Baidashree

Shree Brahma Baidarkala, Chikkamma Devi Garodi Pilkala, Jathebettu

ಶ್ರೀ ಬ್ರಹ್ಮ ಬೈದರ್ಕಳ ಮತ್ತು ಚಿಕ್ಕಮ್ಮ ದೇವಿ ಗರೋಡಿ ಪಿಳ್ಕಲ, ಜಾತಬೆಟ್ಟು.

ಉಡುಪಿ – ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ನಡುವೆ ಜಾತ ಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ ಕೊಳಲಗಿರಿ ರಸ್ತೆಯಲ್ಲಿ ಒಂದು ಕಿ. ಮೀ. ಸಾಗುವಾಗ ‘ಬಿಲ್ಲ’ ಶಾಲೆ ಸಿಗುತ್ತದೆ. ಬಿಲ್ಲ ಶಾಲೆಯಿಂದ ಎಡಕ್ಕೆ ತಿರುಗಿ ಸುಮಾರು ಅರ್ಧ ಕಿ. ಮೀ. ಸಾಗಿದಾಗ ಪಿಳ್ಕಲ ಗರೋಡಿ ಸಿಗುತ್ತದೆ.
ಉಡುಪಿ ತಾಲೂಕು, ಉಪ್ಪೂರು ಗ್ರಾಮ ಜಾತಬೆಟ್ಟುವಿನಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಮತ್ತು ಚಿಕ್ಕಮ್ಮದೇವಿ ಗರೋಡಿ ಪಿಳ್ಕಲ ಬಹಳ ಪುರಾತನ ಗರೋಡಿಯಾಗಿದೆ. ಇದು ಆಯದ ಗರೋಡಿಯಾಗಿದ್ದು ಷಢಾದಾರ ಪ್ರತಿಷ್ಠೆಗೊಂಡಿದೆ. ಮುಖ್ಯ ದ್ವಾರ ಮೂಡು ದಿಕ್ಕಿಗಿದೆ. ಗರೋಡಿ ಹಿಂಭಾಗದಲ್ಲಿ ನಾಗ ಸನ್ನಿಧಿ ಇರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಗರೋಡಿಯಲ್ಲಿ ಪಶ್ಚಿಮ ಮುಖವಾಗಿಯೂ ಒಂದು ಬಾಗಿಲನ್ನು ಇರಿಸಲಾಗಿದೆ.
ಗರೋಡಿಯಲ್ಲಿ ಗುಂಡದ ಒಳಗೆ ಮೇಲೆ ಗಾಳಿದೇವರು, ಕೆಳಗೆ ನಾಗ ಬ್ರಹ್ಮರ ಮೂರ್ತಿ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಎರಡು ಮಕ್ಕಳ ಪಾಪೆ, ದೇಯಿ ಬೈದೆತಿ ಪಾಪೆ ಇದೆ.
ಗುಂಡದ ಬಲಕ್ಕೆ ಕುಜುಂಬ ಕಾಂಜವ ಮತ್ತು ಒಬ್ಬ ಹುಡುಗನ ಪಾಪೆ ಇದೆ.
ವಾಲಗ ಚಾವಡಿಯಲ್ಲಿ ನಂದಿ, ಜುಮಾದಿ, ಮಾಯಂದಾಳ್ ಮತ್ತು ಮಗು, ಜೋಗಿಪುರುಷ, ಗುರುಕಂಬ, ಪ್ರಧಾನವಾಗಿ ಚಿಕ್ಕಮ್ಮ ದೇವಿ, ಮರ್ಲ ಚಿಕ್ಕು, ಬಾಳ್ ಚಿಕ್ಕು, ಹೈಗುಳಿ ದೈವಗಳ ಪಾಪೆಗಳಿವೆ.
ಗರೋಡಿಯ ಆವರಣದಲ್ಲಿ ಹುಲಿಚಾಮುಂಡಿ ದೈವ ಇದೆ. ಆಯದ ಕಲ್ಲು ಇದೆ. ಗರೋಡಿಯ ಹೊರ ಆವರಣದಲ್ಲಿ ಪಶ್ಚಿಮದಲ್ಲಿ ನಾಗ ಸನ್ನಿಧಿ ಇದೆ.

ಗೋವಿಂದ ಪೂಜಾರಿ

ಕಾಡ್ಯ ಪೂಜಾರಿ

ಈ ಗರೋಡಿಯಲ್ಲಿ 2021 ರಿಂದ ಜಾತಬೆಟ್ಟು ದೇವಿ ನಿಲಯದ ದಿ. ನಕ್ರ ಪೂಜಾರಿ ಅವರ ಪುತ್ರ ಗೋವಿಂದ ಪೂಜಾರಿ (ಪ್ರಾಯ – 60) ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಸುಮಾರು ಎಂಟು ವರುಷಗಳ ಕಾಲ ಸಾಧು ಪೂಜಾರಿಯವರು ಸೇವೆ ಸಲ್ಲಿಸಿದ್ದರು. ಸಾಧು ಪೂಜಾರಿಯವರ ಮೊದಲು 1994 ರಿಂದ 20 ವರ್ಷಗಳ ಕಾಲ ಕಾಡ್ಯ ಪೂಜಾರಿಯವರು ಸೇವೆ ಸಲ್ಲಿಸಿದ್ದರು.

ರಾಜು ಪೂಜಾರಿ

ಉಪ್ಪೂರು ಜಾತ ಬೆಟ್ಟುವಿನ ಕೊರಗ ಪೂಜಾರಿಯವರ ಪುತ್ರ ರಾಜು ಪೂಜಾರಿಯವರು ಗರೋಡಿ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೊಳಲಗಿರಿಯ ಕೇದಿಗೆ ಜಿಡ್ಡ ಭೋಜ ಪೂಜಾರಿಯವರ ಪುತ್ರ ಅರುಣ್ ಕುಮಾರ್ ಕಾರ್ಯದರ್ಶಿಯಾಗಿದ್ದಾರೆ.
ಪ್ರಸ್ತುತ ಗರೋಡಿಗೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬಿಕ್ರ ಪೂಜಾರಿಯವರು ಸ್ಥಳ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಇಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಪೂಜೆ ಇದೆ. ಪೆರ್ಡೂರು ಸಂಕ್ರಮಣವನ್ನು ಅನುಸರಿಸಿ ಸಂಕ್ರಾಂತಿ ಪೂಜೆ ಪ್ರತಿ ತಿಂಗಳು ಇದೆ. ಉಳಿದಂತೆ ಚೌತಿ ಪೂಜೆ ಇದೆ. ಸೋಣ ತಿಂಗಳಲ್ಲಿ ಹೂವಿನ ಪೂಜೆ ನಡೆಯುತ್ತದೆ. ಕದಿರು ಕಟ್ಟುವುದು ಇದೆ. ಸೋಣ ತಿಂಗಳಲ್ಲಿ ಎಂಟನೇ ದಿನ ಊರು ಸೇರಿ ಕಜ್ಜಾಯ ಸೇವೆ ಇದೆ. ಸುಮಾರು 150 ಕುಟುಂಬಗಳು ಸೇರುತ್ತಾರೆ.
ಈ ಗರೋಡಿಯಲ್ಲಿ ಕೊಡಿ ತಿಂಗಳಿನಲ್ಲಿ ಸಂಕ್ರಮಣದ 9ನೇ ದಿನ ಖಾಯಂ ಆಗಿ ಅನ್ನ ನೈವೇದ್ಯ ಸೇವೆ ಜರಗುತ್ತವೆ. ಅಂದು ದರುಶನ ಸೇವೆ ಇದೆ. ಸುಗ್ಗಿ ಸಂಕ್ರಮಣದ 2, 3 ದಿನಗಳಲ್ಲಿ ಅಗೆಲು ಸೇವೆ, ಮರುದಿನ ನೇಮೋತ್ಸವ, ಬೆಳಿಗ್ಗೆ ಮಾಯಂದಾಳ್ ನೇಮೋತ್ಸವ ಕಟ್ಟು ಕಟ್ಟಳೆಯಾಗಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ದೈವಗಳಿಗೆ ಕೋಲ ನಡೆಯುತ್ತದೆ. ಮರುದಿನ ಶುದ್ಧದ ಪಸರಣೆ ಇದೆ. ನವಕ ಪ್ರಧಾನ ಹೋಮ ಇದೆ. ಇಲ್ಲಿ ತುಲಾಭಾರ ಸೇವೆ ಇದೆ.
ಇಲ್ಲಿನ ಕೂಡುಕಟ್ಟಿಗೆ ಉಪ್ಪೂರು, ಹೇರೂರು, ಕುದ್ರುಬೆಟ್ಟು, ನಡುಬೆಟ್ಟು, ಹೇರಬೆಟ್ಟು, ತೆಂಕಬೆಟ್ಟು, ಮಾಯಾಡಿ, ಸಾಲ್ಮರ, ಲಕ್ಷೀನಗರದ ಮಂದಿ ಸೇರುತ್ತಾರೆ.
ಗರೋಡಿಯಲ್ಲಿ ನೀರು ಸ್ನಾನದ ಆಚರಣೆ ಇದೆ. ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡು ಕಾಯಿ ಕಾಣಿಕೆ ತೆಗೆದಿಡುತ್ತಾರೆ. ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಇದೆ. ಕಲಶ ಕಟ್ಟಿ ಶುದ್ಧ ಮಾಡುವ ಪದ್ಧತಿ ಇದೆ. ನೇಮದಂದು ಗರೊಡಿಯ ಹೊರಗೆ ದಲ್ಲೆ ಹಾಕುತ್ತಾರೆ.
ಗರೋಡಿಯ ಖರ್ಚು ವೆಚ್ಚಗಳು ವಂತಿಗೆ, ವರಡದ ರೂಪದಲ್ಲಿ ನಡೆಯುತ್ತದೆ. ಪ್ರಸಕ್ತ ಸುಂದರ ಪೂಜಾರಿ, ವಾಸು ಪೂಜಾರಿ, ಸುರೇಶ್ ಪೂಜಾರಿ ಇವರು ಈ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ 45 ಸೆಂಟ್ಸ ಜಾಗ ಇದೆ. ಸುಮಾರು 75ವರ್ಷಗಳ ಕಾಲ ಗರೋಡಿ ಇದ್ದ ಕುರುಹೂ ಇಲ್ಲದ ಜಾಗದಲ್ಲಿ ಸುಸಜ್ಜಿತ ಗರೋಡಿಯನ್ನು ಪುನರ್ ನಿರ್ಮಿಸಿದ್ದು 15-5-1994ರಲ್ಲಿ ಪ್ರತಿಷ್ಟೆ ಗೊಂಡಿದೆ. ಬಳಿಕ 2006ರಲ್ಲಿ ಹಾಗೂ 2020ರಲ್ಲಿ ಬ್ರಹ್ಮಕಲಶ ಗೊಂಡಿದೆ.
ಇಲ್ಲಿ ಬೂಬ ಪರವ, ಅಂಗರ ಪರವ ಮತ್ತು ಸಂಗಡಿಗರು ನೃತ್ಯವಿಶಾರದರಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಮತ್ತು ಚಿಕ್ಕಮ್ಮ ದೇವಿ ಗರೋಡಿ ಪಿಳ್ಕಲ, ಜಾತಬೆಟ್ಟು.
ಉಪ್ಪೂರು ಗ್ರಾಮ,
ಉಡುಪಿ 576105.

