Baidashree

Shree Brahma Baidarkala Garodi, Bannadi.

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬನ್ನಾಡಿ.

ಉಡುಪಿಯಿಂದ – ಬ್ರಹ್ಮಾವರದ ಮೂಲಕ ಕೋಟ ಮೂರುಕೈಯಲ್ಲಿ ಬಲಕ್ಕೆ ಸೈಬ್ರಕಟ್ಟೆ ರಸ್ತೆಗೆ ತಿರುಗಿ ಸುಮಾರು 2.5 ಕಿ. ಮೀ. ನಂತರ ಎಡಕ್ಕೆ ತಿರುಗಿ 1.1 ಕಿ. ಮೀ. ಸಾಗಿದರೆ ಬನ್ನಾಡಿ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯ ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ದೇವಕನ್ಯೆ, ಕೋಟಿ-ಚೆನ್ನಯರು, ಇಬ್ಬರು ಕಿರುಬಂಟರು, ದೇವಕನ್ಯೆಯರ ಮರದ ಮೂರ್ತಿ, ಮೈಸಂದಾಯ ದೈವದ ಮಣೆ ಮಂಚವಿದೆ.
ಗುಂಡದ ಬಲಭಾಗದಲ್ಲಿ ಕಾಂತ ಕರ್ಟು, ಬಂಟ, ಕುದುರೆಯ ಮೇಲೆ ಕುಳಿತ ಪುರುಮಲ ಬಲ್ಲಾಳರ ಮರದ ಮೂರ್ತಿ, ನಂದಿಕೋಣ, ಹಾಗೂ ದೇವ ಬಲ್ಲಾಳರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೈಗುಳಿ, ಕಾಸಿನ ಹೈಗುಳಿ ಹಾಗೂ ಪ್ರಧಾನ ಪಂಜುರ್ಲಿ ದೈವಗಳ ಸಾನಿಧ್ಯವಿದೆ. ಎಡಬದಿಯಲ್ಲಿ ಬೊಬ್ಬರ್ಯನ ಮರದ ಮೂರ್ತಿ, ಎರಡು ಹೈಗುಳಿ ದೈವಗಳ ಮಣೆ ಮಂಚವಿದೆ.
ಪಕ್ಕದಲ್ಲಿ ಮೈಂದಾಳ್ತಿ ಬಂಟ, ಮಂದಾಳ್ತಿ, ಬಾಲಪುರುಷ, ಜುಮಾದಿ, ವರಾಹ ಪಂಜುರ್ಲಿ, ಪ್ರಧಾನ ಚಿಕ್ಕು, ಚಿಕ್ಕು, ಅವತಾರ ಚಿಕ್ಕು, ದೊಟ್ಟಿಕಾಲ ಚಿಕ್ಕು, ಹಳ್ಳಾಡಿ ಚಿಕ್ಕು, ಮಾರಣೆಕಟ್ಟೆ ಚಿಕ್ಕು, ಬಗ್ಗು ಚಿಕ್ಕು, ಹಳೆಯಮ್ಮರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರುಮುಖವಾಗಿ ಯಕ್ಷಿ, ನಂದಿಕೋಣ, ಬಾಲಚಿಕ್ಕು, ಗುರಿಕಂಬ, ಜೋಗಿಪುರುಷ, ಪ್ರಧಾನ ಹೈಗುಳಿ, ಮುರಚೌಂಡೇಶ್ವರ, ಬಂಟ, ನಂದಿಕೋಣದ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಎರಡು ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಹುಲಿರಾಯ, ಬಂಟ, ಶಿವರಾಯ, ಹೈಗುಳಿ, ಕಾಳಮ್ಮನ ಆರಾಧನೆಯಿದೆ.
ಗರೋಡಿಯ ಆವರಣದೊಳಗೆ ಹೈಗುಳಿ, ಕ್ಷೇತ್ರಪಾಲ, ತುಳಸಿಕಟ್ಟೆಗಳಿವೆ.
ಗರೋಡಿಯ ಪಕ್ಕದಲ್ಲಿ ಕೊರತಿ ಬೈಕಾಡ್ತಿ ಪರಿವಾರ ಹಾಗೂ ನೀಚ ಪರಿವಾರ ದೈವಗಳ ಕಟ್ಟೆಗಳಿವೆ.

ರಾಮ ಪೂಜಾರಿ

ರಾಮ ಪೂಜಾರಿಯವರು (55 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಗಣಪ ಪೂಜಾರಿ, ತಿಮ್ಮ ಪೂಜಾರಿ, ವೆಂಕ್ಟು ಪೂಜಾರಿಯವರು ಇಲ್ಲಿ ಅರ್ಚಕರಾಗಿದ್ದರು.
ಈ ಗರೋಡಿಯಲ್ಲಿ ಈಗ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಮೊದಲು ಬನ್ನಾಡಿ ಚಾಂಪ ಪೂಜಾರಿಯವರು, ಬಚ್ಚ ಪೂಜಾರಿ, ಕುರುಡು ಪೂಜಾರಿ, ಮಾಲಿಂಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಕಂಬಳ ಗದ್ದೆ ಮನೆ ರಘುರಾಮ ಶೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರಿಗೆ ಮೊದಲು ಮಹಾಬಲ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಶೀನಪ್ಪ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲು ಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆಗಳು ನಡೆಯುತ್ತವೆ. ಮಾರ್ಚ 3ನೇ ತಾರೀಖಿನಂದು ಅಗೆಲು ಸೇವೆ, 4ನೇ ತಾರೀಖಿನಂದು ಹೈಗುಳಿ, ಶಿವರಾಯ ಹಾಗೂ ಚಿಕ್ಕಮ್ಮ ದೈವಗಳಿಗೆ ಗೆಂಡ ಸೇವೆ, ನಂತರ ಪಂಜುರ್ಲಿ ಕೋಲ ನಡೆಯುತ್ತದೆ. ನಂತರ ಶಿವರಾಯ ಕೋಲ (ಹರಕೆಯದ್ದು ಇದ್ದರೆ ಮಾತ್ರ) ನಡೆಯುತ್ತದೆ.
ವಡ್ಡರ್ಸೆ, ಗಿಳಿಯಾರು, ಬೇಳೂರು, ಕೋಟ, ಗುಲ್ವಾಡಿ, ಯಾಳಹಕ್ಲು, ಅಕಿಲಾಡಿ, ಮಧುವನ, ಉಪ್ಪಾಡಿ, ಹಾಗೂ ಬನ್ನಾಡಿಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ತೆಂಗಿನ ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಭಕ್ತಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. 2015ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ, ಗುಂಡು ಪರವ ಚೇರ್ಕಾಡಿ ಇವರು ಗರೋಡಿಯ ನೃತ್ಯ ವಿಶಾರದರಾಗಿ, ವೆಂಕಟೇಶ ಮಡಿವಾಳ ಸಾಲಿಗ್ರಾಮ ಇವರು ಮಡಿವಾಳರಾಗಿ, ನಾರಾಯಣ ಶೇರಿಗಾರ ವಡ್ಡರ್ಸೆ ವಾದ್ಯದವರಾಗಿ, ಐತ ವಡ್ಡರ್ಸೆ ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬನ್ನಾಡಿ,
ಬನ್ನಾಡಿ ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576225

ಗರೋಡಿಯ ಅರ್ಚಕರು:

ರಾಮ ಪೂಜಾರಿ – 9902669188

ಮಾಹಿತಿ ನೀಡಿದವರು :

ರಾಮ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Garodi Kurudunje, Aroor

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರುಡುಂಜೆ, ಆರೂರು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ಭದ್ರಗಿರಿಯಲ್ಲಿ ಬಲಕ್ಕೆ ತಿರುಗಿ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಸುಮಾರು 8 ಕಿ.ಮೀ. ಸಾಗಿದ ನಂತರ, ಆರ್.ಕೆ.ಪಾಟ್ಕರ್ ಶಾಲೆಯ ಹತ್ತಿರ ಬಲಕ್ಕೆ ಆರೂರು ರಸ್ತೆಯಲ್ಲಿ ಸುಮಾರು 2.5ಕಿ.ಮೀ. ದೂರದಲ್ಲಿ ಇದೆ ಈ ಗರೋಡಿ.
ಗರೋಡಿಯು ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು ಬ್ರಹ್ಮಗುಡಿಯು ಯತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಕುದುರೆಯೇರಿ ಕುಳಿತ ನಾಗಬ್ರಹ್ಮರ ಬೆಳ್ಳಿಯ ಕವಷ ಹೊದಿಸಿದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿಯ ಮಣೆಮಂಚ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುದುರೆಯೇರಿ ಕುಳಿತ ಒಕ್ಕು ಬಲ್ಲಾಳ ಹಾಗೂ ಮಗುವಿನ ಮರದ ಮೂರ್ತಿ, ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಮೂಲ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಶಿವರಾಯ ದೈವದ ಮಣೆಮಂಚ, ಜುಮಾದಿ, ಬಾಲೆ, ಹಾಗೂ ಮೈಂದಾಳ್ತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಹೈಗುಳಿ ದೈವದ ಮಣೆಮಂಚ, ಜೋಗಿಪುರುಷ, ಬಾಲೆ ಹಾಗೂ ಚಿಕ್ಕಮ್ಮ ದೈವಗಳ ಮರದ ಮೂರ್ತಿ ಹಾಗೂ ಗುರುಕಂಬವಿದೆ.
ಗರೋಡಿಯ ಹೊರಗೆ ಜಗಲಿಯಲ್ಲಿ ಬಾಗಿಲ ಒಂದು ಪಕ್ಕದಲ್ಲಿ ಬಾಗಿಲಬೋಬ್ಬರ್ಯ ಮರದ ಮೂರ್ತಿ ಇನ್ನೊಂದು ಪಕ್ಕದಲ್ಲಿ ಪಿಲ್ಚಂಡಿ ದೈವದ ಮಣೆಮಂಚವಿದೆ.
ಗರೊಡಿಯ ಎದುರಿನ ಒಂದು ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ. ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಅಮ್ಮನವರ ಸಾನಿದ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗಬನ, ಬ್ರಹ್ಮಸ್ಥಾನಗಳಿವೆ.

