಟ್ಟು ಭೂತಗಳ ಮಣೆ ಮಂಚಗಳು ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆ ಮಂಚದಲ್ಲಿ ಪಂಜುರ್ಲಿ, ಜುಮಾದಿ, ಹಾಯ್ಗುಳಿ, ಇನ್ನೆರಡು ಪಂಜುರ್ಲಿಗಳ ಮಣೆ ಮಂಚವಿದೆ. ಮಾಯಂದಾಲ್ ಮತ್ತು ಮಗು
ಬ್ರಹ್ಮಗುಡಿಯ ಎದುರಿಗೆ ಪಿಲ್ಚಂಡಿ ದೈವದ ಕಲ್ಲಿನ ಮಂಟಪದ ಮೇಲೆ ಹುಲಿಯ ಮರದ ಪಾಪೆಯಿದೆ. ಪಕ್ಕದಲ್ಲಿ ಜೋಗಿ ಪುರುಷ, ಚಿಕ್ಕಮ್ಮ ದೈವಗಳ ಮರದ ಪಾಪೆ ಮತ್ತು ಗುರುಕಂಬಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬೊಬ್ಬರ್ಯ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ಶಿಲಾಮಯ ತುಳಸಿಕಟ್ಟೆ, ಬಂಟಕಲ್ಲುಗಳಿವೆ.
ಗರೋಡಿಯ ಎದುರಿಗೆ ಇರುವ ಗುಡಿಯಲ್ಲಿ ಶಿವರಾಯ ಹಾಗೂ ಚೌ೦ಡಿ ದೈವಗಳ ಮರದ ಪಾಪೆಗಳಿವೆ.
ಗರೋಡಿಯ ಪರಿಸರದಲ್ಲಿ ನಾಗಬನ ಹಾಗೂ ಗುಡಿಯೊಂದರಲ್ಲಿ ಮಲಸಾವಿರ ದೈವಗಳಾದ ಮೈಸಂದಾಯ, ಜುಮಾದಿ, ಪಂಜುಲಿ, ಕಲ್ಲುಕುಡುಕ, ಪಿಲಿಚಾಮುಂಡಿ, ಗುಳಿಗ ಹಾಗೂ ಕೊರಗಜ್ಜ ದೈವಗಳ ಸಾನಿಧ್ಯವಿದೆ.