ಆಡಳಿತ ಸಮಿತಿ:

ಅಧ್ಯಕ್ಷರು – ರಾಜು ಪೂಜಾರಿ – 9681842465
ಕಾರ್ಯದರ್ಶಿ: ಅರುಣ್ ಕುಮಾರ್ – 9611362284

ಮಾಹಿತಿ ನೀಡಿದವರು :

ರಾಜು ಪೂಜಾರಿ,
ಗೋವಿಂದ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

13.10.22

Shree Brahma Baidarkala Garodi, Sullod Shiruru Muddumane

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಸುಳ್ಳೋಡ್ ಶೀರೂರು ಮುದ್ದುಮನೆ

ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆ ಮಾರ್ಗವಗಿ ಶೀರೂರು ಮೂರುಕೈ ತಲುಪಿ ಅಲ್ಲಿಂದ 450ಮೀ. ದೂರದಲ್ಲಿ ಬಲಕ್ಕೆ ಶೀರೂರು – ಮುದ್ದುಮನೆ ರಸ್ತೆಯಲ್ಲಿ 1ಕಿ.ಮೀ. ಸಾಗಿ ಬಲಕ್ಕೆ ತಿರುಗಿ ಸುಮಾರು 300ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಯ ಮುಖ್ಯದ್ವಾರವು ಉತ್ತರಾಭಿಮುಖವಾಗಿದ್ದು ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಮೂರ್ತಿಗಳಿವೆ ಹಾಗೂ ದೇಯಿಬೈದೆತಿಯ ಮಣೆಮಂಚವಿದೆ.
ಗುಂಡದ ಬಲಭಾಗದಲ್ಲಿ ಬಲ್ಲಾಳರ ಹಾಗೂ ಕುಜುಂಬ ಕಾಂಜವರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎದುರಿಗೆ ಕೈಯಲ್ಲಿ ಮಗುವನ್ನು ಹಿಡಿದ ಮೈಂದಾಳ ಅಮ್ಮನ ಮರದ ಮೂರ್ತಿ ಹಾಗೂ ಜೋಗಿ ಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬಗಬರ್ಯನ ಮಣೆಮಂಚವಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ. ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲುಗಳಿವೆ.

ಸಂಜೀವ ಪೂಜಾರಿ

ಗರೋಡಿ ಮನೆಯ ಕುಟುಂಬಸ್ಥರಾದ ರಾಘವೇಂದ್ರ ಪೂಜಾರಿ (52 ವರ್ಷ) ಹಾಗೂ ಸಂಜೀವ ಪೂಜಾರಿ (65 ವರ್ಷ) ವರ್ಷಕ್ಕೊಬ್ಬರಂತೆ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ಇವರ ಹಿರಿಯರುಗಳಾದ ಶಿವ ಪೂಜಾರಿ ಹಾಗೂ ರಾಮ ಪೂಜಾರಿಯವರು ಅರ್ಚಕರಾಗಿ ಸೇವೆ ಮಾಡಿದ್ದರು.
ಗರೋಡಿಯಲ್ಲೀಗ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬಚ್ಚು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಮೋಹನದಾಸ ಶೆಟ್ಟಿ ಹಾಗೂ ಸತೀಶ್ ಹೆಗ್ಡೆ ಇವರುಗಳು ಈ ಗರೋಡಿಯ ಮೊಕ್ತೇಸರರು. ಹಿಂದೆ ಕಲ್ಲುಮನೆ ಅಣ್ಣಪ್ಪ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ತುಳಸೀ ಪೂಜೆ, ಫೆಬ್ರವರಿ ತಿಂಗಲ್ಲಿ ಅಗೆಲು ಸೇವೆ, ಏಪ್ರಿಲ್ 9ರಂದು ಗೆಂಡ ಸೇವೆ ನಡೆಯುತ್ತದೆ.
ಈ ಗರೋಡಿಗೆ ಶೀರೂರು ಗ್ರಾಮದ ಜನರು ಸೇವೆ ಸಲ್ಲಿಸುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಗರೋಡಿಯು 2013ರಲ್ಲಿ ಜೀರ್ಣೋದ್ಧಾರಗೊಂಡು ಪುನ: ಪ್ರತಿಷ್ಟೆ ನಡೆದಿದೆ.
ದಿನೇಶ ಮಡಿವಾಳ ಶೀರೂರು ಇವರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಸುಳ್ಳೋಡು,
33 ಶೀರೂರು ಮುದ್ದುಮನೆ,
ಮುದ್ದುಮನೆ ಅಂಚೆ,
ಬ್ರಹ್ಮಾವರ ತಾಲೂಕು – 576223.

ಅರ್ಚಕರು:

ರಾಘವೇಂದ್ರ – 9164732539,
ಸಂಜೀವ ಪೂಜಾರಿ – 9591160615

ಮಾಹಿತಿ ನೀಡಿದವರು :

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi Shiruru, Holebagilu

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಶೀರೂರು, ಹೊಳೆಬಾಗಿಲು

ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆ – ಮಾರ್ಗವಾಗಿ ಶೀರೂರು ಮೂರುಕೈ ಸರ್ಕಲ್ನಿಂದ ಸುಮಾರು 450ಮೀ. ದೂರದಲ್ಲಿ ಬಲಕ್ಕೆ ಶೀರೂರು- ಮುದ್ದುಮನೆ ಮಾರ್ಗದಲ್ಲಿ ಸುಮಾರು 4ಕಿ.ಮೀ. ದೂರದಲ್ಲಿ ಸೀತಾನದಿ ದಡದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು, ಮುಖ್ಯದ್ವಾರವು ಉತ್ತರ ದಿಕ್ಕಿಕೆ ಇದೆ. ಬ್ರಹ್ಮಗುಡಿಯು ಪೂವಾಭಿಮುಖವಾಗಿದ್ದು ಷಢಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರಡಿಮನೆಯ ಪೂರ್ವಜ ಪೂಜಾರಿಯೊಬ್ಬರಿಗೆ ಬಿದ್ದ ಕನಸಿನಂತೆ, ಕೋಟಿಚೆನ್ನಯರು ತೆಂಕಣದಿಕ್ಕಿನಿಂದ ಹೊಸಾಳ ಚಾಂತಾರು ಮೂಲಕ ಮಂದಾರ್ತಿಗೆ ಬಂದು ದೇವಿಯ ಹತ್ತಿರ ಗರಡಿ ಕಟ್ಟಲು ಸ್ಥಳ ಕೇಳಿದಾಗ ಮೂರು ಕೈ ಶೀರೂರು ಸೀತಾನದಿ ಹತ್ತಿರ ನೆಲೆಯಾಗ ಬೇಕೆಂಬ ಅಪ್ಪಣೆಯಾಯಿತಂತೆ. ಅಲ್ಲಿ ಕೋಟಿಚೆನ್ನಯರ ಹೆಜ್ಜೆಯ ಗುರುತು, ಸುರಿಯ ಊರಿದ ನಿಶಾನೆ ತೋರಿ ಬಂದಲ್ಲಿ ಈ ಗರೋಡಿ ಕಟ್ಟಲಾಯಿತೆಂದು ಸ್ಥಳ ಪುರಾಣದಲ್ಲಿ ತಿಳಿದು ಬರುತ್ತದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿಯ ಕಿರೀಟ ಹಾಗೂ ಕತ್ತಿಯನ್ನು ಹೊಂದಿದ ನಾಗ ಬ್ರಹ್ಮರ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಮೈಸಂದಾಯ, ಕುಜುಂಬ ಕಾಂಜವ, ಹಾಗೂ ಬಲ್ಲಾಳರ ಮಣೆಮಂಚ ಮತ್ತು ದೇಯಿಬೈದೆತಿಯ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಎರಡು ಮುಕ್ಕಾಲಿ ಮಂಚ, ಚೌ೦ಡಿ ಮಣೆಮಂಚ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿ, ಜೋಗಿಪುರುಷ ಮರದ ಮೂರ್ತಿ ಹಾಗೂ ಗುರುಕಂಭಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಮತ್ತು ಬಂಟರ ಮರದ ಮೂರ್ತಿ ಹಾಗೂ ಕಾಳಿಯ ಮರದ ಗದ್ದಿಗೆಯಿದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಅವಳಿ ನಾಗ ಸಂಪಿಗೆ ಮರಗಳ ಕಟ್ಟೆಯಿದೆ.

