Baidashree

Shree Dharmarasu, kodamanittaya, Kukkinantaya Daivasthana, Mayandal & Brahma Baidarkala Garodi, Kukkunduru

ಶ್ರೀ ಧರ್ಮರಸು, ಕೊಡಿಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಸ್ಥಾನ, ಮಾಯಂದಾಲ್ ಮತ್ತು ಬ್ರಹ್ಮಬೈದರ್ಕಳ ಗರೋಡಿ - ಕುಕ್ಕುಂದೂರು

ಉಡುಪಿಯಿಂದ ಹಿರಿಯಡ್ಕ, ಬೈಲೂರು ಮಾರ್ಗವಾಗಿ ಕಾರ್ಕಳಕ್ಕೆ ಹೋಗುವ ಮೊದಲು ಕುಕ್ಕುಂದೂರು ಮಹಾತ್ಮಾಗಾಂಧಿ ರೆಸಿಡೆನ್ಸಿಯಲ್ ಶಾಲೆಯ ನಂತರ ಬಲಕ್ಕೆ ಗರಡಿ ರಸ್ತೆಗೆ ತಿರುಗಿ ಸುಮಾರು 650ಮೀಟರ್ ದೂರದಲ್ಲಿದೆ ಈ ಗರೋಡಿ.
kukkunduru-1
kukkunduru-2
kukkunduru-3
kukkunduru-4
ಸುತ್ತು ಪೌಳಿಯಿದ್ದು ಶಿಲಾಮಯವಾಗಿರುವ ಈ ಗರೋಡಿಯ ಮುಖ್ಯದ್ವಾರವು ಪೂರ್ವಮುಖವಾಗಿದ್ದು, ಉತ್ತರ ದಿಕ್ಕಿಗೆ ಇನ್ನೊಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರ ಮುಖವಾಗಿದೆ.
kukkunduru-5
ಗರೋಡಿಯ ಒಳಗೆ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಎಡಬದಿಯಲ್ಲಿ ಮಣೆಮಂಚದಲ್ಲಿ ಕೋಟಿಚೆನ್ನಯರ ಪೊಟೋ ಇದೆ. ಬಲಬದಿಯಲ್ಲಿ ಕುಜುಂಬ ಕಾಂಜವರ ಮಣೆಮಂಚವಿದೆ. ಗರೋಡಿಯ ಎಡಭಾಗದಲ್ಲಿ ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ, ಪಕ್ಕದಲ್ಲಿ ಜುಮಾದಿಯ ಮಣೆಮಂಚವಿದೆ.
kukkunduru-6
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕುಕ್ಕಿನಂತಾಯ, ಹಾಗೂ ಕೊಡಮಣಿತ್ತಾಯ ದೈವಗಳ ಸಾನಿಧ್ಯವಿದೆ.
ಗರೋಡಿಯ ಸುತ್ತು ಪೌಳಿಯೊಳಗೆ ಅಜೆಕಾಯಿ ಕಲ್ಲುಗಳಿವೆ.
ಮೂಲ್ಕಿಬೆಟ್ಟು (ಮುಲ್ಕೊಟ್ಟು) ಬರ್ಕೆಮನೆ ಧೀರಜ್ ಸುವರ್ಣ (37 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಹಿರಿಯರಾದ ಕೋಟಿ ಸುವರ್ಣ, ಬೊಲ್ಲು ಬೋಂಟ್ರ ಇವರುಗಳು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೋಟಿ ಸುವರ್ಣರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.
ಈ ಗರೋಡಿಯು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನ ಕುಕ್ಕುಂದೂರು ಇದರ ಆಡಳಿತಕ್ಕೊಳಪಟ್ಟಿದ್ದು ರತ್ನರಾಜ ಮುದ್ಯರು ದೇವಸ್ಥಾನ ಹಾಗೂ ಗರೋಡಿಗಳ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಮಾರ್ಚ 8 ರಂದು ಭಂಡಾರದ ಮನೆಯಿಂದ ಭಂಡಾರ ಬಂದು ಧರ್ಮರಸು, ಕೊಡಿಮಣಿತ್ತಾಯ, ಕುಕ್ಕಿನಂತಾಯ ನೇಮ, ಬೈದರ್ಕಳ ನೇಮ, ದರ್ಶನ ನಡೆದು ಭಂಡಾರ ವಾಪಾಸು ಹೋಗುವುದು, ಮಾರ್ಚ 9 ಕ್ಕೆ ಮಾಯಂದಾಳ್ ನೇಮ ನಡೆಯುವುದು.
ಕುಕ್ಕುಂದೂರು ಗ್ರಾಮದ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ಸಹಾಯಧನ, ಕಾಣಿಕೆಗಳಿಂದ ಗರೊಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ಗರೋಡಿಯು 2014ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಚುಕುಡ ಪರವ ಕುಕ್ಕುಂದೂರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ರವೀಂದ್ರ ಮಡಿವಾಳರು ಮಡಿವಾಳರಾಗಿ, ಜಗ್ಗು ಸೇರಿಗಾರ ವಾದ್ಯದವರಾಗಿ, ಸುಧಾಕರ ಕುಕ್ಕುಂದೂರು ಡೋಲಿನವರಾಗಿ ಈ ಗರೊಡಿಯ ಸೇವೆ ಮಾಡುತ್ತಿದ್ದಾರೆ.
kukkunduru-7

ಮಾಹಿತಿ ಮಾಹಿತಿ ಸಂಗ್ರಹಿಸಿದವರು.

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಿಮಣಿತ್ತಾಯ ಮತ್ತು ಕುಕ್ಕಿನಂತಾಯ, ದೈವಸ್ಥಾನ, ಮಾಯಂದಾಲ್ ಮತ್ತು ಬ್ರಹ್ಮಬೈದರ್ಕಳ ಗರೋಡಿ ಕುಕ್ಕುಂದೂರು
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ 576117

ಅರ್ಚಕರು:

ಧೀರಜ್ ಸುವರ್ಣ – 9164640372

ಮಾಹಿತಿ ನೀಡಿದವರು:

ಧೀರಜ್ ಸುವರ್ಣ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025

Haadi Shree Brahma Baidarkala Mayindal Devi Sannidi, Hirgana

ಹಾಡಿ ಶ್ರೀ ಬ್ರಹ್ಮ ಬೈದರ್ಕಳ ಮಾಯಿಂದಾಲ್ ದೇವಿ ಸನ್ನಿಧಿ, ಹಿರ್ಗಾನ

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಬೈಲೂರಿನಲ್ಲಿ ಹಿರ್ಗಾನ ರಸ್ತೆಗೆ ತಿರುಗಿ ಸುಮಾರು 11ಕಿ.ಮೀ. ಸಾಗಿದರೆ ಹಾಡಿಗರೋಡಿ ಇದೆ.
hirgana-1
hirgana-2
hirgana-3
hirgana-4
hirgana-5
ಗರೋಡಿಯು ಶಿಲಾಮಯವಾಗಿದ್ದು ಎರಡು ದ್ವಾರಗಳಿದ್ದು ಒಂದು ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ಉತ್ತರ ಮುಖವಾಗಿದೆ. ಗರೋಡಿಯ ಬ್ರಹ್ಮಗುಡಿಯು ಉತ್ತರ ಮುಖವಾಗಿದ್ದು ಷಢಾದಾರ ಪ್ರತಿಷ್ಠೆಯನ್ನು ಹೊಂದಿದೆ.
hirgana-6
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಗುಂಡದ ಕೆಳ ಅಂತಸ್ತಿನಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ಇಬ್ಬರು ಬಳ್ಳಾಲರಿಗೂ, ಮೇಲಂತಸ್ತಿನಲ್ಲಿ ಗಾಳಿದೇವರಿಗೂ ಪೂಜೆ ನಡೆಯುತ್ತದೆ.
hirgana-7
ಗುಂಡದ ಎಡಬದಿಯಲ್ಲಿ ಮಣೆಮಂಚದಲ್ಲಿ ಕೋಟಿ ಹಾಗೂ ಚೆನ್ನಯರ ಪಂಚಲೋಹದ ಕುದುರೆಯ ಮೇಲೆ ಕುಳಿತ ಮೂರ್ತಿಗಳಿವೆ.
hirgana-8
ಗುಂಡದ ಬಲಬದಿಯಲ್ಲಿ ಮಣೆಮಂಚದ ಮೇಲೆ ಕುದುರೆಯ ಮೇಲೆ ಕುಳಿತ ಬಲ್ಲಾಳರ ಪಂಚಲೋಹದ ಮೂರ್ತಿಯಿದೆ.
hirgana-9
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಮಣೆಮಂಚದ ಮೇಲೆ ಜೋಗಿಪುರುಷರ ಪಂಚಲೋಹದ ಮೂರ್ತಿಯಿದೆ.
hirgana-10
ಎಡಬದಿಯಲ್ಲಿ ಮಾಯಂದಾಳ್ ಮತ್ತು ಮಗುವಿನ ಕಂಚಿನ ಪ್ರಭಾವಳಿಯಿರುವ ಮರದ ಮೂರ್ತಿಗಳಿವೆ.
hirgana-11
ಪಕ್ಕದ ಮಣೆಮಂಚದ ಮೇಲೆ ಧೂಮಾವತಿಯ ಪಂಚಲೋಹದ ಮೂರ್ತಿಯಿದೆ.
hirgana-12
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಪಕ್ಕದಲ್ಲಿ ಬಲಿಯಂದ್ರ ಕಲ್ಲು, ಬಲಿಕಲ್ಲು, ಹುಲಿಚಾಮುಂಡಿ ದೈವಗಳ ಸಾನಿದ್ಯವಿದೆ.
hirgana-13
ಗರೋಡಿಯ ಪಕ್ಕದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮಸ್ಥಾನವಿದೆ.
hirgana-14