ದೋಜು ಪೂಜಾರಿ

ದೋಜು ಪೂಜಾರಿ (80 ವರ್ಷ) ಇವರು ಇಲ್ಲಿಯ ಅರ್ಚಕರು ಹಾಗೂ ದರ್ಶನದ ಸ್ಥಳ ಪಾತ್ರಿ. ಇವರ ಮೊದಲು ಸಂಜೀವ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು.
ಅಶೋಕ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಇವರ ಮೊದಲು ಸುಖಾನಂದ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ಇವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಕೊಡಿತಿಂಗಳಲ್ಲಿ ಡಿಸೆಂಬರ್ ಒಂದನೇ ತಾರೀಖಿನಂದು ಪೂಜಾರಿ ಮನೆಯವರಿಂದ ಅಗೆಲು ಸೇವೆ, ಮರುದಿನ ಭಂಡಾರದ ಮನೆಯವರಿಂದ ಶುದ್ಧದ ಅಗೆಲು, ಹನೊಂದಕ್ಕೆ ಬೈದರ್ಕಳ ನೇಮ, ಜೋಗಿ ಪುರುಷ, ಮೈಂದಾಳ್ತಿ ಕೋಲ ನಡೆದು ಹನ್ನೆರಡನೇ ತಾರೀಖಿನಂದು ಶಿವರಾಯ ದೈವಕ್ಕೆ ಮುಂಡಿಗೆ ಪೂಜೆ ನಡೆಯುತ್ತದೆ.
ಆರೂರು, ಬೆಳ್ಮಾರು, ಅಡ್ಪು, ಆಳುಂಜೆ, ಅಡ್ಜಿಲ್, ನಡಿಬೆಟ್ಟು, ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆಯಂತಹ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರಜನರ ವರಡ ವಂತಿಗೆಯಿಂದ ಭರಿಸಲಾಗುತ್ತದೆ.
ಗರೋಡಿಯು 1953, 1978-79 ಹಾಗೂ 2010ರಲ್ಲಿ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿ, ರವಿ ಸೇರಿಗಾರ ಆರೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರುಡುಂಜೆ, ಆರೂರು,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576213.

ಗರೋಡಿಯ ಅರ್ಚಕರು:

ದೋಜು ಪೂಜಾರಿ
ಸಂತೋಷ್ ಪೂಜಾರಿ – 96861 79964

ಮಾಹಿತಿ ನೀಡಿದವರು :

ಸಂಸಂತೋಷ್ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024

Singara Garodi Naaguru, Kirimanjeshwara

ಸಿಂಗಾರ ಗರೋಡಿ ನಾಗೂರು, ಕಿರಿಮಂಜೇಶ್ವರ.

ಉಡುಪಿಯಿಂದ – ಕುಂದಾಪುರ – ಮರವಂತೆ – ನಾವುಂದ – ಕಿರಿಮಂಜೇಶ್ವರದಿAದ ಸುಮಾರು ಒಂದು ಕಿ.ಮೀ. ನಂತರ ಎನ್.ಎಚ್. 66 ರಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಎರಡು ಅಂತಸ್ತಿನ ಗುಂಡದ ಕೆಳ ಅಂತಸ್ತಿನಲ್ಲಿ ನಾಗಬ್ರಹ್ಮರ ಮೇಲಂತಸ್ತಿನಲ್ಲಿ ಗುಂಡದ ಕರ್ತುವಿನ ಮರದ ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯ, ಇಬ್ಬರು ಬಂಟರು ಹಾಗೂ ದೇಯಿ ಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಮೂರ್ ಬಂಟರ ಹಾಗೂ ಗುಂಡದ ನಂದಿಕೇಶ್ವರರ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಬಾಗಿಲನಂದಿ, ಕಾಶಿ ಪಂಜುರ್ಲಿ, ಮಳಿಯಾಳಿ ಪಂಜುರ್ಲಿ ಬಂಟ ಪಂಜುರ್ಲಿ ( ತುಳು ಪಂಜುರ್ಲಿ) ಅಣ್ಣಪ್ಪ ಪಂಜುರ್ಲಿ, ವಾಹನ ಪಂಜುರ್ಲಿ ದೈವಗಳ ಸಾನಿದ್ಯವಿದೆ.
ಗುಂಡದ ಎಡಭಾಗದಲ್ಲಿ ಗೆಂಡದ ಹೈಗುಳಿ, ಮುಡೂರ ಹೈಗುಳಿ, ದೊಟ್ಟಿಕಾಲಮ್ಮ, ದೊಟ್ಟಿಕಾಲ ಚಿಕ್ಕು, ಚಿಕ್ಕು, ಮರ್ಲಮ್ಮ, ಬಗ್ಗ ಚಿಕ್ಕು, ಬಾಲಚಿಕ್ಕು, ನೇತ್ರ ಹೈಗುಳಿ, ಗುರುದೇವ್ರು, ಮೈದಾಳಿ ಅಮ್ಮ, ಬಾಲಮ್ಮ, ಪಾತ್ರಿ ಕೋಟಿಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದರು ಮುಖವಾಗಿ ಜೋಗದೇವರು (ಜೋಗಿಪುರುಷ) ಮಾಸ್ತಿ ಅಮ್ಮ, ಕ್ಷೇತ್ರ ಹೈಗುಳಿ, ಹನಾರ ಹೈಗುಳಿ, ಮೂರ್ಚಂಡಿ, ಹೀತ್ರ ಮೂತ್ರ ಹೈಗುಳಿ, ಕಂಚಿನ ಹೈಗುಳಿ, ಮೂಕ ಹೈಗುಳಿ, ಖಂಬದ ಕೋಣೆ ಹೈಗುಳಿ, ಬಣ್ಣದ ಹೈಗುಳಿ, ಕರಿಬೆಟ್ಟು ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿಯಿದೆ.
ಗರೊಡಿಯ ಆವರದಲ್ಲಿರುವ ಗುಡಿಯೊಂದರಲ್ಲಿ ಬ್ಯಾಟಿ ಬೀರ ಹಾಗೂ ಅಸಲ ತಿಮ್ಮ ಶಕ್ತಿಗಳ ಆರಾಧನೆಯಿದೆ.
ಇನ್ನೊಂದು ಗುಡಿಯಲ್ಲಿ ಒತ್ತಿನ ಹೈಗುಳಿ, ಸಿಂಗೂರ ಹೈಗುಳಿ, ಸಿಂಗೂರ ನಂದಿ, ಪರಿವಾರ, ಊರ್ ಮಾರಮ್ಮ, ಜಪದಮಣಿ, ಸನ್ಯಾಸಿ, ಸ್ವಾಮಿಲಿಂಗ, ಭುವನೇಶ್ವರ, ಮರ್ರಕಾಳ, ಪಾತ್ರಿಕೋಲಿ, ಮೈಸ್ವಾಮಿ, ಗಂಡ ಯಕ್ಷಿ, ಹೆಣ್ಣು ಯಕ್ಷಿ, ಜಟ್ಕ, ಜೋಡು ಕೋಣ, ಬಾಗಿಲ ನಂದಿ ದೈವಗಳ ಸಾನಿದ್ಯವಿದ್ದು, ಈ ಗುಡಿಯ ಹೊರಗೆ ಕಾಡಚಿ ಅಮ್ಮನ ಮರದ ಮೂರ್ತಿಯಿದೆ.
ಇನ್ನೊಂದು ಗುಡಿಯಲ್ಲಿ ಒತ್ತಿನ ಹೈಗುಳಿ, ಸಿಂಗೂರ ಹೈಗುಳಿ, ಸಿಂಗೂರ ನಂದಿ, ಪರಿವಾರ, ಊರ್ ಮಾರಮ್ಮ, ಜಪದಮಣಿ, ಸನ್ಯಾಸಿ, ಸ್ವಾಮಿಲಿಂಗ, ಭುವನೇಶ್ವರ, ಮರ್ರಕಾಳ, ಪಾತ್ರಿಕೋಲಿ, ಮೈಸ್ವಾಮಿ, ಗಂಡ ಯಕ್ಷಿ, ಹೆಣ್ಣು ಯಕ್ಷಿ, ಜಟ್ಕ, ಜೋಡು ಕೋಣ, ಬಾಗಿಲ ನಂದಿ ದೈವಗಳ ಸಾನಿದ್ಯವಿದ್ದು, ಈ ಗುಡಿಯ ಹೊರಗೆ ಕಾಡಚಿ ಅಮ್ಮನ ಮರದ ಮೂರ್ತಿಯಿದೆ.
ಗಂಡಸರು, ಹುಡುಗರು, ಈ ಗರೋಡಿಯೊಳಗೆ ಅಂಗಿ, ಬನಿಯನ್, ತೆಗೆದು ಪ್ರವೇಶಿಸುವ ಸಂಪ್ರದಾಯವಿದೆ.
ನಾಗೂರು ಬಡಾಮನೆ ಪಂಜು ಪೂಜಾರಿಯವರು, ಸಿಂಗಾರ ಬಡಾಮನೆ ಮೂಡೂರ ಪೂಜಾರಿ, ಗಣೇಶ ಪೂಜಾರಿ, ಚಂದ್ರ ಪೂಜಾರಿ, ಗೆದ್ದೆಮನೆ ಪಂಜು ಪೂಜಾರಿ, ಪಡುಮನೆ ವೆಂಕಟೇಶ ಪೂಜಾರಿ, ಮಗಿರಬೆಟ್ಟು ಚಿಕ್ಕ ಪೂಜಾರಿ ಇವರುಗಳು ಈ ಗರೋಡಿಯ ಅರ್ಚಕರು.
ಗೆದ್ದೆಮನೆ ರವಿ ಪೂಜಾರಿ, ಸಿಂಗಾರ ಬಡಾಮನೆ ಭಾಸ್ಕರ ಪೂಜಾರಿ ಹಾಗೂ ಪಡುಮನೆ ಗಿರೀಶ್ ಪೂಜಾರಿ ಇವರು ಈ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳು.
ಮುಡೂರ ಪೂಜಾರಿಯವರು ಈ ಗರೋಡಿಯ ಮೊಕ್ತೇಸರರು. ನರಸಿಂಹ ಶೆಟ್ಟಿ, ಕಂಬಳ ಗದ್ದೆ ಮನೆ ಹಳಗೇರಿ ಇವರು ಈ ಗರೋಡಿಯ ಬಲ್ಲಾಳ ಸೆಟ್ರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿಪೂಜೆ, ಸೋಣಾರತಿ, ಪ್ರತೀ ವರ್ಷ ಜನವರಿ 14-15ನೇ ತಾರೀಖಿಗೆ ಹಾಲುಹಬ್ಬ, ಅಗೆಲು ಸೇವೆ, ತುಲಾಭಾರ ಸೇವೆ, ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಎಲ್ಲಾ ದೈವಗಳ ಕೋಲ ಸೇವೆ ನಡೆಯುತ್ತದೆ.
ನಾಗೂರು, ಬೈಂದೂರು, ಉಪ್ಪುಂದ, ಯೆರುಕೋಣೆ ಭಾಗದ ಜನರು ಈ ಗರೋಡಿಯಲ್ಲಿ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚನ್ನು ಭರಿಸಲಾಗುತ್ತದೆ.
ಗರೋಡಿಗೆ 89 ಸೆಂಟ್ಸ ಜಾಗವಿದ್ದು 2010ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನಾಗ ಪಾಣೇರ ಹಂಪಾರು ಇವರು ಈ ಗರೋಡಿಯ ನೃತ್ಯವಿಶಾರದರಾಗಿ, ಸುರೇಶ ಮಡಿವಾಳ, ಉಳ್ಳೂರು ಇವರು ಮಡಿವಾಳರಾಗಿ, ಕೃಷ್ಣ ದೇವಾಡಿಗ ಆಕಲಬೈಲು ಕಿರಿಮಂಜೇಶ್ವರ ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಸಿಂಗಾರ ಗರೋಡಿ, ನಾಗೂರು,
ಕಿರಿಮಂಜೇಶ್ವರ ಅಂಚೆ,
ಬೈಂದೂರು ತಾಲೂಕು.