ಬಾಲಕೃಷ್ಣ ಪೂಜಾರಿ

ನಿತ್ಯಾನಂದ ಪೂಜಾರಿ

2014ರಿಂದ ಬಾಲಕೃಷ್ಣ ಪೂಜಾರಿ (47 ವರ್ಷ) ಹಾಗೂ 2024ರಿಂದ ನಿತ್ಯಾನಂದ ಪೂಜಾರಿ (40 ವರ್ಷ) ಇವರುಗಳು ಇಲ್ಲಿ ಅರ್ಚಕರಾಗಿದ್ದಾರೆ. ಇವರ ಮೊದಲು ಕೃಷ್ಣ ಪೂಜಾರಿ (ಮಾವ) ಗಿರಿಯ ಪೂಜಾರಿ, (ಅಜ್ಜ) ಇಲ್ಲಿಯ ಅರ್ಚಕರಾಗಿದ್ದರು.

ಬಸವ ಪೂಜಾರಿ (60 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿ. ಹಿಂದೆ ಗಿರಿಯ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯೂ ಆಗಿದ್ದರು. ಪಾರ್ವತಿ ಪೂಜಾರಿ ಎಂಬ ಮಹಿಳೆಯೊಬ್ಬರು ಇಲ್ಲಿ ಮೈಂದಾಳ್ತಿಯ ದರ್ಶನ ಸೇವೆಯ ಪಾತ್ರಿಯಾಗಿದ್ದಾರೆ.
ರಾಮಣ್ಣ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ. ಹಿಂದೆ ಪಟೇಲ್ ಶೀನಪ್ಪ ಶೆಟ್ಟಿಯವರು ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಕಾಯಿದೆ ಪೂಜೆ, ಅಗೆಲು ಸೇವೆ, ಪ್ರತೀ ವರ್ಷವೂ ಏಪ್ರಿಲ್ 10ಕ್ಕೆ ಹಾಲು ಹಬ್ಬ, ಗೆಂಡ ಸೇವೆ, ದರ್ಶನ, ತುಲಾಭಾರ ಸೇವೆಗಳು ನಡೆಯುತ್ತವೆ.
ಶೀರೂರು, ಹೊರಲಾಳಿ, ಭಾಗದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರವರ ವಂತಿಗೆ, ಸಹಾಯ ಧನಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಯು ಮಾರ್ಚ 2024ರಲ್ಲಿ ಜೀರ್ಣೋದ್ಧಾರಗೊಂಡಿದೆ. ಜೀರ್ಣೋದ್ಧಾರಕ್ಕೆ ಮೊದಲು, 2003 ರಲ್ಲಿ ಬೈದಶ್ರೀಯಿಂದ ಪ್ರಕಾಶಿತ ಪುಸ್ತಕ “ಬೈದ ದರ್ಶನ” ಪುಸ್ತಕದಲ್ಲಿ ಪ್ರಕಟಿತ, ಈ ಗರೋಡಿಯ ಛಾಯಾಚಿತ್ರ ಇಲ್ಲಿದೆ.
ದಿನೇಶ ಮಡಿವಾಳ ಶೀರೂರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ವಾದ್ಯದವರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಶೀರೂರು ಹೊಳೆಬಾಗಿಲು,
33ನೇ ಶೀರೂರು ಮುದ್ದುಮನೆ,
ಮುದ್ದುಮನೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576223.

ಅರ್ಚಕರು:

ಬಾಲಕೃಷ್ಣ ಪೂಜಾರಿ – 9901446734
ನಿತ್ಯಾನಂದ ಪೂಜಾರಿ – 9900469117

ಮಾಹಿತಿ ನೀಡಿದವರು :

ನಿತ್ಯಾನಂದ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi, Hiliyana

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಹಿಲಿಯಾಣ

ಉಡುಪಿಯಿಂದ ಬಾರ್ಕೂರು – ಸೈಬ್ರಕಟೆ – ಶೀರೂರು ಮೂರುಕೈ – ವಂಡಾರು – ಮಾವಿನಕಟ್ಟೆ – ಆವರ್ಸೆಯಿಂದ ಮುಖ್ಯರಸ್ತೆಯಲ್ಲಿ ಹಿಲಿಯಾಣ ತಲುಪಿ ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ಸುಮಾರು 1.2ಕಿ.ಮೀ. ಒಳಗೆ ಹೋದರೆ ಹಿಲಿಯಾಣ ಗರೋಡಿ ಸಿಗುವುದು.
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಮುಖ್ಯದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು, ಷಢಾಧಾರ ಪ್ರತಿಷ್ಠೆಯಲ್ಲಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಗುಂಡದ ಕೆಳಗಿನ ಅಂತಸ್ತಿನಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ವಿಷ್ಣುವಿಗೂ ಮೇಲಂತಸ್ತಿನಲ್ಲಿ ಮಹೇಶ್ವರರಿಗೂ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಕುಜುಂಬ ಕಾಂಜವ ಹಾಗೂ ಮೂವರು ಮಕ್ಕಳ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ನಿಗಳದ ಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ಬಲ್ಲಾಳರ, ಬ್ರಾಂಚ ಹಾಗೂ ದೇಯಿಬೈದೆತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಮೈಂದಾಳ್ತಿ ಮತ್ತು ಮಗು, ಜುಮಾದಿ, ಧೂಮಾವತಿ, ಜೋಗಿಪುರುಷ, ಹಾಗೂ ಚಿಕ್ಕುವಿನ ಮರದ ಮೂರ್ತಿ ಇದೆ.
ಗರೋಡಿಯ ಬಾಗಿಲ ಪಕ್ಕದಲ್ಲಿ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯನ ಮರದ ಮೂರ್ತಿಯಿದೆ.
ಇನ್ನೊಂದು ಗುಡಿ “ಭೂತ ಗರಡಿ” ಯಲ್ಲಿ ಪಂಜುರ್ಲಿ, ಹೈಗುಳಿ, ನಂದಿಕೇಶ್ವರ, ಹುಲಿರಾಯನ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲುಗಳಿವೆ. ಗರೋಡಿ ಪರಿಸರದಲ್ಲಿರುವ ನಾಗಬನದಲ್ಲಿ ನಾಗ ಮತ್ತು ಬೊಬ್ಬರ್ಯನ ಸಾನಿಧ್ಯಗಳಿವೆ.
ಗರೋಡಿಯ ಪ್ರಾಂಗಣದಲ್ಲಿ ವೇದಿಕೆ ಹಾಗು ಭೋಜನ ಶಾಲೆಗಳಿದ್ದು, ಶುಭ ಕಾರ್ಯಕ್ರಮಗಳು ನಡೆಯುತ್ತವೆ.
ಗರೋಡಿಯಿಂದ ಕಾಣುತ್ತಿರುವ ಗರೋಡಿಮನೆಯ ನೋಟ.