ಕೃಷ್ಣಪ್ಪ ಪೂಜಾರಿ

ಹಾಡಿ ಗರೋಡಿ ಮನೆ ಕೃಷ್ಣಪ್ಪ ಪೂಜಾರಿ (60 ವರ್ಷ) ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಸಂಜೀವ ಪೂಜಾರಿ ಹಾಗೂ ಹೀಂಕ್ಲ ಪೂಜಾರಿಯವರು ಸಹ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಲೋಕು ಪೂಜಾರಿ ಹಾಗೂ ಹೊನ್ನಯ್ಯ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಪಡುಮನೆ ಸದಾನಂದ ಪೂಜಾರಿಯವರು ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಶಶಿಕಾಂತ ಕಾನಂಗಿಯವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಶುಕ್ರವಾರ ಪೂಜೆ ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು ಮೊದಲಾದ ಪೂಜಾಕೈಂಕರ್ಯಗಳು ನಡೆಯುತ್ತವೆ.
ಸೋಣ ತಿಂಗಳ ಸಂಕ್ರಾಂತಿಯಂದು ಗರೋಡಿ ಮನೆಯಿಂದ ಭಂಡಾರ ಬಂದು ತೋರಣ ಮುಹೂರ್ತ ನಡೆಯುತ್ತದೆ. ಮರುದಿನ ಬೈದರ್ಕಳ ನೇಮ, ಜೋಗಿಪುರುಷ ಕೋಲ ನಡೆಯುತ್ತದೆ. ಅದರ ಮರುದಿನ ಪಿಲ್ಚಂಡಿ ಕೋಲದ ನಂತರ ಮಾಯಂದಾಲ್ ಕೋಲ ನಡೆಯುತ್ತದೆ. ಮೂರನೇ ದಿನ ಅನ್ನ ನೈವೇದ್ಯದ ಅಗೆಲು ಸೇವೆ ನಡೆಯುತ್ತದೆ. ಮರುದಿನ ಸಂಪ್ರೋಕ್ಷಣೆಯ ನಂತರ ಭಂಡಾರವು ವಾಪಾಸು ಗರೋಡಿ ಮನೆಗೆ ಹೊರಡುವುದು. ಗರೋಡಿಗಳ ವಾರ್ಷಿಕ ನೇಮೋತ್ಸವವು ಈ ಗರೋಡಿಯಿಂದ ಆರಂಭವಾಗುವುದು ಇಲ್ಲಿಯ ವಿಶೇಷ.
ಮೂಜೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ , ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 30 ಸೆಂಟ್ಸ ಜಾಗವಿದ್ದು 2015ರಲ್ಲಿ ಜೀರ್ಣೋದ್ದಾರಗೊಂಡು ಶಿಲಾಮಯ ಗರೋಡಿಯಾಗಿ ಪರಿವರ್ತಿಸಲ್ಪಟ್ಟಿದೆ.
hirgana-15
ಜೀರ್ಣೋದ್ದಾರದ ಮೊದಲಿನ ಗರೋಡಿಯ ಚಿತ್ರ ಇಲ್ಲಿದೆ.
hirgana-16
ಈಗ ಪುನ: ಗರೋಡಿಯ ಸುತ್ತು ಪೌಳಿಯ ನವೀಕರಣದ ಯೋಜನೆಯಿದೆ.
hirgana-17

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು.

ಸುಕುಡ ಪರವ ಮತ್ತು ಸಂಘಟಿಗರು ಗರೋಡಿಯ ನೃತ್ಯವಿಶಾರದರಾಗಿ, ರಮೇಶ ಮಡಿವಾಳರು ಮಡಿವಾಳರಾಗಿ, ಜಗ್ಗು ಸೇರಿಗಾರ ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಹಾಡಿ ಗರೋಡಿ ಶ್ರೀಬ್ರಹ್ಮಬೈದರ್ಕಳ ಮಾಯಂದಾಳ್ ದೇವಿ ಸನ್ನಿಧಿ ಹಿರ್ಗಾನ, ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ 576117

ಅರ್ಚಕರು:

ಕೃಷ್ಣಪ್ಪ ಪೂಜಾರಿ – 8277529807

ಮಾಹಿತಿ ನೀಡಿದವರು:

ಕೃಷ್ಣಪ್ಪ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025

Shree Kodamanittaya Brahma Baidarkala Garodi, Yerlapadi

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಯರ್ಲಪ್ಪಾಡಿ

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಬೈಲೂರು ಪದವಿ ಪೂರ್ವ ಕಾಲೇಜಿನ ಪಕ್ಕದ ರಸ್ತೆಗೆ ಎಡಕ್ಕೆ ತಿರುಗಿ ಸುಮಾರು 4ಕಿ.ಮೀ. ಸಾಗಿದರೆ ಈ ಗರೋಡಿ ಸಿಗುವುದು.
yarlapadi-1
yarlapadi-2
yarlapadi-3
yarlapadi-4
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾಧಾರ ಪ್ರತಿಷ್ಠೆಯನ್ನು ಹೊಂದಿದೆ.
yarlapdi-5
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
yarlapdi-6
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಮೂರ್ತಿಯಿದೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವರ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಜೋಗಿಪುರುಷ ಮರದ ಮೂರ್ತಿಯಿದೆ.
yarlapdi-7
yarlapadi-8
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿರುವ ಗುಡಿಯೊಂದರಲ್ಲಿ ಕೊಡಮಣಿತ್ತಾಯ, ಧರ್ಮರಸು, ಕುಕ್ಕಿನಂತಾಯ ದೈವಗಳ ಆರಾಧನೆಯಿದೆ.
yarlapdi-9
ಇನ್ನೊಂದು ಗುಡಿಯಲ್ಲಿ ಹುಲಿಚಾಮುಂಡಿ ದೈವದ ಸಾನಿಧ್ಯವಿದೆ.
yarlapdi-10
ಈ ಗರೋಡಿಯ ಎಡಬದಿಯಲ್ಲಿರುವ ಗುಡಿಯಲ್ಲಿ ಮಹಾಮ್ಮಾಯಿದೇವಿಯ ಆರಾಧನೆಯಿದೆ. ಗರೋಡಿಯ ಆವರಣದಲ್ಲಿ ತುಳಸಿಕಟ್ಟೆ, ಬಲಿಕಲ್ಲುಗಳಿವೆ.
ಎಚ್. ಯುವರಾಜ ನಾಯ್ಕ ಹೆಕ್ಕಡ್ಕ ಗುತ್ತು ಇವರು ಗರೋಡಿಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಆಡಳಿತ ಮೊಕ್ತೇಸರರಾಗಿದ್ದಾರೆ. ಉದಯ ಕುಮಾರ್ ಹೆಗ್ಡೆಯವರು ಕಾರ್ಯದರ್ಶಿಯಾಗಿದ್ದಾರೆ.
ಆನಂದ ಪೂಜಾರಿ ಹಾಗೂ ಪ್ರಸಾದ ಪೂಜಾರಿಯವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಕುಟ್ಟಿ ಪೂಜಾರಿ, ಶೀನ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆಗಳು ನಡೆಯುತ್ತಿದೆ. ಸುಗ್ಗಿ ತಿಂಗಳ ದ್ವಾದಶಿಯಂದು (ಹುಣ್ಣಿಮೆಗೆ 3 ದಿನ ಮೊದಲು) ಕುಕ್ಕುಡೆ ವಿದ್ಯಾನಂದ ಮುದ್ಯರ ಮನೆಯಿಂದ ಭಂಡಾರ ಬಂದು ರಾತ್ರಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ದೈವಗಳ ದರ್ಶನ , ಬೈದರ್ಕಳ ನೇಮ, ಜೋಗಿಪುರುಷ ಕೋಲ, ಬೈದರ್ಕಳ ದರ್ಶನ, ಪಿಲ್ಚಂಡಿ ಕೋಲ ನಡೆಯುತ್ತದೆ. ಮರುದಿನ ಮಾಯಂದಾಳ್ ಕೋಲ ನಡೆದ ನಂತರ ಭಂಡಾರ ವಾಪಾಸು ಹೋಗುವುದು.
ಯರ್ಲಪ್ಪಾಡಿ ಗ್ರಾಮದ ಜನರು ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚಭರಿಸಲಾಗುತ್ತದೆ. 2022ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ಚುಕುಡ ಪರವ ಕುಕ್ಕುಂದೂರು ಮತ್ತು ಸಂಗಡಿಗರು ಗರೋಡಿಯ ನೃತ್ಯವಿಶಾರದರಾಗಿ, ಚುಕುಡ ಮಡಿವಾಳ ಯರ್ಲಪ್ಪಾಡಿ ಇವರು ಮಡಿವಾಳರಾಗಿ, ಸದಾನಂದ, ಸಂತು ಸೇರಿಗಾರ ಇವರು ವಾದ್ಯದವರಾಗಿ, ದೂಜ ನೀರೆ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
yarlapadi-11

