Baidashree

Shree Kodamanittaya Brahma Baidarkala Garodi, Didimbiri

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ದಿಡಿಂಬಿರಿ

ಉಡುಪಿಯಿಂದ ಕಾರ್ಕಳ ಮೂಲಕ ಬಜಗೋಳಿಯಲ್ಲಿ ಎಡಕ್ಕೆ ತಿರುಗಿ ಸುಮಾರು 1 ಕಿ. ಮೀ. ಸಾಗಿದರೆ ಈ ಗರೋಡಿ ಇದೆ.
Didimbiri-Garadi-1
Didimbiri-Garadi-2
ಗರೋಡಿಯು ಪೂರ್ವಾಭಿಮುಖವಾಗಿದ್ದು ಪೂರ್ವ ದಿಕ್ಕಿಗೆ ಒಂದು ದ್ವಾರವಿದೆ.
Didimbiri-Garadi-3
ಗರೋಡಿಯ ಒಳಗೆ ಮರದ ಮಣೆ ಮಂಚದ ಮೇಲೆ ಮರದ ಗುಂಡವಿದ್ದು ನಾಗಬ್ರಹ್ಮರ ಪಂಚ ಲೋಹದ ಮೂರ್ತಿ ಇದೆ. ಗುಂಡದ ಎಡ ಬಲದಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿಗಳಿವೆ.
Didimbiri-Garadi-4
ಗರೋಡಿಗೆ ತಾಗಿ ಕೊಂಡಿರುವ ಪಕ್ಕದ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
Didimbiri-Garadi-5
ಗರೋಡಿಯ ಪಕ್ಕದಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಸಾನಿದ್ಯವಿದ್ದು ಎದುರಿಗೆ ದ್ವಜಸ್ಥಂಭವಿದೆ.
Didimbiri-Garadi-6

ಕೃಷ್ಣಪ್ಪ ಪೂಜಾರಿ

ಕೃಷ್ಣಪ್ಪ ಪೂಜಾರಿ (72 ವರ್ಷ)ಯವರು ಇಲ್ಲಿಯ ಬೈದೇರುಗಳ ಪೂಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಅಚ್ಚು ಪೂಜಾರಿ, ಸಾಧು ಪೂಜಾರಿಯವರು ಇಲ್ಲಿಯ ಪೂ ಪೂಜನೆಯವರಾಗಿದ್ದರು.
ಶೈಲೇಶ್ ಜೈನ್ ರವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯ ಉಸ್ತುವಾರಿಗೆ ಮಿತ್ತ ಪಕ್ಕೊಟ್ಟು ಬರ್ಕೆ, ತಿರ್ತ ಪಕ್ಕೊಟ್ಟು ಬರ್ಕೆ, ಮೈಲೊಟ್ಟು ಬರ್ಕೆ, ಓಂಟ್ಯಡ್ಕ ಬರ್ಕೆಗಳೆಂಬ ನಾಲ್ಕು ಬರ್ಕೆಗಳು, ಹಾಗೂ ರಾಮೇರ ಗುತ್ತು, ಅಪ್ಪಾಯಿ ಗುತ್ತು, ಪೆಂರ್ಗಾಡಿ ಗುತ್ತು, ಹಾಗೂ ಹುಮ್ಮ ಗುತ್ತುಗಳೆಂಬ ನಾಲ್ಕು ಗುತ್ತುಗಳಿವೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸೋಣ ತಿಂಗಳಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮಗಳಿವೆ.
ಪ್ರತೀವರ್ಷ ಮಾರ್ಚ ತಿಂಗಳಲ್ಲಿ ಒಂದು ದಿನ ಭಂಡಾರ ಬಂದು ದ್ವಜಾರೋಹಣವಾಗಿ ಬಲಿ, ಧರ್ಮರಸು ಕೋಲ ನಡೆಯುತ್ತದೆ. ಮರುದಿನ ಕೊಡಮಣಿತ್ತಾಯ ಕುಕ್ಕಿನಂತಾಯ, ಕೋಲ, ಬಲಿ ನಡೆಯುತ್ತದೆ. ಅದರ ಮೂರನೇ ದಿನ ಬೈದರ್ಕಳ ನೇಮ, ಮಾಯಂದಾಲ್, ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ಕೋಲ ನಡೆದು ಮರುದಿನ ದ್ವಜಾವರೋಣದ ನಂತರ ಭಂಡಾರ ವಾಪಾಸು ಹೋಗುವುದು.
ಮಾಳ, ನಲ್ಲೂರು, ಮುಡಾರು, ಈದ್, ನಾರಾವಿಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಜನ ಭಾಗವಹಿಸುತ್ತಾರೆ. ಊರ ಪರವೂರ ಜನರ ವರಡ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗಂಗಯ್ಯ ಪರವ, ರಾಜು ಪರವ ಮುಡಾರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ಸುಧಾ ಮಡಿವಾಳ ಮುಡಾರು ಮಡಿವಾಳರಾಗಿ, ರಮೇಶ್ ದೇವಾಡಿಗ ನಲ್ಲೂರು ವಾದ್ಯದವರಾಗಿ, ಬ್ಯಾಂಡನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Didimbiri-Garadi-7

ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ದಿಡಿಂಬಿರಿ,
ಕಾರ್ಕಳ ತಾಲೂಕು,
ಉಡುಪಿ

ಪೂ ಪೂಜನೆಯವರು:

ಕೃಷ್ಣಪ್ಪ ಪೂಜಾರಿ – 9008663055

ಮಾಹಿತಿ ನೀಡಿದವರು:

ಕೃಷ್ಣಪ್ಪ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

16-07-2025

Shree Kodamanittaya Brahma Baidarkala Garodi, Kervashe

ಶ್ರೀ ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರೋಡಿ, ಕೆರ್ವಾಸೆ

ಉಡುಪಿಯಿಂದ ಕಾರ್ಕಳ ತಲುಪಿ ಕಾರ್ಕಳ ಬೈಪಾಸನಿಂದ ಸೋಲಾಪುರ ಮಂಗಳೂರು ಹೆದ್ದಾರಿಯಲ್ಲಿ ಮಿಯಾರ್ ಹತ್ತಿರ ಎಡಕ್ಕೆ ತಿರುಗಿ ಸುಮಾರು 9ಕಿ.ಮೀ ನಂತರ ಇದೆ ಈ ಗರೋಡಿ.
Kervase-Garodi-1
Kervase-Garodi-2
Kervase-Garodi-3
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮಧ್ಯದ ಅಂತಸ್ಥಿನಲ್ಲಿ ಬಲ್ಲಾಳರು ಹಾಗೂ ಮೇಲಂತಸ್ಥಿನಲ್ಲಿ ಗಾಳಿ ದೇವರ ಆರಾಧನೆಯಿದೆ. ಗುಂಡದ ಎಡ ಬಲಬದಿಯಲ್ಲಿರುವ ಮಣೆಮಂಚದಲ್ಲಿ ಕೋಟಿ-ಚೆನ್ನಯರ ಹಾಗೂ ಕುಜುಂಬ ಕಾಂಜವರಿಗೆ ಪೂಜೆ ಇದೆ. ಗರೋಡಿಗೆ ತಾಗಿಕೊಂಡು ಇರುವ ಇನ್ನೊಂದು ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿದ್ದು ಪೂಜೆ ನಡೆಯುತ್ತದೆ.
Kervase-Garodi-4
Kervase-Garodi-5
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಸಾನಧ್ಯವಿದೆ. ಎದುರಿಗೆ ಕೊಡಿ ಮರವೂ ಇದೆ. ಗರೋಡಿಯ ಆವರಣದೊಳಗೆ ಇರುವ ಕಟ್ಟೆಯಲ್ಲಿ ಇರ್ಲ ಭೂತಗಳು (ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ) ಸಾನಿದ್ಯವಿದೆ. ಪಕ್ಕದಲ್ಲೇ ಬಲಿ ಕಟ್ಟೆ ಇದೆ.
Kervase-Garodi-6