ಶ್ಯಾಮ ಪೂಜಾರಿ

ಮಹಾಬಲ ಪೂಜಾರಿ

ರಾಮ ಪೂಜಾರಿ

ಧತ್ತ ಪೂಜಾರಿ

ಶ್ಯಾಮ ಪೂಜಾರಿ (ಪ್ರಾಯ 65ವರ್ಷ) ಮಹಾಬಲ ಪೂಜಾರಿ(ಪ್ರಾಯ 60ವರ್ಷ) ಇವರು ಇಲ್ಲಿಯ ಪ್ರಧಾನ ಅರ್ಚಕರಾಗಿದ್ದು, ರಾಮ ಪೂಜಾರಿ (75ವರ್ಷ ಪ್ರಾಯ) ಹಾಗೂ ಧತ್ತ ಪೂಜಾರಿ (77ವರ್ಷ) ಇವರುಗಳು ಸಹಾಯಕ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಐತ ಪೂಜಾರಿ, ಪದ್ದ ಪೂಜಾರಿ, ಪುಟ್ಟ ಪೂಜಾರಿ, ಕಜಂಬ ಪೂಜಾರಿ, ಸಂಕ ಪೂಜಾರಿ, ಬೀರ ಪೂಜಾರಿ, ಕಾಳ ಪೂಜರಿ, ದೊಡ್ಡ ಪೂಜಾರಿ, ಇವರು ಈ ಸೇವೆ ಮಾಡಿದ್ದರು.
ಕೊಚ್ಚಿಕಾರ್ ಮನೆತನದ ನರೇಂದ್ರ ಪೈ ಇವರು ಇಲ್ಲಿಯ ಮೊಕ್ತೇಸರರು ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ತುಮ್ಮೇರಿ ವೆಂಕಟ್ರಾಯ ನಾಯಕ್ ಇವರು ಕಾರ್ಯದರ್ಶಿಯಾಗಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಮಂಗಳವಾರ ಪೂಜೆ, ಪೆರ್ಡೂರು ಸಂಕ್ರಮಣ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಅಷಾಢ ತಿಂಗಳಲ್ಲಿ ಬಿಟ್ಟು ಉಳಿದೆಲ್ಲಾ ತಿಂಗಳಲ್ಲಿ ಪಸರಣೆ, ಹೂವಿನ ಪೂಜೆಗಳು, ನಡೆಯುತ್ತವೆ. ಗರೋಡಿಯಲ್ಲಿ ಕದಿರು ಕಟ್ಟುವ ಕ್ರಮವಿದೆ. ಡಿಸೆಂಬರ್ ತಿಂಗಳಲ್ಲಿ ದಿನವಿಟ್ಟು ಅಗೆಲು ಸೇವೆ, ತುಲಾಭಾರ ಸೇವೆ ನಡೆಯುತ್ತದೆ. ಇದಲ್ಲದೆ ಮಾರ್ಚ 14ರಂದು ಅಗೆಲು ಸೇವೆ, 15ರಂದು ನೇಮೋತ್ಸವ ನಡೆಯುತ್ತದೆ. ಮಾರ್ಚ 18 2025 ರಂದು ಮಲಸಾವಿರ ಮತ್ತು ಪರಿವಾರ ದೈವಗಳ ಕೋಲ ನಡೆಯುತ್ತದೆ. ಈ ಕೋಲ 12ವರ್ಷಗಳಿಗೊಮ್ಮೆ ನಡೆಯುವ ಸಂಪ್ರದಾಯವಿದೆ.
ಚಾಂತಾರು ಗ್ರಾಮದ ಮಟ್ಪಾಡಿ, ನೀಲಾವರ, ಬೈಕಾಡಿ, ಕುಂಜಾಲು,ಹೇರೂರು, ಹಂದಾಡಿ, ವಾರಂಬಳ್ಳಿ, ಹೆರಂಜೆ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ನೀರುಸ್ನಾನ, ಮದುವೆಯಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮುಂತಾದ ಹರಕೆಯ ಸೇವೆಗಳಲ್ಲಿ ಜನ ಭಾಗಿಯಾಗುತ್ತಾರೆ. ಗರೋಡಿಗೆ ಸುಮಾರು 1ಎಕ್ರೆ ಜಾಗವಿದೆ. ಊರ ಪರವೂರ ಭಕ್ತರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಯು 1920ರಲ್ಲಿ ಜೀಣೋದ್ದಾರಗೊಂಡಿದೆ. ನಂತರ 1950ರಲ್ಲಿ ಬೈಹುಲ್ಲು ತೆಗದು ಹಂಚು ಹಾಕಿ ನೇಮೋತ್ಸವಾಗಿದೆ.
ನರಸಿಂಹ ಪರವ ಚೇರ್ಕಾಡಿ, ಗುಂಡು ಪರವ, ಶೀನ ಪರವ, ಇವರು ಗರೋಡಿಯ ನೃತ್ಯ ವಿಶಾರದರಾಗಿ, ಸಂತೋಷ ಮಡಿವಾಳ ಕುಂಜಾಲು ಇವರು ಮಡಿವಾಳರಾಗಿ, ಜನಾರ್ದನ ದೇವಾಡಿಗ ಚಾಂತಾರು ವಾಧ್ಯದವರಾಗಿ, ಅಣ್ಣಯ್ಯ ಡೋಲಿನವರಾಗಿ, ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ಪರಿಸರದಲ್ಲಿ ಚ್ಯವನ ವ್ಯವಸಾಯ ಸಂಘ ಕೆಲಸ ಮಾಡುತ್ತಿದೆ.
ಈ ಗರೋಡಿಯಲ್ಲಿ ಮದುವೆ ಮುಂತಾದ ಶುಭಕಾರ್ಯಗಳೂ ನಡೆಯುತ್ತವೆ.