ಗರೋಡಿಯ ಅರ್ಚಕರು:

ಗಣೇಶ ಪೂಜಾರಿ – 9535388261

ಮಾಹಿತಿ ನೀಡಿದವರು :

ಗಣೇಶ ಪೂಜಾರಿ,
ಚಂದ್ರೇಶ ಪೂಜಾರಿ – 9880005048

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Koti Chennayya Panjurli Garodi, Holethota – Bijoor

ಶ್ರೀ ಬ್ರಹ ಬೈದರ್ಕಳ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ಹೊಳೆತೋಟ – ಬಿಜೂರು

ಉಡುಪಿಯಿಂದ ರಾಷ್ಟಿçÃಯ ಹೆದ್ದಾರಿ ಎನ್.ಎಚ್.66ರಲ್ಲಿ ಬಿಜೂರು ತುಲು ರಾಷ್ಟ್ರೀಯ ಹೆದ್ದಾರಿಯಿಂದ ಬಲಕ್ಕೆ ತಿರುಗಿ ಸುಮಾರು 2.6ಕಿ.ಮೀ ಒಳಗೆ ಹೋದಾಗ ಬೈಂದೂರು ಹೊಳೆಯ ಬದಿಯಲ್ಲಿದೆ ಬಿಜೂರು ಹೊಳೆತೋಟ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಹಾಗೂ ನಾಗದೇವರ ಮೂರ್ತಿಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರು ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಬ್ಜಕೋಣದ (ಕುಜುಂಬ ಕಾಂಜವ ??) ಮರದ ಮೂರ್ತಿ ಹಾಗೂ ದೇಯಿಬೈದೆತಿಯ ಮಣೆಮಂಚವಿದೆ
ಬ್ರಹ್ಮಗುಡಿಯ ಹೊರಗೆ ಬಲ ಬದಿಯಲ್ಲಿ ಸಿಂಗಾರ ಹೈಗುಳಿ, ಪಂಜುರ್ಲಿ ವಾಹನ, ಪಂಜುರ್ಲಿ ದೈವಗಳ ಸಾನಿದ್ಯವಿದೆ. ಬ್ರಹ್ಮಗುಡಿಯ ಎಡಬದಿಯಲ್ಲಿ ಕರ್ತು, ಹೊನ್ನಳ್ಳಿ ಮಾಸ್ತಿ, ಚುಟ್ಟಿಬೇರುಮಾಸ್ತಿ ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿ ಧೂಮಾವತಿ, ಮಾಯಿಂದಾಳಮ್ಮನ ಮಗಳು, ಮಾಯಿಂದಾಳಮ್ಮ, ಮೂರು ಕಂಚಿನ ಹೈಗುಳಿ, ಕಾಮನ ಹೈಗುಳಿ, ಜೋಗದೇವರು, ಕೆರಾಡಿ ಹೈಗುಳಿ, ಮುರ್ಚಂಡಿ, ಕರಿಬೆಟ್ಟಿನ ಹೈಗುಳಿ, ಹೈಗುಳಿ, ತಿಮ್ಮಣ್ಣ ನಾಯ್ಕರು, ಮುಡೂರಮ್ಮ, ದೊಟ್ಟಿಕಾಲಮ್ಮ, ಮಲಕಮ್ಮ, ಹಿಜಾಣಮ್ಮ, ಮತ್ತು ವಾಹನ ದೈವಗಳ ಆರಾಧನೆಯಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಆವರಣದೊಳಗೆ ಹೊರಸುತ್ತಿನ ಹೈಗುಳಿ, ಕ್ಷೇತ್ರಪಾಲ, ಆಶ್ವತ್ತಮರದ ಕಟ್ಟೆ, ತುಳಸಿಕಟ್ಟೆ, ಬೆಳಗಲ್ಲುಗಳಿವೆ.

ಅಯ್ಯಪ್ಪ ಪೂಜಾರಿ

ಕೋಟಿ ಪೂಜಾರಿ

2020ರಿಂದ ಅಯ್ಯಪ್ಪ ಪೂಜಾರಿ (50ವರ್ಷ) ಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದು, ಕೋಟಿ ಪೂಜಾರಿ (80 ವರ್ಷ) ಯವರು ಸಹ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಕುಷ್ಠ ಪೂಜಾರಿ, ನಾಗ ಪೂಜಾರಿಯವರು ಈ ಸೇವೆ ಮಾಡಿದ್ದರು.

ನಾಗಪ್ಪ ಪೂಜಾರಿ

ಮಂಜ ಪೂಜಾರಿ

ನಾಗಪ್ಪ ಪೂಜಾರಿ ಹಾಗೂ ಮಂಜ ಪೂಜಾರಿಯವರು ಇಲ್ಲಿ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ಮಂಜಯ್ಯ ಪೂಜಾರಿ, ಮೂಡೂರ ಪೂಜಾರಿ, ನಾರಾಯಣ ಪೂಜಾರಿಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಸಂಜೀವ ಶೆಟ್ಟಿ, ನೆಲ್ಯಾಡಿ ಇವರು ಇಲ್ಲಿಯ ಬಲ್ಲಾಳ(ಮುಕ್ಕಾಲಿ) ಯಾಗಿರುವರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಪರಮೇಶ್ವರ ಪೂಜಾರಿಯವರು ಅಧ್ಯಕ್ಷರಾಗಿ, ಉದಯ ಪೂಜಾರಿಯವರುಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯಪೂಜೆ, ಸಂಕ್ರಾಂತಿ ಪೂಜೆ, ಅಷ್ಟಮಿ ಪೂಜೆ, ಕದಿರು ಕಟ್ಟುವುದು, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಒಂದು ದಿನ ಅಗೆಲು ಸೇವೆ, ದರ್ಶನ, ನೇಮ, ಎರಡನೇ ದಿನ ಗುರಿಪೂಜೆ, ಹಾಗೂ ದರ್ಶನ ಸೇವೆಗಳು ನಡೆಯುತ್ತವೆ.
ಬಿಜೂರು, ಹೊಳೆತೋಟದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ 25ಸೆಂಟ್ಸ ಜಾಗವಿದ್ದು 2000ರಲ್ಲಿ ಗರೋಡಿಯಿ ಜೀರ್ಣೋದ್ದಾರವಾಗಿದೆ.
ಸುಕುಮಾರ ಮಡಿವಾಳ ಹೊಳೆತೋಟ ಇವರು ಮಡಿವಾಳರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಪಂಜುರ್ಲಿ ಗರೋಡಿ ಹೊಳೆತೋಟ ಬಿಜೂರು,
ಬೈಂದೂರು ತಾಲೂಕು,
ಉಡುಪಿ ಜಿಲ್ಲೆ – 576244.

ಗರೋಡಿಯ ಅರ್ಚಕರು:

ಅಯ್ಯಪ್ಪ ಪೂಜಾರಿ – 7758000835,
ಕೋಟಿ ಪೂಜಾರಿ – 9632904289.