ಕರುಣಾಕರ ಪೂಜಾರಿ

1986ರಿಂದ ಕರುಣಾಕರ ಪೂಜಾರಿಯವರು (77 ವರ್ಷ) ಗರೋಡಿಯ ಅರ್ಚಕರಾಗಿರುವರು. ಇವರ ಮೊದಲು ಶೀನ ಪೂಜಾರಿ, ಬಡಿಯ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಕೇಶವ ಪೂಜಾರಿ (40 ವರ್ಷ) ಹಾಗೂ ಶಂಕರ ಪೂಜಾರಿ (50 ವರ್ಷ) ಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಶೇಷ ಪೂಜಾರಿ ಹಾಗೂ ನಂದಿ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಹಿಲಿಯಾಣ ದೊಡ್ಮನೆ ತಾರಾನಾಥ ಶೆಟ್ಟಿಯವರು ಗರೋಡಿಯ ಮುಕ್ಕಾಲಿ, ವೈ. ಕರುಣಾಕರ ಶೆಟ್ಟಿ ಯರುಕೋಣ್ ಇವರು ಗರೋಡಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ 6ನೇ ತಾರೀಖಿನಂದು ಹಾಲುಹಬ್ಬ, ದೀಪೋತ್ಸವ, ಅಗೆಲು ಸೇವೆ, ತುಲಾಭಾರಸೇವೆ, ತುಳಸೀಪೂಜೆ ನಡೆಯುತ್ತದೆ. ಮಾರ್ಚ ತಿಂಗಳಲ್ಲಿ ಅಗೆಲು ಸೇವೆ, ನೇಮೋತ್ಸವ, ಶಿವರಾಯ ಕೋಲ, ಗೆಂಡ ಸೇವೆ, ಮಾರಿಹಬ್ಬ ನಡೆಯುತ್ತದೆ.
ಹಿಲಿಯಾಣ, ಹಳ್ಳಿ, ಹೆಸ್ಕುಂದ, ಆವರ್ಸೆಯ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸುಮಾರು 1ಎಕರೆ 25ಸೆಂಟ್ಸ ಜಾಗವಿದ್ದು ಗರೋಡಿಯ ಹೆಸರಿನಲ್ಲಿದೆ.
1961 ರಲ್ಲಿ ಮರ ಬಿದ್ದು ಶಿಥಿಲಗೊಂಡ ಗರೋಡಿಯನ್ನು 1986ರಲ್ಲಿ ಬಾಲಾಲಯಕ್ಕೆ ಸ್ಥಳಾಂತರಗೊಳಿಸಲಾಯಿತು. 2013 ರಲ್ಲಿ ಬಾಲಾಲಯದಲ್ಲಿದ್ದ ಗರೋಡಿಯನ್ನು ಪುನ: ತಂದು ಸ್ಥಾಪಿಸಲಾಯಿತು.

2003 ರಲ್ಲಿ ಬೈದಶ್ರೀಯಿಂದ ಪ್ರಕಾಶಿತ ಪುಸ್ತಕ "ಬೈದ ದರ್ಶನ" ಪುಸ್ತಕದಲ್ಲಿ ಬಾಲಾಲಯದಲ್ಲಿದ್ದ ಹಿಲಿಯಾಣ ಗರೋಡಿಯ ಛಾಯಾಚಿತ್ರ

ನರಸಿಂಹ ಪರವ ಚೇರ್ಕಾಡಿ ಇವರು ಬೈದರ ನೇಮದ ನೃತ್ಯವಿಶಾರದರಾಗಿ, ಗಿರಿಜ ಮಡಿವಾಳ್ತಿಯ ಮಕ್ಕಳು ಮಡಿವಾಳರಾಗಿ, ರಾಜು ಮತ್ತು ಬಳಗದವರು ವಾಧ್ಯದವರಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹಿಲಿಯಾಣ,
ಹಿಲಿಯಾಣ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ – 576212.

ಅರ್ಚಕರು:

ಕರುಣಾಕರ ಪೂಜಾರಿ – 9731106663

ಮಾಹಿತಿ ನೀಡಿದವರು :

ಕರುಣಾಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi, Manikallu (Billadi)

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಣಿಕಲ್ಲು (ಬಿಲ್ಲಾಡಿ)

ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆಯಲ್ಲಿ ಬಲಕ್ಕೆ ತಿರುಗಿ ಶೀರೂರು ಮೂರುಕೈ ಎಂಬಲ್ಲಿ ಎಡಕ್ಕೆ ತಿರುಗಿ ಸುಮಾರು 1ಕಿ.ಮೀ. ಒಳಗೆ ಸಾಗಿದರೆ ಶ್ರೀ ಅರ್ಭಕ ಧಾರಕೇಶ್ವರಿ ದೇವಸ್ಥಾನದ ಹತ್ತಿರದಲ್ಲಿದೆ ಈ ಗರೋಡಿ.
ಇದೊಂದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದೆ. ಇಲ್ಲಿ ಷಢಾಧಾರ ಪ್ರತಿಷ್ಠೆಯಾಗಿಲ್ಲ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಬಿಲ್ಲಾಡಿಯ ಚಿತ್ತಾರಿಗೆ ಬಂದಾಗ ಅಲ್ಲಿ ಮೊದಲೇ ನೆಲೆನಿಂತಿದ್ದ ಹಲವಾರು ಸ್ಥಳೀಯ ಶಕ್ತಿ, ದೈವ ದೇವರುಗಳಿರುವುದರಿಂದ ಮುಂದೆ ಸಾಗಿ ಮಣಿಕಲ್ಲು ಅರ್ಬಕ ಧಾರಕೇಶ್ವರಿಯ ಆಶ್ರಯ ಪಡೆದು ಮಣಿಕಲ್ಲಿನ ಈ ಪ್ರದೇಶದಲ್ಲಿ ನೆಲೆ ನಿಂತರಂತೆ. ಆ ಸಮಯದಲ್ಲಿ ಗರೋಡಿ ಮನೆಯ ಹಿರಿಯ ಶೀನ ಪೂಜಾರಿಯವರ ಮುತ್ತಜ್ಜನ ಕನಸಿನಲ್ಲಿ ಈರ್ವರು ತರುಣರು ಬಂದು ಮಣಿಕಲ್ಲು ಪ್ರದೇಶದಲ್ಲಿ ನಿಂತಿದ್ದ ಅನುಭವವಾಗಿ ಮರುದಿನ ಆ ಸ್ಥಳದಲ್ಲಿ ಪರೀಕ್ಷಿಸಿದಾಗ ಕೋಟಿಚೆನ್ನಯರ ಪಾದದ ಗುರುತು ಮತ್ತು ಸುರಿಯ ಊರಿದ ಗುರುತು ತೋರಿ ಬಂತು. ಆ ಸಮಾಚಾರವನ್ನು ಸ್ಥಳದ ಮಾಲಿಕರಾಗಿದ್ದ ಜೈನ ಬಲ್ಲಾಳ ಸೆಟ್ಟಿಯ ಬಳಿ ತಿಳಿಸಿದಾಗ ಅವರು ಈ ವಿಚಾರ ಸತ್ಯವಾದರೆ ತನಗೆ ಕೂಡಾ ಕನಸಿನಲ್ಲಿ ಬೈದರು ತೋರಿ ಬರಲಿ ಎಂದರಂತೆ. ಆ ಪ್ರಕಾರ ಕೋಟಿಚೆನ್ನಯರು ಬಲ್ಲಾಳ ಸೆಟ್ಟಿಯ ಕನಸಿನಲ್ಲಿ ತೋರಿದಾಗ ಅವರಿಗೆ ವಿಶ್ವಾಸ ಮೂಡಿ ಗರಡಿ ಕಟ್ಟಲು ಒಪ್ಪಿಕೊಂಡರು. ನಂತರ ಸೀನ ಪೂಜಾರಿಯವರ ಮನೆತನದ ಹಿರಿಯರಾದ ಊರವರ ಸಹಕಾರದಿಂದ ಗರೋಡಿ ಕಟ್ಟಿದರಂತೆ. ಪೂಜೆ ಯಾವ ರೀತಿ ಆಚರಿಸುವುದೆಂದು ಯೋಚಿಸುತ್ತಿದ್ದಾಗ ರಾತ್ರಿ ಪೂಜಾರಿಗೆ ಕನಸಿನಲ್ಲಿ ಕೋಟಿಚೆನ್ನಯರು ಬಂದು ಒಂದು ಶ್ರೀ ಗಂಧದ ತುಂಡು ಐದು ಅಶ್ವತ್ಥದ ಎಲೆ, ಅಡಿಕೆ ಇವೆಲ್ಲವನ್ನು ಸ್ಥಳೀಯ ಹಲಸಿನ ಮರದಲ್ಲಿ ಕಟ್ಟಿ ಅದೇ ಹಲಸಿನ ಮರದಿಂದ ತಮ್ಮ ಪಾಪೆ ತಯಾರಿಸ ಬೇಕೆಂದು ಅಪ್ಪಣೆಯಾಯಿತು.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರು ಅಂತಸ್ತಿನ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರ ಇಬ್ಬರು ಮಕ್ಕಳ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಬಲ್ಲಾಳರ ಮಣೆ ಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಹುಲಿದೇವರು, ಮರದ ಗದ್ದಿಗೆಯಲ್ಲಿ ಪಂಜುರ್ಲಿಯ ಮರದ ಮೂರ್ತಿಗಳಿವೆ.
ಪಕ್ಕದಲ್ಲಿ ಧೂಮಾವತಿ ಹಾಗು ಜೋಗಿಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಹಿಂಬದಿಯಲ್ಲಿರುವ ಗುಡಿಯಲ್ಲಿ ಮೈಂದಾಳತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನಲ್ಲಿರುವ ಗುಡಿಯಲ್ಲಿ ಶಿವರಾಯನ ಮರದ ಮೂರ್ತಿಯಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲು ಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಆವರದಲ್ಲಿ ತುಳಸೀಕಟ್ಟೆ, ಬಲಿಕಲ್ಲು ಇದೆ.

ಕೊಲ್ಲ ಪೂಜಾರಿ

ಗರೋಡಿ ಮನೆ ಕೊಲ್ಲ ಪೂಜಾರಿ (55 ವರ್ಷ ಪ್ರಾಯ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಬಸವ ಪೂಜಾರಿ, ವೆಂಕಟ ಪೂಜಾರಿಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೋಟಿ ಪೂಜಾರಿ, ಕೊಲ್ಲ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.

