ಶ್ರೀ ಕೊಡಮಣ್ತಾಯ ಬ್ರಹ್ಮಬೈದರ್ಕಳ ಹಾಗೂ ಮಾಯಂದಾಳ್ ಗರೋಡಿ, ಮಿತ್ತೊಟ್ಟು ಗುತ್ತು, ಅಜೆಕಾರು
ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಅಜೆಕಾರು ತಲುಪಿ ಕೆರ್ವಾಶೆ ರಸ್ತೆಗೆ ತಿರುಗಿ ಸುಮಾರು ಒಂದು ಕಿ. ಮೀ. ಮುಂದೆ ಶ್ರೀ ಮಹಾ ವಿಷ್ಣು ದೇವಸ್ಥಾನ, ಅಜೆಕಾರು ಇದರ ಸ್ವಾಗತ ಗೋಪುರದ ಮೂಲಕ ಹಾದು ಸುಮಾರು 850 ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿದೆ ಈ ಗರೋಡಿ.
ಗರೋಡಿಗೆ ಎರಡು ದ್ವಾರಗಳಿದ್ದು, ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೊಂದು ದ್ವಾರವು ಉತ್ತರ ದಿಕ್ಕಿಗಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಈ ಗರೋಡಿಯು 2010ರವರೆಗೆ ಸುಮಾರು 62 ವರ್ಷಗಳ ಕಾಲ ಯಾವುದೇ ಪೂಜೆ ಪುರಸ್ಕಾರಗಳಿಲ್ಲದೆ ಬೀಗ ಹಾಕಿಯೇ ಇತ್ತು. 2010 ರ ನಂತರ ಇಲ್ಲಿ ಪೂಜೆ ಪುರಸ್ಕಾರ, ಕೋಲ ಸೇವೆಗಳು ನಡೆಯಲಾರಂಭಿಸಿ, 2024 ಗರೋಡಿಯ ಜೀರ್ಣೋದ್ದಾರವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಬದಿಯಲ್ಲಿರುವ ಮಣೆಮಂಚದಲ್ಲಿ ಕೋಟಿ-ಚೆನ್ನಯರ ಪಂಚಲೋಹದ ಮೂರ್ತಿ, ಪಕ್ಕದಲ್ಲಿರುವ ಇನ್ನೊಂದು ಮಣೆಮಂಚದಲ್ಲಿ ಕುಜುಂಬ ಕಾಂಜವರ ಪಂಚಲೋಹದ ಮೂರ್ತಿ ಇದೆ.
ಬ್ರಹ್ಮ ಗುಡಿಯ ಹೊರಗೆ ಎಡಬದಿಯಲ್ಲಿ ಮಣೆಮಂಚದ ಮೇಲೆ ಮಾಯಂದಾಲ್‌ಗೆ ತತ್ರ ಹಾಗೂ ಗೆಜ್ಜೆಕತ್ತಿಗಳನ್ನಿಟ್ಟು ಪೂಜಿಸಲಾಗುತ್ತದೆ. ಪಕ್ಕದಲ್ಲಿ ಜೋಗಿ ಪುರುಷರ ಮರದ ಮೂರ್ತಿ ಇದೆ.
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಿಮಂತಾಯ, ಕುಕ್ಕಿನಂತಾಯ, ದೈವಗಳ ಮಣೆ ಮಂಚದಲ್ಲಿ ಪಂಚಲೋಹದ ಮೂರ್ತಿ ಇದೆ.
ಎದುರಿಗೆ ಕಲ್ಕುಡ ದೈವದ ಕಲ್ಲಿನ ಮಂಡಿಗೆ ಇದೆ. ಗರೋಡಿಯ ಆವರಣದಲ್ಲಿ ದ್ವಜ ಸ್ಥಂಭ, ಬಲಿಕಲ್ಲು, ಅಜೆಕಾಯಿ ಕಲ್ಲುಗಳಿವೆ. ಗರೋಡಿಗೆ ಸಂಬಂಧಪಟ್ಟ ಬ್ರಹ್ಮಸ್ಥಾನವು ಗರೋಡಿಯಿಂದ ಸುಮಾರು 2ಕಿ. ಮೀ. ದೂರದಲ್ಲಿದೆ.