ಮಾಹಿತಿ ಸಂಗ್ರಹಿಸಿದವರು.

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಯರ್ಲಪಾಡಿ,
ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು.

ಆಡಳಿತ ಸಮಿತಿ:

ಉದಯ ಕುಮಾರ್ ಹೆಗ್ಡೆ –9845235430 (ಕಾರ್ಯದರ್ಶಿ)

ಅರ್ಚಕರು:

ಆನಂದ ಪೂಜಾರಿ -9611624250

ಮಾಹಿತಿ ನೀಡಿದವರು:

ದಿನೇಶ್ ಪೂಜಾರಿ, ನಡಿಬೆಟ್ಟು

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

03.06.2025

Shree Kodamanittaya Brahma Baidarkala Garodi, Jarkala

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಜಾರ್ಕಳ

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಬೈಲೂರು ಪದವಿಪೂರ್ವ ಕಾಲೇಜಿನ ಒಂದು ಕಿ.ಮೀ. ನಂತರ ಎಡಕ್ಕೆ ತಿರುಗಿ ಪುನ: ಒಂದು ಕಿ.ಮೀ. ಸಾಗಿದರೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಈ ಗರೋಡಿ ಇದೆ.
Jarkala-1
Jarkala-2
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
Jarkala-3
ಗರೋಡಿಯ ಬ್ರಹ್ಮಗುಡಿಯ ಒಳಗೆ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯರ ಮರದ ಮೂರ್ತಿಯಿದೆ. ಗುಂಡದ ಬಲಬದಿಯಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ ಹಾಗೂ ಕುಜುಂಬ ಕಾಂಜವರ ಮರದ ಮೂರ್ತಿಗಳಿವೆ.
Jarkala-4
ಬ್ರಹ್ಮಗುಡಿಯ ಹೊರಗೆ ಮಾಯಂದಾಳ್ ಮತ್ತು ಮಗು, ಜೋಗಿಪುರುಷರ ಮರದ ಮೂರ್ತಿಗಳಿವೆ,
Jarkala-5
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕುಕ್ಕಿನಂತಾಯ, ಕೊಡಮಣಿತ್ತಾಯ ದೈವದ ಸಾನಿಧ್ಯವಿದೆ. ಗರೊಡಿಯ ಆವರಣದಲ್ಲಿ ತುಳಸಿಕಟ್ಟೆ ಹಾಗೂ ಬಲಿಕಲ್ಲುಗಳಿವೆ.
Jarkala-6

ಮೋಹನ್‌ದಾಸ್ ಹೆಗ್ಡೆ

ಜಾರ್ಕಳ ಮನೆಯ ಮೋಹನ್‌ದಾಸ್ ಹೆಗ್ಡೆಯವರು ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನ ಹಾಗೂ ಗರೋಡಿಗಳ ಅನುವಂಶಿಕ ಮೋಕ್ತೇಸರರಾಗಿದ್ದಾರೆ.
Jarkala-7

ರಾಘು ಪೂಜಾರಿ

ರಾಘು ಪೂಜಾರಿ(57 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಕರುಣಾಕರ ಪೂಜಾರಿ (57 ವರ್ಷ) ಇವರಯ ಸಹ ಅರ್ಚಕರಾಗಿದ್ದಾರೆ. ಇವರ ಮೊದಲು ಕೃಷ್ಣ ಪೂಜಾರಿ, ಲೋಕು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮವಿದೆ. ಸುಗ್ಗಿ ತಿಂಗಳ ಹುಣ್ಣಿಮೆ ಮೂರನೇ ದಿನ (ಮಾರ್ಚ ಏಪ್ರಿಲ್ ತಿಂಗಳಲ್ಲಿ) ಗುತ್ತಿನ ಮನೆಯಲ್ಲಿರುವ ಭಂಡಾರವನ್ನು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುರೋಹಿತರ ಮನೆಗೆ ತಂದಿಟ್ಟು, ಅಲ್ಲಿಂದ ಗರೋಡಿಗೆ ಬಂದು ಕುಕ್ಕಿನಂತಾಯ ಹಾಗೂ ಕೊಡಮಣಿತ್ತಾಯ ಮತ್ತು ಬೈದರ್ಕಳ ನೇಮ ನಡೆಯುತ್ತದೆ. ಮರುದಿನ ಮಾಯಂದಾಲ್ ಕೋಲ ನಡೆದ ನಂತರ ಅನ್ನ ಸಂತರ್ಪಣೆ ನಡೆಯುತ್ತದೆ.
ಜಾರ್ಕಳ ಪರಿಸರದ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮುಂತಾದ ಶುಭಸಂದರ್ಬದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ, ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು 1984ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಚುಕುಡು ಪರವ ಕುಕ್ಕುಂದೂರು ಮತ್ತು ಸಂಗಡಿಗರು ಗರೋಡಿಯ ನೃತ್ಯವಿಶಾದರರಾಗಿ, ಗೋಪ ಮಡಿವಾಳ ಜಾರ್ಕಳ ಮಡಿವಾಳರಾಗಿ, ಸುಕೇಶ ದೇವಾಡಿಗ ಜಾರ್ಕಳ ವಾದ್ಯದವರಾಗಿ, ವಿಜಯ ಜಾರ್ಕಳ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Jarkala-8

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು.

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಜಾರ್ಕಳ,
ಯರ್ಲಪ್ಪಾಡಿ ಗ್ರಾಮ, ಕಾರ್ಕಳ ತಾಲೂಕು.

ಅನುವಂಶಿಕ ಆಡಳಿತ ಮೊಕ್ತೇಸರರು:

ಜೆ ಮೋಹನ್‌ದಾಸ್ ಹೆಗ್ಡೆ

ಅರ್ಚಕರು:

ರಾಘು ಪೂಜಾರಿ – 9611388215

ಮಾಹಿತಿ ನೀಡಿದವರು:

ಜೆ ಮೋಹನ್‌ದಾಸ್ ಹೆಗ್ಡೆ
ರಾಘು ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

03.06.2025

Shree Kodamanitthayaa Brahma Baidarkala Garodi, Neere

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರೋಡಿ, ನೀರೆ

ಉಡುಪಿಯಿಂದ ಮಣಿಪಾಲ – ಹಿರಿಯಡ್ಕ ಮಾರ್ಗವಾಗಿ ಬೈಲೂರು ತಲುಪಿ ರಸ್ತೆಯ ಎಡಬದಿಯಲ್ಲಿರುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಸುಮಾರು 400ಮೀ. ಸಾಗಿದರೆ ಈ ಗರೋಡಿ ತಲುಪ ಬಹುದು.
Neere-1
Neere-2
Neere-3
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
Neere-4
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದ ಕೆಳ ಅಂತಸ್ತಿನಲ್ಲಿ ವೆಂಕಟರಮಣ ದೇವರ ಕಲ್ಲಿನ ಮೂರ್ತಿ, ಮೇಲಂತಸ್ತಿನಲ್ಲಿ ನಾಗಬ್ರಹ್ಮರ ಮರದ ಮೂರ್ತಿ ಇದೆ.
Neere-5
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಪಾಪೆಗಳಿವೆ.
Neere-6
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಬಾಲಕರ ಮರದ ಪಾಪೆಗಳಿವೆ.
Neere-7
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಮೂರ್ತಿಗಳಿವೆ. ಬ್ರಹ್ಮಗುಡಿಯ ಬಾಗಿಲ ಎರಡೂ ಬದಿಗಳಲ್ಲಿ ದೀಪ ಕನ್ನಿಕೆಯರ ಎರಡು ಮೂರ್ತಿಗಳಿವೆ. ಬ್ರಹ್ಮಗುಡಿಯ ಬಲಬದಿಯಲ್ಲಿ ಜೋಗಿಪುರುಷರ ಮರದ ಮೂರ್ತಿಯಿದೆ.
Neere-8
Neere-9
ಗರೋಡಿಯ ಪಕ್ಕದಲ್ಲಿರುವ ಒಂದು ಗುಡಿಯಲ್ಲಿ ಹುಲಿಚಾಮುಂಡಿ ದೈವದ ಮರದ ಮೂರ್ತಿ ಇದೆ.
Neere-10
ಇನ್ನೊಂದು ಗುಡಿಯಲ್ಲಿ ಧರ್ಮರಸು ಹಾಗೂ ಕೊಡಮಣಿತ್ತಾಯ ದೈವಗಳ ಸಾನಿಧ್ಯವಿದೆ.
Neere-11
ಗರೋಡಿಯ ಪ್ರವೇಶ ದ್ವಾರದ ಹತ್ತಿರವಿರುವ ಎರಡು ಗುಡಿಗಳಲ್ಲಿ ಅಣ್ಣಪ್ಪ ಪಂಜುರ್ಲಿ ಹಾಗೂ ಧೂಮಾವತಿ ದೈವಗಳ ಆರಾಧನೆಯಿದೆ.
Neere-12
ಗರೋಡಿಯ ಎದುರಿಗೆ ತುಳಸಿಕಟ್ಟೆ ಹಾಗೂ ಕೊಡಿಕಂಬಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
Neere-13

ಗೋಪಾಲ ಪೂಜಾರಿ

Neere-14

ರಾಘವೇಂದ್ರ ಪೂಜಾರಿ

Neere-15

ದಿನೇಶ ಪೂಜಾರಿ

Neere-16

ಸಂದೇಶ್ ಪೂಜಾರಿ

1995ರಿಂದ ಗೋಪಾಲ ಪೂಜಾರಿ (62 ವರ್ಷ) ಇವರು ಗರೊಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರೊಂದಿಗೆ ರಾಘವೇಂದ್ರ ಪೂಜಾರಿ, ದಿನೇಶ ಪೂಜಾರಿ, ಸಂದೇಶ್ ಪೂಜಾರಿ ಹಾಗೂ ಸುಂದರ ಪೂಜಾರಿಯವರು ಅರ್ಚಕರಾಗಿ ಮತ್ತು ಈ ಐವರು ಇಲ್ಲಿಯ ದರ್ಶನ ಸ್ಥಳ ಪಾತ್ರಿಗಳಾಗಿಯೂ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಮಹಾಬಲ ಪೂಜಾರಿ, ರಾಮ ಪೂಜಾರಿ, ಮೊದಲಾದ ಹಿರಿಯರು ಇಲ್ಲಿಯ ಅರ್ಚಕರಾಗಿ ಹಾಗೂ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿದ್ದರು.
Neere-17

ನೀರೆ ಕೃಷ್ಣ ಶೆಟ್ಟಿ

ನೀರೆ ಕೃಷ್ಣ ಶೆಟ್ಟಿಯವರು ಗರೋಡಿಯ ಮೊಕ್ತೇಸರರು ಹಾಗೂ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾಂತಿ ಪೂಜೆ, ಕದಿರುಕಟ್ಟುವುದು, ಸುಗ್ಗಿಯ ಹುಣ್ಣಿಮೆಯ ಮೊದಲ ದಿನ ಕೊಡಂಣಿತ್ತಾಯ ಕೋಲ, ಹುಣ್ಣಿಮೆಯಂದು ಬೈದರ್ಕಳ ನೇಮ, ಮರುದಿನ ಅಣ್ಣಪ್ಪ ಪಂಜುರ್ಲಿ, ಮಾಯಂದಾಲ್, ಧೂಮಾವತಿ, ಹುಲಿಚಾಮುಂಡಿ ಕೋಲಗಳು ನಡೆಯುತ್ತವೆ. ಈ ಗರೋಡಿಯಲ್ಲಿ ಕೋಟಿಚೆನ್ನಯರು ಪಾಸದಲ್ಲಿ ಪಣಿಯೂರಿದ್ದಾರೆ ಎಂಬ ಕಾರಣಕ್ಕಾಗಿ ಇಲ್ಲಿ ಅಗೆಲು ಸೇವೆ ನಡೆಯುವುದಿಲ್ಲ.
ನೀರೆ, ಕಣಂಜಾರು, ಬೈಲೂರು, ಎಲಿಯಾಳ, ಬೊಮ್ಮರಬೆಟ್ಟು, ಕೌಡೂರು ಈ ಆರು ಮಾಗಣೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಜನರು ಭಾಗಿಯಾಗುತ್ತಾರೆ. ಊರ ಜನರ ವರಡ, ವಂತಿಗೆ, ಸಹಾಯಧನ, ಕಾಣಿಕೆಯ ಹಣದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಗೆ ಸುಮಾರು 1 ಎಕರೆ ಜಾಗವಿದ್ದು, 1942, 1982, 2020, ರಲ್ಲಿ ಜೀರ್ಣೋದ್ಧಾರವಾಗಿದೆ. 1982ರಲ್ಲಿ ಗರೋಡಿಗೆ ಕೊಡಿಮರ ಅಳವಡಿಸಲಾಗಿತ್ತು. ಇತ್ತೀಚೆಗೆ 2025ರ ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ.
ಶೇಖರ ಪರವ ಪೆರ್ಡೂರು, ಇವರು ನೃತ್ಯವಿಶಾದರರಾಗಿ, ಕೃಷ್ಣ ಮಡಿವಾಳ ಕಣಂಜಾರು ಮಡಿವಾಳರಾಗಿ, ದಾಸ ಸೇರಿಗಾರ ಬೈಲೂರು ವಾದ್ಯದವರಾಗಿ, ಸುಂದರ ನೀರೆ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Neere-18
ಗರೋಡಿಯ ಪರಿಸರದಲ್ಲಿ ಕೋಟಿಚೆನ್ನಯ ಭಜನಾಮಂಡಳಿ, ಕೋಟಿಚೆನ್ನಯ ಪ್ರೆಂಡ್ಸ ಎಂಬ ಕ್ರಿಕೆಟ್ ತಂಡವು ಸಕ್ರಿಯವಾಗಿದೆ.
Neere-19

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಿಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ನೀರೆ,
ಅಂಚೆ ನೀರೆ, ಕಾರ್ಕಳ ತಾಲೂಕು, ಉಡುಪಿ 574102.

ಅರ್ಚಕರು ಹಾಗೂ ಪಾತ್ರಿಗಳು:

ಗೋಪಾಲ ಪೂಜಾರಿ – 9945912752 ರಾಘವೇಂದ್ರ ಪೂಜಾರಿ – 8197111349 ದಿನೇಶ್ ಪೂಜಾರಿ – 9972268217 ಸಂದೇಶ ಪೂಜಾರಿ – 8660677369 ಸುಂದರ ಪೂಜಾರಿ

ಮಾಹಿತಿ ನೀಡಿದವರು:

ಗೋಪಾಲ ಪೂಜಾರಿ
ರಾಘವೇಂದ್ರ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

03.06.2025

Shree Brahma Baidarkala Koti Chennayya, Shree Panjurli Saparivaara Garodi, Yarukone

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ ಶ್ರೀ ಪಂಜುರ್ಲಿ ಸಹಪರಿವಾರ ಗರೋಡಿ, ಯರುಕೋಣೆ.