ಗರೋಡಿಯ ಪಾತ್ರಿಗಳು:

ನಾಗಪ್ಪ ಪೂಜಾರಿ -9880772880,
ಮಂಜ ಪೂಜಾರಿ – 9900825164

ಆಡಳಿತ ಸಮಿತಿ:

ಪರಮೇಶ್ವರ ಪೂಜಾರಿ – ಅಧ್ಯಕ್ಷರು – 7259585835 ;
ಉದಯ ಪೂಜಾರಿ – ಕಾರ್ಯದರ್ಶಿ – 9663003922.

ಮಾಹಿತಿ ನೀಡಿದವರು :

ಅಯ್ಯಪ್ಪ ಪೂಜಾರಿ,
ಶಂಕರ ಪೂಜಾರಿ
– 97407 50372

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Garodi, Navunda

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ, ನಾವುಂದ

ಉಡುಪಿಯಿಂದ – ಕುಂದಾಪುರ – ಮರವಂತೆಯಾಗಿ ನಾವುಂದ ತಲುಪಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಿಂದ ಬಲಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಸಾಗಿದರೆ ನಾವುಂದ ಗರೋಡಿ ಸಿಗುವುದು.
ಗರೋಡಿಯು ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹಕ್ಕೆ ಬೆಳ್ಳಿಕವಚ ಹೊದಿಸಿದ ನಾಗಬ್ರಹ್ಮರ ಮೂರ್ತಿ ಹಾಗೂ ಇನ್ನೊಂದು ಮರದ ನಾಗಬ್ರಹ್ಮರ ಮೂರ್ತಿ ಹೀಗೆ ಎರಡು ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರು, ದೇಯಿಬೈದೆತಿ ಹಾಗೂ ನಂದಿಕೋಣರ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಬೈದ ಹಾಗೂ ಬಂಟ, ಕಿನ್ನಿದಾರುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಹೊನ್ನಮ್ಮ, ಚಿನ್ನಮ್ಮ ಮರದ ಮೂರ್ತಿ , ಪ್ರಸಾದ ಹೈಗುಳಿ, ಮೂಡೂರ (ಕಡಕಟ್ಟಿನ) ಹೈಗುಳಿ ದೈವಗಳ ಕಂಚಿನ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಪಂಚಲೋಹಕ್ಕೆ ಬೆಳ್ಳಿಯ ಕವಚವಿರುವ ಮೂರ್ತಿ ಒಂಟಿ ಕೋಡೊನ ಪಂಜುರ್ಲಿ, ಧೂಮಾವತಿ, ಹೈಗುಳಿ, ಹಾಲು ಹಣ್ಣಿನ ಹೈಗುಳಿ ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿ ಜಟ್ಟಿಗ, ಮೈಂದಾಳ್ತಿ, ಬಾಲಕಂದರ ಮರದ ಮೂರ್ತಿಗಳಿವೆ.
ಅದರ ಪಕ್ಕದಲ್ಲಿ ನಂದಿ ಹಾಗೂಕರಿಬೆಟ್ಟಿನ ಹೈಗುಳಿ ಕಂಚಿನ ಮೂರ್ತಿ, ಮೂಡೂರ ಅಮ್ಮ (ಚಿಕ್ಕು) ದೊಟ್ಟಿಕಾಲು ಚಿಕ್ಕು, ಅವತಾರ ಚಿಕ್ಕು, ಬಾಲ ಚಿಕ್ಕು, ಮರ್ಲು ಚಿಕ್ಕು, ಬಗ್ಗು ಚಿಕ್ಕು, ಸನ್ಯಾಸಿ (ಜೋಗಿ ಪುರುಷ)ರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಕೆಪ್ಪ ಹೈಗುಳಿ, ಕುಜ್ಙಾಡಿ ಹೈಗುಳಿ, ಕುಂಟ ಹೈಗುಳಿ, ನಂದಿ, ಮುರ್ಚಂಡಿ, ಸುಂಕದಕಟ್ಟೆ ಹೈಗುಳಿ, ಯಕ್ಷಿ, ಮಾಸ್ತಿಕಟ್ಟೆ ಚಿಕ್ಕು, ಮಾರಣಕಟ್ಟೆ ಚಿಕ್ಕು, ಕೆಂಪಣ್ಣ ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಹೊರಗೆ ಆವರಣದೊಳಗಿನ ಗುಡಿಯಲ್ಲಿ ಹೊರಸುತ್ತಿನ ಹೈಗುಳಿ ದೈವದ ಸಾನಿಧ್ಯವಿದೆ. ಇನ್ನೊಂದು ಗುಡಿಯಲ್ಲಿ ಕಂಚಿನ ಹೈಗುಳಿಯ ಕಂಚಿನ ಮೂರ್ತಿ ಹಾಗೂ ಯಕ್ಷಿಯ ಮರದ ಮೂರ್ತಿಯಿದೆ.
ಒಂದು ಕಟ್ಟೆಯಲ್ಲಿ ಕೀಳು, ಮಂತ್ರಿಗಣ ಹಾಗೂ ಕಲ್ಲುಕುಟ್ಟಿಗ ದೈವಗಳ ಸಾನಿಧ್ಯವಿದೆ. ಇನ್ನೊಂದು ಕಟ್ಟೆಯಲ್ಲಿ ರಾಹು, ನೀಚ, ರಕ್ತ ಹೈಗುಳಿ, ನೇತ್ರ ಹೈಗುಳಿ, ಹಾಗೂ ಗ್ರಾಮ ಶಕ್ತಿಗಳ ಆರಾಧನೆಯಿದೆ.
ಗರೋಡಿಯ ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ. ಗರೋಡಿಯ ಆವರಣದಲ್ಲಿ ಬಲಿಕಲ್ಲು, ತುಳಸಿಕಟ್ಟೆಗಳಿವೆ.

ಸುಧಾಕರ ಪೂಜಾರಿ

ರಾಮಕೃಷ್ಣ ಬಿಲ್ಲವ

2016ರಿಂದ ಸುಧಾಕರ ಪೂಜಾರಿ(44ವರ್ಷ) ಇವರು ಗರೋಡಿಯ ಅರ್ಚಕರಾಗಿ, ರಾಮಕೃಷ್ಣ ಬಿಲ್ಲವ (49 ವರ್ಷ) ಇವರು ಸಹ ಅರ್ಚಕರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಹಿರಿಯರಾದ ತಿಮ್ಮಪ್ಪ ಪೂಜಾರಿ, ಕೃಷ್ಣ ಪೂಜಾರಿ, ರಾಮ ಪೂಜಾರಿ, ನಾಗ ಪೂಜಾರಿ, ನಾಗ ಪೂಜಾರಿ, ರಾಮಯ್ಯ ಪೂಜಾರಿ, ಮೋನ ಪೂಜಾರಿ, ಮಂಜ ಪೂಜಾರಿ, ಇವರುಗಳು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ನಾಗ ಪೂಜಾರಿ

ನಾಗ ಪೂಜಾರಿ(33 ವರ್ಷ) ಇವರು 2022ರಿಂದ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಮಂಜ ಪೂಜಾರಿ, ಮಾಲಿಂಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.

ಶೇಖರ ಪೂಜಾರಿ

ಶೇಖರ ಪೂಜಾರಿಯವರು ಗರೋಡಿಯ ಮೊಕ್ತೇಸರರು. ಇವರ ಮೊದಲು ನಾಗಪೂಜಾರಿ, ಮಾಲಿಂಗ ಪೂಜಾರಿಯವರು ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯ ಉಸ್ತುವಾರಿಗೆ 13 ಮಂದಿ ಟ್ರಸ್ಟಿಗಳನ್ನೊಳಗೊಂಡ ಶ್ರೀ ಬ್ರಹ್ಮಬೈದರ್ಕಳ ಗರಡಿ ಟ್ರಸ್ಟ್(ರಿ) ನಾವುಂದ ಎಂಬ ಹೆಸರಿನ ಟ್ರಸ್ಟ್ ಇದೆ. ಎನ್.ಕೆ.ಬಿಲ್ಲವ ಇವರು ಟ್ರಸ್ಟಿನ ಗೌರವಾಧ್ಯಕ್ಷರಾಗಿಯೂ, ಮುತ್ತ ಬಿಲ್ಲವ ಇವರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುಯತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಜನವರಿ 21ನೇ ತಾರೀಖಿನಂದು ಅಗೆಲು ಸೇವೆ, ಗೆಂಡ ಸೇವೆ, ದರ್ಶನ ಸೇವೆ, 22ಕ್ಕೆ ಸಿರಿಸೇವೆ, ದರ್ಶನ, ತುಲಾಭಾರ ಸೇವೆ, ಗುರಿ ಪೂಜೆಗಳು ನಡೆಯುತ್ತವೆ.
ಕಿರಿಮಂಜೇಶ್ವರ, ಮರವಂತೆ, ಬಡಾಕೇರಿ, ಹೇರೂರು, ಅರೆಹೊಳೆ, ನಾವುಂದ ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡುಕಾಯಿ ತೆಗೆದಿಡುವುದು, ಹೆರಿಗೆಯ ನಂತರ ತಿಂಗಳು ಮಾಡಿಸುವುದು, ಮುಂತಾದ ಹರಕೆಯ ಸೇವೆಗಳನ್ನು ನೀಡುವ ಕ್ರಮವಿದೆ. ಊರ ಪರವೂರ ಜನರ ವರಡ ವಂತಿಗೆ, ಕಾಣಿಕೆ, ಸಹಾಯ ಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚ ಭರಿಸಲಾಗುತ್ತದೆ.

ಗರೋಡಿಯ ಜೀರ್ಣೋದ್ದಾರದ ಮೊದಲಿನ ಫೋಟೋ.