ಭೋಜ ಪೂಜಾರಿ

ಭೋಜ ಪೂಜಾರಿ(68 ವರ್ಷ) ಯವರು ಈ ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಸಾಧು ಪೂಜಾರಿ, ರಾಜು ಪೂಜಾರಿ, ಪಿಳ್ಳು ಪೂಜಾರಿ, ಚೀಂಕ್ರ ಪೂಜಾರಿ, ಮೊದಲಾದ ಹಿರಿಯರಯ ಈ ಸೇವೆ ಮಾಡಿದ್ದಾರೆ.
Kervase-Garodi-7
ಭೋಜ ಪೂಜಾರಿಯವರ ಅವಳಿ ಜವಳಿ ಮಕ್ಕಳಾದ ಅಶೋಕ ಪೂಜಾರಿ (37 ವರ್ಷ) ಹಾಗೂ ಅನಿಲ್ ಪೂಜಾರಿ (37 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ.
ಅನಿಲ್ ಕುಮಾರ ಜೈನ್ ರವರು ಈ ಗರೋಡಿಯ ಮೊಕ್ತೇಸರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ. ಪ್ರತೀ ವರ್ಷ ಮಾಯಿ ತಿಂಗಳ ಹುಣ್ಣಿಮೆಯಂದು ಭಂಡಾರದ ಮನೆಗಳಿಂದ ಭಂಡಾರ ಬಂದು ದ್ವಜಾರೋಹಣ ಮಾಡಿ, ಧರ್ಮರಸು, ಕೋಲ ನಡೆಯುತ್ತದೆ. ಮರುದಿನ ಕೊಡಮಣಿತ್ತಾಯ ಕುಕ್ಕಿನಂತಾಯ ಕೋಲ, ಅದರ ಮರುದಿನ ಬೈದರ್ಕಳ ನೇಮ, ಇರ್ಲಭೂತ, ಮಾಯಂದಾಲ್ ಕೋಲ ನಡೆದ ನಂತರ ಭಂಡಾರ ವಾಪಾಸು ಹೋಗುವುದು.
ಕೆರ್ವಾಸೆಯ ಜನರು ಈ ಗರೋಡಿಯಲ್ಲಿ ನೀರು ಸ್ನಾನ , ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರವರ ಕಾಣಿಕೆ,ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಉಗ್ಗಪ್ಪ ಪರವ ಕೆರ್ವಾಸೆ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ದಿನೇಶ್ ಮಡಿವಾಳ ಕೆರ್ವಾಸೆ ಇವರು ಮಡಿವಾಳರಾಗಿ, ಶಿವರಾಮ ದೇವಾಡಿಗ ಕೆರ್ವಾಸೆ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Kervase-Garodi-8

ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಕೆರ್ವಾಸೆ,
ಕೆರ್ವಾಸೆ ಅಂಚೆ,
ಕಾರ್ಕಳ 574122

ಪೂ ಪೂಜನೆಯವರು:

ಭೋಜ ಪೂಜಾರಿ – 9591082574

ಸ್ಥಳ ಪಾತ್ರಿಗಳು:

ಆಶೋಕ ಪೂಜಾರಿ – 8369702117
ಅನಿಲ್ ಪೂಜಾರಿ – 7760282320

ಮಾಹಿತಿ ನೀಡಿದವರು:

ಭೋಜ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

16-07-2025

Shree Brahma Baidarkala Garodi, Hermunde

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹೆರ್ಮುಂಡೆ

ಉಡುಪಿಯಿಂದ ಹಿರಿಯಡ್ಕ – ಅಜೆಕಾರು ಮಾರ್ಗವಾಗಿ ಹೆರ್ಮುಂಡೆಗೆ ಬಂದರೆ ಹೆರ್ಮುಂಡೆ ಶ್ರೀ ಮಹಾವಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲಿದೆ ಈ ಗರೋಡಿ.
Permunde-Garadi-1
Permunde-Garadi-2
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
Permunde-Garadi-3
ಗರೋಡಿಯ ಒಳಗೆ ಬ್ರಹ್ಮಗುಂಡದ ಕೆಳ ಅಂತಸ್ಥಿನಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆಯಿದೆ. ಗುಂಡದ ಬಲಬದಿಯಲ್ಲಿರುವ ಮಣೆಮಂಚದಲ್ಲಿ ಕೋಟಿ-ಚೆನ್ನಯರ ಪಂಚಲೋಹದ ಮೂರ್ತಿಯಿದೆ.
Permunde-Garadi-4
ಪಕ್ಕದಲ್ಲಿಯೇ ಇರುವ ಮಣೆ ಮಂಚದ ಮೇಲೆ ಜೋಗಿಪುರುಷರ ಪಂಚಲೋಹದ ಮೂರ್ತಿಯಿದೆ.
Permunde-Garadi-5
ಗುಂಡದ ಎಡಬದಿಯಲ್ಲಿರುವ ಮಣೆ ಮಂಚದ ಮೇಲೆ ಪಂಚಲೋಹದ ಮಾಯಂದಾಲ್ ಮತ್ತು ಮಗುವಿನ ಪಂಚಲೋಹದ ಮೂರ್ತಿಯಿದೆ.
Permunde-Garadi-6
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ವಿಷ್ಣುಮೂರ್ತಿ ದೇವರ ಕಟ್ಟೆ ತೀರ್ಥಭಾವಿ ಹಾಗೂ ಅಜೆಕಾಯಿ ಕಲ್ಲುಗಳಿವೆ.
ಮಾಧವ ಪೂಜಾರಿ (55 ವರ್ಷ) ಆನಂದ ಪೂಜಾರಿ (51 ವರ್ಷ) ಸುಕುಮಾರ್ (45 ವರ್ಷ) ಜಯ ಪೂಜಾರಿ (47 ವರ್ಷ) ಇವರುಗಳು ಅಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ನರಂಗ ಪೂಜಾರಿ, ಎಚ್.ಕೆ.ಪೂಜಾರಿ, ಮುದ್ದಣ್ಣ ಪೂಜಾರಿಯವರು ಈ ಗರೋಡಿಯ ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿದ್ದರು.
Permunde-Garadi-7
ಈ ಗರೋಡಿಯ ಪಕ್ಕದಲ್ಲಿಯೇ ಇರುವ ಶ್ರೀ ಮಹಾ ವಿಷ್ಣು ಮೂರ್ತಿ ದೇವಸ್ಥಾನ ಪೆರ್ಮುಂಡೆ ಇದರ ಆಡಳಿತದಲ್ಲಿದ್ದು ಆನಂದ ಹೆಗ್ಡೆಯವರು ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾಂತಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ. ಪ್ರತೀ ವರ್ಷ ಸುಗ್ಗಿಯ ಹುಣ್ಣಿಮೆಯಂದು ದ್ವಜಾರೋಹಣ, ಎರಡು ಹಾಗೂ ಮೂರನೇ ದಿನ ದೇವಸ್ಥಾನದ ಪೂಜೆ, ನಾಲ್ಕನೇ ದಿನ ಭಂಡಾರ ಇಳಿದು ಕೋಲದ ಗದ್ದೆಯಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಕಲ್ಕುಡ ಕೋಲ, ಬ್ರಹ್ಮ ಬೈದರ್ಕಳರ ನೇಮ ನಡೆದು ಭಂಡಾರ ವಾಪಾಸು ಬರುವುದು. ಐದನೇ ದಿನ ಮಾಯಂದಾಲ್ ಕೋಲ ನಡೆಯುತ್ತದೆ. ಮೂರು ವರ್ಷಗಳಿಗೊಮ್ಮೆ ಭಂಡಾರ ಹೋಗಿ ಗರೋಡಿಯ ಹತ್ತಿರದಲ್ಲಿ ದೊಂಪದ ಬಲಿ, ಮಾಯಂದಾಲ್ ಹೊರತು ಪಡಿಸಿ ಉಳಿದೆಲ್ಲಾ ದೈವಗಳ ಕೋಲ ನಡೆದು ಭಂಡಾರ ವಾಪಾಸು ಬರುವ ಕ್ರಮವಿದೆ.
ಮುಂಡೇಲು ಹಾಗೂ ಪೆರ್ಮುಂಡೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗಿರುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು 2020ರಲ್ಲಿ ಜೀರ್ಣೋದ್ಧಾರ ಗೊಂಡಿದೆ.
ದಾಮು ಮಡಿವಾಳ ಹೆರ್ಮುಂಡೆ ಇವರು ಗರೋಡಿಯ ಮಡಿವಾಳರಾಗಿ, ಜಗ್ಗು ದೇವಾಡಿಗ ಕೆಮ್ಮಣ್ಣು ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Permunde-Garadi-8