ಗರೋಡಿಯ ವಿಳಾಸ:

ಚ್ಯವನ ಋಷಿ ಆಶ್ರಯಸ್ಥಾನವಾದ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಚಾಂತಾರು, ಬ್ರಹ್ಮಾವರ ಅಂಚೆ, ಚಾಂತಾರು ಗ್ರಾಮ,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ 576213.

ಮೊಬೈಲ್ ಸಂಖ್ಯೆ:

ರಾಮ ಪೂಜಾರಿ – 9535442195
ಶ್ಯಾಮ ಪೂಜಾರಿ – 7022424439
ಮಹಾಬಲ ಪೂಜಾರಿ – 9632301934
ದತ್ತ ಪೂಜಾರಿ – 9845386421

ಮಾಹಿತಿ ನೀಡಿದವರು

ದತ್ತ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

27.12.2024

Shree Brahma Baidarkala Panchadhoomavati Garodi, Thonse

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರೋಡಿ, ತೋನ್ಸೆ.

ಉಡುಪಿಯಿಂದ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನೇಜಾರಿಗೆ ಹೋಗುವ ಮಾರ್ಗದಲ್ಲಿರುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಸುಮಾರು 8.3 ಕಿ. ಮೀ. ಸಾಗಿ ನಿಡಂಬಳ್ಳಿ ತಲುಪಿ ತೋನ್ಸೆ ಗರೋಡಿಗೆ ಹೋಗಬಹುದು.
ಇದು ಪುರಾತನ ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ಮುಖ್ಯ ದ್ವಾರವನ್ನು ಹೊಂದಿದೆ. ಷಡಾಧಾರ ಪ್ರತಿಷ್ಠೆಯೂ ಇದೆ.
ಇಲ್ಲಿಯ ಸ್ಥಳ ಪುರಾಣದಲ್ಲಿ ತಿಳಿದುಬಂದಂತೆ ಇಲ್ಲಿ ಗರೋಡಿಯಾಗುವ ಮೊದಲು ಇಲ್ಲಿಯವರು ಕುಕ್ಕುಡೆ ಗರೋಡಿಗೆ ಹೋಗತ್ತಿದ್ದರು. ಆವಾಗ ಒಂದು ಸಲ ಹೊನ್ನಪ್ಪ ಕುದುರುವಿನ ಬಿಲ್ಲವ ಬೀರ ಕೋಚ ಮನೆಯವರು ಕುಕ್ಕುಡೆ ಗರೋಡಿಗೆ ಪೂಜೆಗೆಂದು ಹೋಗುವಾಗ ಮನಸ್ಸಿನಲ್ಲಿ ತಮ್ಮೂರಲ್ಲೇ ಗರೋಡಿ ಆಗಿದ್ದರೆ ಒಳ್ಳೆಯದಿತ್ತು ಎಂದು ಹಂಬಲಿಸಿದ್ದರು. ಆ ದಿನ ಕುಕ್ಕುಡೆ ಗರೋಡಿಯಲ್ಲಿ ಬೈದರ ದರ್ಶನದಲ್ಲಿ “ನಾವು ಬೀರ ಕೋಚ ಮನೆಗೆ ಬರುತ್ತೇವೆ” ಎಂದು ನುಡಿಯಾಗುತ್ತದೆ. ಅಲ್ಲಿಂದಲೇ ಹಾರಿಸಿದ ತೆಂಗಿನ ಕಾಯಿ ಬೀರ ಕೋಚ ಮನೆಯ ಹತ್ತಿರದಲ್ಲಿದ್ದ ನಾಗಬನದ ಬಳಿ ಬಂದು ಬೀಳುತ್ತದೆ. ನಾಗಬನಕ್ಕೆ ತೊದರೆಯಾಗಬಾರದೆಂದು ಮನೆಯ ಹಿರಿಯರು ಬೈದೇರುಗಳಲ್ಲಿ ಪ್ರಾರ್ಥಿಸಿಕೊಂಡು ಪುನ: ಕಾಯಿ ಹಾರಿಸಿದಾಗ ಅದು ಕುದುರು ಬೈಲಿನ ಮದ್ಯದ ಕೊಳಕ್ಕೆ ಬೀಳುತ್ತದೆ. ಆ ನೀರಿನ ಕೊಳವನ್ನು ಮುಟ್ಟಿ ಅಲ್ಲಿ ಗರೋಡಿ ನಿರ್ಮಾಣವಾಗುತ್ತದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಂಡದಲ್ಲಿ ನಾಗಬ್ರಹ್ಮರ ಬಂಗಾರದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಗಿಂಡೆ ಇಟ್ಟು ಪೂಜಿಸಲಾಗುತ್ತಿದೆ. ಗುಂಡದ ಎಡ ಭಾಗದಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಪಾಪೆಗಳಿವೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಒಬ್ಬ ಬಾಲಕನ ಮರದ ಪಾಪೆಗಳಿವೆ. ಹತ್ತಿರದಲ್ಲಿ ಒಕ್ಕು ಬಲ್ಲಾಳರ ಮಣೆ ಮಂಚವಿದೆ. ಬ್ರಹ್ಮ ಗುಡಿಯ ಹೊರಗೆ ಪಂಚಧೂಮಾವತಿಯ ಮುಖವಿಟ್ಟು ಪೂಜಿಸುವ ಮಣೆ ಮಂಚವಿದೆ. ಧೂಮಾವತಿ ಬಂಟ, ಮೈಸಂದಾಯ, ಜೋಗಿಪುರುಷ ಸಾನಿಧ್ಯವಿದೆ. ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ, ಮಣೆ ಮಂಚದಲ್ಲಿ ಪಂಚ ಶಕ್ತಿಗಳು ಹಾಗೂ ಗುರುಕಂಬವಿದೆ.
ಗರೋಡಿಯ ಅಂಗಣದಲ್ಲಿ ಬಾಗಿಲು ಬೊಬ್ಬರ್ಯ, ಆಯಕಲ್ಲು, ನಾಗಬನ ಹಾಗೂ ಅಶ್ವತ್ತ ಕಟ್ಟೆಗಳಿವೆ.