ಉಡುಪಿಯಿಂದ – ಕುಂದಾಪುರ – ನಾವುಂದ ಪೇಟೆಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಬಲಕ್ಕೆ ತಿರುಗಿ ಸುಮಾರು 6ಕಿ.ಮೀ. ದೂರ ಸಾಗಿದರೆ ಯರುಕೋಣೆ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಷಡಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದ ಕೆಳ ಅಂತಸ್ತಿನಲ್ಲಿ ವೆಂಕಟರಮಣ ದೇವರ ಕಲ್ಲಿನ ಮೂರ್ತಿ, ಮೇಲಂತಸ್ತಿನಲ್ಲಿ ನಾಗಬ್ರಹ್ಮರ ಮರದ ಮೂರ್ತಿ ಇದೆ.
ಗುಂಡದ ಎಡಬದಿಯಲ್ಲಿ ಬಂಟ, ಕೋಟಿ, ಬಂಟ, ಚೆನ್ನಯ್ಯ, ದೇಯಿ ಬೈದೆತಿ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಬಲಬದಿಯಲ್ಲಿ ಬೈದ, ಬಂಟ ಹಾಗೂ ಕಿನ್ನಿದಾರುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಗೆಂಡದ ಹೈಗುಳಿ, ಪಂಜುರ್ಲಿ, ಪಂಜುರ್ಲಿ ಹಾಗೂ ಕಂಚಿನ ಪಂಜುರ್ಲಿ, ಎಡಭಾಗದಲ್ಲಿ ಕಂಬೆಟ್ಟಿನ ಹೈಗುಳಿ, ಕಂಚಿನ ಕರಿಬೆಟ್ಟಿನ ಹೈಗುಳಿ, ಕರಿಬೆಟ್ಟಿನ ಹೈಗುಳಿ ಪರಿವಾರ, ನಂದಿಕೋಣ ಮೂಡೂರ ಹೈಗುಳಿ ದೈವದ ಸಾನಿಧ್ಯವಿದೆ.
ಪಕ್ಕದಲ್ಲಿ ಮಾರಣಕಟ್ಟೆ ಚಿಕ್ಕು, ಬಾಲ ಚಿಕ್ಕು, ಅವತಾರ ಚಿಕ್ಕು, ಮರ್ಲಿ ಚಿಕ್ಕು, ಬಗ್ ಚಿಕ್ಕು, ಚಿಕ್ಕು ಪರಿವಾರ, ದೊಟ್ಟಿಕಾಲು ಚಿಕ್ಕು, ಧೂಮಾವತಿ, ಬಾಲಕಂದ, ಮೈಂದಾಳ್ತಿ, ಉಳ್ಳಾಲ್ತಿ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಜೋಗಿ ಪುರುಷ, ಹೊಸಿ ಹೈಗುಳಿ, ಕೆಂಪಣ್ಣ ಹೈಗುಳಿ, ಮುರ್ ಶಂಡಿ, ಮೂಕ ಹೈಗುಳಿ, ಕೆಪ್ಪ ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲು ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಪಕ್ಕದಲ್ಲಿರುವ ಒಂದು ಗುಡಿಯಲ್ಲಿ ಮಾಸ್ತಿ ಇನ್ನೊಂದರಲ್ಲಿ ಹೊರಸುತ್ತಿನ ಹೈಗುಳಿ ಹಾಗೂ ನೇತ್ರಾ ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಆವರಣದಲ್ಲಿ ತುಳಸಿ ಕಟ್ಟೆ, ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬನವಿದೆ.

ಮಹಾಬಲ ಪೂಜಾರಿ

1984ರಿಂದ ಮಹಾಬಲ ಪೂಜಾರಿ (61 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಇವರ ಅಜ್ಜ ಸುಬ್ಬ ಪೂಜಾರಿಯವರು ಇಲ್ಲಿಯ ಅರ್ಚಕರಾಗಿದ್ದರು.
ಈ ಗರೋಡಿಯಲ್ಲಿ ಸದ್ಯಕ್ಕೆ ಸ್ಥಳ ಪಾತ್ರಿಗಳಿಲ್ಲ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಕದಿರುಕಟ್ಟುವ ಕ್ರಮ ಇದೆ. ಧರ್ಮಸ್ಥಳದ ದೀಪೋತ್ಸವದ ಅಮವಾಸ್ಯೆಯಂದು ತುಳಸೀ ಪೂಜೆ ನಡೆಯುತ್ತದೆ. ಗರೋಡಿಯಲ್ಲಿ ಅಗೆಲ್ ಸೇವೆ, ಹಾಲು ಹಬ್ಬ ಇತ್ಯಾದಿ ಆಚರಣೆಗಳು ಸದ್ಯಕ್ಕೆ ನಡೆಯುತ್ತಿಲ್ಲ. ಮುಂದೆ ಸ್ಥಳ ಪಾತ್ರಿಗಳ ನೇಮಕವಾದ ನಂತರ ಸರಿಯಾದ ಮಾಹಿತಿ ಪಡೆದು ಈ ಬಗ್ಗೆ ನಿರ್ಧರಿಸಲಾಗುವುದು.
ಹೇರೂರು, ಯರುಕೋಣೆ ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಕಾಣಿಕೆ, ಸಹಾಯ ಧನಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ. ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ 15ಸೆಂಟ್ಸ ಜಾಗವಿದೆ.
22-03-2023ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.

ಜೀರ್ಣೋದ್ದಾರಕ್ಕೆ ಮೊದಲಿನ ಗರೋಡಿಯ ಛಾಯಾಚಿತ್ರ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ ಶ್ರೀ ಪಂಜುರ್ಲಿ ಸಹಪರಿವಾರ ಗರೋಡಿ ಯರುಕೋಣೆ,
ಹೇರೂರು ಗ್ರಾಮ, ರಾಗಿಹಕ್ಲು ಅಂಚೆ ,
ಬೈಂದೂರು ತಾಲೂಕು,
ಉಡುಪಿ 576224.

ಗರೋಡಿಯ ಅರ್ಚಕರು:

ಮಹಾಬಲ ಪೂಜಾರಿ – 9901853769

ಮಾಹಿತಿ ನೀಡಿದವರು

ಮಹಾಬಲ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

29.04.2025

Shree Brhma Baidarkala Moodura Haiguli Parivaara Garodi, Thallur

ಶ್ರೀ ಬ್ರಹ್ಮಬೈದರ್ಕಳ ಮೂಡೂರ ಹೈಗುಳಿ ಪರಿವಾರ ಗರೋಡಿ, ತಲ್ಲೂರು

ಉಡುಪಿಯಿಂದ ಕುಂದಾಪುರ ದಾಟಿ ಸುಮಾರು 4.2ಕಿ. ಮೀ. ನಂತರ ಎಡಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದ ರಸ್ತೆಗೆ ತಿರುಗಿ ಸುಮಾರು 800ಮೀ. ಸಾಗಿದರೆ ತಲ್ಲೂರು ಗರೋಡಿ ಸಿಗುತ್ತದೆ.
ಇದು ಶಿಲಾಮಯ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಮುಖ್ಯ ದ್ವಾರ ಹಾಗೂ ಉತ್ತರಾಭಿಮುಖವಾದ ಬ್ರಹ್ಮಗುಡಿಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಕಂಚಿನ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯ, ಇಬ್ಬರು ಮಕ್ಕಳ ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿಗಳಿವೆ.
ಗುಂಡದ ಬಲ ಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಬಲ್ಲಾಳ ಪೀಠವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ನಾರಾಯಣ ಹೈಗುಳಿ, ಶಂಕರ ಹೈಗುಳಿ ದೈವಗಳ ಗದ್ದುಗೆಯಲ್ಲಿ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಕರಿಬೆಟ್ಟಿನ ಹೈಗುಳಿ, ರಕ್ತ ಹೈಗುಳಿ, ಪಂಜುರ್ಲಿ ಪರಿವಾರ ಹೈಗುಳಿ, ಮೂಡೂರ ಹೈಗುಳಿ, ಬಾಲಯ್ಯ , ಮೈಂದಾಳ್ತಿ, ದೊಟ್ಟಿಕಾಲ ಚಿಕ್ಕು, ಮರ್ಲು ಚಿಕ್ಕು, ಮಾಸ್ತಿಅಮ್ಮ, ಬಾಲ ಚಿಕ್ಕು, ಬಗ್ಗು ಚಿಕ್ಕು ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಹಳೆಯಮ್ಮ, ಎಳೆಯಮ್ಮ, ಬೊಬ್ಬರ್ಯ, ಉಮ್ಮಾಳ್ತಿ, ಚಂಡೇಶ್ವರ, ಬಾಲ ಚಂಡಿ, ಜೋಗಿ ಪುರುಷ, ಸ್ವಾಮಿ, ಕುಂಜ್ಙಾಡಿ,ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ, ಹೊರಸುತ್ತಿನ ಹೈಗುಳಿಯ ಮರದ ಮೂರ್ತಿಗಳಿವೆ. ಗರೋಡಿಯ ಆವರಣದೊಳಗೆ ತುಳಸೀ ಕಟ್ಟೆ, ಕ್ಷೇತ್ರಪಾಲ ಗುಡಿ ಹಾಗೂ ಬಲಿಕಲ್ಲುಗಳಿವೆ.
ಗರೋಡಿಯ ಪಕ್ಕದಲ್ಲಿ ಮಹಾಕಾಳಿ ದೇವಸ್ಥಾನ ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.
ಗರೋಡಿಯ ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಕುಮಾರ ಪೂಜಾರಿ