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆರ್ಮುಂಡೆ,
ಹೆರ್ಮುಂಡೆ ಅಂಚೆ, ಕಾರ್ಕಳ ತಾಲೂಕು, ಉಡುಪಿ 574101

ಗರೋಡಿಯ ಪೂ ಪೂಜನೆಯವರು:

ಮಾಧವ ಪೂಜಾರಿ – 978097010
ಆನಂದ ಪೂಜಾರಿ – 989021456
ಸುಕುಮಾರ – 948858404
ಜಯ ಪೂಜಾರಿ – 9980438163

ಮಾಹಿತಿ ನೀಡಿದವರು:

ಮಾಧವ ಪೂಜಾರಿ
ಆನಂದ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

16-07-2025

Shree Kodamanittaya Sthana Garodi, Shree Brahma Baidarkala Sthana Garodi, Mundli Jarkala

ಶ್ರೀ ಕೊಡಮಣಿತ್ತಾಯ ಸ್ಥಾನ ಗರೋಡಿ, ಶ್ರೀ ಬ್ರಹ್ಮಬೈದರ್ಕಳ ಸ್ಥಾನ ಗರೋಡಿ, ಮುಂಡ್ಲಿ ಜಾರ್ಕಳ

ಉಡುಪಿಯಿಂದ ಹಿರಿಯಡ್ಕ – ಅಜೆಕಾರು – ಹೆರ್ಮುಂಡೆ ಮಾರ್ಗವಾಗಿ ಈ ಗರೋಡಿ ತಲುಪಬಹುದು.
Mundli-jarkala-1
Mundli-jarkala-2
Mundli-jarkala-3
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
Mundli-jarkala-4
ಗರೋಡಿಯ ಒಳಗೆ ಮಣೆ ಮಂಚದಲ್ಲಿ ಮರದ ಗುಂಡವಿದ್ದು ಗುಂಡದ ಕೆಳಗಿನ ಅಂತಸ್ಥಿನಲ್ಲಿ ನಾಗಬ್ರಹ್ಮರಿಗೆ, ಮದ್ಯದ ಅಂತಸ್ತಿನಲ್ಲಿ ಬಲ್ಲಾಳರಿಗೆ, ಮೇಲಂತಸ್ಥಿನಲ್ಲಿ ಗಾಳಿದೇವರಿಗೂ ಪೂಜೆಯಿದೆ. ಮಣೆ ಮಂಚದಲ್ಲಿ ಕೋಟಿ-ಚೆನ್ನಯರ ಹಾಗೂ ಕುಜುಂಬ ಕಾಂಜವರಿಗೆ ಪೂಜೆ ಸಲ್ಲುತ್ತದೆ. ಬ್ರಹ್ಮಗುಂಡದ ಬಲಬದಿಯಲ್ಲಿರುವ ಮಣೆಮಂಚದಲ್ಲಿ ಜೋಗಿ ಪುರುಷರಿಗೆ ಪೂಜೆ ಇದೆ. ಎಡಬದಿಯಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಮೂರ್ತಿಗಳಲ್ಲಿ ಆರಾಧನೆಯಿದೆ.
Mundli-jarkala-5
ಗರೋಡಿಯ ಬಲಬದಿಯಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿದ್ಯವಿದೆ. ಎರಡು ಅಜೆಕಾಯಿ ಕಲ್ಲುಗಳಿವೆ.
Mundli-jarkala-6
Mundli-jarkala-7
ಗರೋಡಿಯ ಆವರಣದ ಹೊರಗೆ, ಗೋಂದೋಲ್ ಕಟ್ಟೆ, ಮಹಮ್ಮಾಯಿ ಕಟ್ಟೆಗಳಿವೆ. ಪಕ್ಕದಲ್ಲಿ ಇರ್ಲ್ ಭೂತಗಳ (ತೂ ಕತ್ತರಿ, ಕರ್ಲ್ಲುರ್ಟಿ ಹಾಗೂ ಕಲ್ಕುಡ) ಕಟ್ಟೆಗಳಿವೆ.
Mundli-jarkala-8

ವಿಶ್ವನಾಥ ಪೂಜಾರಿ

ವಿಶ್ವನಾಥ ಪೂಜಾರಿ (45 ವರ್ಷ) ಯವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಸಂಜೀವ ಪೂಜಾರಿ, ಗೋಪಾಲ ಪೂಜಾರಿ, ಸೇಸಪ್ಪ ಪೂಜಾರಿಯವರು ಇಲ್ಲಿಯ ಪೂಪೂಜನೆಯವರಾಗಿದ್ದರು.
ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬೊಲ್ಲು ಪೂಜಾರಿಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
Mundli-jarkala-9

ಸಂಪತ್ ಕುಮಾರ್ ಹೆಗ್ಡೆ

ಪಡ್ಯೋಡಿಗುತ್ತು ದೊಡ್ಡಮನೆ ಸಂಪತ್ ಕುಮಾರ್ ಹೆಗ್ಡೆಯವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ 1) ಪಡ್ಯೋಡಿ ಗುತ್ತು 2) ಕಾಳೊಟ್ಟು ಗುತ್ತು 3) ಆಯರೆ ಗುತ್ತು 4) ಬೆಳ್ಳಾರೆ ಬೆಟ್ಟು ಗುತ್ತುಗಳೆಂಬ ನಾಲ್ಕು ಗುತ್ತುಗಳು ಹಾಗೂ 1) ಕಜಲಕ್ಕಿ ಬರ್ಕೆ 2) ನೆರ್ಗಿಬೈಲು ಬರ್ಕೆ 3) ಪುತ್ತೂರು ಬರ್ಕೆ ಹಾಗೂ ಮುಡಾಲ ಬರ್ಕೆಗಳೆಂಬ ನಾಲ್ಕು ಬರ್ಕೆಗಳಿವೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ ಹಾಗೂ ಕದಿರು ಕಟ್ಟುವ ಕ್ರಮಗಳಿವೆ. ಪುಯಿಂತೆಲ್ ತಿಂಗಳ ಹುಣ್ಣಿಮೆಯ ಪಂಚಮಿಯಂದು ಭಂಡಾರದ ಮನೆಯಿಂದ ದರ್ಶನದಲ್ಲಿ ಭಂಡಾರ ಬಂದು ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಕೋಲ, ಗೋಂದೋಲ್ ಸೇವೆ ನಡೆಯುತ್ತದೆ. ಮರುದಿನ ಬೈದರ್ಕಳರ ನೇಮ ಹಾಗೂ ಇರ್ಲಭೂತಗಳ ಕೋಲ ನಡೆಯುತ್ತದೆ. ಅದರ ಮರುದಿನ ಮಾಯಿಂದಾಲ್ ಕೋಲ ನಡೆದ ನಂತರ ಭಂಡಾರ ವಾಪಾಸು ಹೋಗುವುದು.
ಮುಂಡ್ಲಿ ಜಾರ್ಕಳ ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರು ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು ಸುಮಾರು 65ಸೆಂಟ್ಸ ಸರಕಾರಿ ಜಾಗದಲ್ಲಿದೆ. ಗರೋಡಿಯು 2017ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಶಂಕರಪರವ, ಮುಂಡ್ಲಿ ಜಾರ್ಕಳ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬೀಚು ಮಡಿವಾಳ ಮುಂಡ್ಲಿ ಇವರು ಮಡಿವಾಳರಾಗಿ, ನಾರಾಯಣ ದೇವಾಡಿಗ ಕೆರ್ವಾಶೆ ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Mundli-jarkala-10