ಗರೋಡಿಯು 2016ರಲ್ಲಿ ಜೀರ್ಣೋದ್ಧಾರಗೊಂಡಿದೆ. ಇದಕ್ಕೆ ಮೊದಲು 1982-84ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿತ್ತು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ ನಾವುಂದ ಗರಡಿಬೆಟ್ಟು,
ಗ್ರಾಮ ಮತ್ತು ಅಂಚೆ ನಾವುಂದ,
ಬೈಂದೂರು ತಾಲೂಕು 576224.

ಗರೋಡಿಯ ಅರ್ಚಕರು:

ಸುಧಾಕರ ಪೂಜಾರಿ – 9742563521 – ಪ್ರಧಾನ ಅರ್ಚಕರು.
ರಾಮಕೃಷ್ಣ ಬಿಲ್ಲವ – 8850255132 – ಸಹ ಅರ್ಚಕರು.

ಗರೋಡಿಯ ಪಾತ್ರಿಗಳು:

ನಾಗರಾಜ ಪೂಜಾರಿ 9164722979

ಗರೋಡಿಯ ಮೊಕ್ತೇಸರರು:

ಶೇಖರ ಪೂಜಾರಿ – 9743647032

ಮಾಹಿತಿ ನೀಡಿದವರು :

ಶೇಖರ ಪೂಜಾರಿ,
ಸುಧಾಕರ ಪೂಜಾರಿ,
ರಾಮಕೃಷ್ಣ ಬಿಲ್ಲವ,
ನಾಗರಾಜ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Koti Chennnaya Garodi – Ulluru 11

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ – ಉಳ್ಳೂರು 11

ಉಡುಪಿಯಿಂದ – ಕುಂದಾಪುರ – ನಾವುಂದದ ನಂತರ ಎನ್.ಎಚ್. 66ರಲ್ಲಿ ಅರೆಹೊಳೆ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ ಸುಮಾರು 2.48ಕಿ.ಮೀ. ಸಾಗಿದ ನಂತರ ಎಡಕ್ಕೆ ತಿರುಗಿ ಸುಮಾರು 2.58 ಕಿ. ಮೀ. ಸಾಗಿದರೆ ಉಳ್ಳೂರು 11 ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಸಿಮೆಂಟಿನಿಂದ ಕಟ್ಟಿ, ಟೈಲ್ಸ್ ಹಾಕಲಾದ ಬ್ರಹ್ಮಗುಂಡದ ಒಳಗೆ ಮರದ ಮೂರ್ತಿಗೆ ಬೆಳ್ಳಿಯ ಕವಚ ಹಾಕಲಾದ ನಾಗ ಬ್ರಹ್ಮರ ಹಾಗೂಮರದ ಮೂರ್ತಿಗೆ ಬೆಳ್ಳಿ ಕವಚ ಹಾಕಲಾದ ವೆಂಕಟರಮಣ ದೇವರ ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಬಂಟ ಹಾಗೂ ನಂದಿಯ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ದೇಯಿ ಬೈದೆತಿಯ ಬೆಳ್ಳಿಯ ಮೂರ್ತಿ, ಬೈದ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಬಲಭಾಗದಲ್ಲಿ ಪಂಜುರ್ಲಿ ಹಾಗೂ ಕುಪ್ಪೆ ಪಂಜುರ್ಲಿ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಕರಿಬೆಟ್ಟಿನ ಹೈಗುಳಿ, ಕಂಚಿನ ಹೈಗುಳಿ, ಮೂಕ ಹೈಗುಳಿ, ಧೂಮಾವತಿ, ಮೈಂದಾಳತಿ, ವೀರ ಜಟ್ಟಿಗ, ದೊಟ್ಟೆಕಾಲಚಿಕ್ಕು, ಬಾಲಮ್ಮ, ದೊಟ್ಟೆಕಾಲಮ್ಮ, ಮಾಸ್ತಿ, ನಿರ್ವಾಣ ಚಿಕ್ಕು, ಮರ್ಲುಚಿಕ್ಕು, ಮರ್ಲಮ್ಮ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಜೋಗಿಪುರುಷ, ಕೆಪ್ಪಹೈಗುಳಿ, ಮೂಡೂರ ಹೈಗುಳಿ, ಸುಕುರಹೈಗುಳಿ, ಮುರ್ಚಂಡಿ, ನಾಲ್ಕುಪಾದದಹೈಗುಳಿ, ಹಣೇರಹೈಗುಳಿ, ಸ್ಥಳದಹೈಗುಳಿ, ಮಾಸ್ತಿ, ಕೆಂಪುಬಣ್ಣದಹೈಗುಳಿ, ಜೈನಹೈಗುಳಿ, ಪಾತ್ರಿಪುರುಷ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಒಂದು ಬದಿಯಲ್ಲಿ ಬಾಗಿಲಬೊಬ್ಬರ್ಯನ ಮರದ ಮೂರ್ತಿ ಹಾಗೂ ಬಲಿಕಲ್ಲು, ಇನ್ನೊಂದು ಬದಿಯಲ್ಲಿ ಯಕ್ಷಿ ಹಾಗೂ ಹೊರಸುತ್ತಿನ ಹೈಗುಳಿ ದೈವಗಳ ಮರದ ಮೂರ್ತಿ ಹಾಗೂ ರಾಹು, ಭೂತ, ಚಂಡಿ, ಹಾಗೂ ಕೀಳು ದೈವಗಳ ಕಲ್ಲುಗಳಿವೆ.
ಗರೋಡಿಯ ಆವರಣದಲ್ಲಿರುವ ಗುಡಿಯೊಂದರಲ್ಲಿ ಹೊಸ ಹೈಗುಳಿ, ಹಾಗೂ ರಾಹುವಿನ ಸಾನಿಧ್ಯವಿದೆ.
ಗರೋಡಿಯ ಆವರಣದೊಳಗೆ ಹಿಂಬದಿಯಲ್ಲಿ ನಾಗಬನವಿದೆ.
ಗರೋಡಿಯ ಅಂಗಣದಲ್ಲಿ ಕ್ಷೇತ್ರಪಾಲ ಕಟ್ಟೆ ಹಾಗೂ ತುಳಸಿಕಟ್ಟೆಗಳಿವೆ.
ಗರೋಡಿಯ ಒಳಗೆ ಹೋಗುವ ಗಂಡಸರು, ಹುಡುಗರು ತಮ್ಮ ಅಂಗಿ ಬನಿಯಾನ್ ಗಳನ್ನು ತೆಗೆದು ಗರೋಡಿ ಪ್ರವೇಶಿಸಬೇಕೆಂಬ ಸಂಪ್ರದಾಯವಿದೆ.

ಗಣೇಶ ಪೂಜಾರಿ

2021 ರಿಂದ ಗಣೇಶ ಪೂಜಾರಿ (44 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ನಾಗಯ್ಯ ಪೂಜಾರಿ, ಪುಟ್ಟಯ್ಯ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.

ರಾಜು ಪೂಜಾರಿ

ರಾಜು ಪೂಜಾರಿ (36 ವರ್ಷ) ಇವರು ಇಲ್ಲಿ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರ ಮೊದಲು ನರಸಿಂಹ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.
ಸೇಸ ಪೂಜಾರಿ ಯಾನೆ ಕೇಶವ ಪೂಜಾರಿ(68 ವರ್ಷ) ಇವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರಿಗೆ ಮೊದಲು ಗುಡಾಡಿ ಮನೆ ಅಣ್ಣಪ್ಪ ಪೂಜಾರಿಯವರು ಇಲ್ಲಿ ಮೊಕ್ತೇಸರರಾಗಿದ್ದರು.
ಸೀತಾರಾಮ ಶೆಟ್ಟಿಯವರು ಇಲ್ಲಿಯ ಬಲ್ಲಾಳ ಶೆಟ್ಟಿಯವರಾಗಿದ್ದಾರೆ. ಇವರ ಮೊದಲು ಸುಬ್ಬಯ್ಯ ಶೆಟ್ಟಿಯವರು ಇಲ್ಲಿಯ ಬಲ್ಲಾಳಶೆಟ್ಟಿಯವರಾಗಿದ್ದರು.
ಗರೋಡಿಯಲ್ಲಿ ನಿತ್ಯ ನೀರು ಇಟ್ಟು ದೀಪ ಹಚ್ಚುವ ಕ್ರಮವಿದೆ. ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳ 14ರಂದು ಹಾಲಹಬ್ಬ, ದರ್ಶನಸೇವೆ, ಫೆಬ್ರವರಿ ತಿಂಗಳ ಒಂದು ದಿನ ಅಗೆಲು ಸೇವೆ, ಮಾರನೇ ದಿನ ಗುರಿ ಪೂಜೆ, ಮರುದಿನ ಮಾಸ್ತಿ ಪೂಜೆಗಳುನನಡೆಯುತ್ತವೆ. ಮೇ ತಿಂಗಳಲ್ಲಿ ಗಡಿ ಪೂಜೆ (ಮಾರಿ ಹಬ್ಬ) ನಡೆಯುತ್ತದೆ.
ಗರೋಡಿಯ ಕೂಡುಕಟ್ಟಿಗೆ ಉಳ್ಳೂರು 11 ಹಾಗೂ ಉಪ್ರಳ್ಳಿ ಊರುಗಳು ಸೇರಿದ್ದು ಜನರು ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
15ಸೆಂಟ್ಸ ಜಾಗವು ಗರೋಡಿಯ ಹೆಸರಲ್ಲಿದ್ದು 2013ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಕೃಷ್ಣ ಮಡಿವಾಳ, ಉಳ್ಳೂರು ಇವರು ಗರೋಟಿಯ ಮಡಿವಾಳರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಟಿ ಉಳ್ಳೂರು – 11,
ಮೂಡುಮಠ ಪೋಸ್ಟ, ಬೈಂದೂರು ತಾಲೂಕು ಉಡುಪಿ576219.