ಬಿಲ್ಲಾಡಿ ಮನೆ ಶಂಕರ ಶೆಟ್ಟಿ

ಬಿಲ್ಲಾಡಿ ಮನೆ ಶಂಕರ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ರಾಧಾಕೃಷ್ಣ ಶೆಟ್ಟಿಯವರು ಸಹ ಮೊಕ್ತೇಸರರಾಗಿದ್ದಾರೆ. ಹಿಂದೆ ಅಂತಣ್ಣ ಶೆಟ್ಟಿ ಹಾಗೂ ಬಿಲ್ಲಾಡಿ ಜಯರಾಮ ಶೆಟ್ಟಿ ಇವರು ಇಲ್ಲಿಯ ಸಹ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಮಾರ್ಚ ತಿಂಗಳ 26ನೇ ತಾರೀಖಿನಂದು ಹಾಲುಹಬ್ಬ, ದರ್ಶನ ಸೇವೆ ನಡೆಯುತ್ತದೆ.
ಬಿಲ್ಲಾಡಿ, ಶೀರೂರು, ನೈಲಾಡಿ, ಹೆಗ್ಗುಂಜೆ, ವಂಡಾರ್, ಆವರ್ಸೆ ಊರ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದಾರೆ. ಈ ಗರೋಡಿಯಲ್ಲಿ ಹೆರಿಗೆಯಾದ ನಂತರ ತಿಂಗಳು ಮಾಡುವ ಕ್ರಮ ಇದೆ. ಊರವರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಯು 2001 ರಲ್ಲಿ ಜೀಣೋದ್ಧಾರಗೊಂಡಿದೆ.
ಬಾಲಯ್ಯ ಮಡಿವಾಳ ಮಣಿಕಲ್ಲು ಇವರು ಮಡಿವಾಳರಾಗಿ, ರಾಜು ದೇವಾಡಿಗ ಮಣಿಕಲ್ಲು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಣಿಕಲ್ಲು, ಬಿಲ್ಲಾಡಿ ಗ್ರಾಮ, ಜಾನುವಾರುಕಟ್ಟೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576223.

ಅರ್ಚಕರು:

ಕೊಲ್ಲ ಪೂಜಾರಿ – 8105379877

ಮೊಕ್ತೇಸರರು:

ಬಿಲ್ಲಾಡಿ ಮನೆ ಶಂಕರ ಶೆಟ್ಟಿ – 9632820976

ಮಾಹಿತಿ ನೀಡಿದವರು :

ಬಿಲ್ಲಾಡಿ ಮನೆ ಶಂಕರ ಶೆಟ್ಟಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahmabanta Shivaraya Garodi, Kolkebailu

ಶ್ರೀ ಬ್ರಹ್ಮಬಂಟ ಶಿವರಾಯ ಗರೋಡಿ, ಕೊಳ್ಕೆಬೈಲು

ಉಡುಪಿಯಿಂದ ಬಾರ್ಕೂರು – ಯಡ್ತಾಡಿ – ಸೈಬ್ರಕಟ್ಟೆ – ಅಲ್ಲಿಂದ ಮುಂದೆ ಶಿರಿಯಾರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 2ಕಿ.ಮೀ. ನಂತರ ಕುದುರುಕಟ್ಟೆ ಬಸ್ ನಿಲ್ದಾಣದ ಹತ್ತಿರ ಎಡಕ್ಕೆ ತಿರುಗಿ ಸುಮಾರು ಮುಕ್ಕಾಲು ಕಿ. ಮೀ. ಸಾಗಿದರೆ ಕೊಳ್ಕೆಬೈಲು ಗರೋಡಿ ಸಿಗುವುದು.
ಗರೋಡಿಯ ಮುಖ್ಯದ್ವಾರವು ಪೂರ್ವಾಭಿಮುಖವಾಗಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಇದು ಆಯದ ಗರೋಡಿಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರ ಇಬ್ಬರು ಮಕ್ಕಳ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಒಂದು ಮಗುವಿನ ಮರದ ಮೂರ್ತಿ, ಮೈಸಂದಾಯ ದೈವದ ಪಂಚಲೋಹದ ಮುಖ ಮೂರ್ತಿ ಹಾಗೂ ಬಲ್ಲಾಳರ ಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮರದ ಗುಡಿಯಲ್ಲಿ ಪಂಜುರ್ಲಿಯ ಮರದ ಮೂರ್ತಿ, ದೂಮಾವತಿಯ ಮಣೆಮಂಚ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರು ಜೋಗಿಪುರುಷ ಹಾಗೂ ಚೌಂಡೇಶ್ವರ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ. ಗುಡಿಯ ಹೊರಗೆ ಹೈಗುಳಿ ದೈವದ ಮರದ ಗದ್ದಿಗೆಯಿದೆ. ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ, ತುಳಸೀಕಟ್ಟೆ, ಕೃತಿಮಗಣ ಬೋಗಲ್ಲು(ಬಲಿಕಲ್ಲು)ಗಳಿವೆ.

ಗಿರಿಯ ಪೂಜಾರಿ

ಗರೋಡಿಮನೆ ಗಿರಿಯ ಪೂಜಾರಿ(83 ವರ್ಷ) ಇವರು ಈ ಗರೋಡಿಯ ಅರ್ಚಕರಾಗಿದ್ದಾರೆ. ರಾಘವೇಂದ್ರ ಪೂಜಾರಿ ಮತ್ತು ಕುಶಲ ಪೂಜಾರಿಯವರು ಇಲ್ಲಿಯ ಸಹ ಅರ್ಚಕರು. ಗಿರಿಯ ಪೂಜಾರಿಯವರ ಮೊದಲು ಪಂಜು ಪೂಜಾರಿ, ಅಣ್ಣಪ್ಪ ಪೂಜಾರಿ, ಕರಿಯ ಪೂಜಾರಿ ಮೊದಲಾದ ಹಿರಿಯರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಸೋಮ ಪೂಜಾರಿ ಮತ್ತು ಸುಕ್ರ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಬೋಳು ಪೂಜಾರಿ, ಕೊರಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.

ಶಿರಿಯಾರ ರಾಮಣ್ಣ ಹೆಗ್ಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದವರು. ನಡುಮನೆ ರವೀಂದ್ರ ಶೆಟ್ಟಿಯವರು, ಹೊಸಮನೆ ಬೀನಾ ಆರ್.ಶೆಟ್ಟಿ, ಹೊಸಮನೆ ದಿವಾಕರ ಶೆಟ್ಟಿ, ಮೂಡುಹದ್ದು ಮನೆ ಕಿಶನ್ ಹೆಗ್ಡೆ ಇವರುಗಳು ರಾಮಣ್ಣ ಹೆಗ್ಡೆಯವರ ವಂಶಸ್ತರು (ಮತ್ತು ಉತ್ತರಾಧಿಕಾರಿಗಳು).

ರವೀಂದ್ರನಾಥ ಶೆಟ್ಟಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ರವೀಂದ್ರನಾಥ ಶೆಟ್ಟಿ ಅಧ್ಯಕ್ಷರಾಗಿಯೂ, ಶೇಖರ ಸುವರ್ಣ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ ಕದಿರುಕಟ್ಟುವುದು, ಶಿವರಾಯನಿಗೆ ಕುರಿ ಸೇವೆ, ಡಿಸೆಂಬರ್ ತಿಂಗಳ ಮೊದಲವಾರ ಅಗೆಲು ಸೇವೆ, ಮರುದಿನ ಹಾಲುಹಬ್ಬ, ತುಲಾಭಾರ ಸೇವೆ ನಡೆಯುತ್ತದೆ. ಗರೋಡಿಯ ಯಕ್ಷಗಾನ ಕಲಾಸಂಘ ದಿಂದ ಯಕ್ಷಗಾನ ನಡೆಯುತ್ತದೆ. ನಾರಾಯಣಗುರು ಜಯಂತಿಯನ್ನು ಗರೋಡಿಯಲ್ಲಿ ವಿಶೇಷವಾಗಿ ಆಚರಿಸುತ್ತಾರೆ.
ಶಿರಿಯಾರ ಗ್ರಾಮದ ಬಡಾಕೆರೆ, ಕಲ್ಬೆಟ್ಟು, ಕಲ್ಲಾಡಿ, ಪಡುಮುಂಡು, ಬಂಟಾಡಿ, ಕೊಡ್ಲಬೈಲು ಪ್ರದೇಶದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವಡೆಗಳನ್ನು ಸಲ್ಲಿಸುತ್ತಾರೆ. ಊರಜನರ ವರಡ ವಂತಿಗೆ ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
27-04-1990, 10-07-2003 ಹಾಗೂ 2020ನೇ ಇಸವಿಯಲ್ಲಿ ಗರೋಡಿಯ ಜೀಣೋದ್ಧಾರವಾಗಿದೆ.
ಗರೋಡಿಯಲ್ಲಿರುವ ಶ್ರೀ ಬ್ರಹ್ಮಬಂಟ ಶಿವರಾಯ ಯಕ್ಷಗಾನ ಕಲಾ ಸಂಘ ಕಳೆದ 35 ವರ್ಷಗಳಿಂದ ಇಲ್ಲಿ ಹಾಲುಹಬ್ಬದಂದು ಯಕ್ಷಗಾನ ಬಯಲಾಟ ನಡೆಸುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬಂಟ ಶಿವರಾಯ ಗರೋಡಿ, ಕೊಳ್ಕೆಬೈಲು,
ಶಿರಿಯಾರ ಗ್ರಾಮ, ಕೊಳ್ಕೆಬೈಲು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.