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಸ್ಥಾನ ಗರೋಡಿ, ಶ್ರೀ ಬ್ರಹ್ಮಬೈದರ್ಕಳ ಸ್ಥಾನ ಗರೋಡಿ, ಮುಂಡ್ಲಿ ಜಾರ್ಕಳ,
ಜಾರ್ಕಳ ಅಂಚೆ, ಕಾರ್ಕಳ ತಾಲೂಕು, ಉಡುಪಿ – 576101

ಪೂ ಪೂಜನೆಯವರು:

ವಿಶ್ವನಾಥ ಪೂಜಾರಿ -968629459

ಮೊಕ್ತೇಸರರು:

ಸಂಪತ್ ಕುಮಾರ್ ಹೆಗ್ಡೆ -8971569302

ಮಾಹಿತಿ ನೀಡಿದವರು:

ಸಂಪತ ಕುಮಾರ ಹೆಗ್ಡೆ
ವಿಶ್ವನಾಥ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

16-07-2025

Shree KJodamanittaya & Brhma Baidarkala Garodi, Thellar

ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ, ತೆಳ್ಳಾರು

ಉಡುಪಿಯಿಂದ ಹಿರಿಯಡ್ಕ – ಬೈಲೂರು – ಕಾರ್ಕಳ ತಲುಪಿ ಕಾರ್ಕಳ ತೆಳ್ಳಾರು ಮಾರ್ಗದಲ್ಲಿ ಸುಮಾರು4.5ಕಿ.ಮೀ.ದೂರದಲ್ಲಿದೆ ಈ ಗರೋಡಿ.
Thellar-Garodi-1
Thellar-Garodi-2
Thellar-Garodi-3
ಇದು ಶಿಲಾಮಯ ಗರೋಡಿಯಾಗಿದ್ದುಆಯದಲ್ಲಿದೆ. ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ, ಇನ್ನೊಂದು ದ್ವಾರವು ಉತ್ತರ ದಿಕ್ಕಿಗೆ ಇದೆ. ಹಿಂದೆ ಈ ಗರೋಡಿಯು ಕಲ್ಲೊಟ್ಟು ಎಂಬಲ್ಲಿದ್ದು 22-02-2015ರಲ್ಲಿ ಈಗಿರುವ ಹಂಪದೊಟ್ಟು, ತೆಳ್ಳಾರಿಗೆ ಸ್ಥಳಾಂತರಿಸಲಾಯಿತು. ಕಲೊಟ್ಟಿನಲ್ಲಿ ಈ ಹಿಂದೆ ಗರೋಡಿ ಇದ್ದ ಜಾಗದಲ್ಲಿ ಈಗ ಬ್ರಹ್ಮಸ್ಥಾನ (ಆಲಡೆ) ಹಾಗೂ ಗಣಪತಿ ದೇವಸ್ಥಾನಗಳಿವೆ.
Thellar-Garodi-4
Thellar-Garodi-5
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ, ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಆರಾಧನೆಯಿದೆ. ಗುಂಡದ ಎಡಬಲದಲ್ಲಿ ಇಬ್ಬರು ಸಿರಿಗಳ ಮರದ ಮೂರ್ತಿಯಿದೆ.
Thellar-Garodi-6
ಗುಂಡದ ಎಡಬದಿಯಲ್ಲಿ ಕೋಟಿ-ಚೆನ್ನಯರ ಹಾಗೂ ಕುಜುಂಬಕಾಂಜವರ ಹಾಗೂ ಪಕ್ಕದಲ್ಲಿಯೇ ಮೂವರು ಮಕ್ಕಳ ಮರದ ಮೂರ್ತಿಗಳಿವೆ.
Thellar-Garodi-7
ಗುಂಡದ ಬಲಬದಿಯಲ್ಲಿ ಮೂವರು ಬೈದೇರುಗಳ ಪಣಿಯಾರದ ಮಂಚವಿದೆ.
Thellar-Garodi-8
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
Thellar-Garodi-9
ಗರೋಡಿಯ ಬಲಬದಿಯಲ್ಲಿರುವ ಕಟ್ಟೆಯಲ್ಲಿ ಜುಮಾದಿ ಹಾಗೂ ಬಂಟರ ಸಾನಿಧ್ಯವಿದೆ.
Thellar-Garodi-10
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು ಹಾಗೂ ಕೊಡಮಣಿತ್ತಾಯ ದೈವಗಳ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಎರಡು ಅಜೆಕಾಯಿ ಕಲ್ಲುಗಳಿವೆ.
ಅರುಣ್ ಪೂಜಾರಿ (35 ವರ್ಷ) ಇವರು ಗರೋಡಿಯ ಪೂ ಪೂಜನೆಯವರು, ಅದಕ್ಕೂ ಮೊದಲು ಅವರ ಮಾವ ದೊಂಬ ಪೂಜಾರಿಯವರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ತಬುರ ಪೂಜಾರಿ ಹಾಗೂ ಬಾಬು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ 1) ಮಾಗಣೆ ಗುತ್ತು 2) ಅರಂತೊಟ್ಟು ಗುತ್ತು 3) ಅರಸರ ಗುತ್ತು 4) ಮೂಡುಮನೆ ಗುತ್ತು 5) ಮೇಗಿನ ಮನೆ ಗುತ್ತು 6) ನಿಲಬೆಟ್ಟು ಗುತ್ತುಗಳೆಂಬ ಆರು ಗುತ್ತು ಹಾಗೂ 1) ಮಾಂಜ ಬರ್ಕೆ 2) ಡೆಕ್ಕಿನಡ್ಕ ಬರ್ಕೆ 3) ನೇರೊಲ್ದಪಲ್ಕೆ ಬರ್ಕೆ ಹಾಗೂ 4) ಬಲಾಜೆ ಬರ್ಕೆಗಳೆಂಬ ನಾಲ್ಕು ಬರ್ಕೆಗಳಿವೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ , ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವ ಕ್ರಮಗಳಿವೆ.
ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಒಂದು ದಿನ ಮಾಂಜ ಬರ್ಕೆಯಿಂದ ಬೈದೇರುಗಳ ಭಂಡಾರ ಹಾಗೂ ಮಾಗಣೆ ಗುತ್ತುವಿನಿಂದ ಕೊಡಮಣಿತ್ತಾಯ ಬಂಡಾರ ದರ್ಶನದಲ್ಲಿ ಬಂದು ಧ್ವಜಾರೋಹಣವಾಗಿ ಧರ್ಮರಸು ಹಾಗೂ ಕೊಡಮಣಿತ್ತಾಯ ದೈವಗಳ ಕೋಲ ನಡೆಯುತ್ತದೆ. ಮರುದಿನ ಬೈದೇರುಗಳ ನೇಮ, ಶನಿಪೂಜೆ, ನಡೆದು ದ್ವಜಾವರೋಹಣ ನಡೆಯುತ್ತದೆ. ಅದರ ಮರುದಿನ ಮಾಯಂದಾಲ್ ಕೋಲ ನಡೆದು ಭಂಡಾರ ವಾಪಾಸು ಹೋಗುತ್ತದೆ.
ಏಪ್ರಿಲ್ ತಿಂಗಳಲ್ಲಿ ಚಾಂದ್ರಮಾನ ಯುಗಾದಿಯ 9ನೇ ದಿನದಲ್ಲಿ ಹಾಕೊಡ ಬಾಕ್ಯಾರಿನಲ್ಲಿ ಬಂಡಾರ ಬಂದು ದೊಂಪದ ಬಲಿ ಧರ್ಮರಸು, ಕೊಡಮಣಿತ್ತಾಯ, ಬೈದರ್ಕಳ ನೇಮ ಹಾಗೂ ಪರಿವಾರ ದೈವಗಳ ಕೋಲ, ಗೋಂದೋಲ್ ಪೂಜೆ, ಗಡುವಾಡಿಗೆ ಸೂಟೆದಾರ ಇತ್ಯಾದಿ ನಡೆಯುತ್ತದೆ. ಮರುದಿನ ಬೆಳಿಗ್ಗೆ ನಂಬಿಕೆ ಪ್ರಸಾದ, ಭಕ್ತಾಧಿಗಳ ನ್ಯಾಯ, ಅನ್ಯಾಯ, ಕಷ್ಟಕಾರ್ಪಣ್ಯಗಳನ್ನು ದೈವದೊಡನೆ ಬಿನೈಯಿಸುವುದು ಹಾಗೂ ನುಡಿ ರೂಪದಲ್ಲಿ ಪರಿಹಾರ, ದೈವದ ಭಂಡಾರ ವಾಪಾಸು ಗುತ್ತು ಹಾಗೂ ಬರ್ಕೆಗಳಿಗೆ ಬರುವುದು, ಶುದ್ಧ ಕಲಶ ನಡೆಯುತ್ತದೆ.
ದುರ್ಗಾ ಹಾಗೂ ತೆಳ್ಳಾರಿನ ಜನ ಈ ಗರೋಡಿಗೆ ಸೇವೆ ಸಲ್ಲಿಸುತ್ತಾರೆ. ಊರಜನರ ವರಡ ವಂತಿಗೆಯಿAದ ಗರೋಡಿಯ ಕಾರ್ಯಕ್ರಮಗಳು ನಡೆಯುತ್ತವೆ.
ಗಂಗಯ್ಯ ಪರವ ಬಜಗೋಳಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ಸಂಜೀವ ಮಡಿವಾಳ ತೆಳ್ಳಾರು ಮಡಿವಾಳರಾಗಿ, ಪಾಂಡು ಕಾರ್ಕಳ ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Thellar-Garodi-11