ಸುರೇಶ್ ಪೂಜಾರಿ

ಗರೋಡಿ ಮನೆ (ಬೀರ ಕೋಚ ಮನೆ)

ಹೊನ್ನಪ್ಪ ಕುದ್ರು ಗರೋಡಿ ಮನೆ (ಬೀರ ಕೋಚ ಮನೆ)ಯ ಸುರೇಶ್ ಪೂಜಾರಿ (53 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿ 2007 ರಿಂದ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಅಜ್ಜ ನಾಗಪ್ಪ ಪೂಜಾರಿಯವರು ಸುಮಾರು 45 ವರ್ಷಗಳ ಕಾಲ ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೃಷ್ಣಪ್ಪ ಪೂಜಾರಿ, ಕೃಷ್ಣ ಪೂಜಾರಿ (ಕುಟ್ಟಿ ಪೂಜಾರಿ) ಇವರು ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ನಿತ್ಯ ಪೂಜೆ, ಆದಿತ್ಯವಾರ ಪೂಜೆ, ವಿಶೇಷ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ಅಷ್ಟಮಿಯಂದು ಪೂಜೆ, ಮರುದಿನ ವಿಟ್ಲಪಿಂಡಿಯಂದು ಅನ್ನ ನೈವೇದ್ಯದ ಅಗೆಲು ಸೇವೆ, ಅದರ ಮರುದಿನ ಪಂಬದರಿಂದ ಕಟ್ಟುಕಟ್ಟಳೆಯ ಬೈದರ ನೇಮೋತ್ಸವ ಗರೋಡಿಯ ಒಳಗೆ ನಡೆಯುತ್ತದೆ. ಸೋಣ ಸಂಕ್ರಾಂತಿ ಸಾಮೂಹಿಕ ಹೂವಿನ ಪೂಜೆ, ಹರಕೆಯ ಹೂವಿನ ಪೂಜೆಗಳು, ಕನ್ಯ ಸಂಕ್ರಮಣದಣದಂದು ಕದಿರು ಕಟ್ಟುವ ಕಾರ್ಯಕ್ರಮವಿದೆ. ಸುಬ್ರಮಣ್ಯ ಷಷ್ಠಿಯಂದು ಹೊಸ ಫಸಲಿನ ಅಕ್ಕಿಯ ಅನ್ನ ನೈವೇದ್ಯದ ಸೇವೆ, ಮರುದಿನ ಗರೋಡಿಯ ಅಂಗಣದಲ್ಲಿ ಪರವರಿಂದ ಬೈದರ ನೇಮ, ಮರುದಿನ ಮಾಯಂದಾಳ್ ಕೋಲ ನಡೆಯುತ್ತದೆ. ಶಿವರಾತ್ರಿ ಹಬ್ಬದ ಅಮಾವಾಸ್ಯೆಯ ನಂತರದ 6ನೇ ದಿನ ಅನ್ನ ನೈವೆದ್ಯದ ಸೇವೆ, ಮರುದಿನ ಕುದುರೆ ಬಾಕ್ಯಾರಿನಲ್ಲಿ ಪರವರಿಂದ ಬೈದರ ನೇಮ, ಮರುದಿನ ಶುದ್ಧ ನಡೆಯುತ್ತದೆ. ಶುದ್ಧದ ನಂತರ ಜುಮಾದಿ ಕೋಲ ನಡೆಯುತ್ತದೆ.