ಗರೋಡಿಯ ಅರ್ಚಕರು:

ಗಣೇಶ ಪೂಜಾರಿ – 8310048245

ಗರೋಡಿಯ ಪಾತ್ರಿಗಳು:

ರಾಜು ಪೂಜಾರಿ – 9686324662

ಗರೋಡಿಯ ಮೊಕ್ತೇಸರರು:

ಸೇಸ ಪೂಜಾರಿ ಯಾನೆ ಕೇಶವ ಪೂಜಾರಿ – 9900305246.

ಮಾಹಿತಿ ನೀಡಿದವರು :

ಗಣೇಶ ಪೂಜಾರಿ,
ಪ್ರಭಾಕರ ಪೂಜಾರಿ (ಸೇಸು ಪೂಜಾರಿಯವರ ತಮ್ಮ)

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Swamilinga, NagaBrahma, Koti Chennaya, Panjurli & Parivara Daivagala Devasthana, Kergalu Garodi

ಸ್ವಾಮಿಲಿಂಗ, ನಾಗಬ್ರಹ್ಮ, ಕೋಟಿಚೆನ್ನಯ, ಪಂಜುರ್ಲಿ, ಹಾಗೂ ಪರಿವಾರ ದೈವಗಳ ದೇವಸ್ಥಾನ ಕೆರ್ಗಾಲು ಗರೋಡಿ.

ಉಡುಪಿಯಿಂದ ಎನ್ಎಚ್ 66 ರಲ್ಲಿ ಕುಂದಾಪುರ – ಮರವಂತೆ – ನಾವುಂದ – ಕಿರಿಮಂಜೇಶ್ವರ ಖಂಬದಕೋಣೆಯ ನಂತರ ಕೆರ್ಗಾಲ್ ನಾಯ್ಕನ ಕಟ್ಟೆಯಲ್ಲಿ ಎಡಕ್ಕೆ ತಿರುಗಿ ಸುಮಾರು 800ಮೀಟರ್ ದೂರ ಸಾಗಿದರೆ ಈ ಗರೋಡಿ ಸಿಗುತ್ತದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು , ಇಬ್ಬರು ಬಂಟರು ಹಾಗೂ ತಾಣನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಪಯ್ಯಬೈದ, ಬಂಟ ಹಾಗೂ ದೇವಿಬೈದೆತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಕೆಂಪಿ ನಂದಿಯ ಮರದ ಹಾಗೂ ಕಂಚಿನ ಮೂರ್ತಿ, ಕಾಸಿನಂದಿ, ಬಂಟ ಪಂಜುರ್ಲಿ ಕಂಚಿನ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಪತ್ತಿನ ಹೈಗುಳಿ, ಪತ್ತಿನ ನಂದಿ, ಕರಿಬೆಟ್ಟಿನ ಹೈಗುಳಿ, ಪಾಂಡಾಳ, ಶ್ರೀಮಗ, ಮೈಂದಾಳಿ, ಮೂಡರ್ತ ಹೈಗುಳಿ, ಕೆಪ್ಪಹೈಗುಳಿ, ದೊಟ್ಟಿಕಾಲಮ್ಮ, ಮೂಡೂರಮ್ಮ, ಅಣ್ಣುಅಣ್ಣಾಹೈಗುಳಿ, ಜೋಗಿ, ಹೀತ್ರಹೈಗುಳಿ, ಮೂರ್ಚಂಡಿ, ಭೂತರಾಯ, ಗ್ರಾಮದ ಭೂತ, ಸ್ಥಳ ಮಾಸ್ತಿಅಮ್ಮ, ಕಂಡಿಕೋಡ್ಲು ಮಾಸ್ತಿ, ಹೊಲ್ಲಹೈಗುಳಿ, ಹೊಲ್ಲತಂಡದ ಹೈಗುಳಿ ದೈವಗಳ ಆರಾಧನೆಯಿದೆ. ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ಇರುವ ಗುಡಿಯೊಂದರಲ್ಲಿ ಪತ್ತಿನ ನಂದಿ, ಮುರನಂದಿ, ಪಂಗಡದಾರರು, ಏಳು ಕನ್ಯೆಯರು, ಸ್ವಾಮಿಲಿಂಗ, ಭೂಮಿಲಿಂಗ, ಪಲ್ಲ ಜಟ್ಟಿ, ಬೇತೆಬೀರ, ರಂಗ ಅಜ್ಜ, ವೆಂಕ್ಟು ಅಜ್ಜ, ನಾಗಪಾಲ ಹೈಗುಳಿ, ನಾಗದೇವರು, ಪತ್ತಿನ ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯೊಳಗೆ ಹಿಜಾಣ ಚಿಕ್ಕು, ಹಾಗೂ ಹಿಜಾಣ ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯಲ್ಲಿ ಕೆಂಚ ಹೈಗುಳಿ ದೈವದ ಕಲ್ಲು ಇದ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಬಲ್ಲೆ ಹೈಗುಳಿ ದೈವಗಳ ಕಲ್ಲಿನ ಮೂರ್ತಿ ಇದೆ.
ಗರೋಡಿಯ ಅಂಗಳದಲ್ಲಿ ಹೊರಸುತ್ತಿನ ಹೈಗುಳಿ, ಬಲಿಕಲ್ಲು, ತುಳಸಿಕಟ್ಟೆಗಳಿವೆ.
ಗರೋಡಿಗೆ ಪ್ರವೇಶದ್ವಾರದ ಗೋಪುರವಿದ್ದು, ಬದಿಯಲ್ಲಿ ಕಂಬಳದ ಕೋಣ ಹಾಗೂ ಓಡಿಸುವವರ ಸಿಮೆಂಟಿನ ಮೂರ್ತಿಗಳನ್ನು ರಚಿಸಲಾಗಿದೆ.

ಸಂಜೀವ ಪೂಜಾರಿ

ಸಂಜೀವ ಪೂಜಾರಿ (60ವರ್ಷ) ಇವರು 2014ರಿಂದ ಅರ್ಚಕರಾಗಿ ಸೇವೆ ಮಾಡುತ್ತಿದ್ದು ಇವರೊಂದಿಗೆ ಮೋಹನ ಪೂಜಾರಿ, ರಾಮ ಪೂಜಾರಿ, ರಾಜು ಪೂಜಾರಿ, ಹೆರಿಯ ಪೂಜಾರಿ, ರವಿ ಪೂಜಾರಿ, ವಿನೋದ ಪೂಜಾರಿ, ಸಂದೀಪ ಪೂಜಾರಿಯವರೂ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ಚೆನ್ನ ಪೂಜಾರಿ, ವೆಂಕ್ಟು ಪೂಜಾರಿ, ಪುಟ್ಟಯ್ಯ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.
ಸುಬ್ಬ ಪೂಜಾರಿಯವರು ಗರೋಡಿಯ ಪಂಜುರ್ಲಿ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಹಿಂದೆ ಹಿರಿಯರಾದ ಮಂಜು ಪೂಜಾರಿಯವರು ದರ್ಶನದ ಸ್ಥಳ ಪಾತ್ರಿಯಾಗಿದ್ದರು.
ಅರ್ಚಕರಾದ ಸಂಜೀವ ಪೂಜಾರಿಯವರೇ ಗರೋಡಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಸುರೇಶ ಎಸ್.ಪೂಜಾರಿಯವರು ಗೌರವಾಧ್ಯಕ್ಷರಾಗಿ, ನರಸಿಂಹ ಪೂಜಾರಿ ಪಡಕೋಣೆಯವರು ಅಧ್ಯಕ್ಷರಾಗಿ, ಚಂದ್ರ ಬಿಲ್ಲವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಕದಿರುಕಟ್ಟುವುದು, ಫೆಬ್ರವರಿ ತಿಂಗಳಲ್ಲಿ ಒಂದು ದಿನ ಅಗೆಲು ಸೇವೆ ನಡೆದು ಎರಡನೇ ದಿನ ಗುರಿ ಪೂಜೆ ನಡೆಯುತ್ತದೆ. ಜನವರಿ 14ರಂದು ಹಾಲುಹಬ್ಬ ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಲ್ಲಿ ಎಲ್ಲಾ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. (5ದಿನ) ಪ್ರತೀ ವರ್ಷ ನವೆಂಬರ್ ತಿಂಗಳ 25, 26ನೇ ತಾರೀಖಿನಂದು ಕಂಬಳವು ನಡೆಯುತ್ತದೆ.
ಕೆರ್ಗಾಲ್, ಚುರುಮಕ್ಕಿ, ಖಂಬದಕೋಣೆ, ನಾಗೂರು, ಬೈಂದೂರಿನ ಜನ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 12ಸೆಂಟ್ಸ ಜಾಗವಿದ್ದು, ಗರೋಡಿಯು 2002ರಲ್ಲಿ ಜೋರ್ಣೋದ್ಧಾರಗೊಂಡಿದೆ.
ನಾಗ ಪಾಣಾರ ಹಂಪಾರ್ ಈ ಗರೋಡಿಯ ನೃತ್ಯ ವಿಶಾರದರಾಗಿ, ಭಾಸ್ಕರ ದೇವಾಡಿಗ ಉಪ್ಪುಂದ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಶ್ರೀ ರಾಮ ಭಜನಾ ಮಂಡಳಿ, ಕೆರ್ಗಾಲು ಎಂಬ ಭಜನಾ ಮಂಡಳಿಯೊಂದು ಚಟುವಟಿಕೆಯಲ್ಲಿದೆ.