ಅರ್ಚಕರು:

ಗಿರಿಯ ಪೂಜಾರಿ – 9008389120

ದರ್ಶನ ಪಾತ್ರಿಗಳು:

ಸೋಮ ಪೂಜಾರಿ – 99001001341,
ಸುಕ್ರ ಪೂಜಾರಿ – 9982915394.

ಆಡಳಿತ ಸಮಿತಿ:

ಅಧ್ಯಕ್ಷರು – ರವೀಂದ್ರನಾಥ ಶೆಟ್ಟಿ – 9741968860,
ಕಾರ್ಯದರ್ಶಿ: ಶೇಖರ ಸುವರ್ಣ- 7019674359

ಮಾಹಿತಿ ನೀಡಿದವರು :

ರವೀಂದ್ರನಾಥ ಶೆಟ್ಟಿ,
ಗಿರಿಯ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi, Marali – Nalkuru

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಾರಾಳಿ - ನಾಲ್ಕೂರು

ಉಡುಪಿಯಿಂದ ಕೊಕ್ಕರ್ಣೆ ತಲುಪಿ ಕೊಕ್ಕರ್ಣೆ ಬಸ್ ನಿಲ್ದಾಣದಿಂದ ಕೊಕ್ಕರ್ಣೆ ಮಂದಾರ್ತಿ ರಸ್ತೆಯಲ್ಲಿ ಸುಮಾರು 5ಕಿ.ಮೀ. ದೂರದಲ್ಲಿ ಎಡಕ್ಕೆ ಕೊಕ್ಕರ್ಣೆ – ಮದ್ದೂರು ರಸ್ತೆಗೆ ತಿರುಗಿ ಸುಮಾರು 4.5ಕಿ.ಮೀ. ಸಾಗಿದರೆ ಮಾರಾಳಿ ಮಹಾಗಣಪತಿ ದೇವಸ್ಥಾನದ ಹತ್ತಿರ ಈ ಗರೋಡಿ ಇದೆ.
ಗರೋಡಿಯ ಮುಖ್ಯ ದ್ವಾರವು ಬಡಗು ಮುಖವಾಗಿದ್ದು ಬ್ರಹ್ಮಗುಡಿಯು ಪೂವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಗಿಂಡೆಯಲ್ಲಿ ನೀರಿಟ್ಟು ಆರಾಧನೆಯಿದೆ.
ಗುಂಡದ ಬಲಬದಿಯಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ. ಪಕ್ಕದಲ್ಲಿ ದೇಯಿಬೈದೆತಿ ಮಣೆಮಂಚವಿದೆ. ಗುಂಡದ ಎಡಭಾಗದಲ್ಲಿ ಕುಜುಂಬ ಕಾಂಜವರ ಹಾಗೂ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿಪುರುಷ ಮರದ ಮೂರ್ತಿಯಿದೆ.
ಮೈಂದಾಳ್ತಿ, ಮಗು, ತೊಟ್ಟಿಲು, ಚಿಕ್ಕಮ್ಮನ ಮರದ ಮೂರ್ತಿಗಳಿವೆ, ಹಾಗೂ ಜುಮಾದಿಯ ಮಣೆಮಂಚವಿದೆ.
ಗರೋಡಿಯ ಹೊರಗೆ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ ಹಾಗೂ ಬಲಿಕಲ್ಲುಗಳಿವೆ.
ಗರೋಡಿಯ ಎದುರು ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಗರೋಡಿಯ ಪರಿಸರದಲ್ಲಿ ರಾವುತರ ಗುಡಿ ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನಗಳಿವೆ.

ಕೃಷ್ಣ ಪೂಜಾರಿ

2004 ರಿಂದ ಕೃಷ್ಣ ಪೂಜಾರಿ (40 ವರ್ಷ ಪ್ರಾಯ) ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಹಿರಿಯರಾದ ಬಾಬು ಪೂಜಾರಿ, ಬೋಳು ಪೂಜಾರಿ, ಚೆನ್ನ ಪೂಜಾರಿ ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಚೆನ್ನು ಪೂಜಾರಿ, ನಾರಾಯಣ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ವಿಠಲ ಶೆಟ್ಟಿ ಇವರು ಈ ಗರೋಡಿಯ ಮೊಕ್ತೇಸರರು. (ಮೊಬೈಲ್: 990221148)
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲ್ ಸೇವೆ, ಹಾಲು ಹಬ್ಬ, ಚಿಕ್ಕಮ್ಮದೇವಿಗೆ ಗೆಂಡ ಸೇವೆ ನಡೆಯುವುದು. ಪ್ರತೀ ವರ್ಷ ಮಾರ್ಚ ತಿಂಗಳ 25ನೇ ತಾರೀಖಿಗೆ ಬೈದೇರುಗಳ ನೇಮ, ಶಿವರಾಯ ಕೋಲ, ಮಾಯಂದಾಳ್ತಿ ಕೋಲ ನಡೆಯುತ್ತದೆ.
ನಾಲ್ಕೂರು, ಕಜ್ಕೆ, ಮಿಯಾರು, ಮಾರಾಳಿಯ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಕಾಣಿಕೆ, ವಂತಿಗೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1991ರಲ್ಲಿ ಗರೋಡಿಗೆ ಹಾಗೂ ಮರದ ಮೂರ್ತಿಗಳಿಗೆ ಬಣ್ಣಕೊಟ್ಟು ಗರೋಡಿಯ ಜೀಣೋದ್ಧಾರವಾಗಿದೆ. ಈಗ 2024-25ರಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶಿವರಾಯ ಶಿಲಾಮಯ ಗುಡಿಗಳ ನಿರ್ಮಾಣ ಹಾಗೂ ಹೊಸ ಗುಂಡ, ದೇಯಿಬೈದೆತಿ ಹಾಗೂ ಜುಮಾದಿಯ ಮರದ ಮೂರ್ತಿಗಳ ನಿರ್ಮಾಣದ ಯೋಜನೆಯು ಕಾರ್ಯರೂಪದಲ್ಲಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ಗಣಪ ಮಡಿವಾಳ ಮಾರಾಳಿ ಇವರು ಮಡಿವಾಳರಾಗಿ, ಅಶೋಕ ಸೇರಿಗಾರ ಪಾದೆಮಠ ಇವರು ವಾದ್ಯದವರಾಗಿ, ಚೀಂಕ ಮಾರಾಳಿ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಾರಾಳಿ, ನಾಲ್ಕೂರು,
ನಾಲ್ಕೂರು ಅಂಚೆ,
ಬ್ರಹ್ಮಾವರ ತಾಲೂಕು
ಉಡುಪಿ 576234.

ಅರ್ಚಕರು:

ಕೃಷ್ಣ ಪೂಜಾರಿ – 9880420559

ಮೊಕ್ತೇಸರರು:

ವಿಠಲ ಶೆಟ್ಟಿ – 990221148

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024

Shree Brahma Baidarkala Garodi Padematha, Kenjooru

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪಾದೆಮಠ, ಕೆಂಜೂರು

ಉಡುಪಿಯಿಂದ ಕೊಕ್ಕರ್ಣೆ ತಲುಪಿ, ಕೊಕ್ಕರ್ಣೆ – ಮಂದಾರ್ತಿ ರಸ್ತೆಯಲ್ಲಿ ಕೊಕ್ಕರ್ಣೆ ಬಸ್ಸು ನಿಲ್ದಾಣದಿಂದ ಸುಮಾರು 5ಕಿ.ಮೀ. ದೂರದಲ್ಲಿ ಬೈದೆಬೆಟ್ಟು ಎಂಬಲ್ಲಿ ರಸ್ತೆಯ ಎಡಬದಿಯಲ್ಲಿದೆ ಈ ಗರೋಡಿ.
ಗರೋಡಿಗೆ ಬಡಗು ಮುಖವಾಗಿರುವ ಮುಖ್ಯದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ. ಇಲ್ಲಿ ಷಡಾಧಾರ ಪ್ರತಿಷ್ಟೆ ಇಲ್ಲ. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಈ ಪ್ರದೇಶದ ಜನ ಮೊದಲು ವಡ್ಡಂಬೆಟ್ಟು ಗರೋಡಿಗೆ ಹೋಗುತ್ತಿದ್ದರು. ಒಂದು ಸಂದರ್ಭದಲ್ಲಿ ಪಾದೆಮಠದವರನ್ನು ಬಿಟ್ಟು ವಡ್ಡಂಬೆಟ್ಟು ಗರೋಡಿಯಲ್ಲಿ ಪೂಜೆ ನಡೆಸಿದರೆಂಬ ವಿವಾದದ ಪರಿಣಾಮವಾಗಿ ಈ ಗರೋಡಿ ನಿರ್ಮಾಣವಾಯಿತಂತೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಬ್ರಹ್ಮಗುಂಡದಲ್ಲಿ ಕೆಳಗೆ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ, ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆ. ಮೇಲಿನ ಅಂತಸ್ತಿನಲ್ಲಿ ದೀಪವನ್ನಿಟ್ಟು ಪೂಜಿಸುತ್ತಾರೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ ಹಾಗೂ ಕೋಟಿಬೈದರ ಮರದ ಮೂರ್ತಿಗಳಿವೆ.
ಎಡಭಾಗದಲ್ಲಿ ಚೆನ್ನಯಬೈದರು ಹಾಗೂ ಕುಜುಂಬ ಕಾಂಜವರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹುಲಿಚಾಮುಂಡಿ ದೈವದ ಮಣೆಮಂಚ, ಕೈಯಲ್ಲಿ ಮಗುವನ್ನು ಹಿಡಿದ ಮೈಂದಾಳ್ತಿಯ ಮರದ ಮೂರ್ತಿ, ಚಿಕ್ಕುವಿನ ಮರದ ಮೂರ್ತಿ, ಮೂವರು ಮಕ್ಕಳ ಮರದ ಮೂರ್ತಿ, ಜೋಗಿ ಪುರುಷ ಮರದ ಮೂರ್ತಿ ಹಾಗೂ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿ ಶಿವರಾಯ ಮತ್ತು ಬಂಟರ ಮರದ ಮೂರ್ತಿ ಹಾಗೂ ಪರಿವಾರ ದೈವಗಳ ಮಣೆಮಂಚಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಬಲಿಕಲ್ಲು, ನೇಮ ನಡೆಯುವ ಚಪ್ಪರ, ದೀಪದ ಕಂಬಗಳಿವೆ.