ಗೋಪಾಲ ಪೂಜಾರಿ

ನಾಗರಾಜ ಪೂಜಾರಿ

ಕುಮಾರ ಪೂಜಾರಿ (45 ವರ್ಷ) ಗೋಪಾಲ ಪೂಜಾರಿ 61 ವರ್ಷ) ನಾಗರಾಜ ಪೂಜಾರಿ (60 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಮುತ್ತ ಪೂಜಾರಿ, ಮಾಸ್ತಿ ಪೂಜಾರಿ ಮೊದಲಾದ ಹಿರಿಯರು ಈ ಗರೋಡಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ರಾಜು ಪೂಜಾರಿ (72 ವರ್ಷ) ಇವರು 1990ರಿಂದ ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರಿಗೆ ಮೊದಲು ಇವರ ಅಜ್ಜ ವೆಂಕ ಪೂಜಾರಿ, ಶೇಷ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ತಲ್ಲೂರು ದೊಡ್ಡಮನೆ ವಸಂತ್ ಆರ್ ಹೆಗ್ಡೆಯವರು ಮೊಕ್ತೇಸರಾಗಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ತಲ್ಲೂರು ಕಂಬಳದ ಮೂರನೇ ದಿನ ಅಗೆಲು ಸೇವೆ, ದರ್ಶನ ಸೇವೆ ನಡೆಯುತ್ತದೆ. ಜನವರಿ 27ನೇ ತಾರೀಖಿನಂದು ಗೆಂಡ ಸೇವೆ, 28 ನೇ ತಾರೀಖಿನಂದು ತುಲಾಭಾರ ಸೇವೆ, 29 ನೇ ತಾರೀಖಿನಂದು ಕರಿಬೆಟ್ಟಿನ ಹೈಗುಳಿ ದೈವಕ್ಕೆ ಕುರಿ ಸೇವೆ ನಡೆಯುತ್ತದೆ. ಜೂನ್ ತಿಂಗಳಲ್ಲಿ ಮಹಾಕಾಳಿ ಮಾರಿ ಹಬ್ಬ ನಡೆಯುತ್ತದೆ.
ಹೆಮ್ಮಾಡಿ, ಉಪ್ಪಿನ ಕುದ್ರು, ಹೇರಿಕುದ್ರು, ಹಟ್ಟಿಯಂಗಡಿ, ನೇರಳೆಕಟ್ಟೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಭಕ್ತಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ 92ಸೆಂಟ್ಸ ಜಾಗವಿದೆ. 2024ರ ಜನವರಿ ತಿಂಗಳಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನಾಗರಾಜ ಮಡಿವಾಳ ತಲ್ಲೂರು ಇವರು ಮಡಿವಾಳರಾಗಿ, ಅಮ್ಮಯ್ಯ ದೇವಾಡಿಗ ಉಪ್ಪಿನ ಕುದ್ರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹಬೈದರ್ಕಳ ಮೂಡೂರ ಹೈಗುಳಿ ಪರಿವಾರ ಗರೋಡಿ
ತಲ್ಲೂರು ಗ್ರಾಮ ಮತ್ತು ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576230

ಗರೋಡಿಯ ಅರ್ಚಕರು:

ಕುಮಾರ ಪೂಜಾರಿ – 9845605256
ಗೋಪಾಲ ಪೂಜಾರಿ – 9008854523
ನಾಗರಾಜು ಪೂಜಾರಿ – 8971914099

ಪಾತ್ರಿಗಳು

ರಾಜು ಪೂಜಾರಿ – 9845980346

ಮಾಹಿತಿ ನೀಡಿದವರು

ರಾಜು ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

29.04.2025

Shree Brahma Baidarkala Koti-Chennayya, Panjurli Garodi, Holmage

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ್ಯ, ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರೋಡಿ, ಹೊಳ್ಮಗೆ

ಉಡುಪಿಯಿಂದ – ಕುಂದಾಪುರ – ಹೆಮ್ಮಾಡಿಯ ನಂತರ – ಅರಾಟೆ ಸೇತುವೆ ದಾಟಿ ಎನ್.ಎಚ್.66ರಿಂದ ಬಲಕ್ಕೆ ಗಂದಮಕ್ಕಿ ರಸ್ತೆಗೆ ತಿರುಗಿ ಹಕ್ಲಾಡಿ ಮಾರ್ಗವಾಗಿ ಸುಮಾರು 7ಕಿ.ಮೀ. ಸಾಗಿ ಈ ಗರೋಡಿ ತಲುಪ ಬಹುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚವಿರುವ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿ-ಚೆನ್ನಯರು ಹಾಗೂ ಇಬ್ಬರು ಚಿಟುಕರ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕಾಂತಣ್ಣಬೈದ, ಮಗು ಹಾಗೂ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೈಗುಳಿ, ನೇತ್ರಹೈಗುಳಿ, ಮೂಡೂರ ಹೈಗುಳಿ, ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಗಳಿಗ ಪೂಜೆ ನಡೆಯುತ್ತದೆ. ಎಡಬದಿಯಲ್ಲಿ ಶಂಕರಣ್ಣ ಹೈಗುಳಿ, ಕರಿಯಮ್ಮ, ಹಾಗೂ ಕರಿಬೆಟ್ಟಿನ ಹೈಗುಳಿ ದೈವಗಳ ಸಾನಿಧ್ಯವಿದೆ.
ಪಕ್ಕದಲ್ಲಿ ಪಂಜುರ್ಲಿ, ಮೋಡದ ಪಂಜುರ್ಲಿ, ಹೈಗುಳಿ, ಮಂಡಕಟ್ಟು ಹೈಗುಳಿ, ಜುಮಾದಿ, ಬಾಲಮ್ಮ, ಬಾಲಯ್ಯ, ದೊಟ್ಟಿಕಾಲು ಚಿಕ್ಕು, ಕುಡೂರ ಚಿಕ್ಕು, ಹಳೆಯಮ್ಮ, ಎಳೆಯಮ್ಮ, ಮರ್ಲಿಚಿಕ್ಕು, ಗುರಚಿಕ್ಕು, ಕೆಂಡಮ್ಮ, ಹೊನ್ನಮ್ಮ, ಚೆನ್ನಮ್ಮರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಹೈಗುಳಿ, (ಮೂರು) ಜೋಗಿಪುರುಷ, ಸಾವಿರ ಹೈಗುಳಿ, ಕೆಂಚಾರ ಹೈಗುಳಿ, ಹನಾರಹೈಗುಳಿ, ಹೀಂತ್ರ ಹೈಗುಳಿ, ಮೂತ್ರ ಹೈಗುಳಿ, ಚಂಡಿ, ಕೆಪ್ಪ ಹೈಗುಳಿ, ಮೂಕ ಹೈಗುಳಿ, ಮಾಸ್ತಿಯಮ್ಮ, ಪತ್ತಿನ ಚಿಕ್ಕು, ಅವತಾರ ಚಿಕ್ಕು, ಹೊಸ ಭೂತಗಳ ಮರದ ಮೂರ್ತಿ ಹಾಗೂ ಪಾತ್ರಿ ಪುರುಷರ ಕಲ್ಲುಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಕ್ಷೇತ್ರಪಾಲ ಸಾನಿಧ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗಬನವಿದೆ.

ಸಂಜೀವ ಪೂಜಾರಿ

ಸುಮಾರು 30 ವರ್ಷಗಳಿಂದ ಸಂಜೀವ ಪೂಜಾರಿಯವರು (64 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಅಣ್ಣ ಅಂತ ಪೂಜಾರಿ, ಹಿರಿಯರಾದ ಬಾಲ ಪೂಜಾರಿ, ಕೃಷ್ಣ ಪೂಜಾರಿ, ನಾಗಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು.
ಶಂಕರ ಪೂಜಾರಿಯವರು (60 ವರ್ಷ) ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ರಾಮ ಪೂಜಾರಿ, ಜಲ್ಲ ಪೂಜಾರಿಯವರು ಇಲ್ಲಿಯ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಸುಭಾಷ್ ಶೆಟ್ಟಿಯವರು ಸಮಿತಿಯ ಅಧ್ಯಕ್ಷರಾಗಿ, ಚಂದ್ರಹಾಸ ನಾಯ್ಕ ಕಾರ್ಯದರ್ಶಿಯಾಗಿ, ಚಂದ್ರ ಪೂಜಾರಿ ಜತೆ ಕಾರ್ಯದರ್ಶಿಯಾಗಿ, ಸೂರು ನಾಯ್ಕ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿತಿಂಗಳಲ್ಲಿ ಅಗೆಲು ಸೇವೆ, ಮರುದಿನ ದರ್ಶನ ತುಲಾಭಾರ ಸೇವೆ, ಕೈದ ಪೂಜೆಗಳು ನಡೆಯುತ್ತವೆ. ಮಾರ್ಚ 12ನೇ ತಾರೀಖಿಗೆ ಪಂಜುರ್ಲಿ ದೈವದ ಕೋಲ, 14ನೇ ತಾರೀಖಿನಂದು ಗೆಂಡ ಸೇವೆ ನಡೆಯುತ್ತದೆ.
ಹೊಳ್ಮಗೆ ಹಾಗೂ ಹಕ್ಲಾಡಿ ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಭಕ್ತ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 10ಸೆಂಟ್ಸ ಜಾಗವಿದ್ದು ಸುಮಾರು 20ವರ್ಷಗಳ ಹಿಂದೆ ಗರೋಡಿಯ ಜೀರ್ಣೋದ್ಧಾರ ನಡೆದಿದೆ.
ಪಂಜುರ್ಲಿ ದೈವದ ಕೋಲಕ್ಕೆ ಬಾಬು ಪಾಣಾರ ಮತ್ತು ಸಂಗಡಿಗರು ನೃತ್ಯವಿಶಾರದರಾಗಿ ಸೇವೆ ಸಲ್ಲಿಸುತ್ತಾರೆ. ಗರೋಡಿಯ ಮಡಿವಾಳರಾಗಿ ಮಹೇಶ್ ಮಡಿವಾಳರು ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರೋಡಿ,
ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ.