ಮೂಡುತೋನ್ಸೆ, ಪಡುತೋನ್ಸೆ, ಕೆಳಾರ್ಕಳಬೆಟ್ಟು, ಬಡಾನಿಡಿಯೂರು ಹಾಗೂ ಭಾಗಷ: ತೆಂಕನಿಡಿಯೂರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ ಊರುಗಳು. ಊರ ಜನರು ಈ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಕಾರ್ಯದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರವರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಆಯವ್ಯಯಗಳನ್ನು ನೋಡಿ ಕೊಳ್ಳಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 161 ಸೆಂಟ್ಸ ಜಾಗವಿದೆ. ಗರೋಡಿಯ ಆಡಳಿತಕ್ಕೆ ಆಡಳಿತ ಮಂಡಳಿಯು 31 ಸೆಂಟ್ಸ ಜಾಗವನ್ನು ಗರೋಡಿಗೆ ಖರೀದಿಸಲಾಗಿದೆ.
ಗರೋಡಿಯು 1980ರಲ್ಲಿ ನವೀಕರಣಗೊಂಡು ಬ್ರಹ್ಮ ಕಲಶ ನಡೆದಿದೆ. ಅದಕ್ಕೆ ಮೊದಲು 1973 ಹಾಗೂ 1963ರಲ್ಲಿಯೂ ನವೀಕರಣಗೊಂಡಿದೆ. ಮುಂದಿನ ದಿನಗಳಲ್ಲಿ ಗರೋಡಿಯನ್ನು ಶಿಲಾಮಯಗೊಳಿಸಿ ನವೀಕರಿಸುವ ಸುಮಾರು 4.5ಕೋಟಿ ರೂಪಾಯಿಗಳ ಯೋಜನೆಯನ್ನು ಈಗಿನ ಆಡಳಿತ ಮಂಡಳಿಯು ಹಮ್ಮಿಕೊಂಡಿದೆ.
ಬಾಬು ಪರವ ಮತ್ತು ಸಂಘಡಿಗರು ಗರೋಡಿಯ ನೃತ್ಯ ವಿಶಾರದರಾಗಿ, ಸಗರೋಡಿಗೆ ಸಂಬಂಧಪಟ್ಟು ಬಿಲ್ಲವ ಒಕ್ಕೂಟ ಇಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರೋಡಿ ತೋನ್ಸೆ,
ಮೂಡುತೋನ್ಸೆ ಗ್ರಾಮ,
ಅಂಚೆ ಕಲ್ಯಾಣಪುರ,
ಉಡುಪಿ ತಾಲೂಕು – ಉಡುಪಿ ಜಿಲ್ಲೆ.

ಪೂ ಪೂಜನೆಯವರು:

ಸುರೇಶ್ ಪೂಜಾರಿ,
ಮೊಬೈಲ್: 944832296

ಮಾಹಿತಿ ಸಂಗ್ರಹಿಸಿದ ದಿನಾಂಕ:

11-10-2022