ಶೇಖರ ಪೂಜಾರಿ
ವಿಜಯ ಪೂಜಾರಿ
ಶೇಖರ ಪೂಜಾರಿ (65 ವರ್ಷ) ಹಾಗೂ ವಿಜಯ ಪೂಜಾರಿ (52 ವರ್ಷ) ಇವರು ಇಲ್ಲಿಯ ಪೂ ಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಅಜ್ಜ ಕೊರಗ ಪೂಜಾರಿಯವರು ಈ ಸೇವೆ ಮಾಡಿದ್ದರು.
ಗರೋಡಿಯಲ್ಲಿ ಈಗ ದರ್ಶನ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೊರಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಮಿತ್ತೊಟ್ಟು ಗುತ್ತು ರತ್ನವರ್ಮ ಜೈನರು ಇಲ್ಲಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ.
ಫೆಬ್ರವರಿ ತಿಂಗಳ 15ನೇ ತಾರೀಖಿನಂದು ಮಿತ್ತೊಟ್ಟು ಗುತ್ತಿನ ಮನೆಯಿಂದ ಭಂಡಾರ ಬಂದು, ದ್ವಜಾರೋಹಣ ಮಾಡಿ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ. 16ನೇ ತಾರೀಕಿನಂದು ಬೈದರ್ಕಳ ನೇಮ, ಕಲ್ಕುಡ ಕೋಲ, ಮಾಯಂದಾಲ್, ಜೋಗಿಪುರುಷ ಕೋಲ, ಅನ್ನ ಸಂತರ್ಪಣೆ ನಡೆಯುತ್ತದೆ. 17ನೇ ತಾರೀಖಿನಂದು ದ್ವಜಾರೋಹಣ ನಂತರ ಭಂಡಾರ ವಾಪಾಸು ಹೋಗುವುದು.
ಮರ್ಣೆ, ಅಜೆಕಾರಿನ ಜನ ಈ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ, ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮದ ವೆಚ್ಚ ಭರಿಸಲಾಗುತ್ತದೆ. ಗರೋಡಿಯು ಸರಕಾರಿ ಜಾಗದಲ್ಲಿದ್ದು 24-04-2024ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಸುನಿಲ್ ಪರವ ಅಜೆಕಾರು ಮತ್ತು ಸಂಘಡಿಗರು ಇಲ್ಲಿಯ ನೃತ್ಯವಿಶಾರದರಾಗಿ, ಬೋಜು ಮಡಿವಾಳರು ಮಡಿವಾಳರಾಗಿ, ಸದಾಶಿವ ದೇವಾಡಿಗ ವರಂಗ ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಹಾಗೂ ಮಾಯಂದಾಲ್ ಗರೋಡಿ ದೊಡ್ಡಮನೆ ಮಿತ್ತೊಟ್ಟು ಗುತ್ತು, ಅಜೆಕಾರು
ಅಜೆಕಾರು ಅಂಚೆ,
ಕಾರ್ಕಳ ತಾಲೂಕು, 574101
ಅಜೆಕಾರು ಅಂಚೆ,
ಕಾರ್ಕಳ ತಾಲೂಕು, 574101
ಅರ್ಚಕರು:
ಶೇಖರ ಪೂಜಾರಿ – 990135798
ವಿಜಯ ಪೂಜಾರಿ – 9845017299
ಮಾಹಿತಿ ನೀಡಿದವರು:
ಶೇಖರ ಪೂಜಾರಿ
ವಿಜಯ ಪೂಜಾರಿ
ವಿಜಯ ಪೂಜಾರಿ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
14-07-25