ಗರೋಡಿಯ ಅರ್ಚಕರು:

ಸಂಜೀವ ಪೂಜಾರಿ – 9741953582

ಪಾತ್ರಿಗಳು

ಶಂಕರ ಪೂಜಾರಿ – 9845650365

ಮಾಹಿತಿ ನೀಡಿದವರು

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala & Shivaraya Garodi, Handadi

ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರೋಡಿ, ಹಂದಾಡಿ.

ಉಡುಪಿಯಿಂದ ಬ್ರಹ್ಮಾವರ ತಲುಪಿ, ಬ್ರಹ್ಮಾವರ ಪೇಟೆಯಿಂದ ಸುಮಾರು 1.2ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬಲಕ್ಕೆ ತಿರುಗಿ 1.2ಕಿ.ಮೀ ದೂರ ಸಾಗಿದರೆ ಹಂದಾಡಿ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಷಡಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಉಪಾಸನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿ-ಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಪಂಜುರ್ಲಿ ದೈವದ ಸಾನಿಧ್ಯವಿದೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಹುಲಿಚೌಂಡಿ, ಜುಮಾದಿ, ಬಂಟ, ಮೈಂದಾಳ್ತಿ, ಬಾಲಯ್ಯ, ಪಂಜುರ್ಲಿ, ಚಿಕ್ಕಮ್ಮ, ಹಾಗೂ ಹೈಗುಳಿ ದೈವಗಳಿಗೆ ಪೂಜೆ ನಡೆಯುತ್ತದೆ.
ಬ್ರಹ್ಮಗುಡಿಗೆ ಎದುರುಮುಖವಾಗಿ ನಂದಿ, ಜೋಗಿಪುರುಷ, ಚಾವುಂಡಾ, ಗುರುಕಂಬ, ಸ್ಥಳ ಚಿಕ್ಕಮ್ಮ, ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಎರಡು ಮೂರ್ತಿಗಳಿವೆ.
ಗರೋಡಿಯ ಹೆಬ್ಬಾಗಿಲಿಗೆ ತಾಗಿಕೊಂಡಿರುವ ಗುಡಿಯಲ್ಲಿ ಶಿವರಾಯ, ಬಂಟ ಹಾಗೂ ಕಾಳಮ್ಮ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ ಕಟ್ಟೆ, ತುಳಸಿಕಟ್ಟೆ, ಬಲಿಕಲ್ಲುಗಳಿವೆ.
ಗರೋಡಿಯ ಪಕ್ಕದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಹೆರಿಯ ಪೂಜಾರಿ

ಶ್ರೀಕಾಂತ ಪೂಜಾರಿ

ಪ್ರಕಾಶ ಪೂಜಾರಿ

ರಮೇಶ ಪೂಜಾರಿ

ಅಶೋಕ ಪೂಜಾರಿ

ಹೆರಿಯ ಪೂಜಾರಿ (75 ವರ್ಷ), ಶ್ರೀಕಾಂತ ಪೂಜಾರಿ (40 ವರ್ಷ), ಪ್ರಕಾಶ ಪೂಜಾರಿ (50 ವರ್ಷ), ರಮೇಶ ಪೂಜಾರಿ (50 ವರ್ಷ), ಅಶೋಕ ಪೂಜಾರಿ (38 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಸೋಮ ಪೂಜಾರಿ, ಜಬ್ಬ ಪೂಜಾರಿ, ರಾಮ ಪೂಜಾರಿಯವರು ಗರೋಡಿಯ ಅರ್ಚಕರಾಗಿದ್ದರು.
ಸೀನ ಪೂಜಾರಿ (75 ವರ್ಷ) ಸುಧೀರ ಪೂಜಾರಿ (50 ವರ್ಷ) ಇವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಶಾಸ ಪೂಜಾರಿ, ಬಾಬಿ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ರಾಜೇಶ್ ಶೆಟ್ಟಿ ಅಧ್ಯಕ್ಷರಾಗಿ, ಕರುಣಾಕರ ಶೆಟ್ಟಿ ಕಾರ್ಯದರ್ಶಿಯಾಗಿ, ಶೇಖರ ಪೂಜಾರಿ ಕೋಶಾಧಿಕಾರಿಯಾಗಿ, ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಆದಿತ್ಯವಾರ, ಶುಕ್ರವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಮಾರ್ಚ್ ತಿಂಗಳಲ್ಲಿ ಅಗೆಲು ಸೇವೆ, ಮರುದಿನ ಹಾಲು ಹಬ್ಬ, ತುಲಾಭಾರ ಸೇವೆಗಳು ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಬೈದರ್ಕಳ ನೇಮ, ಶಿವರಾಯ ಕೋಲ ಸೇವೆಗಳು ನಡೆಯುತ್ತವೆ.
ಹಂದಾಡಿ, ಕುಂಬ್ರಗೋಡು, ಹಾಗೂ ಬೆಣ್ಣೆ ಕುದ್ರುವಿನ ಜನ ಈ ಗರೋಡಿಯಲ್ಲಿ ಕೂಡುಕಟ್ಟಿಗೆ ಸೇರಿದವರಾಗಿದ್ದು, ತುಲಾಭಾರ ಸೇವೆ, ಕಾಣಿಕೆ ಸೇವೆ ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 84ಸೆಂಟ್ಸ ಜಾಗವಿದ್ದು, ಗರೋಡಿಯು 2013ರಲ್ಲಿ ಜೀರ್ಣೋದ್ದಾರಗೊಂಡಿದೆ.
ಗುಂಡ ಪರವ ಚೇರ್ಕಾಡಿ ಇವರು ಗರೋಡಿಯ ನೃತ್ಯವಿಶಾರದರಾಗಿ, ಬಾಲಕೃಷ್ಣ ಮಡಿವಾಳರಾಗಿ, ಗಣೇಶ ದೇವಾಡಿಗ ಬಾರ್ಕೂರು ಇವರು ವಾಧ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರೋಡಿ ಹಂದಾಡಿ,
ಬ್ರಹ್ಮಾವರ ತಾಲೂಕು – 576213.

ಗರೋಡಿಯ ಅರ್ಚಕರು:

ಶ್ರೀಕಾಂತ ಪೂಜಾರಿ – 8861885814
ಪ್ರಕಾಶ ಪೂಜಾರಿ – 9964023518
ರಮೇಶ ಪೂಜಾರಿ – 994513741
ಅಶೋಕ ಪೂಜಾರಿ – 9741633406