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯಮತ್ತು ಬ್ರಹ್ಮಬೈದರ್ಕಳ ಗರೋಡಿ ತೆಳ್ಳಾರು,
ತೆಳ್ಳಾರು ಅಂಚೆ, ಕಾರ್ಕಳ ತಾಲೂಕು
ಉಡುಪಿ 576117

ಗರೋಡಿಯ ಪೂ ಪೂಜನೆಯವರು:

ಅರುಣ್ ಪೂಜಾರಿ – 9844681306

ಮಾಹಿತಿ ನೀಡಿದವರು:

ಅಭಿಲಾಷ – 8971719800
ಶೇಖರ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

16-07-2025

Shree Brahma Baidarkala Garodi, Siribailu Kadthala

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಸಿರಿಬೈಲು ಕಡ್ತಲ

ಉಡುಪಿಯಿಂದ ಪೆರ್ಡೂರು ಮಾರ್ಗವಾಗಿ ಕಡ್ತಲ ತಲುಪಿದರೆ ಶ್ರೀ ಬರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದೊಳಗಿದೆ ಈ ಗರೋಡಿ.
Siribail-Kadtala-1
Siribail-Kadtala-2
ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯದ್ವಾರ ಹಾಗೂ ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ.
Siribail-Kadtala-3
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ. ಗುಂಡದ ಎಡಬದಿಯ ಮಣೆ ಮಂಚದಲ್ಲಿ ಕೋಟಿ – ಚೆನ್ನಯರಿಗೆ ಪೂಜೆ ಇದೆ. ಗುಂಡದ ಬಲಬದಿಯ ಮಣೆ ಮಂಚದಲ್ಲಿ ಕುಜುಂಬ ಕಾಂಜವರಿಗೆ ಪೂಜೆ ನಡೆಯುತ್ತದೆ. ಬ್ರಹ್ಮಗುಡಿಯ ಹೊರಗೆ ಬಲಬದಿಯ ಮಣೆ ಮಂಚದಲ್ಲಿ ಮಾಯಂದಾಲ್ ಹಾಗೂ ಎಡಬದಿಯ ಮಣೆಮಂಚದಲ್ಲಿ ಜೋಗಿ ಪುರುಷರಿಗೆ ಪೂಜೆ ನಡೆಯುತ್ತದೆ.
Siribail-Kadtala-4
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ದೈವಗಳ ಸಾನಿಧ್ಯಲವಿದೆ.
Siribail-Kadtala-5

ಸಂಜೀವ ಪೂಜಾರಿ

ಸಂಜೀವ ಪೂಜಾರಿ (74 ವರ್ಷ) ಇವರು ಇಲ್ಲಿಯ ಪೂ ಪೂಜನೆಯವರು. ಇವರ ಮೊದಲು ನೇಮು ಪೂಜಾರಿ, ತ್ಯಾಂಪ ಪೂಜಾರಿಯವರು ಇಲ್ಲಿಯ ಪೂ ಪೂಜನೆಯವರಾಗಿದ್ದರು.
Siribail-Kadtala-6

ಗೋಪಾಲ ಪೂಜಾರಿ

Siribail-Kadtala-7

ಸುದೀರ ಪೂಜಾರಿ

Siribail-Kadtala-8

ಅನಿಲ್ ಪೂಜಾರಿ

Siribail-Kadtala-9

ಸವಿನ್ ಪೂಜಾರಿ

Siribail-Kadtala-10

ಕೌಶಿಕ್ ಪೂಜಾರಿ

ಗೋಪಾಲ ಪೂಜಾರಿ, ಸುದೀರ ಪೂಜಾರಿ, ಅನಿಲ್, ಸವಿನ್ ಪೂಜಾರಿ ಹಾಗೂ ಕೌಶಿಕ್ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಪ್ರಶಾಂತ ಬೆಳ್ಳಿರಾಯ ಇವರು ಇಲ್ಲಿಯ ಮೊಕ್ತೇಸರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಕದಿರು ಕಟ್ಟುವ ಕ್ರಮ ಇದೆ. ಪ್ರತೀ ವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಒಂದು ದಿನ ಮೇಲ್ಮನೆ ಬರ್ಕೆಯಿಂದ ಬೈದೇರುಗಳ ಭಂಡಾರ ಬಂದು ದೇವಸ್ಥಾನದಲ್ಲಿ ದ್ವಜಾರೋಹಣ ಮಾಡಿದ ನಂತರ ರಾತ್ರಿ ಧರ್ಮರಸು, ಕೊಡಮಣಿತ್ತಾಯ, ದೈವಗಳ ಕೋಲ, ಬೈದರ್ಕಳ ನೇಮ, ದೇವಿ ದರ್ಶನ, ಮಾಯಂದಾಲ್ ಹಾಗೂ ಜೋಗಿ ಪುರುಷ ಕೋಲ ನಡೆದು ಮರುದಿನ ಭಂಡಾರ ವಾಪಾಸು ಹೋಗುವುದು.
ಕಡ್ತಲ, ಸಿರಿಬೈಲು ಭಾಗದ ಜನರು ಈ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
Siribail-Kadtala-11

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ
ಶ್ರೀ ಬರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ

ಸಿರಿಬೈಲು ಕಡ್ತಲ,
ಕಾರ್ಕಳ ತಾಲೂಕು

ಗರೋಡಿ ಪೂ ಪೂಜನೆಯವರು:

ಸಂಜೀವ ಪೂಜಾರಿ – 9535668471

ಮಾಹಿತಿ ನೀಡಿದವರು:

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025

Shree Brahma Baidarkala Garodi, Kinnigoli Katte, Shirlalu

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಿನ್ನಿಗೋಳಿ ಕಟ್ಟೆ – ಶಿರ್ಲಾಲು

ಉಡುಪಿಯಿಂದ – ಪೆರ್ಡೂರು –ಅಜೆಕಾರು – ಅಚಿಡಾರು ಮಾರ್ಗವಾಗಿ ಶಿರ್ಲಾಲು ತಲುಪಿ ಗೋಳಿಕಟ್ಟೆ ಎಂಬಲ್ಲಿ ರಸ್ತೆಯ ಬಲಬದಿಯಲ್ಲಿದೆ ಈ ಗರೋಡಿ.
Shirlalu-Kinnigolikatte-1
Shirlalu-Kinnigolikatte-2
Shirlalu-Kinnigolikatte-3
ಈ ಗರೋಡಿಯು ಪೂರ್ವಾಭಿಮುಖವಾಗಿರುತ್ತದೆ. ಸ್ಥಳ ಪುರಾಣದ ಪ್ರಕಾರ ಹಿಂದೆ ನಡ್ಡೊಟ್ಟು ಬರ್ಕೆಮನೆಯಿಂದ ಬಂಡಾರ ಬಂದು ಗೋಳಿಕಟ್ಟೆಯಲ್ಲಿ ದೊಂಪದ ಬಲಿ, ನೇಮೋತ್ಸವ ನಡೆಯುತ್ತಿತ್ತು. ಇತ್ತೀಚೆಗೆ ಅಂದರೆ 2000ನೇ ಇಸವಿಯಲ್ಲಿ ದೊಂಪದ ಬಲಿ ನಡೆಯುತ್ತಿದ್ದ ಜಾಗದಲ್ಲಿ ಈ ಗರೋಡಿಯನ್ನು ಕಟ್ಟಲಾಗಿದೆ.
ಗರೋಡಿಯ ಒಳಗೆ ಪದ್ಮಕಲ್ಲು ಕಟ್ಟೆಯಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯನ್ನಿಡಲಾಗುತ್ತದೆ. ಬಲಬದಿಯ ಒಂದು ಮಣೆ ಮಂಚದಲ್ಲಿ ಕೋಟಿ – ಚೆನ್ನಯರು, ಇನ್ನೋಂದು ಮಣೆ ಮಂಚದಲ್ಲಿ ಕುಜುಂಬ ಕಾಂಜವರು, ಎಡಬದಿಯ ಮಣೆ ಮಂಚದಲ್ಲಿ ಮರ್ಲ ಭೂತಗಳ ಆರಾಧನೆಯಿದೆ.
Shirlalu-Kinnigolikatte-4
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ, ಹಾಗೂ ಕುಕ್ಕಿನಂತಾಯ ದೈವಗಳ ಆರಾಧನೆಯಿದೆ. ಗರೋಡಿಯ ಆವರಣದೊಳಗೆ ಅಜೆಕಾಯಿ ಕಲ್ಲುಗಳಿವೆ.
Shirlalu-Kinnigolikatte-5

ನಡ್ಡೊಟ್ಟು ಬರ್ಕೆಮನೆ ಸಾಧು ಪೂಜಾರಿ

ನಡ್ಡೊಟ್ಟು ಬರ್ಕೆಮನೆ ಸಾಧು ಪೂಜಾರಿ (80 ವರ್ಷ) ಇವರು ಬ್ರಹ್ಮಬೈದರ್ಕಳ ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಇವರ ಅಣ್ಣ ಅಪ್ಪು ಪೂಜಾರಿಯವರು ಈ ಸೇವೆ ಮಾಡಿದ್ದರು. ಈ ಗರೋಡಿಯ ಬೈದರ ದರ್ಶನಕ್ಕೆ ಈಗ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಚಲ್ಲು ಪೂಜಾರಿ, ಹಾಗೂ ಕಾಳು ಪೂಜಾರಿಯವರು ಇಲ್ಲಿಯ ದರ್ಶನ ಪಾತ್ರಿಗಳಾಗಿದ್ದರು. ಸುದೇಶ್ ಜೈನ್ ಇವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ.
ಈ ಗರೋಡಿಯಲ್ಲಿ ಸಂಕ್ರಾಂತಿ ಪೂಜೆ ನಡೆಯುತ್ತದೆ. ಪ್ರತೀ ವರ್ಷ ಪೆಭ್ರವರಿ ತಿಂಗಳಲ್ಲಿ ಬರುವ ಸಂಕ್ರಮಣದ ಮರುದಿನ ನಡ್ಡೊಟ್ಟು ಬರ್ಕೆ ಮನೆಯಿಂದ ಬೈದೇರುಗಳ ಭಂಡಾರ, ಬಾಂತೊಟ್ಟು ಭಂಡಾರದ ಮನೆಯಿಂದ ಧರ್ಮರಸು, ಕೊಡಮಣಿತ್ತಾಯ, ಹಾಗೂ ಕುಕ್ಕಿನಂತಾಯ ದೈವಗಳ ಭಂಡಾರ ದರ್ಶನದಲ್ಲಿ ಗರೋಡಿಗೆ ಬಂದು ಮದ್ಯಾಹ್ನ ಅನ್ನ ಸಂತರ್ಪಣೆ ನಡೆದು, ರಾತ್ರಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಕೋಲ, ಬ್ರಹ್ಮಬೈದೇರುಗಳ, ಮರ್ಲಭೂತ, ಮಾಯಂದಾಲ್ ಕೋಲಗಳು ನಡೆದು ಭಂಡಾರ ವಾಪಾಸು ಹೋಗುವುದು.
ಶಿರ್ಲಾಲು ಭಾಗದ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಸುಂದರ ಪರವ ಕೆರ್ವಾಶೆ ಇವರು ಗರೋಡಿಯ ನೃತ್ಯವಿಶಾರದರಾಗಿ, ರಾಜು ಮಡಿವಾಳ ಶಿರ್ಲಾಲು ಇವರು ಮಡಿವಾಳರಾಗಿ, ಸದಾಶಿ ವರಂಗ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Shirlalu-Kinnigolikatte-6
ನಡ್ಡೊಟ್ಟು ಬರ್ಕೆಮನೆಯಲ್ಲಿ ಬೈದೇರುಗಳ ಭಂಡಾರ ಇಡುವ ಗುಡಿ.
Shirlalu-Kinnigolikatte-7

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ,
ಕಿನ್ನಿಗೋಳಿಕಟ್ಟೆ ಶಿರ್ಲಾಲು,
ಕಾರ್ಕಳ

ಗರೋಡಿ ಪೂ ಪೂಜನೆಯವರು:

ಸಾಧು ಪೂಜಾರಿ – 9632563074

ಮಾಹಿತಿ ನೀಡಿದವರು:

ಸಾಧು ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025

Shree Dharmarasu, Kodamanittaya, Kukkinantaya, Brahma Baidarkala Garodi, Shirlalu Soodi

ಶ್ರೀಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮಬೈದರ್ಕಳ ಗರೋಡಿ, ಶಿರ್ಲಾಳು ಸೂಡಿ