ಮಂಜುನಾಥ ಪೂಜಾರಿ

2014ರಿಂದ ಮಂಜುನಾಥ ಪೂಜಾರಿ(69 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಗೋಪ ಪೂಜಾರಿ, ಸುಬ್ಬ ಪೂಜಾರಿ, ಪರದೇಶಿ ಪೂಜಾರಿ, ಬೆರ್ಮು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಗುಂಡು ಪೂಜಾರಿ ಹಾಗೂ ವಾಸು ಪೂಜಾರಿಯವರು ಈ ಗರೋಡಿಯ ಬೈದರ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ಕೊಂಬ ಪೂಜಾರಿ, ಸುಬ್ಬ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು.
ಸುಧಾಕರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಕೆಂಜೂರು ಮನೆ ಸುಧಾಕರ ಶೆಟ್ಟಿಯವರು ಸಮಿತಿಯ ಅಧ್ಯಕ್ಷರಾಗಿಯೂ ಚಂದ್ರಕಾಂತ ಶ್ಯಾನುಭೋಗ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ನವೆಂಬರ್ ತಿಂಗಳಲ್ಲಿ ಹಾಲುಹಬ್ಬ, ಅಗೆಲು ಸೇವೆ, ಮಾರ್ಚ 26ಕ್ಕೆ ಅಗೆಲು ಸೇವೆ, 27ಕ್ಕೆ ಬೈದೇರುಗಳ ನೇ, ಮಾಯಂದಾಳ್ ಕೋಲ, ಶಿವರಾಯ ಕೋಲ ನಡೆಯುತ್ತದೆ.
ಕೆಂಜೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರವರ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಷ್ಷ ಭರಿಸಲಾಗುತ್ತದೆ.
1981ರಲ್ಲಿ ಹಾಗೂ 2017-18ರಲ್ಲಿ ಗರೋಡಿಯ ಜೀರ್ಣೋದ್ಧಾರವಗಿರುತ್ತದೆ
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ಕುಮಾರ ಮಡಿವಾಳ ಕೆಂಜೂರು ಇವರು ಮಡಿವಾಳರಾಗಿ ಈ ಗರೋಡಿಯ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪಾದೆಮಠ,
ಕೆಂಜೂರು ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು, ಉಡುಪಿ.

ಅರ್ಚಕರು:

ಮಂಜುನಾಥ ಪೂಜಾರಿ – 7259660969

ಮಾಹಿತಿ ನೀಡಿದವರು :

ಮಂಜುನಾಥ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024

Shree Brahma Baidarkala – Shivaraya Parivara Daivagala Garodi, Kukkude – Haradi

ಶ್ರೀ ಬ್ರಹ್ಮಬೈದರ್ಕಳ - ಶಿವರಾಯ ಪರಿವಾರ ದೈವಗಳ ಗರೋಡಿ, ಕುಕ್ಕುಡೆ - ಹಾರಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ದೂಪದಕಟ್ಟೆ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಸುಮಾರು 4.8ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಇದು ಆಯದ ಶಿಲಾಮಯ ಗರೋಡಿಯಾಗಿದ್ದು ಹಂಚಿನ ಮಾಡನ್ನು ಹೊಂದಿದೆ. ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮ ಗುಡಿಯ ದ್ವಾರವು ಬಡಗು ಮುಖವಾಗಿದ್ದು, ಬ್ರಹ್ಮಗುಡಿಗೆ ಬಾಗಿಲು ಅಳವಡಿಸಿರುವುದಿಲ್ಲ. ಷಢಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚ ಹೊಂದಿದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಕುದುರೆಯ ಮೇಲೆ ಕುಳಿತ ಗಾಳಿದೇವರ ಪಂಚಲೋಹದ ಬೆಳ್ಳಿಯ ಕವಚ ಹೊಂದಿದ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮಣೆಮಂಚದಲ್ಲಿ ಪಂಜುರ್ಲಿಯ ಪಂಚಲೋಹದ ಬೆಳ್ಳಿ ಕವಚ ಹೊಂದಿದ ಮೂರ್ತಿಯಿದೆ. ಪಕ್ಕದಲ್ಲಿ ಚೌಂಡಿಯ ಮಣೆಮಂಚ, ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಯಿದೆ. ಬ್ರಹ್ಮಗುಡಿಯ ಬಲಭಾಗದಲ್ಲಿ ಜುಮಾದಿ ಹಾಗೂ ಬಂಟರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ಮಣೆಮಂಚವಿದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ಮಣೆಮಂಚವಿದೆ.
ಗರೋಡಿಯ ಎದುರಿನ ಗುಡಿಯ ಗುಡಿಯಲ್ಲಿ ಶಿವರಾಯ, ಬಂಟ ಹಾಗೂ ಕಾಳಿಯ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ ಗುಡಿ, ನೆಲ್ಲಿಕಾಯಿ ಮರದ ಕಟ್ಡೆ, ಬಲಿಕಲ್ಲುಗಳಿವೆ.
ಗರೋಡಿಯ ಪರಿಸರದಲ್ಲಿ ನಾಗಬನ, ನೇಮದ ಚಪ್ಪರ, ಮಲಸಾವರ ಮತ್ತು ಪರಿವಾರ ದೈವಗಳ ಗುಡಿಯಿದೆ. ನಾಗಬನದಲ್ಲಿ ರೆಂಜದ ಮರ, ಗರೋಡಿಯ ಎದುರಿಗೆ ಅಶ್ವಸ್ಥ ಮರದ ಕಟ್ಟೆ, ಅತ್ತಿಮರದ ಕಟ್ಟೆ, ಜಾರಿಗೆ ಮರಗಳಿವೆ.