ಮಾಹಿತಿ ನೀಡಿದವರು

ರಮೇಶ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.04.2025

Shree Koti Chennayyara panjurli Garodi, Mudkeri Basruru

ಶ್ರೀ ಕೋಟಿ ಚೆನ್ನಯ್ಯರ ಪಂಜುರ್ಲಿ ಗರೋಡಿ, ಮೂಡ್ಕೇರಿ ಬಸ್ರೂರು

ಉಡುಪಿಯಿಂದ ಕುಂದಾಪುರ ತಲುಪಿ ಬಸ್ರೂರು ಮೂರುಕೈ ಬಸ್ ನಿಲ್ದಾಣದ ಹತ್ತಿರ ಕುಂದಾಪುರ ಶಿವಮೊಗ್ಗ ರಸ್ತೆಗೆ ಬಲಕ್ಕೆ ತಿರುಗಿ ಸುಮಾರು 6ಕಿ.ಮೀ. ದೂರದಲ್ಲಿ ಬಸ್ರೂರಿನಲ್ಲಿ ಎಡಕ್ಕೆ ತಿರುಗಿ 800ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿ ಈ ಗರೋಡಿ ಇದೆ.
ಬ್ರಹ್ಮ ಗುಡಿಯ ಹೊರಗೆ ಬಲಬದಿಯಲ್ಲಿ ಮಾಸ್ತಿಯಮ್ಮ ಊಮಲ್ತಿ ಹಾಗೂ ಬೊಬ್ಬರ್ಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಆಂಜನೇಯ ವರಾಹ ಪಂಜುರ್ಲಿ ಹಾಗೂ ವಾರಾಹಿ ದೈವಗಳ ಆರಾಧನೆಯಿದೆ.
ಗರೋಡಿಗೆ ಪೂರ್ವಾಭಿಮುಖವಾಗಿ ಒಂದು ದ್ವಾರವಿದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿರುವ ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಲಕ್ಷೀವೆಂಕಟೇಶ ಹಾಗೂ ಪದ್ಮಾವತಿಯರ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಈಶ್ವರ ದೇವರಿಗೆ ಪೂಜೆಯಿದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ದೇಯಿ ಬೈದೆತಿ, ಚಿಟುಕರ, ಕೋಟಿ, ಚಿಟುಕರ, ಚೆನ್ನಯ್ಯ ಚಿಟುಕರ ಹಾಗೂ ನಿಗಳರ ಮರದ ಮೂರ್ತಿಗಳಿವೆ.
ಗುಂಡದ ಬಲ ಭಾಗದಲ್ಲಿ ಪೈಯ್ಯ ಬೈದ್ಯರು, ಚಿಟುಕರ, ಪಾತ್ರಿ ಬಿಂಬ ಹಾಗೂ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಮೂರ್ತಿಗಳಿವೆ.
ಬ್ರಹ್ಮ ಗುಡಿಯ ಹೊರಗೆ ಬಲಬದಿಯಲ್ಲಿ ಮಾಸ್ತಿಯಮ್ಮ ಊಮಲ್ತಿ ಹಾಗೂ ಬೊಬ್ಬರ್ಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಆಂಜನೇಯ ವರಾಹ ಪಂಜುರ್ಲಿ ಹಾಗೂ ವಾರಾಹಿ ದೈವಗಳ ಆರಾಧನೆಯಿದೆ.
ಪಕ್ಕದಲ್ಲಿ ಧೂಮಾವತಿ, ಬಾಲಯ್ಯ, ಮೈಂದಾಲ್ತಿ, ಬಾಲಯ್ಯ, ದೊಟ್ಟೆಕಾಲು ಚಿಕ್ಕು, ಜೋಡು ಹೈಗುಳಿ, ನಂದಿಕೇಶ್ವರ, ಒಂಟಿ ಹೈಗುಳಿ ಮೋಡ, ಮರ್ಲು ಚಿಕ್ಕು, ರಕ್ತ ಹೈಗುಳಿ ಮೋಡ, ಚಿನಿಕರ ಭೂತ ಅಮ್ಮನವರ ದೈವಗಳ ಆರಾಧನೆಯಿದೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಗಣಕೂಟ, ಜೋಡು ಹೈಗುಳಿ, ಜೋಗಿ ಪುರುಷ, ಕಳುವಿನ ಚಿಕ್ಕು ದೈವಗಳ ಮರದ ಮೂರ್ತಿಯಿದೆ.
ಗರೋಡಿಯ ಬಲಬದಿಯಲ್ಲಿರುವ ಗುಡಿಯೊಂದರಲ್ಲಿ ಶಿವರಾಯ ಹಾಗೂ ಚಿಟುಕರ ಮರದ ಮೂರ್ತಿಗಳಿವೆ. ಇನ್ನೊಂದು ಗುಡಿಯಲ್ಲಿ ವೀರಮಾಸ್ತಿ, ಮಹಾಕಾಳಿ ಹಾಗೂ ಹೊರಸುತ್ತಿನ ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಅಂಗಣದಲ್ಲಿ ತುಳಸೀಕಟ್ಟೆ ಹಾಗೂ ಕ್ಷೇತ್ರಪಾಲ ಕಟ್ಟೆ ಹಾಗೂ ಅಮ್ಮನವರ ಕಟ್ಟೆಗಳಿವೆ.
ಇನ್ನೊಂದು ಗುಡಿಯಲ್ಲಿ ಸ್ವಾಮಿ ಹಾಗೂ ನಾಗದೇವರಿಗೆ ಪೂಜೆ ನಡೆಯುತ್ತದೆ.

ಶಂಕರ ಪೂಜಾರಿ

ಪ್ರಶಾಂತ ಪೂಜಾರಿ

ಶಂಕರ ಪೂಜಾರಿ (76 ವರ್ಷ ಪ್ರಾಯ), ರಾಘವೇಂದ್ರ ಪೂಜಾರಿ (42 ವರ್ಷ), ಪ್ರಶಾಂತ ಪೂಜಾರಿ (40 ವರ್ಷ) ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಹಿರಿಯರಾದ ನಂದು ಪೂಜಾರಿ, ವೆಂಕಟ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.

ಅಶೋಕ ಪೂಜಾರಿ

ಅಶೋಕ ಪೂಜಾರಿ (48 ವರ್ಷ) ಯವರು ಇಲ್ಲಿಯ ಸ್ಥಳ ಪಾತ್ರಿಗಳು. ಹಿಂದೆ ಗೋಪಾಲ ಪೂಜಾರಿ, ಕೃಷ್ಣ ಪೂಜಾರಿ, ಚೆನ್ನಯ್ಯ ಪೂಜಾರಿಯವರು ಈ ಗರೋಡಿಯ ಸ್ಥಳ ಪಾತ್ರಿಗಳಾಗಿದ್ದರು.
14ಜನ ಸದಸ್ಯರಿರುವ “ಬಸ್ರೂರು ಮೂಡ್ಕೇರಿ ಗರೋಡಿ ಮನೆ ಅಳಿಯ ಸಂತಾನ ಕುಟುಂಬ ಟ್ರಸ್ಟ್” ಎಂಬ ಟ್ರಸ್ಟ್ ಆಡಳಿತ ನೋಡಿ ಕೊಳ್ಳುತ್ತಿದ್ದು, ಶಂಕರ ಪೂಜಾರಿಯವರು ಗೌರವ ಅಧ್ಯಕ್ಷರಾಗಿಯೂ, ಅಪ್ಪು ಪೂಜಾರಿಯವರು ಅಧ್ಯಕ್ಷರಾಗಿಯೂ, ವಿಜಯ ಇವರು ಕಾರ್ಯದರ್ಶಿಯಾಗಿಯೂ ಸೇವೆ ಮಾಡುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತಿದೆ. ಸಂಕ್ರಾಂತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ನವರಾತ್ರಿಯಲ್ಲಿ ನವಮಿ ಪೂಜೆ, ನವೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಮರುದಿನ ಎಲ್ಲಾ ದೈವಗಳ ದರ್ಶನ ಸೇವೆ ನಡೆಯುತ್ತದೆ.
ಬಸ್ರೂರು, ಕಂದಾವರ, ಕೋಣಿ, ಜಪ್ತಿ ಹಾಗೂ ಬಳ್ಕೂರು ಭಾಗದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಭಕ್ತ ಜನರ ಕಾಣಿಕೆ ಸಹಾಯ ಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸುಮಾರು ಮೂರು ಎಕರೆ ಜಮೀನು ಇದೆ. 1967ರಲ್ಲಿ, 1983ರಲ್ಲಿ ಗರೋಡಿಯ ಜೀಣೋದ್ಧಾರವಾಗಿದ್ದು, ಸದ್ಯ ಪುನ: ಜೀರ್ಣೋದ್ಧಾರದ ಯೋಜನೆಯಿದೆ.
ಕುಷ್ಟ ಮಡಿವಾಳ ಕುಂದಾಪುರ ಇವರು ಗರೋಡಿಯ ಮಡಿವಾಳರಾಗಿ, ಭಾಸ್ಕರ ದೇವಾಡಿಗ ಬಸ್ರೂರು ಇವರು ವಾದ್ಯದವರಾಗಿ, ವೀರ ಬಸ್ರೂರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಕೋಟಿ ಚೆನ್ನಯರ ಪಂಜುರ್ಲಿ ಗರೋಡಿ,
ಮೂಡ್ಕೇರಿ, ಬಸ್ರೂರು ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576211.

ಗರೋಡಿಯ ಅರ್ಚಕರು:

ಶಂಕರ ಪೂಜಾರಿ – 9686125686
ರಾಘವೇಂದ್ರ ಪೂಜಾರಿ – 9535652787
ಪ್ರಶಾಂತ ಪೂಜಾರಿ – 8971884487

ಪಾತ್ರಿ:

ಅಶೋಕ ಪೂಜಾರಿ – 9741184139

ಮಾಹಿತಿ ನೀಡಿದವರು :

ಶಂಕರ ಪೂಜಾರಿ
ಪ್ರಶಾಂತ ಪೂಜಾರಿ
ಅಶೋಕ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.04.2025