ಉಡುಪಿಯಿಂದ ಹಿರಿಯಡ್ಕ – ಪೆರ್ಡೂರು – ಅಜೆಕಾರು – ಅಂಡಾರ್ ಮಾರ್ಗವಾಗಿ ಶಿರ್ಲಾಲು ತಲುಪಿ ಅಥವಾ ಹಿರಿಯಡ್ಕ – ಬೈಲೂರು – ಹಿರ್ಗಾನ – ಅಜೆಕಾರು – ಅಚಿಡಾರ್ ಮಾರ್ಗವಾಗಿ ಶಿರ್ಲಾಲು ತಲುಪಿ ಶಿರ್ಲಾಲು – ಕೆರ್ವಾಶೆ ಮಾರ್ಗದ ರಸ್ತೆಯ ಬಲ ಬದಿಯಲ್ಲಿದೆ ಈ ಗರೋಡಿ.
Shirlalu-soodi-1
Shirlalu-soodi-2
Shirlalu-soodi-3
1981ರಲ್ಲಿ ಈ ಗರೋಡಿ ಸ್ಥಾಪನೆಯಾಗಿದೆ. ಗರೋಡಿಗೆ ಪೂರ್ವಾಭಿಮುಖ ವಾದ ಒಂದು ದ್ವಾರವಿದೆ.
Shirlalu-soodi-4
ಗರೋಡಿಯ ಒಳಗೆ ಒಂದು ದೊಡ್ಡದಾದ ಮಣೆ ಮಂಚದ ಮೇಲೆ ಬ್ರಹ್ಮರ ಗುಂಡವಿದ್ದು, ಗುಂಡದ ಬಲಭಾಗದಲ್ಲಿ ಕೋಟಿ ಹಾಗೂ ಎಡಭಾಗದಲ್ಲಿ ಚೆನ್ನಯರಿಗೆ ಪೂಜೆ ಸಲ್ಲುತ್ತದೆ. ಈ ಮಣೆ ಮಂಚದ ಕೆಳಗೆ ಜೋಗಿಪುರುಷರ ಮಣೆ ಇದೆ. ಈ ದೊಡ್ಡದಾದ ಮಣೆಮಂಚದ ಎಡಬದಿಯಲ್ಲಿರುವ ಇನ್ನೊಂದು ಮಣೆಮಂಚದಲ್ಲಿ ಕುಜುಂಬ ಕಾಂಜವ ಹಾಗೂ ಅದರ ಪಕ್ಕದಲ್ಲಿರುವ ಇನ್ನೊಂದು ಮಣೆಮಂಚದಲ್ಲಿ ಮಾಯಂದಾಲ್‌ರ ಆರಾಧನೆಯಿದೆ.
Shirlalu-soodi-5
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ, ಹಾಗೂ ಕುಕ್ಕಿನಂತಾಯ ದೈವಗಳ ಆರಾಧನೆಯಿದೆ. ಗರೋಡಿಯ ಆವರಣದೊಳಗೆ ಅಜೆಕಾಯಿ ಕಲ್ಲುಗಳಿವೆ.
Shirlalu-soodi-6
Shirlalu-soodi-7
ಗರೋಡಿಯ ಆವರಣದ ಹೊರಗೆ ಮಹಮ್ಮಾಯಿ ಕಟ್ಟೆ ಇದೆ. ಅದರ ಪಕ್ಕದಲ್ಲಿರುವ ಮೂರು ಕಟ್ಟೆಗಳಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತರಿ, ಸದೈವಗಳ (ಇರ್ಲ ಮರ್ಲ ಭೂತಗಳು) ಸಾನಿಧ್ಯವಿದೆ.
Shirlalu-soodi-8
ಗರೋಡಿಯ ಪಕ್ಕದಲ್ಲಿ ಶಿರ್ಲಾಲು – ಕೆರ್ವಾಶೆ ರಸ್ತೆಯ ಇನ್ನೊಂದು ಮಗ್ಗುಲಲ್ಲಿರು ಗುಡಿಯಲ್ಲಿ ಮರ್ಲಜುಮಾದಿ, ಬಂಟ ದೈವಗಳ ಸಾನಿಧ್ಯವಿದೆ.
Shirlalu-soodi-9

ನವೀನ್ ಪೂಜಾರಿ

ನವೀನ್ ಪೂಜಾರಿ (38 ವರ್ಷ) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ದಯಾನಂದ ಪೂಜಾರಿ, ಶೇಖರ ಪೂಜಾರಿ, ಕೊರಗ ಪೂಜಾರಿ, ಮೊದಲಾದ ಹಿರಿಯರು ಈ ಗರೋಡಿಯ ಪೂಪೂಜನೆಯವರಾಗಿ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ದೊಡ್ಡ ಮನೆ ಅನಂತರಾಜ ಪೂವಣಿಯವರು ಈ ಗರೋಡಿಯ ಆಡಳಿತ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆಗಳು ನಡೆಯುತ್ತವೆ.
ಪ್ರತೀ ವರ್ಷ ಮಾರ್ಚ ತಿಂಗಳ 24ನೇ ತಾರೀಖಿನಂದು ಭಂಡರದ ಮನೆಯಿಂದ ಭಂಡಾರ ಬಂದು ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಕೋಲ, ಮಹಮ್ಮಾಯಿಗೆ ಗೋಂದೋಳು ಸೇವೆ, ಬಸದಿಗೆ ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಬೇಟಿ ನಡೆಉಇತ್ತದೆ. ಮರುದಿನ ಮಾರ್ಚ 25ನೇ ತಾರೀಖಿನಂದು ಬೈದರ್ಕಳ ನೇಮ, ಬೈದರ ದರ್ಶನ, ಇರ್ಲಭೂತಗಳ ಕೋಲ, ಜೋಗಿಪುರುಷ ದರ್ಶನ, ಮಾಯಂದಾಲ್ ಕೋಲ ನಡೆದು ಮಾರ್ಚ 26ನೇ ತಾರೀಖಿನಂದು ಭಂಡಾರ ವಾಪಾಸು ಹೋಗುವುದು. ಮದ್ಯಾಹ್ನ ಮರ್ಲ ಜುಮಾದಿ ಹಾಗೂ ಬಂಟ ದೈವಗಳ ಕೋಲ ನಡೆಯುತ್ತದೆ.
ಶಿರ್ಲಾಲು-ಸೂಡಿ ಭಾಗದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರದ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಉಗ್ಗಪ್ಪ ಪರವ ಕೆರ್ವಾಶೆ ಮತ್ತು ಸಂಗಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಜಯಕರ ಮಡಿವಾಳ ಶಿರ್ಲಾಲು ಮಡಿವಾಳರಾಗಿ, ಶಿವರಾಮ ಶಿರ್ಲಾಲು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Shirlalu-soodi-10

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮಬೈದರ್ಕಳ ಗರೋಡಿ, ಶಿರ್ಲಾಲು – ಸೂಡಿ
ಹಾಡಿಯಂಗಡಿ ಅಂಚೆ,
ಕಾರ್ಕಳ ತಾಲೂಕು,
ಉಡುಪಿ 576101

ಗರೋಡಿ ಪೂ ಪೂಜನೆಯವರು:

ನವೀನ್ ಪೂಜಾರಿ – 7760571043

ಮಾಹಿತಿ ನೀಡಿದವರು:

ನವೀನ್ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025

Shree Brahma Baidarkala Garodi, Chelbettu, Yennehole, Ajekar

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಚೇಳ್‌ಬೆಟ್ಟು ಎಣ್ಣೆ ಹೊಳೆ ಅಜೆಕಾರು

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಅಜೆಕಾರು ತಲುಪಿ ಮುಂದೆ ಕಾರ್ಕಳದ ಕಡೆಗೆ ಸುಮಾರು 3ಕಿಮೀ. ಸಾಗಿದಾಗ ರಸ್ತೆಯ ಎಡಬದಿಯಲ್ಲಿದೆ ಈ ಗರೋಡಿ.
Yennehole-ajekar-garadi-1
Yennehole-ajekar-garadi-2
ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಬಡಗು ಮುಖವಾಗಿಯೂ ಇನ್ನೊಂದು ದ್ವಾರವು ಪೂರ್ವಾಭಿಮುಖವಾಗಿಯೂ ಇದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
Yennehole-ajekar-garadi-3
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
Yennehole-ajekar-garadi-4
ಗುಂಡದ ಎಡಬದಿಯಲ್ಲಿ ಮಣೆ ಮಂಚದಲ್ಲಿ ಕೋಟಿ-ಚೆನ್ನಯರ ಸುರಿಯಗಳನ್ನಿಟ್ಟು ಪೂಜಿಸಲಾಗುತ್ತದೆ.
Yennehole-ajekar-garadi-5
ಗುಂಡದ ಬಲಬದಿಯಲ್ಲಿ ಬಳ್ಳಾಲರ ಹಾಗೂ ಕುಜುಂಬ ಕಾಂಜವರ ಮಣೆ ಮಂಚಗಳಿವೆ
Yennehole-ajekar-garadi-6
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಮಾಯಂದಾಳ್ ಮಣೆ ಮಂಚ ಹಾಗೂ ಎಡಬದಿಯಲ್ಲಿ ಜೋಗಿಪುರುಷರ ಮಣೆ ಮಂಚವಿದೆ.
Yennehole-ajekar-garadi-7
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಉರಿನಾಗಬ್ರಹ್ಮರ ಸಾನಿದ್ಯ, ನಾಗಬನ, ಲೆಕ್ಕೆಸಿರಿ, ನಂದಿಗೋಣ, ಕ್ಷೇತ್ರಪಾಲ ದೈವಗಳ ಸಾನಿದ್ಯವಿದೆ. ಹತ್ತಿರದಲ್ಲಿಯೇ ಜುಮಾದಿ ಕಟ್ಟೆ ಇದೆ.
Yennehole-ajekar-garadi-8
ಹತ್ತಿರದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಆರಾಧನೆಯಿದೆ.

ಆನಂದ ಪೂಜಾರಿ

ಆನಂದ ಪೂಜಾರಿ (63 ವರ್ಷ) ನೇರಳೆಮಾರ್ ಬರ್ಕೆ ಇವರು ಈ ಗರೋಡಿಯ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಚಂದು ಪೂಜಾರಿ, ಬೊಗ್ರ ಪೂಜಾರಿಯವರು ಇಲ್ಲಿ ಅರ್ಚಕರಾಗಿನ ಸೇವೆ ಮಾಡಿದ್ದರು. ಆನಂದ ಪೂಜಾರಿಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳೂ ಆಗಿದ್ದಾರೆ. ನಡಿಮಾರು ಗುತ್ತು ಹರಿಶ್ಚಂದ್ರ ಹೆಗ್ಗಡೆಯವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ. ಪ್ರತೀ ವರ್ಷ ಏಪ್ರಿಲ್ ತಿಂಗಳ 3ನೇ ತಾರೀಖಿನಂದು ಭಂಡಾರ ಬಂದು ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಕೋಲ, ನಾಗದರ್ಶನ, ಡಕ್ಕೆಬಲಿ, ಬೈದರ್ಕಳ ನೇಮ, ಜೋಗಿಪುರುಷ, ಮಾಯಂದಾಲ್ ಕೋಲ ನಡೆದು 4ನೇ ತಾರೀಖಿನಂದು ಭಂಡಾರ ವಾಪಾಸು ಹೋಗುವುದು.
ಮರ್ಣೆ ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ಸುಧಾಕರ ಪರವ ದೊಂಡೆರಂಗಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಸದಾನಂದ ಮಡಿವಾಳರು ಮಡಿವಾಳರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Yennehole-ajekar-garadi-10

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಚೇಳ್‌ಬೆಟ್ಟು, ಎಣ್ಣೆಹೊಳೆ, ಅಜೆಕಾರು,
ಮರ್ಣೆ ಅಂಚೆ,
ಕಾರ್ಕಳ ತಾಲೂಕು

ಗರೋಡಿಯ ಅರ್ಚಕರು ಹಾಗೂ ಸ್ಥಳ ಪಾತ್ರಿಗಳು:

ಆನಂದ ಪೂಜಾರಿ

ಮಾಹಿತಿ ನೀಡಿದವರು:

ಆನಂದ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-25

Shree Kodamanittaya & Brahma Baidarkala Garodi, Kemmunje Marne Ajekar

ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ, ಕೆಮ್ಮುಂಜೆ ಮರ್ಣೆ ಅಜೆಕಾರು

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಅಜೆಕಾರು ತಲುಪಿದರೆ, ಅಜೆಕಾರು ಬಸ್ ನಿಲ್ದಾಣದಿಂದ ಸುಮಾರು 250ಮೀ. ದೂರದಲ್ಲಿದೆ ಈ ಗರೋಡಿ.
Kemmunje-Marne-Ajekar-1
Kemmunje-Marne-Ajekar-2
ಗರೋಡಿಯು ಶಿಲಾಮಯವಾಗಿದ್ದು ಮೂಡು ಮುಖವಾಗಿರುವ ಮುಖ್ಯ ದ್ವಾರವಿದೆ.
Kemmunje-Marne-Ajekar-3
ಗರೋಡಿಯ ಬ್ರಹ್ಮಗುಡಿಯ ಒಳಗೆ ಮಣೆ ಮಂಚದ ಮದ್ಯದಲ್ಲಿ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಆರಾಧನೆಯಿದೆ. ಗುಂಡದ ಬಲಬದಿಯಲ್ಲಿ ಕೋಟಿ ಹಾಗೂ ಎಡಬದಿಯಲ್ಲಿ ಚೆನ್ನಯರಿಗೆ ಪೂಜೆ ಸಲ್ಲುತ್ತದೆ. ಗುಂಡದ ಎರಡೂ ಬದಿಯಲ್ಲಿ ಕೋಟಿ-ಚೆನ್ನಯರ ಭಾವ ಚಿತ್ರವನ್ನಿಡಲಾಗಿದೆ.
Kemmunje-Marne-Ajekar-4
ಈ ಮಣೆ ಮಂಚದ ಎಡಬದಿಯಲ್ಲಿ ಕುಜುಂಬ ಕಾಂಜವರ ಮಣೆ ಮಂಚ ಹಾಗೂ ಮಾಯಂದಾಲ್ ಮಣೆ ಮಂಚಗಳಿವೆ.
Kemmunje-Marne-Ajekar-5
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿದ್ಯವಿದೆ. ಈ ಗುಡಿಯ ಎದುರಿಗೆ ದ್ವಜಸ್ಥಂಭವಿದೆ.
Kemmunje-Marne-Ajekar-6
ಪಕ್ಕದಲ್ಲಿ ಬಲಿ ಮೂರ್ತಿ ಕಟ್ಟೆ ಇದೆ.
ನಾರಾಯಣ ಪೂಜಾರಿ (60) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಕುಟ್ಟಿ ಪೂಜಾರಿಯವರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ನಾರಾಯಣ ಪೂಜಾರಿ ಹಾಗೂ ಶೇಖರ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು. ಕುರ್ಪಾಡಿ ಗುತ್ತು ಶಿವಕುಮಾರ್ ಇವರು ಇಲ್ಲಿಯ ಮೊಕ್ತೇಸರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ ಕದಿರು ಕಟ್ಟುವ ಕ್ರಮಗಳಿವೆ. ಫೆಬ್ರವರಿ ತಿಂಗಳ 28ರಂದು ಭಂಡಾರ ಬಂದು ದ್ವಜಾರೋಹಣ ಮಾಡಿ, ರಾತ್ರಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ದೈವಗಳ ಕೋಲ, ಬೈದರ್ಕಳ ನೇಮ, ಮಾಯಂದಾಲ್ ಕೋಲದ ನಂತರ ಮರುದಿನ ದ್ವಜಾರೋಹಣ ಮಾಡಿ ಭಂಡಾರ ವಾಪಾಸು ಹೋಗುವುದು.
ಅಜೆಕಾರು, ಮರ್ಣೆ ಗ್ರಾಮದ ಜನರು ಈ ಗರೋಡಿಯಲ್ಲಿ ನೀರುಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಸುನಿಲ ಪರವ, ಅಜೆಕಾರು ಹಾಗೂ ಚುಕುಡ ಪರವ ಕುಕ್ಕುಂದೂರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.
Kemmunje-Marne-Ajekar-7

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ ಕೆಮ್ಮುಂಜೆ ಅಜೆಕಾರು,
ಮರ್ಣೆ ಗ್ರಾಮ,
ಕಾರ್ಕಳ ತಾಲೂಕು

ಅರ್ಚಕರು:

ನಾರಾಯಣ ಪೂಜಾರಿ

ಮಾಹಿತಿ ನೀಡಿದವರು:

ಶೇಖರ ಪೂಜಾರಿ (ಹಿಂದಿನ ಅರ್ಚಕರಾದ ಕುಟ್ಟಿ ಪೂಜಾರಿಯವರ ಅಳಿಯ)
ಶೇಖರ ಪೂಜಾರಿ (ಅರ್ಚಕರು ಮಿತ್ತೊಟ್ಟು ಗುತ್ತು ಗರೋಡಿ)

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025