ನಾರಾಯಣ ಪೂಜಾರಿ

ಶೇಖರ ಪೂಜಾರಿ

2007 ರಿಂದ ನಾರಾಯಣ ಪೂಜಾರಿ (72 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. 1982 ರಿಂದ ಶೇಖರ ಪೂಜಾರಿ (57 ವರ್ಷ) ಹಾಗೂ ಸುಶಾಂತ ಪೂಜಾರಿ (30 ವರ್ಷ) ಇವರುಗಳು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮೊದಲು ಹಿರಿಯರಾದ ಮಂಜಯ್ಯ ಪೂಜಾರಿ, ಅಣ್ಣಯ್ಯ ಪೂಜಾರಿ, ತೌಡ ಪೂಜಾರಿ, ಸೋಮ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು. ತೌಡ ಪೂಜಾರಿ ಹಾಗೂ ಸೋಮ ಪೂಜಾರಿಯವರ ಕಾಲದಲ್ಲಿ ಈ ಗರೋಡಿಯ ನಿರ್ಮಾಣವಾಯಿತಂತೆ.
2020 ರಿಂದ ಸತೀಷ್ ಪೂಜಾರಿ (38 ವರ್ಷ) ಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಹಿಂದೆ ಗೋವಿಂದ ಪೂಜಾರಿ, ಅಂಗರ ಪೂಜಾರಿ, ಬಾಬು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಕುಕ್ಕುಡೆ ಮನೆ ಜಗದೀಶ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಇವರ ಮೊದಲು ಶ್ರೀಧರ ಶೆಟ್ಟಿ, ಶಿವರಾಮ ಹೆಗ್ಡೆ, ನಂದ್ಯಪ್ಪ ಶೆಟ್ಟಿ, ನಾರಾಯಣ ಶೆಟ್ಟಿ, ರಾಮಣ್ಣ ಶೆಟ್ಟಿ ಇವರುಗಳು ಇಲ್ಲಿ ಮೊಕ್ತೇಸರರಾಗಿದ್ದರು. ರಾಮಣ್ಣ ಶೆಟ್ಟಿಯವರ ಕಾಲದಲ್ಲಿ ಈ ಗರೋಡಿ ಸ್ಥಾಪನೆಯಾಯಿತಂತೆ.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಸುರೇಶ ಪೂಜಾರಿಯವರು ಅಧ್ಯಕ್ಷರಾಗಿಯೂ, ಉಮೇಶ ಪೂಜಾರಿಯವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ವಾರದ ಎಡರು ದಿನ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಪಸರಣೆ ಪೂಜೆ, ಶಿವರಾಯನಿಗೆ ಹರಕೆಯ ಕುರಿ ಕೋಳಿ ಸೇವೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲು ಹಬ್ಬ, ತುಲಾಭಾರ ಸೇವೆ, ದರ್ಶನ , ಸುಗ್ಗಿ ತಿಂಗಳಲ್ಲಿ 10ನೇ ದಿನ ಅಗೆಲು, ದರ್ಶನ ಸೇವೆ, 11ನೇ ದಿನ ನೇಮ, ಜೋಗಿಪುರುಷ, ಮಾಯಂದಾಲ್ ಕೋಲ, ಶಿವರಾಯ ಕೋಲ ನಡೆಯುತ್ತದೆ.
ಮೂಡು ಕುಕ್ಕುಡೆ, ಪಡು ಕುಕ್ಕುಡೆ, ಕುಕ್ಕುಡೆ, ಹಾರಾಡಿ, ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವರಡ, ವಂತಿಗೆಯಿAದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತಿದೆ.
ಗರೋಡಿಗೆ 26 ಸೆಂಟ್ಸ ಜಾಗವಿದೆ. 2000 ನೇ ಇಸವಿಯಲ್ಲಿ ಜೀರ್ಣೋದ್ದಾರ ಗೊಂಡಿದ್ದ ಗರೋಡಿಯು 2014ರಲ್ಲಿ ಜೀರ್ಣೋದ್ದಾರಗೊಂಡು ಶಿಲಾಮಯವಾಗಿ ಮೂಡಿ ಬಂದಿದೆ.
ಸಂತು ಪರವ ಬೈಲೂರು ಮತ್ತು ಸಂಘಡಿಗರು ಇಲ್ಲಿಯ ನೃತ್ಯವಿಶಾದರಾಗಿ, ಬಾಲಕೃಷ್ಣ ಮಡಿವಾಳ ಹಾರಾಡಿ ಮಡಿವಾಳರಾಗಿ, ರವಿ ಸೇರಿಗಾರ ಆರೂರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ – ಶಿವರಾಯ ಪರಿವಾರ ದೈವಗಳ ಗರೋಡಿ,
ಕುಕ್ಕುಡೆ – ಹಾರಾಡಿ
ಬ್ರಹ್ಮಾವರ ತಾಲೂಕು
ಉಡುಪಿ ಜಿಲ್ಲೆ – 576213.

ಅರ್ಚಕರು:

ಶೇಖರ ಪೂಜಾರಿ – 9481847573
ಸುಶಾಂತ ಪೂಜಾರಿ – 9902560499

ಮೊಕ್ತೇಸರರು:

ಜಗದೀಶ ಶೆಟ್ಟಿ – 9902280701

ಆಡಳಿತ ಸಮಿತಿಯ ಅಧ್ಯಕ್ಷರು:

ಸುರೇಶ ಪೂಜಾರಿ – 9880605713.

ಮಾಹಿತಿ ನೀಡಿದವರು :

ಶೇಖರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Shivaraya Parivara Garodi, Haradi, Bokkapatna, Honnala

ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಪರಿವಾರ ಗರೋಡಿ ಹಾರಾಡಿ, ಬೊಕ್ಕಪಟ್ನ ಹೊನ್ನಾಳ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66ರಲ್ಲಿ ಬ್ರಹ್ಮಾವರಕ್ಕೆ ಮೊದಲು ದೂಪದಕಟ್ಟೆ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಹೊನ್ನಾಳಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 4.1ಕಿ.ಮೀ ದೂರದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮ ಗುಡಿಯು ಬಡಗು ಮುಖವಾಗಿದೆ. ಇಲ್ಲಿ ಷಢಾಧಾರ ಪ್ರತಿಷ್ಠೆಯಾಗಿಲ್ಲ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ನಾಗ ಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚ ಹಾಗೂ ಮುಖಕ್ಕೆ ಬಂಗಾರದ ಕವಚವಿರುವ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುದುರೆಯ ಮೇಲೆ ಕುಳಿತ ಒಕ್ಕು ಬಲ್ಲಾಳ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಜಾರಂದಾಯ ಹಾಗೂ ಕುಕ್ಕಿನಂತಾಯ ದೈವಗಳ ಮಣೆಮಂಚಗಳಿವೆ. ಎಡಭಾಗದಲ್ಲಿ ಪಂಜುರ್ಲಿಯ ಮಣೆ ಮಂಚ, ಜುಮಾದಿ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ದೈವದ ಮಣೆಮಂಚದಲ್ಲಿ ಪಂಚಲೋಹದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯನ ಮೂರ್ತಿ ಇದೆ. ಪಕ್ಕದಲ್ಲಿಯೇ ಹಳೆಯ ಶಿಲಾಶಾಸನವೊಂದಿದೆ.
ಗರೋಡಿಯ ಎದುರಿನ ಶಿವರಾಯ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ.
ಗರೋಡಿಯ ಬಲಭಾಗದಲ್ಲಿರುವ ಇನ್ನೊಂದು ಗುಡಿಯಲ್ಲಿ ವರ್ತೆ, ಪಂಜುರ್ಲಿ, ಹಾಗೂ ಬೈಕಾಡ್ತಿ ದೈವಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ ಗುಡಿ, ನೆಲ್ಲಿಕಾಯಿ ಮರದ ಕಟ್ಡೆ, ಬಲಿಕಲ್ಲುಗಳಿವೆ.
ಗರೋಡಿಯ ಹೊರ ಭಾಗದಲ್ಲಿ ತನ್ನಮಾನಿಗ ದೈವದ ಕಲ್ಲು ಇದೆ.

ಸದಾಶಿವ ಪೂಜಾರಿ

2021ರಿಂದ ಸದಾಶಿವ ಪೂಜಾರಿ (52 ವರ್ಷ) ಯವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ರಾಮ ಪೂಜಾರಿ, ಜಬ್ಬ ಪೂಜಾರಿ, ಗೋವಿಂದ ಪೂಜಾರಿಯವರು ಇಲ್ಲಿಯ ಅರ್ಚಕ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕುಂರ್ಬಿಲ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಯಾಗಿದ್ದರು.
ನಾರಾಯಣ ಶೆಟ್ಟಿ ಪಡು ಹಾರಾಡಿ ಇವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಉದಯ ಪೂಜಾರಿಯವರು ಅದ್ಯಕ್ಷರಾಗಿ, ಪ್ರದೀಪ ಇವರು ಕಾರ್ಯದರ್ಶಿಯಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ಹಸರಣೆ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆಗಳು ನಡೆಯುತ್ತವೆ. ಏಪ್ರಿಲ್ ತಿಂಗಳ 6ನೇ ತಾರೀಖಿಗೆ ಅಗೆಲು, ದರ್ಶನ ಸೇವೆ, 7ಕ್ಕೆ ಬೈದೇರುಗಳ ನೇಮ, ಮೈಂದಾಳ್ತಿ ಕೋಲ, ಜೋಗಿ ಪುರುಷ ಕೋಲ, ಶಿವರಾಯ ಕೋಲಗಳು ನಡೆಯುತ್ತವೆ.
ಹಾರಾಡಿ, ಬೊಕ್ಕಪಟ್ನ, ಕುಕ್ಕುಡೆ, ಬೈಕಾಡಿ, ಸೂಲ್ ಕುದ್ರು, ಬೆಂಗ್ರೆ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು ಗರೋಡಿಯಲ್ಲಿ ನೀರು ಸ್ನಾನ, ತುಲಾಭಾರ ಸೇವೆ, ಮದುವೆ ಮುಂತಾದ ಸಂದಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತಿದೆ.
1980, 2004 ಹಾಗೂ 2019ರಲ್ಲಿ ಗರೋಡಿಯ ಜೀರ್ಣೋದ್ದಾರವಗಿದೆ.
ಸಂತು ಪರವ ಬೈಲೂರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಲಕೃಷ್ಣ ಮಡಿವಾಳ ಹಾರಾಡಿ ಇವರು ಮಡಿವಾಳರಾಗಿ, ಪ್ರಭಾಕರ ದೇವಾಡಿಗ ನೀಲಾವರ ವಾದ್ಯದವರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ – ಶಿವರಾಯ ಪರಿವಾರ ಗರೋಡಿ,
ಹಾರಾಡಿ ಬೊಕ್ಕಪಟ್ನ,
ಹೊನ್ನಾಳ ಪೋಸ್ಟ,
ಬ್ರಹ್ಮಾವರ ತಾಲೂಕು,
ಉಡುಪಿ 576213.

ಅರ್ಚಕರು:

ಸದಾಶಿವ ಪೂಜಾರಿ 9481344691

ಆಡಳಿತ ಸಮಿತಿ:

ಅಧ್ಯಕ್ಷರು: ಉದಯ ಪೂಜಾರಿ 9483709715

ಮಾಹಿತಿ ನೀಡಿದವರು :

ಸದಾಶಿವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025