ಗರೋಡಿಯ ವಿಳಾಸ:

ಶ್ರೀ ಸ್ವಾಮಿಲಿಂಗ, ನಾಗಬ್ರಹ್ಮ, ಕೋಟಿಚೆನ್ನಯ,
ಪಂಜುರ್ಲಿ ಹಾಗೂ ಪರಿವಾರ ದೈವಗಳ ದೇವಸ್ಥಾನ,
ಕೆರ್ಗಲ್ ಗರೋಡಿ, ನಾಯ್ಕನಕಟ್ಟೆ,
ಗ್ರಾಮ ಮತ್ತು ಅಂಚೆ ಕೆರ್ಗಲ್, ಬೈಂದೂರು ತಾಲೂಕು.

ಅರ್ಚಕರು ಮತ್ತು ಮೊಕ್ತೇಸರರು:

ಸಂಜೀವ ಪೂಜಾರಿ – 9742564864

ಮಾಹಿತಿ ನೀಡಿದವರು :

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Koti Chennayya Panjurli Garodi, Bijoor

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ, ಬಿಜೂರು

ಉಡುಪಿಯಿಂದ – ಕುಂದಾಪುರ – ನಾವುಂದ – ಕಿರಿಮಂಜೇಶ್ವರ – ಕೆರ್ಗಾಲ್ – ಖಂಬದಕೋಣೆ – ಉಪ್ಪುಂದದ ನಂತರ ಬಿಜೂರು ತಲುಪಿ ಎನ್ ಎಚ್ 66ರಲ್ಲಿ ಬಲಕ್ಕೆ ತಿರುಗಿ ಸುಮಾರು 2.5 ಕಿ. ಮೀ. ದೂರದಲ್ಲಿ ಬೈಂದೂರು ಹೊಳೆಯ ಬದಿಯಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲ್ಪಟ್ಟ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರ ಮರದ ಮೂರ್ತಿ, ಆಕಾಶ ಪಂಜುವಿನ ಕಲ್ಲಿನ ಮೂರ್ತಿ, ಪಕ್ಕದಲ್ಲಿ ಸ್ಥಾನದ ನಂದಿಕೇಶ್ವರನ ಮರದಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ, ಬೈದ, ಹಾಗೂ ಬಂಟರ ಆರಾಧನೆಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಮರ್ಲಮ್ಮ, ಹಿಜನ್ ಹೈಗುಳಿ, ದೊಟ್ಟಿಕಾಲ ಚಿಕ್ಕು, ಬಾಲಚಿಕ್ಕು, ಮರ್ಲ ಚಿಕ್ಕು, ಪಂಜುರ್ಲಿ ವಾಹನ, ಪಂಜಿರ್ಲಿ ದೈವಗಳ ಮರದ ಮೂರ್ತಿಗಳಿಗೆ ಪೂಜೆ ಇದೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಕಾಶಿನಂದಿ, ಪರಿವಾರ ದೈವಗಳು, ಧೂಮಾವತಿ, ಹೊನ್ನಳ್ಳಿ ಮಾಸ್ತಿ, ಮಾಯ್ದಳಿ, ಕರೂರು ಮಾಸ್ತಿ, ತಂತ್ರಿ, ಜೋಗದೇವರು, ಪರಿವಾರದೈವ, ಮೂಡೂರ ಹೈಗುಳಿ, ಪರಿವಾರ ದೈವ, ಸಿಂಗಾರ ಹೈಗುಳಿ, ಮೂರ್ಚಂಡು, ಪರಿವಾರ ದೈವಗಳು, ವಿಶ್ವಕರ್ಮ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗಿರುವ ಗುಡಿಯಲ್ಲಿ ಸ್ವಾಮಿ, ಹೊರಸುತ್ತಿನ ಹೈಗುಳಿ, ಹಾಗೂ ಹೈಗುಳಿ ದೈವಗಳ ಸಾನಿಧ್ಯವಿದೆ.
ಇನ್ನೊಂದು ಗುಡಿಯಲ್ಲಿ ಕೆಂಚ ಹೈಗುಳಿ ದೈವದ ಕಲ್ಲು ಇದ.
ಗರೋಡಿಯ ಆವರಣದ ಹೊರಗೆ ಕೀಳಿನ ಕಲ್ಲು ಇದೆ.
ಬೈಂದೂರು, ಶೀರೂರು, ಕಳವಾಡಿ, ತಗ್ಗರ್ಸೆ, ಉಪ್ಪುಂದ, ಯೆಡ್ತರೆ, ಮುಡಿಕಲ್ಲು ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಗರೋಡಿಯ ಆವರಣದೊಳಗೆ ಹುಲಿಯಪ್ಪನ ಕಲ್ಲು, ತುಳಸಿಕಟ್ಟೆ, ಬಲಿಕಲ್ಲುಗಳಿವೆ.

ಬಾಬು ಪೂಜಾರಿ

ಬಾಬು ಪೂಜಾರಿ (58 ವರ್ಷ), ಶ್ರೀನಿವಾಸ ಪೂಜಾರಿ (45 ವರ್ಷ) ಇವರುಗಳು ಗರೋಡಿಯ ಪ್ರಧಾನ ಅರ್ಚಕರಾಗಿದ್ದಾರೆ. ಇವರೊಂದಿಗೆ ಹೆರಿಯ ಪೂಜಾರಿ, ಪಂಜು ಪೂಜಾರಿಯವರು, ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಕೊರಗ ಪೂಜಾರಿ, ಚಿಕ್ಕಯ್ಯ ಪೂಜಾರಿಯವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.
ರಾಮ ಪೂಜಾರಿಯವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಬೈರ ಪೂಜಾರಿ, ಗೋವಿಂದ ಪೂಜಾರಿ, ಓಬು ಪೂಜಾರಿಯವರು ಈ ಗರೋಡಿಯ ಸ್ಥಳ ಪಾತ್ರಿಗಳಾಗಿದ್ದರು.
ಪ್ರಧಾನ ಅರ್ಚಕರಾದ ಬಾಬು ಪೂಜಾರಿಯವರು ಗರೋಡಿಯ ಮೊಕ್ತೇಸರರೂ ಆಗಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳಲ್ಲಿ ಒಂದು ದಿನ ಹಾಲು ಹಬ್ಬ, ಅಗೆಲು ಸೇವೆ, ದರ್ಶನ ಸೇವೆ ನಡೆದು ಮರುದಿನ ಗುರಿ ಪೂಜೆ ನಡೆಯುತ್ತದೆ.
ಬಿಜೂರು ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಹರಕೆ, ಕಾಣಿಕೆ, ಸಹಾಯ ಧನದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ 52ಸೆಂಟ್ಸ ಜಾಗವಿದ್ದು 2001 ರಲ್ಲಿ ಜೀರ್ಣೋದ್ದಾರಗೊಂಡಿದೆ. ಪ್ರಸ್ತುತ ಸುಮಾರು 5ಕೋಟಿ ರೂಪಾಯಿ ವೆಚ್ಚದಲ್ಲಿ ಪುನ: ಜೀರ್ಣೋದ್ಧಾರದ ಯೋಜನೆಯಿದೆ.

ಗರೋಡಿಯ ವಿಳಾಸ:

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ಬಿಜೂರು,
ಬಿಜೂರು ಗ್ರಾಮ ಮತ್ತು ಅಂಚೆ,
ಬೈಂದೂರು ತಾಲೂಕು – 576232

ಅರ್ಚಕರು ಮತ್ತು ಮೊಕ್ತೇಸರರು:

ಬಾಬು ಪೂಜಾರಿ – 9741507620

ಮಾಹಿತಿ ನೀಡಿದವರು :

ಬಾಬು ಪೂಜಾರಿ, ಮಂಜು ಪೂಜಾರಿ – 99003 93953

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Koti Chennayya Garodi, Nakatte, Baindoor

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ, ನಾಕಟ್ಟೆ, ಬೈಂದೂರು

ಉಡುಪಿಯಿಂದ – ಕುಂದಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಬೈಂದೂರು ತಲುಪಿದರೆ ಎನ್.ಎಚ್.66ರ ಎಡಬದಿಯಲ್ಲಿ ಸುಮಾರು 150ಮೀ. ದೂರದಲ್ಲಿದೆ ಈ ಗರೋಡಿ. ಉಡುಪಿ ಜಿಲ್ಲೆಯ ಉತ್ತರ ದಿಕ್ಕಿಗಿರುವ ಕೊನೆಯ ಗರೋಡಿ ಇದಾಗಿದೆ.
ಶಿಲಾಮಯವಾಗಿ ನಿರ್ಮಿಸಲಾದ ಈ ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯ ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೊಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಮರದಿಂದ ನಿರ್ಮಿಸಲ್ಪಟ್ಟ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಮಕ್ಕಳು ಹಾಗೂ ತಾಣನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ, ಕುಜುಂಬ ಕಾಂಜವ, ಕುಬ್ಜಾಖಾನ್ ಹಾಗೂ ಯಕ್ಷೆಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಂಜುರ್ಲಿ ದೈವದ ಸಾನಿದ್ಯವಿದೆ. ಬ್ರಹ್ಮಗುಡಿಯ ಎಡಬದಿಯಲ್ಲಿ ಮರ್ಲಮ್ಮ, ಚಿಕ್ಕು, ಮಾಸ್ತಿ ದೈವದ ಸಾನಿದ್ಯವಿದೆ
ಪಕ್ಕದಲ್ಲಿ ಧೂಮಾವತಿ, ಮಾಯಿಂದಾಲ್, ಮಾಯಿಂದಾಲ್ ಪುತ್ರ, ಕತೃಹೈಗುಳಿ, ಸಿಂಗಾರದ ಹೈಗುಳಿ, ಮೂಡೂರ ಹೈಗುಳಿ, ಹೊರಸುತ್ತಿನ ಹೈಗುಳಿ ಜೋಗಿಪುರುಷರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಗುರು ಸಂಕಲ್ಪವಾಗಿ ಗುರುಕಂಬ ಹಾಗೂ ಮುರ್ಚಂಡಿಯ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ. ಇನ್ನೊಂದು ಬದಿಯಲ್ಲಿ ಹುಲಿದೇವ ಮರದ ಮೂರ್ತಿ ಇದೆ.
ಗರೋಡಿಯ ಅಂಗಣದಲ್ಲಿ ತೀರ್ಥಬಾವಿ, ತುಳಸಿಕಟ್ಟೆಗಳಿವೆ. ಪಕ್ಕದಲ್ಲಿ ಮೂಲದಲ್ಲಿ ಗರೋಡಿ ಇದ್ದ ಪ್ರತೀಕವಾಗಿ ಮರದ ಕಟ್ಟೆಯೊಂದಿದೆ. ಇಲ್ಲಿ ಇದ್ದ ಗರೋಡಿಯನ್ನು ಕಾಲಾಂತರದಲ್ಲಿ ಸ್ಥಳಾಂತರಿಸಿ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಈಗ ಇರುವ ಸ್ವಾಗತಗೋಪುರದ ಹತ್ತಿರ ಕಟ್ಟಲಾಯಿತಂತೆ. ಅಲ್ಲಿಂದ ಪುನ: ಸ್ಥಳಾಂತರಿಸಿ ಈಗ ಇರುವ ಜಾಗದಲ್ಲಿ 2022ರಲ್ಲಿ ಶಿಲಾಮಯ ಹೊಸಗರೋಡಿಯನ್ನು ನಿರ್ಮಿಸಲಾಗಿದೆ. ಮೂಲಸ್ಥಾನದ ಪ್ರತೀಕವಾಗಿ ಆ ಸ್ಥಳದಲ್ಲಿದ್ದ ಮರಕ್ಕೆ ಕಟ್ಟೆಯನ್ನು ನಿರ್ಮಿಸಲಾಗಿದೆ.
ಗಣೇಶ ಪೂಜಾರಿ (40 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರರ. ಇವರ ಮೊದಲು ಇವರ ಅಜ್ಜ ನಂದು ಪೂಜಾರಿಯವರು ಅರ್ಚಕರಾಗಿದ್ದರು.
ಗರೋಡಿಯ ಆಡಳಿತವನ್ನು ಕೋಟಿಚೆನ್ನಯ್ಯ ಪಂಜುರ್ಲಿ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ನೋಡಿಕೊಳ್ಳುತ್ತಿದ್ದು, ರಾಜು ಪೂಜಾರಿಯವರು ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯ ದೀಪ ಹಚ್ಚುತ್ತಾರೆ. ಸೋಮವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಬೆಳಕಿನ ಸೇವೆ, ಕದಿರು ಕಟ್ಟುವ ಕ್ರಮ ಇದೆ.
ಪ್ರತೀ ವರ್ಷ ಜನವರಿ 25ನೇ ತಾರೀಖಿಗೆ ಅಗೆಲು, ಬೈದರ್ಕಳ ಕೋಲ ನಡೆದು, 26ಕ್ಕೆ ಪಂಜುರ್ಲಿ ಹಾಗೂ ಧೂಮಾವತಿ ಕೋಲ ನಡೆಯುತ್ತದೆ.
ಬೈಂದೂರು, ಶೀರೂರು, ಕಳವಾಡಿ, ತಗ್ಗರ್ಸೆ, ಉಪ್ಪುಂದ, ಯೆಡ್ತರೆ, ಮುಡಿಕಲ್ಲು ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ನಾಕಟ್ಟೆ,
ಬೈಂದೂರು ಯೆಡ್ತರೆ ಅಂಚೆ,
ಬೈಂದೂರು ತಾಲೂಕು
ಉಡುಪಿ ಜಿಲ್ಲೆ – 576214.

ಅರ್ಚಕರು:

ಗಣೇಶ ಪೂಜಾರಿ – 9980479952

ಟ್ರಸ್ಟ್ನ ಅಧ್ಯಕ್ಷರು :

ರಾಜು ಪೂಜಾರಿ – 9448344534.

ಮಾಹಿತಿ ನೀಡಿದವರು :

ಅಣ್ಣಪ್ಪ ಪೂಜಾರಿ – 94488 57516

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Garodi, Huyyaru

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹುಯ್ಯಾರು

ಉಡುಪಿ ಬ್ರಹ್ಮಾವರ ಸೈಬ್ರಕಟ್ಟೆಯಲ್ಲಿ ಬಲಕ್ಕೆ ತಿರುಗಿ ಜಾನುವಾರು ಕಟ್ಟೆ ವಂಡಾರು ಮೂಲಕ ಹೈಕಾಡಿ ತಲುಪಿ ಅಲ್ಲಿಂದ ಸುಮಾರು ಮೂರು ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು ಉತ್ತರಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದ್ದು, ಷಡಾಧಾರ ಪ್ರತಿಷ್ಠೆಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಬಲಭಾಗದಲ್ಲಿ ಬಲ್ಲಾಳರ ಮುಂಡಿಗೆ, ಕುಜುಂಬ ಕಾಂಜವರ ಹಾಗೂ ಮಗುವಿನ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಪಂಜರ್ಲಿ ದೈವದ ಮುಂಡಿಗೆಯಿದೆ. ಬಲಬದಿಯಲ್ಲಿ ಮೈಂದಾಳ್ತಿ ಮತ್ತು ಬಾಲೆಯ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿ ಪುರುಷರ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯ, ನಂದಿಕೇಶ್ವರ ದೈವದ ಮರದ ಮೂರ್ತಿ ಹಾಗೂ ಹೈಗುಳಿ ದೈವದ ಮುಂಡಿಗೆಯಿದೆ.
ಗರೋಡಿಯ ಎದುರಿರುವ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿ ಇದೆ.
ಗರೋಡಿಯ ಪರಿಸರದಲ್ಲಿ ಗರಡಿ ಗಣಪತಿ ದೇವಸ್ಥಾನವಿದೆ.

ಸುಧಾಕರ ಪೂಜಾರಿ

2009ರಿಂದ ಸುಧಾಕರ ಪೂಜಾರಿ (50 ವರ್ಷ) ಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ನಾರಾಯಣ ಪೂಜಾರಿ, ಕೆಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು.
ರಾಮ ಪೂಜಾರಿ (60 ವರ್ಷ) ಹಾಗೂ ನಾರಾಯಣ ಪೂಜಾರಿ (55 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ.
ಈ ಗರೋಡಿಯ ಮೊಕ್ತೇಸರರಾದ ವಿಶ್ವನಾಥ ಸೇರ್ವೆಗಾರರು 2023ರಲ್ಲಿ ನಿಧನರಾಗಿದ್ದು ಅವರ ಉತ್ತರಾಧಿಕಾರಿಯ ನೇಮಕವಾಗಲಿಲ್ಲ. ಮುರಳೀಧರ ಶೆಟ್ಟಿಯವರು ಮುಕ್ಕಾಲ್ತಿಯಾಗಿದ್ದಾರೆ
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಪಸರಣೆ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಡಿಸೆಂಬರ್ 13ನೇ ತಾರೀಖಿನಂದು ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆ, ಮಾರ್ಚ ತಿಂಗಳ 25ನೇ ತಾರೀಖಿನಂದು ಅಗೆಲು, 26ಕ್ಕೆ ಬೈದರ್ಕಳ ನೇಮ, ಶಿವರಾಯ, ಮೈಂದಾಳ್ತಿ, ಜೋಗಿಪುರುಷ ಕೋಲ ಹಾಗೂ ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಶಿವರಾಯ ಮಾರಿ ಹಬ್ಬ ನಡೆಯುತ್ತದೆ.
ಹುಯ್ಯಾರು, 76 ಹಾಲಾಡಿ, ರಟ್ಟಾಡಿ, ತುಳಂಜೆ, 28 ಹಾಲಾಡಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಕಾರ್ಯಗಳ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಜನರು ಪಾಲ್ಗೊಳ್ಳುತ್ತಾರೆ.
ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ ಸರಕಾರಿ ಜಮೀನು ಇದೆ. ಊರಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯ ಜೀರ್ಣೋದ್ದಾರದ ಮೊದಲಿನ ಫೋಟೋ.
ಗರೋಡಿಯು 1986-87ರಲ್ಲಿ ಜೀರ್ಣೋದ್ಧಾರಗೊಂಡಿದ್ದು ನಂತರ 2023ರಲ್ಲಿ ಪುನ: ಜಿರ್ಣೋದ್ಧಾರಗೊಂಡಿದೆ.
ನರಸಿಂಹ ಪರವ ಮತ್ತು ಸಂಘಡಿಗರು ನೃತ್ಯವಿಶಾರದರಾಗಿ, ಸಂತೋಷ ಮಡಿವಾಳ ಹುಯ್ಯಾರು ಮಡಿವಾಳರಾಗಿ, ಬಾಬಣ್ಣ ಹಾಲಾಡಿ ವಾದ್ಯದವರಾಗಿ, ಪುಂಡು ನರ್ಮಣ್ಣು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಹುಯ್ಯಾರು, 76 ಹಾಲಾಡಿ,
ಹಿಲಿಯಾಣ ಅಂಚೆ ಬೈಂದೂರು ತಾಲೂಕು
ಉಡುಪಿ ಜಿಲ್ಲೆ – 526227

ಅರ್ಚಕರು:

ಸುಧಾಕರ ಪೂಜಾರಿ – 9663268584

ಮಾಹಿತಿ ನೀಡಿದವರು :

ಸುಧಾಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025